5 ನಿಮಿಷದಲ್ಲಿ ತಕ್ಷಣವೇ ತಯಾರಿಸಬಹುದಾದ ಪುಳಿಯೋಗರೆ ಟ್ರೈ ಮಾಡಿ ನೋಡಿ, ಎಲ್ಲರೂ ಇಷ್ಟ ಪಡ್ತಾರೆ

5 ನಿಮಿಷದಲ್ಲಿ ತಕ್ಷಣವೇ ತಯಾರಿಸಬಹುದಾದ ಪುಳಿಯೋಗರೆ ಟ್ರೈ ಮಾಡಿ ನೋಡಿ, ಎಲ್ಲರೂ ಇಷ್ಟ ಪಡ್ತಾರೆ

ಸ್ನೇಹಿತರೇ, ಇಂದು ನಾವು ಬಹಳ ಸಿಂಪಲ್ ಮತ್ತು ಕಡಿಮೆ ಸಮಯದಲ್ಲಿ ಇನ್ಸ್ಟಂಟ್ ಪುಳಿಯೋಗರೆ ಪೌಡರ್ ನ ಬಳಸಿ ಯಾವ ರೀತಿ ರುಚಿರುಚಿಯಾದ ಪುಳಿಯೋಗರೆಯನು ಮಾಡಬಹುದು ಎಂದು ತಿಳಿಯೋಣ ಬನ್ನಿ. ಹಾಗೆ ಇದು ಬ್ಯಾಚುಲರ್ಸ್ ಗೆ ತುಂಬಾನೇ ಉಪಯೋಗಕಾರಿ ಮತ್ತು ನಿಮಗೆ ಸಮಯವಿಲ್ಲದಿದ್ದರೆ ಆದಷ್ಟು ಬೇಗ ಇದನ್ನು ಮಾಡಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಇನ್ಸ್ಟೆಂಟ್ ಪುಳಿಯೋಗರೆ ಪ್ಯಾಕೆಟನ್ನು ನೀವು ಈ ರೆಸಿಪಿ ಮಾಡೋದಕ್ಕೆ ಬಳಸಬಹುದು.

ಇದಕ್ಕೆ ಬೇಕಾಗಿರುವ ಪದಾರ್ಥವೆಂದರೆ, ಮೊದಲಿಗೆ ಒಂದು ಕಾಲ್ ಕೆಜಿಯಷ್ಟು ಅಕ್ಕಿಯನ್ನು ಅನ್ನ ಮಾಡಿಟ್ಟುಕೊಳ್ಳಬೇಕು, ಅನ್ನ ಬಿಡಿಬಿಡಿಯಾಗಿ ಇದ್ದರೆ ಪುಳಿಯೋಗರೆ ಬಹಳ ಚೆನ್ನಾಗಿರುತ್ತದೆ., ನಂತರ 3 ಟೇಬಲ್ ಸ್ಪೂನ್ ನಷ್ಟು ಇನ್ಸ್ಟೆಂಟ್ ಪುಳಿಯೋಗರೆ ಪುಡಿ. ಹಾಗೆ 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ, 2 ಟೇಬಲ್ ಸ್ಪೂನ್ ನಷ್ಟು ಕಡಲೇಕಾಯಿ ಬೀಜ, 1 ಟೇಬಲ್ ಸ್ಪೂನ್ ನಷ್ಟು ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಮತ್ತು ಒಣಮೆಣಸಿನಕಾಯಿ 2, ಬ್ಯಾಡಿಗೆ ಮೆಣಸಿನಕಾಯಿ 2, ಜೊತೆಗೆ ಒಂದು ಟೇಬಲ್ ಸ್ಪೂನ್ ನಷ್ಟು ತುಪ್ಪ, ಒಗ್ಗರಣೆಗೆ ಒಂದು ಸ್ಪೂನ್ ನಷ್ಟು ಸಾಸಿವೆ, ಸ್ವಲ್ಪ ಕೊತ್ತಂಬರಿ, ಕರಿಬೇವು ಇನ್ನು ರುಚಿಗೆ ತಕ್ಕಷ್ಟು ಉಪ್ಪು, ಇದಿಷ್ಟು ಇನ್ಸ್ಟೆಂಟ್ ಪುಳಿಯೋಗರೆ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು.

