ಥಟ್ ಅಂತ ಹೇಳಿ- ಸೋಮಶೇಖರ್ ರಾವ್ ರವರು ಹೇಳಿದ ಮನ ಮುಟ್ಟುವ ಬ್ಯೂಟಿಫುಲ್ ಸ್ಟೋರಿ..!

ಥಟ್ ಅಂತ ಹೇಳಿ- ಸೋಮಶೇಖರ್ ರಾವ್ ರವರು ಹೇಳಿದ ಮನ ಮುಟ್ಟುವ ಬ್ಯೂಟಿಫುಲ್ ಸ್ಟೋರಿ..!

ನಮಸ್ಕಾರ ಸ್ನೇಹಿತರೇ, ಅತಿಥಿಗಳನ್ನು ಗೌರವದಿಂದ ನೋಡಬೇಕು, ಹಾಗೆಯೇ ಅವರನ್ನು ಗೌರವದಿಂದ ಸ್ವಾಗತಿಸಬೇಕು. ಹಾಗೆ ಮಾಡದೆ ಇದ್ದರೆ ಏನಾಗುತ್ತದೆ? ಎನ್ನುವುದಕ್ಕೆ ಒಂದು ಉದಾಹರಣೆ ಸಮೇತ ಸೋಮಶೇಖರ್ ರವರು ವಿವರಿಸಿದ್ದಾರೆ ಕೇಳಿ. ಅಮೆರಿಕದಲ್ಲಿ ಬೋಸ್ಟನ್ ಎನ್ನುವಂತಹ ಒಂದು ದೊಡ್ಡ ನಗರ ! ಆ ನಗರದಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯ, ಅದು ಬಹಳ ಪ್ರಖ್ಯಾತವಾದ ವಿಶ್ವವಿದ್ಯಾನಿಲಯ ಅದರ ಪ್ರಾಂಶುಪಾಲರು ಸಹ ಪ್ರಖ್ಯಾತರಾಗಿದ್ದರು.

ಆ ಪ್ರಾಂಶುಪಾಲರ ಕೊಠಡಿಯ ಮುಂದೆ ಓರ್ವ ವೃದ್ಧ ದಂಪತಿಗಳು, ಇಬ್ಬರಿಗೂ ವಯಸ್ಸಾಗಿದೆ ಸ್ವಲ್ಪ ಹಳೆಯ ಬಟ್ಟೆಯನ್ನು ಧರಿಸಿದ್ದಾರೆ. ಅವರು ಬಂದು ನಿಂತಾಗ ಅಲ್ಲಿರುವ ಜವಾನ ಕೇಳುತ್ತಾರೆ, ಯಾರು ನೀವು, ಯಾಕೆ ಬಂದಿದ್ದೀರಿ, ಅಂತ? ಆಗ ವೃದ್ಧರು ನಾವು ಪ್ರಾಂಶುಪಾಲರನ್ನು ನೋಡಬೇಕು ಎಂದು ಹೇಳುತ್ತಾರೆ. ಜವಾನ ಇದಕ್ಕೆ ನಿರಾಕರಿಸಿದ ಕಾರಣ ವೃದ್ಧ ದಂಪತಿಗಳು, ಎಷ್ಟೇ ತಡವಾದರೂ ಪರವಾಗಿಲ್ಲ ನಾವು ಅವರನ್ನು ನೋಡಿಕೊಂಡು ಹೋಗುತ್ತೇವೆ ಎನ್ನುವರು. ನಿಮ್ಮ ಹಣೆಬರಹ ಕಾಯಿರಿ ನೀವು ಎನ್ನುತ ಜವಾನ ಹೋಗಿ ತನ್ನ ಸ್ಥಳದಲ್ಲಿ ಕೂರುತ್ತಾನೆ.

ತುಂಬಾ ಹೊತ್ತು ಕಾದ ನಂತರ ಹೇಗೋ ಒಳಗಿರುವ ಅಧಿಕಾರಿಗಳಿಗೆ ಈ ವೃದ್ಧರ ಬಗ್ಗೆ ತಿಳಿದು ಇವರು ಹಾಗೆಯೇ ಹೋಗುವಂತವವರಲ್ಲ ಎಂದು ಒಳಗೆ ಕರೆಯಿರಿ ಎಂದು ಜವಾನನಿಗೆ ತಿಳಿಸುತ್ತಾರೆ. ವೃದ್ಧರು ತಮ್ಮ ಮಗ ಈ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದವನು ಒಂದು ಅ’ಪಘಾತದಲ್ಲಿ ತೀ’ರಿಹೋ’ದ ಅವನ ನೆನಪಿಗೆ ಏನಾದರೂ ಮಾಡಬೇಕು ಎನ್ನುವಂತಹ ಆಸೆ ನನ್ನದು ಎಂದು ಹೇಳುವಾಗ, ಅಲ್ಲಿರುವ ಮುಖ್ಯಸ್ಥರು ಏನು ಅವನ ವಿಗ್ರಹವನ್ನು ನೆಡಬೇಕ ಇಲ್ಲಿ ಎಂದು ರೇಗುತ್ತಾರೆ.

