ಹೋಟೆಲ್ ಗೆ ಹೋಗೋ ಬದಲು ಮನೆಯಲ್ಲಿಯೇ ಈ ರೀತಿ ಕುಷ್ಕ ಟ್ರೈ ಮಾಡಿ, ಎಲ್ಲರೂ ಇಷ್ಟು ಪಡುತ್ತಾರೆ.. !

ಹೋಟೆಲ್ ಗೆ ಹೋಗೋ ಬದಲು ಮನೆಯಲ್ಲಿಯೇ ಈ ರೀತಿ ಕುಷ್ಕ ಟ್ರೈ ಮಾಡಿ, ಎಲ್ಲರೂ ಇಷ್ಟು ಪಡುತ್ತಾರೆ.. !

ನಮಸ್ಕಾರ ಸ್ನೇಹಿತರೇ, ನಾವಿಂದು ಹೋಟೆಲ್ ಶೈಲಿಯ ಸ್ಪೆಷಲ್ ಕುಷ್ಕ ಮಾಡೋದು ಹೇಗೆ ಅಂತ ಹೇಳಿ ಕೊಡಲಿದ್ದೇವೆ, ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಾವು ಇದನ್ನು ಕಡಾಯಿಯಲ್ಲಿ ಮಾಡಿ ನಿಮಗೆ ತಿಳಿಸುತ್ತಿದ್ದೇವೆ. ನೀವು ಕುಕ್ಕರ್ ನಲ್ಲೂ ಸಹ ಇದೇ ಅಳತೆಯಲ್ಲಿ ಮಾಡಿಕೊಳ್ಳಬಹುದು. ಮೊದಲು ಒಂದು ಪಾತ್ರೆ ಅಥವಾ ಕುಕ್ಕರ್ ಗೆ ಒಂದುವರೆ ಅಥವಾ ಎರಡು ಟೇಬಲ್ಸ್ಪೂನ್ ಅಷ್ಟು ಎಣ್ಣೆ, ಒಂದು ಇಂಚಿನ ಎರಡು ಚಕ್ಕೆ, ಎರಡು ಎಲಕ್ಕಿ, 3 ರಿಂದ 4 ಲವಂಗ, ಹಾಗೆ ಅರ್ಧ ಟೇಬಲ್ ಸ್ಪೂನ್, ಸೊಂಪ್ ಕಾಳು, ನಂತರ ಒಂದೇ ಒಂದು ಈರುಳ್ಳಿಯನ್ನು ಉದ್ದುದ್ದ ಕಟ್ ಮಾಡಿ ಅದಕ್ಕೆ ಸೇರಿಸಿಕೊಳ್ಳಬೇಕು

ಇವೆಲ್ಲವನ್ನೂ ಚೆನ್ನಾಗಿ ಬಾಡಿಸಿಕೊಳ್ಳಬೇಕು ಮತ್ತು ಚೆನ್ನಾಗಿ ಹುರಿದುಕೊಂಡ ನಂತರ ಅದಕ್ಕೆ 4 ಹಸಿಮೆಣಸಿನಕಾಯಿ ಮತ್ತು ಒಂದುವರೆ ಟೇಬಲ್ ಸ್ಪೂನ್ ನಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. ಈರುಳ್ಳಿ ಚೆನ್ನಾಗಿ ಬಣ್ಣ ಕೆಂಪಾಗುವವರೆಗೆ ಹುರಿದ ನಂತರ ಒಂದೆರಡು ಟೊಮೇಟೊವನ್ನು ಸಣ್ಣದಾಗಿ ಕ’ಟ್ ಮಾಡಿ ಹಾಕಿ. ನಂತರ ಅದಕ್ಕೆ ಮಸಾಲೆಯನ್ನು ಹಾಕಬೇಕು ಒಂದು ಸ್ಪೂನ್ ನಷ್ಟು ಕಾಶ್ಮೀರಿ ಚಿಲ್ಲಿ ಪೌಡರ್ ಮತ್ತು ಒಂದು ಟೇಬಲ್ ಸ್ಪೂನ್ ನಷ್ಟು ದನಿಯ ಪೌಡರ್, ಹಾಗೆ ಒಂದು ಸ್ಪೂನ್ ನಷ್ಟು ಜಿರಿಗೆ ಪೌಡರನ್ನು ಹಾಕಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿ. ಅದು ಚೆನ್ನಾಗಿ ಬೆಂ’ದ ನಂತರ ಮತ್ತು ಎಣ್ಣೆ ಬಿಟ್ಟುಕೊಂಡು ನಂತರ ಅರ್ಧ ಕಪ್ ನಷ್ಟು ಮೊಸರು ಹಾಕಿ.

