ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದ ಮಹಾಭಾರತ ಪ್ರೇಕ್ಷಕರಿಗೆ ಚಾನಲ್ ನಿಂದ ಮತ್ತೊಂದು ಸಿಹಿ ಸುದ್ದಿ ! ಏನು ಗೊತ್ತಾ?

ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದ ಮಹಾಭಾರತ ಪ್ರೇಕ್ಷಕರಿಗೆ ಚಾನಲ್ ನಿಂದ ಮತ್ತೊಂದು ಸಿಹಿ ಸುದ್ದಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕೇವಲ ಕೆಲವೇ ಕೆಲವು ತಿಂಗಳುಗಳ ಹಿಂದೆ ಅಂದರೆ ಸರಿಸುಮಾರು ಇದೇ ವರ್ಷದ ಫೆಬ್ರವರಿ ತಿಂಗಳಿನವರೆಗೂ ಇಡೀ ದೇಶದ ಎಲ್ಲಾ ಚಾನಲ್ ನವರು ಕೂಡ ಜನರಿಗೆ ಹೆಚ್ಚು ಹೆಚ್ಚು ಮನರಂಜನೆ ನೀಡಲು ವಿವಿಧ ರೀತಿಯ ಧಾರವಾಹಿಗಳನ್ನು ಚಿತ್ರೀಕರಣ ಮಾಡುತ್ತಿದ್ದೀರಾ. ಆದರೆ ಭಾರತೀಯ ಪುರಾಣಗಳ ತಿಳಿಸಿ ಹೇಳುವ ಪೌರಾಣಿಕ ಕಥೆಗಳನ್ನು ಯಾಕೆ ನೀವು ಧಾರವಾಹಿ ಮಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರೇ ಕೆಲವು ವರ್ಷಗಳ ಹಿಂದೆ ಪೌರಾಣಿಕ ಧಾರಾವಾಹಿಗಳನ್ನು ಜನರು ನೋಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಹಾಗೂ ಹಿರಿಯರು ಕೂಡ ಮನರಂಜನೆಯ ಮೊರೆ ಹೋಗಿರುವ ಕಾರಣ ಪೌರಾಣಿಕ ಕಥೆಗಳು ಯಾವುದೇ ಕಾರಣಕ್ಕೂ ಯಶಸ್ಸು ಕೊಳ್ಳುವುದಿಲ್ಲ ಎಂಬ ಉತ್ತರ ನಮಗೆ ವಾಹಿನಿ ಅಂದರೆ ಟಿವಿ ಚಾನೆಲ್ ಗಳಿಂದ ಸಿಗುತ್ತಿತ್ತು. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ರಾಮಾಯಣ-ಮಹಾಭಾರತ ಮರು ಪ್ರಸಾರವಾದ ನಂತರ ಹಿಂದಿನ ಎಲ್ಲ ದಾಖಲೆಗಳು ಒಮ್ಮೆಲೆ ಉಢೀಸ್ ಆಗಿದ್ದವು.

ಇದನ್ನು ಕಂಡ ಟಿವಿ ಚಾನಲ್ ಗಳು ಜನರು ಎಷ್ಟರಮಟ್ಟಿಗೆ ಇಂದಿಗೂ ಕೂಡ ಪೌರಾಣಿಕ ಕಥೆಗಳಿಗೂ ಮಹತ್ವನೀಡಿ ಆಸಕ್ತಿಯಿಂದ ನೋಡುತ್ತಾರೆ ಎಂಬುದನ್ನು ಅರಿತು ಕೊಂಡಿದ್ದವು. ತದನಂತರ ಒಂದರ ಮೇಲೆ ಒಂದಂತೆ ವಿವಿಧ ಭಾಷೆಗಳಲ್ಲಿ ಪೌರಾಣಿಕ ಧಾರಾವಾಹಿಗಳನ್ನು ಪ್ರಸಾರ ಮಾಡಲಾಗಿತ್ತು. ಇನ್ನು ಕನ್ನಡದಲ್ಲಿ ಹಲವಾರು ವರ್ಷಗಳಿಂದ ಡಬ್ಬಿಂಗ್ ದಾರವಾಹಿಗಳು ಹೆಚ್ಚಾಗಿ ಯಶಸ್ಸು ಕಾಣುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದರೂ ಕೂಡ ಒಮ್ಮೆ ಒಂದು ಧಾರವಾಹಿಯನ್ನು ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಕೆಲಸಕ್ಕೆ ಕೈ ಹಾಕಲಾಗಿತ್ತು. ತದನಂತರ ಮಹಾಭಾರತ ಸೇರಿದಂತೆ ಹನುಮಾನ್, ರಾಧಾ ಕೃಷ್ಣ ಎಲ್ಲರ ಕಥೆಗಳು ಡಬ್ಬಿಂಗ್ ಆಗಿ ಕನ್ನಡದಲ್ಲಿ ಪ್ರಸಾರಗೊಂಡವು.