ಈ ರೀತಿ ಹೇಳಿದನ್ನು ಕೇಳಿಯೂ ಸಹ ತಾಳ್ಮೆ ಕಳೆದುಕೊಳ್ಳದ ವೃದ್ಧ ಹಾಗೆ ಏನು ಮಾಡಬೇಡಿ, ನನ್ನ ಮಗನ ಹೆಸರಲ್ಲಿ ಏನಾದರೂ ಒಂದು ಕಟ್ಟಡವನ್ನು ಕಟ್ಟಲಿಕ್ಕೆ ಸಾಧ್ಯವಾ? ಈ ವಿಚಾರವಾಗಿ ಮಾತನಾಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾರೆ, ಇದನ್ನು ಕೇಳಿ ಅಧಿಕಾರಿಗಳು ನಕ್ಕು ಬಿಡುತ್ತಾರೆ. ಹಿರಿಯ ದಂಪತಿಗಳು ಅಲ್ಲಿಂದ ಎದ್ದು ಹೋಗಿ, ಒಂದು ವಿಶ್ವ ವಿದ್ಯಾಲಯವನ್ನು ಕಟ್ಟಲು ನಿರ್ಧರಿಸುತ್ತಾರೆ. ಅವರು ಕಟ್ಟಿದ ವಿಶ್ವವಿದ್ಯಾಲಯವೇ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯ, ಅಲ್ಲಿಗೆ ಬಂದಂತಹ ವೃದ್ಧ ದಂಪತಿಗಳು ಲೇಲ್ಯಾಂಡ್, ಸ್ಟ್ಯಾನ್ಫೋರ್ಡ್. ಅವರು ಅಪಾರ ಶ್ರೀಮಂತರು ಆದರೂ ಸಹ ಸರಳವಾಗಿಯೇ ಬದುಕನ್ನು ನಡೆಸುತ್ತಿರುತ್ತಾರೆ. ತಾವು ಎಂತಹ ಬಟ್ಟೆಗಳನ್ನು ಎಂದರೆ ಹತ್ತಿ ಬಟ್ಟೆ ಹಾಗೂ ಹಳೆಯ ಬಟ್ಟೆಗಳನ್ನು ಧರಿಸುತ್ತಾರೆ.

ಹಾಗಾಗಿ ಉನ್ನತ ಹುದ್ದೆಯಲ್ಲಿ ಇರುವಂತಹ ಜನರು ನಮ್ರತೆಯನ್ನು ಉಳಿಸಿಕೊಳ್ಳಲಿಲ್ಲ, ಎಂದರೆ ಆ ಹುದ್ದೆಯಲ್ಲಿ ಇರುವುದಕ್ಕೆ ನಾಲಾಯಕ್ಕು ಎಂಬುದನ್ನು ಮನಗಾಣಬೇಕಾಗಿದೆ. ಅದರ ಜೊತೆಗೆ ಯಾರನ್ನು ಮತ್ತು ಯಾರ ವ್ಯಕ್ತಿತ್ವವನ್ನು ಅಲ್ಲಗಳೆಯಬಾರದು ಯಾರನ್ನು ನೋಯಿಸಬಾರದು ಯಾರಿಗೆ ಎಷ್ಟು ಕೆಪಾಸಿಟಿ ಇರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ, ಇಂದು ರಸ್ತೆಬದಿಯಲ್ಲಿ ಭಿಕ್ಷೆ ಬೇಡುವವನು ಸಹ ಸಮಯ ಬದಲಾದರೆ ಪ್ರಪಂಚದ ದೊಡ್ಡ ಶ್ರೀಮಂತನಾಗಿ ಸಹ ಬದಲಾಗಬಲ್ಲನು, ಹಾಗಾಗಿ ಯಾರನ್ನು ಕೀಳಾಗಿ ನೋಡಬೇಡಿ ಅಲ್ಲ ಗಳೆಯಬೇಡಿ, ಈ ಪ್ರಪಂಚದಲ್ಲಿ ಯಾರು ಏನು ಬೇಕಾದರೂ ಸಹ ಮಾಡಬಹುದು,….