ಜೀವನವನ್ನು ಸುಲಭಗೊಳಿಸಿ ಸುಖ ಜೀವನ ಸಾಗಿಸಲು ಜಯ ಕಿಶೋರಿ ತಿಳಿಸಿದ ಮಹಾಭಾರತದ 3 ಪಾಠಗಳೇನು ಗೊತ್ತೇ??

ಜೀವನವನ್ನು ಸುಲಭಗೊಳಿಸಿ ಸುಖ ಜೀವನ ಸಾಗಿಸಲು ಜಯ ಕಿಶೋರಿ ತಿಳಿಸಿದ ಮಹಾಭಾರತದ 3 ಪಾಠಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಆಧುನಿಕ ಜಗತ್ತಿನ ವಿಷಯಗಳನ್ನು, ರಾಮಾಯಣ ಹಾಗೂ ಮಹಾಭಾರತದಂತಹ ಧರ್ಮ ಗ್ರಂಥಗಳನ್ನು ಮಾಡಿಕೊಂಡು ಜನರಲ್ಲಿ ಉತ್ಸಾಹ ತುಂಬುವಂತಹ ಮಾತನಾಡಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದು ಕೊಂಡಿರುವ ಜಯ ಕಿಶೋರಿ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತಮ್ಮ ಅಧಿಕೃತ ಯುಟ್ಯೂಬ್ ಚಾನಲ್ ನಲ್ಲಿ ಧರ್ಮಗ್ರಂಥವಾದ ಮಹಾಭಾರತದಿಂದ ಜೀವನ ಸಾಗಿಸಲು ಮೂರು ಪಾಠಗಳನ್ನು ಹೇಳಿರುವ ಜಯ ಕಿಶೋರಿ ರವರು ಇದೀಗ ಮತ್ತೊಮ್ಮೆ ಚರ್ಚೆಯಲ್ಲಿ ಇದ್ದಾರೆ. ಒಬ್ಬ ಜನರು ತನ್ನ ಜೀವನದಲ್ಲಿ ಶಾಂತಿಯನ್ನುಗಳಿಸಿ ಯಶಸ್ಸು ಸಾಧಿಸಬೇಕು ಎಂದರೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ರಾಮಾಯಣ ಮತ್ತು ಮಹಾಭಾರತ ದಿಂದ ಕಲಿಯಬಹುದು ಎಂದು ವಿಡಿಯೋ ಆರಂಭದಲ್ಲಿ ಜಯ ಕಿಶೋರಿ ರವರು ಹೇಳಿದ್ದು, ರಾಮಾಯಣ ಹಾಗೂ ಮಹಾಭಾರತದಲ್ಲಿ ತಿಳಿದು ಬರುವಂತಹ ಮಹತ್ವದ ಜೀವನ ಪಾಠಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಗುರಿ ಸಾಧಿಸಬಹುದು ಎಂದಿದ್ದಾರೆ.

ಇನ್ನು ಮೂರು ಪಾಠಗಳ ಕುರಿತು ಗಮನಹರಿಸುವುದಾದರೇ ಮೊದಲನೆಯದಾಗಿ ಜಯ ಕಿಶೋರಿ ರವರು ನಾವು ಎಂದಿಗೂ ಉತ್ತಮ ಜನರ ಸಹವಾಸವನ್ನು ಮಾಡಬೇಕು. ಏಕೆಂದರೆ ಒಬ್ಬ ವ್ಯಕ್ತಿಯ ಸಹವಾಸದಿಂದ ಮಾತ್ರ ನಾವು ಮೋಕ್ಷದ ಮೇಲೆ ನಡೆಯಬಹುದು. ಉದಾಹರಣೆಗೆ-ನಾವು ಮಹಾಭಾರತವನ್ನು ತೆಗೆದುಕೊಂಡರೇ ಕೌರವರ ಜೊತೆ ಇದ್ದ ಶಕುನಿಯ ಜಾಗದಲ್ಲಿ ಕೌರವರು ಶ್ರೀಕೃಷ್ಣನ ಸಹವಾಸ ಮಾಡಿದ್ದರೇ ಕೌರವರು ಹಾಗೂ ಪಾಂಡವರ ನಡುವೆ ಹೆಚ್ಚಿನ ಸ್ನೇಹ ಭಾಂದವ್ಯ ಬೆಳೆಯುತ್ತಿತ್ತು, ಕುರುಕ್ಷೇತ್ರವೇ ನಡೆಯುತ್ತಿರಲಿಲ್ಲ ಎಂದು ಉದಾಹರಣೆ ನೀಡಿದ್ದಾರೆ.

