ಮಧುಮೇಹಿಗಳಿಗೆ, ತೂಕ ಇಳಿಸಿಕೊಳ್ಳಲು ಇಚ್ಛಿಸುವವರಿಗೆ ಚಪಾತಿ ಒಳ್ಳೆಯದೇ? ಬೆಸ್ಟ್ ಆಹಾರ ಯಾವುದು ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮಧುಮೇಹ ಹಾಗೂ ತೂಕ ಹೆಚ್ಚಾಗುವುದು ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳಾಗಿವೆ. ಆಧುನಿಕ ಜೀವನ ಶೈಲಿಯಲ್ಲಿ ಬಹುತೇಕ ಜನರು ತೂಕ ಇಳಿಸಿಕೊಳ್ಳಲು ಹಲವಾರು ರೀತಿಯ ಕಸರತ್ತುಗಳನ್ನು ನಡೆಸುತ್ತಾರೆ. ಇನ್ನು ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಜನರಿಗೆ ಮಧುಮೇಹ ಕಾಣಿಸಿಕೊಳ್ಳುತ್ತಿರುವ ಕಾರಣ ಜನರು ಹೆಚ್ಚಾಗಿ ತಮ್ಮ ಆಹಾರದ ಶೈಲಿಯ ಕಡೆ ಗಮನ ಹರಿಸಿ ತಮ್ಮ ಜೀವನವನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಮೊದಲೆಲ್ಲಾ ಐವತ್ತು ವರ್ಷಕ್ಕೂ ಹೆಚ್ಚಿನವರಿಗೆ ಮಧುಮೇಹ ಕಾಣಿಸಿಕೊಳ್ಳುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ 35ರ ಆಸುಪಾಸಿನಲ್ಲಿಯೇ ಮಧುಮೇಹ ಕಾಣಿಸಿಕೊಳ್ಳುತ್ತಿದೆ.

ಇನ್ನು ತೂಕದ ಕುರಿತು ಗಮನಹರಿಸುವುದಾದರೇ ಜನರು, ತಾವು ತಿನ್ನುವ ಪ್ರತಿಯೊಂದು ಆಹಾರವನ್ನು ಲೆಕ್ಕ ಇಟ್ಟುಕೊಂಡು ತಿನ್ನುವ ಪರಿಸ್ಥಿತಿ ಎದುರಾಗಿದೆ. ಆದರೆ ಯಾರಿಗಾದರೂ ತೂಕ ಹೆಚ್ಚಾಗಿದೆ ಅಥವಾ ಮಧುಮೇಹ ಕಾಣಿಸಿಕೊಂಡಿದೆ ಎಂದು ತಕ್ಷಣ ಸಾಮಾನ್ಯವಾಗಿ ವೈದ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಹೇಳುವ ಸಂಗತಿಯೇನೆಂದರೆ ಪ್ರತಿನಿತ್ಯ ಅನ್ನವನ್ನು ತ್ಯಜಿಸಿ ಚಪಾತಿ ಸೇವಿಸಿ, ಎನ್ನುವ ಡೈಲಾಗ್ ಕೇಳಿ ಬರುತ್ತದೆ. ಇದು ಚಿಕ್ಕವಯಸ್ಸಿನಿಂದ ಹಿರಿಯರವರೆಗೂ ಹೇಳುವ ಮಾತಾಗಿಬಿಟ್ಟಿದೆ. ಆದರೆ ಸ್ನೇಹಿತರೇ ನಿಜಕ್ಕೂ ಚಪಾತಿ ದೇಹಕ್ಕೆ ಒಳ್ಳೆಯದೇ?? ಅಂದಹಾಗೆ ನಾವು ಮಾತನಾಡುತ್ತಿರುವುದು ಒಂದು ಅಥವಾ ಎರಡು ದಿನಗಳ ಲೆಕ್ಕಚಾರ ವಲ್ಲ ಬದಲಾಗಿ ಒಮ್ಮೆ ಮಧುಮೇಹ ಬಂದರೆ ಜೀವನಪೂರ್ತಿ ಚಪಾತಿಗಳ ಮೊರೆಹೋಗುವುದು ಹಾಗೂ ತೂಕ ಹೆಚ್ಚಾದರೆ ಚಪಾತಿ ಅಳವಡಿಸಿಕೊಳ್ಳುವ ಜನರ ಕುರಿತು.

