ಸೂರ್ಯ ಪರ ನಿಂತಿರುವ ಮುಂಬೈ-ಚೆನ್ನೈ ಅಭಿಮಾನಿಗಳಿಗೆ ಆರ್ಸಿಬಿ ಅಭಿಮಾನಿಗಳಿಂದ ಸ್ಪಷ್ಟ ಸಂದೇಶ ! ಏನು ಗೊತ್ತಾ??

ಸೂರ್ಯ ಪರ ನಿಂತಿರುವ ಮುಂಬೈ-ಚೆನ್ನೈ ಅಭಿಮಾನಿಗಳಿಗೆ ಆರ್ಸಿಬಿ ಅಭಿಮಾನಿಗಳಿಂದ ಸ್ಪಷ್ಟ ಸಂದೇಶ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟಣೆಗೊಂಡ ಬಳಿಕ ಸೂರ್ಯ ಕುಮಾರ್ ಯಾದವ್ ರವರು ಈ ಬಾರಿಯೂ ಕೂಡಾ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕ ಮುಂಬೈ ಹಾಗೂ ಆರ್ಸಿಬಿ ತಂಡದ ನಡುವಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮುಂಬೈ ತಂಡವನ್ನು ಗುರಿ ತಲುಪಿಸಿದ್ದರು. ಇದೇ ಪಂದ್ಯದಲ್ಲಿ ಸೂರ್ಯಕುಮಾರ ಯಾದವ್ ಹಾಗೂ ವಿರಾಟ್ ಕೊಹ್ಲಿ ರವರು ಮೈದಾನದಲ್ಲಿ ಒಬ್ಬರನ್ನೊಬ್ಬರು ಹಲವಾರು ಸೆಕೆಂಡ್ಗಳ ಕಾಲ ಗುರಾಯಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ರವರು ಅಗ್ರೆಸ್ಸಿವ್ ಆಟಗಾರ ಎಂದು ಎಲ್ಲರಿಗೂ ತಿಳಿದಿದೆ, ಇದಕ್ಕೆ ಉತ್ತರವಾಗಿ ಸೂರ್ಯಕುಮಾರ್ ಯಾದವರು ಕೂಡ ಅದೇ ರೀತಿಯ ಉತ್ತರ ನೀಡಿದ್ದರು. ಇದನ್ನು ಕಂಡ ಆರ್ಸಿಬಿ ಅಭಿಮಾನಿಗಳು ಇದನ್ನು ಕೇವಲ ಒಂದು ಪಂದ್ಯದಂತೆ ನೋಡಿ ಸುಮ್ಮನಾಗಿದ್ದರು.

ಆದರೆ ಇದಕ್ಕೂ ಸೂರ್ಯ ಕುಮಾರ್ ಯಾದವ್ ಆಯ್ಕೆಯಾಗದೆ ಇರುವುದಕ್ಕೂ ಬಣ್ಣ ಕಲ್ಪಿಸಿ ಸೂರ್ಯಕುಮಾರ್ ಯಾದವ್ ರವರು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೊಹ್ಲಿಗೆ ಉತ್ತರ ನೀಡಿದ್ದಾರೆ. ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗ ಬೇಕಾಗಿತ್ತು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದೆಲ್ಲಾ ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದಾದ ಬಳಿಕ ನಮ್ಮಲ್ಲಿ ಇರುವ ಕೆಲವು ಪಕ್ಕದ ರಾಜ್ಯದ ತಂಡಗಳನ್ನು ಬೆಂಬಲಿಸುವ ಕೆಲವು ಜನರು ವಿರಾಟ್ ಕೊಹ್ಲಿ ರವರ ವಿರುದ್ಧ ಟೀಕೆಗಳನ್ನು ಮಾಡಲು ಇದೇ ಸಂದರ್ಭವನ್ನು ಬಳಸಿಕೊಂಡು ಕೊಹ್ಲಿ ರವರು ಯುವಕರ ಪ್ರತಿಭೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ವಾದ ಮಂಡಿಸಲು ಆರಂಭಿಸಿದರು.