ರಾಧಾಕೃಷ್ಣ ಹಾಗೂ ಮಹಾಭಾರತ ಧಾರವಾಹಿಗಳನ್ನು ಯಶಸ್ಸಿನ ಉತ್ತುಂಗದಲ್ಲಿ ತೇಲಾಡಿದವು. ಜನರು ಒಂದು ಕಡೆ ಡಬ್ಬಿಂಗ್ ನೋಡುವುದಿಲ್ಲ ಮತ್ತೊಂದು ಕಡೆ ಪೌರಾಣಿಕ ಕಥೆಗಳನ್ನು ನೋಡುವುದಿಲ್ಲ ಎನ್ನುತ್ತಿದ್ದ ಚಾನೆಲ್ಗಳು ಎರಡು ಧಾರವಾಹಿಗಳಿಗೆ ಸಿಕ್ಕ ಟಿಆರ್ಪಿ ಕಂಡು ಅಕ್ಷರಸಹ ಒಂದು ಕ್ಷಣ ದಂ’ಗಾಗಿದ್ದು ಸುಳ್ಳಲ್ಲ. ಇನ್ನು ಮಹಾಭಾರತವು ಕೂಡ ಅತ್ಯಂತ ಯಶಸ್ಸು ಕಂಡಿತು, ಕೇವಲ ಒಂದು ಗಂಟೆ ಪ್ರಸಾರವಾಗುತ್ತಿದ್ದ ಧಾರವಾಹಿಯನ್ನು ಅರ್ಧಗಂಟೆ ಮಾಡಿದ ಕಾರಣಕ್ಕಾಗಿ ಎಲ್ಲಿ ನೋಡಿದರೂ ಮಹಾಭಾರತ ದಾರಾವಾಹಿಯನ್ನು 1:00 ಪ್ರಸಾರ ಮಾಡಿ ಅರ್ಧ ಗಂಟೆ ನೋಡಿದರೆ ನೋಡಿದಂತೆ ಆಗುವುದಿಲ್ಲ ಎಂಬ ಮಾತುಗಳು ಕೇಳಿಬಂದಾಗಲಂತೂ ಪೌರಾಣಿಕ ಧಾರಾವಾಹಿಗಳು ಎಷ್ಟರ ಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿವೆ ಎಂಬುದನ್ನು ಚಾನೆಲ್ಗಳು ಅರಿತುಕೊಂಡವು.

ಇನ್ನು ಹೀಗೆ ಪ್ರಸಾರ ಮಾಡಿ ಯಶಸ್ವಿಯಾದ ಬಳಿಕ ಕೆಲವೇ ಕೆಲವು ದಿನಗಳ ಹಿಂದೆ ಮಹಾಭಾರತ ದಾರವಾಹಿ ಮುಗಿದುಹೋಗಿತ್ತು. ಜನರು ನೋಡುತ್ತಾರೆಯೋ ಇಲ್ಲವೋ ಎಂಬ ಅನುಮಾನ ದಲ್ಲಿದ್ದ ಚಾನಲ್ಗಳು ಧಾರವಾಹಿ ಮುಗಿದರೂ ಕೂಡ ಜನರು ಮತ್ತೊಮ್ಮೆ ಪ್ರಸಾರ ಮಾಡಿ ಎಂಬ ಒ’ತ್ತಾಯವನ್ನು ಕಂಡು ಆಶ್ಚರ್ಯ ಚಕಿತರಾದರು. ಹೀಗೆ ಜನರ ಒ’ತ್ತಾಯಕ್ಕೆ ಇದೀಗ ಚಾನಲ್ಗಳು ಒಪ್ಪಿಗೆ ನೀಡಿ ಮಹಾಭಾರತ ಧಾರವಾಹಿಯನ್ನು ಮತ್ತೊಮ್ಮೆ ಮರುಪ್ರಸಾರ ಮಾಡಲು ನಿರ್ಧಾರ ಮಾಡಿಯಾಗಿದೆ ಹಾಗೂ ಕಳೆದ ಕೆಲವು ದಿನಗಳಿಂದ ಮಹಾಭಾರತ ಧಾರಾವಾಹಿ ಎರಡನೇ ಬಾರಿಗೆ ಕನ್ನಡದಲ್ಲಿ (ಮಧ್ಯಾಹ್ನ 1.30) ಪ್ರಸಾರವಾಗುತ್ತಿದೆ. ಜನರು ಪೌರಾಣಿಕ ಕಥೆಗಳನ್ನು ನೋಡುವುದಿಲ್ಲ ಎನ್ನುತ್ತಿದ್ದ ಎಲ್ಲಾ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಮೂಲಕ ಸ್ಪಷ್ಟ ಸಂದೇಶ ರವಾನೆಯಾಗಿದ್ದು ಇನ್ನಾದರೂ ಜನರ ಜೀವನಕ್ಕೆ ಮಾರ್ಗದರ್ಶಕ ವಾಗುವ ಪೌರಾಣಿಕ ಧಾರಾವಾಹಿಗಳನ್ನು ಹೆಚ್ಚು ಮಾಡಬೇಕು ಎಂಬುದನ್ನು ಅರಿತುಕೊಳ್ಳಲೇ ಬೇಕಾಗಿದೆ.