ಹೌದು ಸ್ನೇಹಿತರೇ ಇಂದು ನಾವು ಚಪಾತಿಯ ಕುರಿತು ಮಾಹಿತಿ ನೀಡಲಿದ್ದೇವೆ ಹಾಗೂ ಬೆಸ್ಟ್ ಆಹಾರ ಯಾವುದು ಎಂದು ತಿಳಿಸಿಕೊಡಲಿದ್ದೇವೆ. ಸ್ನೇಹಿತರೇ ಸಾಮಾನ್ಯವಾಗಿ ಮಧುಮೇಹಿಗಳು ಹಾಗೂ ತೂಕ ಇಳಿಸಿಕೊಳ್ಳುವ ಜನರು ಚಪಾತಿ ಗಳಿಗೆ ಪ್ರತಿನಿತ್ಯವೂ ಮೊರೆಹೋಗುತ್ತಾರೆ. ಆದರೆ ಸ್ನೇಹಿತರೇ ಈ ರೀತಿ ಮಾಡುವ ಮುನ್ನ ಕೆಲವೊಂದು ಅಂಶಗಳನ್ನು ನೀವು ಗಮನಿಸಬೇಕಾಗುತ್ತದೆ. ಯಾಕೆಂದರೆ ನೀವು ನಿಮ್ಮ ದಿನನಿತ್ಯದ ಜೀವನದಲ್ಲಿ ಚಪಾತಿಯನ್ನು ಅಳವಡಿಸಿಕೊಂಡಿದ್ದರೇ, ನೀವು ಚಪಾತಿ ಸೇವಿಸಿದ ಪ್ರಮಾಣಕ್ಕೆ ಸರಿಯಾಗಿ ವ್ಯಾಯಾಮದ ಮೊರೆ ಹೋಗಬೇಕಾಗುತ್ತದೆ. ವ್ಯಾಯಾಮ ಮಾಡದೇ ಹೋದಲ್ಲಿ ಗ್ಲುಟಿನ್ ಎಂಬ ಅಂಶ ನಿಮ್ಮ ದೇಹದಲ್ಲಿ ಶೇಖರಣೆಯಾಗಿ ನಿಮಗೆ ಹೊಟ್ಟೆ ಬಾರ, ಕೈಕಾಲು ಸೆಳೆತ ನೋವು ಕಂಡುಬರುತ್ತದೆ. ಹಾಕಿದ್ದರೆ ಚಪಾತಿಯ ಬದಲು ಪರ್ಯಾಯ ಆಹಾರ ಪದಾರ್ಥದ ಕುರಿತು ಗಮನಹರಿಸುವುದಾದರೇ, ಚಪಾತಿ ಗಿಂತ ಜೋಳದ ರೊಟ್ಟಿ ನಿಜಕ್ಕೂ ಅದ್ಭುತ ಆರೋಗ್ಯದ ಲಾಭಗಳನ್ನು ನೀಡುತ್ತದೆ.

ನೀವು ಜೋಳದ ರೊಟ್ಟಿಯನ್ನು ನಿಮ್ಮ ದಿನನಿತ್ಯದ ಆಹಾರ ಜೀವನದಲ್ಲಿ ಬಳಸುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಅಂಶವನ್ನು ಏರಿಕೆಯಾಗಲು ಬಿಡದೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜೋಳದ ರೊಟ್ಟಿ ಸಹಾಯ ಮಾಡುತ್ತದೆ. ಇನ್ನು ಜೋಳದ ರೊಟ್ಟಿ ಯಲ್ಲಿ ಪ್ರೋಟೀನ್ ಅಂಶಗಳು ಹೇರಳವಾಗಿ ಸಿಗುವ ಕಾರಣ ತೂಕ ಇಳಿಸಿಕೊಳ್ಳುವ ಜನರು ಕೂಡ ಜೋಳದ ರೊಟ್ಟಿಯನ್ನು ಚಪಾತಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಜೋಳದ ರೊಟ್ಟಿ ಸೇವಿಸುವುದರಿಂದ ನಿಮಗೆ ಇನ್ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ.

Post Author: Ravi Yadav