ಕೈಕೆಯಿ 14 ವರ್ಷಗಳೇ ರಾಮನಿಗೆ ವನವಾಸ ಎಂದು ಹೇಳಿದ್ದು ಯಾಕೆ ಗೊತ್ತಾ?? ಹೆಚ್ಚು ವರ ಕೇಳಬಹುದಿತ್ತಲ್ಲವೇ??

ಕೈಕೆಯಿ 14 ವರ್ಷಗಳೇ ರಾಮನಿಗೆ ವನವಾಸ ಎಂದು ಹೇಳಿದ್ದು ಯಾಕೆ ಗೊತ್ತಾ?? ಹೆಚ್ಚು ವರ ಕೇಳಬಹುದಿತ್ತಲ್ಲವೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ದಶರಥ ಶ್ರೀ ರಾಮನಿಗಾಗಿ ಪುತ್ರ ವ್ಯಾ’ಮೋಹ ಇದ್ದ ಕಾರಣ ಮುಂದಿನ ಅಯೋಧ್ಯೆಯ ರಾಜ ಶ್ರೀ ರಾಮನೇ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಪ್ರಭು ಶ್ರೀ ರಾಮನು 14 ವರ್ಷಗಳ ಕಾಲ ವನವಾಸಕ್ಕೆ ಹೋಗುವಂತಾಯಿತು. ಆದರೆ ನಿರ್ದಿಷ್ಟವಾಗಿ ಕೈಕೆ ಯಾಕೆ ಹದಿನಾಲ್ಕು ವರ್ಷಗಳನ್ನೇ ಆಯ್ಕೆ ಮಾಡಿಕೊಂಡರು, ಬದಲಾಗಿ ಅದಕ್ಕಿಂತ ಕಡಿಮೆ ಅಥವಾ ಹದಿನೈದು, ಇಪ್ಪತ್ತು ವರ್ಷಗಳ ಕಾಲ ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬುದರ ಕುರಿತು ನಿಮಗೆ ತಿಳಿದಿದೆಯೇ?? ಬನ್ನಿ ಈ ಕುರಿತು ಇಂದು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ವಾಲ್ಮೀಕಿ ರಾಮಾಯಣದಲ್ಲಿ ಈ ಘಟನೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದ್ದು, ದೇವರು ಮತ್ತು ಅಸುರರ ನಡುವೆ ನಡೆಯುತ್ತಿದ್ದ ಯುದ್ಧದಲ್ಲಿ ದಶರಥ ಮಹಾರಾಜನು ತನ್ನ ದೈವಿಕ ರಥವನ್ನು ತೆಗೆದುಕೊಂಡು ದೇವತೆಗಳಿಗೆ ಸಹಾಯ ಮಾಡಲು ಯುದ್ಧದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ದಶರಥ ಮಹಾರಾಜರ ಸಾರಥಿಯಾಗಿ ಕೈಕೆ ಪಾಲ್ಗೊಂಡು, ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದಶರಥ ಮಹಾರಾಜರ ರಥದ ಚಕ್ರ ಮು’ರಿಯುವ ಸಂದರ್ಭ ಬಂದಾಗ ಕೈಕೆ ತನ್ನ ಮಾಯಾಜಾಲವನ್ನು ಬಳಸಿಕೊಂಡು ದಶರಥ ಮಹಾರಾಜರ ಪ್ರಾಣವನ್ನು ಉಳಿಸಿದ್ದರು.

ಇದಕ್ಕೆ ಸಂತಸಗೊಂಡಿದ್ದ ದಶರಥ ಮಹಾರಾಜರು ಯುದ್ಧ ಮುಗಿದ ಬಳಿಕ ನಿಮಗೆ ಬೇಕಾದ ವರಗಳನ್ನು ಕೇಳಿಕೊಳ್ಳಿ ಎಂದ ತಕ್ಷಣ ಕೈಕೆ ಪ್ರಭು ಶ್ರೀರಾಮನನ್ನು 14 ವರ್ಷಗಳ ಕಾಲ ಗಡಿಪಾರು ಮಾಡಿ ವನವಾಸಕ್ಕೆ ಕಳುಹಿಸಿ ಎಂದು ವರವನ್ನು ಕೇಳಿದ್ದರು. ಬಹಳ ಪುತ್ರ ವ್ಯಾಮೋಹವನ್ನು ಹೊಂದಿದ್ದ ದಶರಥ ಮಹಾರಾಜರು ಕೊಟ್ಟಮಾತಿಗೆ ತಪ್ಪಲಾರದೇ ಶ್ರೀ ರಾಮನನ್ನು ಹದಿನಾಲ್ಕು ವರ್ಷಗಳ ಕಾಲ ಗಡಿಪಾರಿಗೆ ಆದೇಶ ನೀಡಿದರು.

ಇದಕ್ಕೆ ಕಾರಣಗಳೇನೆಂದು ನಾವು ಗಮನಿಸಿದರೇ ಹಲವಾರು ಕಾರಣಗಳು ಸಿಗುತ್ತವೆ ಯಾದರೂ ವಾಲ್ಮೀಕಿ ರಾಮಾಯಣದಲ್ಲಿ ಆಡಳಿತಾತ್ಮಕ ಕಾರಣಗಳಿಂದ ಕೈಕೆ 14 ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡರು ಎಂದು ತಿಳಿದು ಬರುತ್ತದೆ. ಅಂದರೇ ಯಾವುದೇ ಒಬ್ಬ ರಾಜನು ಹದಿನಾಲ್ಕು ವರ್ಷಗಳ ಕಾಲ ತನ್ನ ಸಿಂಹಾಸನದಿಂದ ದೂರವಿದ್ದರೇ ರಾಜನಾಗುವ ಹ’ಕ್ಕನ್ನು ಕಳೆದುಕೊಳ್ಳುತ್ತಾನೆ ಎಂಬುದು ನಿಯಮವಾಗಿತ್ತು. ಅಧಿಕಾರಕ್ಕಾಗಿ ಕೈಕೆ ಹದಿನಾಲ್ಕು ವರ್ಷಗಳ ವನವಾಸವನ್ನು ಕೈಗೊಳ್ಳುವಂತೆ ವರ ಪಡೆದುಕೊಂಡಿದ್ದರು. ಆದರೆ ಭರತನು ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿರಾಕರಿಸಿದ ಕಾರಣ ಹಾಗೂ ಸಿಂಹಾಸನ ಪ್ರಭು ಶ್ರೀರಾಮನ ಪಾದರಕ್ಷೆ ಗಳಿಂದ ‌ಅಲಂಕರಿಸಿದ್ದ ಕಾರಣ ಪ್ರಭು ಶ್ರೀ ರಾಮನು ಹದಿನಾಲ್ಕು ವರ್ಷಗಳ ಕಾಲ ವನವಾಸ ಮುಗಿಸಿ ವಾಪಸ್ ಆದರೂ ಕೂಡ ಸಿಂಹಾಸನದಲ್ಲಿ ಭರತನು ಕುಳಿತುಕೊಳ್ಳದ ಕಾರಣ ಶ್ರೀರಾಮನು ರಾಜನಾಗುವ ಹಕ್ಕನ್ನು ಕಳೆದುಕೊಂಡಿರಲಿಲ್ಲ. ಅದೇ ಕಾರಣಕ್ಕಾಗಿ ಅಯೋಧ್ಯಕ್ಕೆ ವಾಪಸ್ಸಾದ ಬಳಿಕ ಪ್ರಭು ಶ್ರೀ ರಾಮನು ಮತ್ತೊಮ್ಮೆ ರಾಜನಾದರು.