ಈಗ ಇದನ್ನು ಮಾಡುವಂತ ವಿಧಾನವನ್ನು ನೋಡೋಣ, ಬೇಕಾದಂಥ ಪದಾರ್ಥಗಳನ್ನು ತೆಗೆದುಕೊಂಡ ನಂತರ, ಒಂದು ಬಾಣಲೆ ಯನ್ನ ಸ್ಟವ್ ಮೇಲೆ ಇಟ್ಕೊಳ್ಳಿ, ಬಿ’ಸಿಯಾದ ಬಾಣಲೆಗೆ, ತೆಗೆದಿಟ್ಟ ಎಣ್ಣೆಯನ್ನು ಹಾಕಿದ ನಂತರ ಅದಕ್ಕೆ ಸಾಸಿವೆಯನ್ನು ಹಾಕಿ ನಂತರ ಕಡಲೆಕಾಯಿ ಬೀಜವನ್ನು ಸೇರಿಸಿ ಒಂದೆರಡು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ನಂತರ ಕಡಲೆ ಬೆಳೆ ಉದ್ದಿನಬೆಳೆಯನ್ನು ಸಹ ಸೇರಿಸಿ, ಎಲ್ಲಾ ಪದಾರ್ಥವನ್ನು ಹಾಕಿದ ನಂತರ 30 ಸೆಕೆಂಡ್ ಗಳ ಕಾಲ ಫ್ರೈ ಮಾಡಿ.

ನಂತರ ಕರಬೇವು ಮತ್ತು ಒಣ ಮೆಣಸಿನಕಾಯಿಯನ್ನು ಸೇರಿಸಿಕೊಳ್ಳಿ. ನಂತರ ಇನ್ಸ್ಟೆಂಟ್ ಪುಳಿಯೋಗರೆ ಪೌಡರ್ ಅನ್ನು ಒಗ್ಗರಣೆಗೆ ಸೇರಿಸಿಕೊಳ್ಳಿ. ಪುಳಿಯೋಗರೆ ಪುಡಿ ಸೇರಿಸಿದ ನಂತರ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಹೀಗೆ ಮಾಡಿದ ನಂತರ ನೀವು ಉ’ರಿಯನ್ನು ಆಫ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿದ ನಂತರ ಚೆನ್ನಾಗಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ನಂತರ ಮೊದಲೇ ಮಾಡಿಟ್ಟಿದ್ದ ಅನ್ನವನ್ನು ಹಾಕಿ, ನಂತರ ತುಪ್ಪವನ್ನು ಅದರ ಮೇಲೆ ಹಾಕಿ, ಈ ರೀತಿ ತುಪ್ಪ ಹಾಕುವುದರಿಂದ ಪುಳಿಯೋಗರೆಯ ರುಚಿ ಬಹಳಷ್ಟು ಹೆಚ್ಚುತ್ತದೆ‌.

ನಂತರ ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಬೇಕು ಕೊನೆಯದಾಗಿ ಅಲಂಕಾರಕ್ಕೆ ಮತ್ತು ರುಚಿಗೆ ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಉದುರಿಸಿ. ಹೀಗೆ ಮಾಡಿದರೆ ರುಚಿರುಚಿಯಾದ ತಿನ್ನಲು ಸೊಗಸಾದ ಇನ್ಸ್ಟಂಟ್ ಪುಳಿಯೋಗರೆ ಸಿದ್ಧವಾಗುತ್ತದೆ. ಇನ್ಯಾಕೆ ತಡ ನೀವು ನಿಮ್ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಅದರಲ್ಲೂ ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ತಿಂದರೆ ಅದರ ಮಜಾನೇ ಬೇರೆ. ಈ ರೀತಿಯಾದ ಪುಳಿಯೋಗರೆ ನಿಮಗೆ ಪ್ರಸಾದ ಮಾಡುವುದಕ್ಕೂ ಬಹಳ ಯೋಗ್ಯವಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಮೇಲೆ ಲಗತ್ತಿಸಲಾದ ವಿಡಿಯೋ ನೋಡಿ.