ಇನ್ನು ಎರಡನೆಯದಾಗಿ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಂದರ್ಭಗಳನ್ನು ಎದುರಿಸಲು ನೀವು ಸಿದ್ಧವಾಗಬೇಕು. ಎಲ್ಲವನ್ನು ಧೈರ್ಯದಿಂದ ಸಹಿಸಿಕೊಳ್ಳುವುದು ಮಾತ್ರವಲ್ಲ ಅವುಗಳಿಂದ ನಿಮ್ಮ ಮುಂದಿನ ಜೀವನಕ್ಕೆ ಪಾಠಗಳನ್ನು ಕಲಿಯಬೇಕು. ಉದಾಹರಣೆಗೆ ಪಾಂಡವರು ಕುರುಕ್ಷೇತ್ರ ಯುದ್ಧಕ್ಕಿಂತ ಮುನ್ನ ಕಾಡುಗಳಲ್ಲಿ 12 ವರ್ಷಗಳ ಕಾಲ ವನವಾಸ ಹಾಗೂ ಒಂದು ವರ್ಷಗಳ ಕಾಲ ಅಜ್ಞಾತವಾಸವನ್ನು ಕಳೆದಿದ್ದರು, ಈ ಸಮಯದಲ್ಲಿ ಬಂದ ಹಲವಾರು ಸಮಸ್ಯೆಗಳಿಂದ ಹಲವಾರು ಜೀವನ ಪಾಠಗಳನ್ನು ಕಲಿತು ತದನಂತರ ಮರಳಿ ಸಂಧಾನ ವಿಫಲವಾದಾಗ ಕುರುಕ್ಷೇತ್ರ ಯುದ್ಧವನ್ನು ಕೂಡ ಗೆದ್ದರು.

ಇನ್ನು ಮೂರನೆಯದಾಗಿ ವ್ಯಕ್ತಿಯು ಜೀವನದಲ್ಲಿ ಕೆಲವೊಂದು ಸಂದರ್ಭಗಳಲ್ಲಿ ನಾವು ಭಾವನಾತ್ಮಕವಾಗಿ ಇರಬಾರದು. ಯಾಕೆಂದರೆ ಅದೇ ಭಾವನಾತ್ಮಕತೆ ನಮ್ಮ ಶಕ್ತಿ ದುರ್ಬಲವಾಗುವ ಅಂತೆ ಮಾಡುತ್ತದೆ. ಉದಾಹರಣೆಗೆ ದೃತರಾಷ್ಟ್ರನು ಸಂವೇದನಶೀಲ ನಾಗಿ ಯೋಚನೆ ಮಾಡಿ ಪುತ್ರರು ಮಾಡುತ್ತಿದ್ದ ಕೆಲಸಗಳು ತಪ್ಪು ಎಂದು ಹೇಳಿದ್ದಾರೆ. ಖಂಡಿತ ಮಕ್ಕಳು ದೃತರಾಷ್ಟ್ರನ ಮಾತು ಕೇಳಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಭಾವನಾತ್ಮಕತೆಯಿಂದ ತುಂಬಿದ ಧೃತರಾಷ್ಟ್ರ ಸಂವೇದನಶೀಲನಾಗಿ ಯೋಚನೆ ಮಾಡಲು ವಿಫಲವಾದ. ಇದರ ಉತ್ತರವೇ ಕುರುಕ್ಷೇತ್ರ ಯುದ್ಧ ಎಂದು ಹೇಳಿದ್ದಾರೆ.