ಇಷ್ಟಕ್ಕೆ ಸುಮ್ಮನಾಗದ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಕರ್ನಾಟಕದಿಂದ ಹೆಚ್ಚು ಜನರು ಆಯ್ಕೆಯಾಗಿರುವ ಕಾರಣ, ರಾಜ್ಯಗಳ ನಡುವೆಯೂ ಕೂಡ ಒಂದು ಬೌಂಡರಿಯನ್ನು ನಿರ್ಮಿಸಿ ಕರ್ನಾಟಕದಿಂದ ಹೆಚ್ಚು ಜನ ಆಯ್ಕೆಯಾಗಿದ್ದಾರೆ ಎಂದು ವಾದ ಮಂಡಿಸುವ ಮೂಲಕ ಒಂದು ಸಮಂಜಸವಲ್ಲದ ಚರ್ಚೆಗೆ ನಾಂದಿ ಹಾಡಿದರು. ಆರ್ಸಿಬಿ ತಂಡದಲ್ಲಿ ಕನ್ನಡಿಗರು ಇಲ್ಲ ಎಂದು ಆರ್ಸಿಬಿ ತಂಡವನ್ನು ಬೆಂಬಲಿಸದ ಕೆಲವು ಇತರ ರಾಜ್ಯದ ತಂಡಗಳ ಅಭಿಮಾನಿಗಳು, ಇದೀಗ ಮುಂಬೈ ಇಂಡಿಯನ್ಸ್ ತಂಡದವರು ರಾಜ್ಯಗಳ ನಡುವೆ ಬೌಂಡರಿ ಎಳೆದು ಕರ್ನಾಟಕ ರಾಜ್ಯದಿಂದ ಹೆಚ್ಚು ಜನರು ಆಯ್ಕೆಯಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ರವರನ್ನು ಟೀಕಿಸಲು ಆರಂಭಿಸಿದ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಹವಾ ಎಂಬಂತೆ ಮನಬಂದಂತೆ ವಿರಾಟ್ ಕೊಹ್ಲಿ ರವರ ವಿರುದ್ಧ ಹಲವಾರು ಕಾಮೆಂಟ್ಗಳು, ಪೋಸ್ಟ್ಗಳು, ಮೀಮ್ ಗಳು ಸೇರಿದಂತೆ ಕೆಲವೊಂದು ಹ್ಯಾಶ್ಟ್ಯಾಗ್ ಗಳನ್ನು ಬಳಸಿಕೊಂಡು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ ಇವರೆಲ್ಲರಿಗೂ ಇಲ್ಲಿದೆ ಆರ್ಸಿಬಿ ಅಭಿಮಾನಿಗಳ ಉತ್ತರ.

ಸ್ನೇಹಿತರೇ ಅಸಲಿಗೆ ವಿರಾಟ್ ಕೊಹ್ಲಿ ಅವರು ಆರ್ಸಿಬಿ ತಂಡ ಬಿಟ್ಟು ಹೋಗುತ್ತೇನೆ ಎಂದರೇ ಖಂಡಿತ ಇತರ ಎಲ್ಲಾ ಏಳು ತಂಡಗಳು ಕೂಡ ವಿರಾಟ್ ಕೊಹ್ಲಿ ಅವರನ್ನು ಸ್ವಾಗತಿಸಲು ಕಾದು ಕುಳಿತಿರುತ್ತಾರೆ. ಯಾವುದೇ ತಂಡಗಳಾಗಲಿ ವಿರಾಟ್ ಕೊಹ್ಲಿ ರವರನ್ನು ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿ ಕೊಂಡುಕೊಳ್ಳುತ್ತಾರೆ. ಅವರು ತಮಗೆ ಬೇರೆ ಆಯ್ಕೆ ಇಲ್ಲ ಎಂದು ಆರ್ಸಿಬಿ ತಂಡದಲ್ಲಿ ಉಳಿದಿಲ್ಲ, ಬದಲಾಗಿ ಆರ್ಸಿಬಿ ಅಭಿಮಾನಿಗಳಿಗೆ ಹಾಗೂ ಆರ್ಸಿಬಿ ತಂಡಕ್ಕಾಗಿ ನಾನು ಕೊನೆಯವರೆಗೂ ಆರ್ಸಿಬಿ ತಂಡದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಇನ್ನುಳಿದಂತೆ ನೀವು ಮಾಡುತ್ತಿರುವ ಪೋಸ್ಟ್ ಗಳಿಗೆ ಕಮೆಂಟುಗಳಿಗೆ ಹಾಗೂ ಮೀಮ್ ಗಳಿಗೆ ಉತ್ತರ ನೀಡುವುದಾದರೇ ಇಡೀ ಭಾರತದಲ್ಲಿ ಅಲ್ಲಾ ಅಲ್ಲಾ ಇಡೀ ವಿಶ್ವದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಹೊರತುಪಡಿಸಿದರೇ ಉಳಿದ ಯಾವುದೇ ಲೀಗ್ ತಂಡಗಳು ನಮ್ಮ ಆರ್ಸಿಬಿ ತಂಡದಷ್ಟು ಅಭಿಮಾನಿಗಳನ್ನು ಹೊಂದಿಲ್ಲ.