ಮೊಸರಿನ ಬಣ್ಣ ಹೋಗೋವರೆಗೂ ಚೆನ್ನಾಗಿ ಬೇ’ಯಿಸಿದ ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಕೊಳ್ಳಿ, ನಂತರ ಒಂದು ಚಿಟಿಕೆಯಷ್ಟು ಅರಿಶಿನವನ್ನು ಹಾಕಿ. ಈಗ ಇದಕ್ಕೆ 10 ನಿಮಿಷ ನೆನೆಸಿಟ್ಟ ಬಾಸುಮತಿ ಅಥವಾ ಬೇರೆ ಅಕ್ಕಿಯನ್ನು ಅಳತೆಗೆ ತಕ್ಕಂತೆ ಹಾಕಿಕೊಳ್ಳಿ, ನಂತರ ಎರಡು ನಿಮಿಷದವರೆಗೂ ಚೆನ್ನಾಗಿ ಮಿಕ್ಸ್ ಮಾಡಿ, ನೀವು 2 ಕಪ್ ಅಕ್ಕಿ ತಗೊಂಡಿದ್ರೆ 3 ಕಪ್ ನೀರು ಹಾಕಬೇಕು. ಅಕ್ಕಿಯನ್ನು ನೆನೆಸಿಲ್ಲಾ ಎಂದರೆ 4 ಕಪ್ ನೀರು ಬೇಕು. ಸಾಮಾನ್ಯವಾಗಿ ಅಡುಗೆ ಮಾಡುವವರಿಗೆ ತಿಳಿದಿರುತ್ತದೆ, ಕುಷ್ಕ ಜೊತೆಗೆ ಯಾವುದಾದರೂ ಚಿಕ್ಕನ್ ಅಥವಾ ಮಟನ್ ಗ್ರೇವಿ ಮಾಡಿದರೆ ತುಂಬಾನೇ ಚೆನ್ನಾಗಿರುತ್ತೆ.

ಸ್ವಲ್ಪ ಒತ್ತು ಬಿಟ್ಟು ಮತ್ತೆ ಎಲ್ಲವನ್ನು ಬಾಡಿಸಿಕೊಂದು ಮಿಕ್ಸ್ ಮಾಡಿ ಕೊಳ್ಳಿ ನಂತರ ಪ್ಲೇಟ್ ಮುಚ್ಚಿ, ಇದಾದ ನಂತರ 10 ರಿಂದ 15 ನಿಮಿಷದಲ್ಲಿ ಬಿಸಿಬಿಸಿ ರುಚಿಯಾದ ಕುಷ್ಕ ರೆಡಿಯಾಗುತ್ತದೆ. ಬಿಸಿಬಿಸಿಯಾದ ಕಬಾಬ್ ಇದ್ರೆ ತುಂಬಾನೇ ಚೆನ್ನಾಗಿರುತ್ತೆ ಮತ್ತು ಇದನ್ನು ಹತ್ತರಿಂದ ಹದಿನೈದು ನಿಮಿಷದ ಒಳಗೆ ಕಡಿಮೆ ಪದಾರ್ಥವನ್ನು ಬಳಸಿ ಸುಲಭವಾಗಿ ಮಾಡಬಹುದು. ಹೆಚ್ಚಿನ ಮಾಹಿತಿ ಬೇಕೆಂದರೆ ಮೇಲೆ ಪೋಸ್ಟ್ ಮಾಡಿರುವ ವಿಡಿಯೋವನ್ನು ನೋಡಿಕೊಂಡು ನೀವು ಸ್ಪೆಷಲ್ ಕುಷ್ಕ ವನ್ನು ಮಾಡಿಕೊಳ್ಳಬಹುದು.