ಐಪಿಎಲ್ ಆರಂಭವಾಗುವುದಕ್ಕೂ ಮುನ್ನವೇ ಐಪಿಎಲ್ ಟೂರ್ನಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ತಿಳಿಯದೆ ಇದ್ದರೂ ಕೂಡ ಪ್ರತಿಬಾರಿಯೂ ಈ ಸಲ ಕಪ್ ನಮ್ಮದೇ ಎಂದು ಟ್ರೆಂಡಿಂಗ್ ಸೃಷ್ಟಿಸುತ್ತೇವೆ. ಅಷ್ಟೇ ಯಾಕೆ ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಬೇರೆ ತಂಡಗಳು ಆಟವಾಡುತ್ತಿದ್ದರೂ ಕೂಡ ಅಲ್ಲಿ ಕೇಳಿಬರುವ ಸ್ಲೋಗನ್ ಗಳು ಆರ್ಸಿಬಿ ಆರ್ಸಿಬಿ ಎಂದು. ಈ ಎಲ್ಲಾ ಲೆಕ್ಕಾಚಾರಗಳ ಮೂಲಕ ನಮ್ಮ ಸಂಖ್ಯೆಯನ್ನು ನೀವೇ ಅಂದಾಜು ಮಾಡಿಕೊಳ್ಳಬಹುದು, ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು, ಸಿಎಸ್ಕೆ ಅಭಿಮಾನಿಗಳು ಹಾಗೂ ನಮ್ಮ ರಾಜ್ಯದಲ್ಲಿ ಇದ್ದುಕೊಂಡು ಪಕ್ಕದ ರಾಜ್ಯದವರಿಗೆ ಸಪೋರ್ಟ್ ಮಾಡುವ ಅಭಿಮಾನಿಗಳು ನೀವೇ ಎಷ್ಟು ಟ್ರೆಂಡಿಂಗ್ ಸೃಷ್ಟಿಸುತ್ತಿದ್ದೀರಾ ಎಂದರೆ ಇನ್ನು ಆರ್ಸಿಬಿ ಅಭಿಮಾನಿಗಳು ಸೃಷ್ಟಿಸಲು ಆರಂಭಿಸಿದರೇ ಏನಾಗಬಹುದು ಎಂಬುದನ್ನು ಮೇಲಿನ ಎಲ್ಲಾ ಉದಾಹರಣೆಗಳ ಮೂಲಕ ನೀವೇ ಅಂದಾಜು ಮಾಡಿಕೊಳ್ಳಿ.

ನಾವು ಯಾಕೆ ಮಾಡುತ್ತಿಲ್ಲ ಎಂದರೇ ನಮಗೆ ಭಾರತ ತಂಡಕ್ಕೆ ಆಯ್ಕೆಯಲ್ಲಿ ಯಾವುದೇ ವಿವಾದ ಕಾಣಿಸುತ್ತಿಲ್ಲ, ಯಾಕೆಂದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ಕನ್ನಡಿಗರು ಅಲ್ಲ ಮುಂಬೈ ನವರು ಅಲ್ಲ ಬದಲಾಗಿ ಭಾರತೀಯರು. ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಎಲ್ಲರೂ ಕೂಡ ಭಾರತೀಯರೇ, ಆ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ಆಟವಾಡಿದರೂ ಕೂಡ ನಾವು ಆತ ಮುಂಬೈ ಇಂಡಿಯನ್ಸ್ ತಂಡದವನು ಅಥವಾ ಮತ್ತೊಬ್ಬ ರಾಜ್ಯದವನು ಎಂದು ಭಾರತೀಯ ಕ್ರಿಕೆಟ್ ತಂಡದ ಸೋಲಲಿ ಎಂದು ಆಶಿಸುವುದಿಲ್ಲ. ನಾವು ಅವರನ್ನು ಭಾರತೀಯರನ್ನಾಗಿ ನೋಡುತ್ತೇವೆ. ಭಾರತ ಕ್ರಿಕೆಟ್ ತಂಡ ಗೆಲ್ಲಬೇಕು ಎಂದುಕೊಳ್ಳುತ್ತೇವೆ ಅದಕ್ಕಾಗಿಯೇ ಸುಮ್ಮನಿದ್ದೇವೆ ಹೊರತು ನಿಮ್ಮ ಕಮೆಂಟುಗಳಿಗೆ ಹಾಗೂ ಪೋಸ್ಟ್ ಗಳಿಗೆ ಉತ್ತರ ನೀಡಲು ಬರುವುದಿಲ್ಲ ಎಂದಲ್ಲ. ಅಂದಹಾಗೆ ಇದಕ್ಕೂ ಮುನ್ನ ಈ ರೀತಿಯ ಹಲವಾರು ಟ್ರೆಂಡಿಂಗ್ ಗಳನ್ನೂ ಸೃಷ್ಟಿಸಿದ ಇತಿಹಾಸವೇ ಇದೆ ನೆನಪಿರಲಿ.