ಚಿಕನ್ ಈ ರೀತಿ ಮಾಡಿದರೆ ಗ್ಯಾರೆಂಟಿ ಎಲ್ಲರೂ ಇಷ್ಟ ಪಡ್ತಾರೆ ! ಬ್ಯಾಚುಲರ್ಸ್ ನೋಡ್ರಪ್ಪ ಪಾರ್ಟಿಗೆ ಟ್ರೈ ಮಾಡಿ

ಚಿಕನ್ ಈ ರೀತಿ ಮಾಡಿದರೆ ಗ್ಯಾರೆಂಟಿ ಎಲ್ಲರೂ ಇಷ್ಟ ಪಡ್ತಾರೆ ! ಬ್ಯಾಚುಲರ್ಸ್ ನೋಡ್ರಪ್ಪ ಪಾರ್ಟಿಗೆ ಟ್ರೈ ಮಾಡಿ

ನಮಸ್ಕಾರ ಸ್ನೇಹಿತರೇ, ನಾವು ಇವತ್ತು ಚಿಕನ್ ಪೆಪ್ಪರ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ, ಈ ರೀತಿ ನೀವು ನಿಮ್ಮ ಮನೆಯಲ್ಲಿ ಮಾಡಿದರೇ ಎಲ್ಲರೂ ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗೆಯೇ ಇದು ಸಿಂಪಲ್ ಮತ್ತು ಬೇಗನೆ ಮಾಡಬಹುದಾದ ಒಂದು ರೆಸಿಪಿಯಾಗಿದೆ. ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಬಹಳ ಇಷ್ಟವಾಗುವುದರಲ್ಲಿ ಡೌಟೇ ಇಲ್ಲ.

ಇದಕ್ಕೆ ಬೇಕಾಗಿರುವ ಮಸಾಲೆ :- ಸ್ವಲ್ಪ ಶುಂಠಿ, 4 ರಿಂದ 5 ಹಸಿಮೆಣಸಿನ ಕಾಯಿ, ಅರ್ಧ ಸ್ಪೂನ್ ನಷ್ಟು ಜೀರಿಗೆ ಮತ್ತು ಮೆಂತ್ಯ ಹಾಗೆ ಒಂದು ಬೆಳ್ಳುಳ್ಳಿ ತಗೊಂಡ ನಂತರ ಎಲ್ಲ ಮಸಾಲೆಯನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಕೊಳ್ಳಬೇಕು ಇದಕ್ಕೆ ಕಾಳುಮೆಣಸಿನ ಕಾಲು ಕಪ್ ಪುಡಿ ಸೇರಿಸಿ. ಹಾಗೆ ನಿಮಗೆ ಮಸಾಲೆ ಜಾಸ್ತಿ ಅನಿಸಿದರೇ ನೀವು ನಿಮ್ಮ ಫ್ರಿಜ್ಜಲ್ಲಿ ಇದನ್ನು ಸಂರಕ್ಷಿಸಬಹುದು. ಮಸಾಲೆ ರೆಡಿಯಾದ ತಕ್ಷಣ ಮತ್ತೊಂದು ಪಾತ್ರೆಯಲ್ಲಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಒಂದು ಈರುಳ್ಳಿ ಹಾಕಿ ಫ್ರೈ ಮಾಡಿ..

ಬೇಕಿದ್ರೆ ತುಪ್ಪ ಕೂಡ ನೀವು ಎಣ್ಣೆಯ ಬದಲು ಹಾಕಿಕೊಳ್ಳಬಹುದು, ಮತ್ತು ಅದು ಕೆಂಪಗೆ ಆಗೋ ವರೆಗೂ ಫ್ರೈ ಮಾಡಬೇಕು, ನಂತರ ಅದಕ್ಕೆ ಗ್ರೈಂಡ್ ಮಾಡಿಟ್ಟಿದ್ದ ಮಸಾಲವನ್ನು ಹಾಕಿ ನಂತರ ಒಂದು ಕಡ್ಡಿ ಕರಿಬೇವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಹಾಗೆಯೇ ಒಂದು ಚಿಟಿಕೆಯಷ್ಟು ಅರಿಶಿಣ ಮತ್ತು ಒಂದು ಸ್ಪೂನ್ ನಷ್ಟು ಕೊತ್ತಂಬರಿ ಪುಡಿಯನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿ ನೀರು ಬೇಡ ಏಕೆಂದರೆ ಇದು ಪೆಪ್ಪರ್ ಡ್ರೈ..

ಮಸಾಲೆ ಎಲ್ಲಾ ಚೆನ್ನಾಗಿ ಫ್ರೈ ಆದ ಮೇಲೆ ಅದಕ್ಕೆ ಅಳತೆಗೆ ತಕ್ಕಂತೆ ಚಿಕನ್ (ಅಂದಾಜು ½ಕೆಜಿ ಅಷ್ಟು) ಹಾಕಿ, ನಂತರ ಅದಕ್ಕೆ ಸೋಯಾಸಾಸ್ ಹಾಕಿದರೇ ಒಳ್ಳೆಯ ರುಚಿಯನ್ನು ಕೊಡುತ್ತದೆ. ಇದು ನಿಮಗೆ ಬೇಕಿದ್ದರೆ ಮಾತ್ರ ಹಾಕಿಕೊಳ್ಳಬಹುದು ಅಥವಾ ಬೇಡ ಎಂದರೆ ಬಿಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಅದಕ್ಕೆ ಸೇರಿಸಿ ಚಿಕನ್ ಅನ್ನು ಮಸಾಲಾ ದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಬೇಕು.

ಫ್ರೈ ಮಾಡಿದ ನಂತರ ಸ್ವಲ್ಪ ಕಾಲ ಅದನ್ನು ಮುಚ್ಚಿಡಿ ನಂತರ ಚಿಕನ್ ಸಂಪೂರ್ಣವಾಗಿ ಬೆಂ’ದಿರುವುದನ್ನು ಖಚಿತಪಡಿಸಿಕೊಂಡ ನಂತರ ಅದಕ್ಕೆ ಅರ್ಧ ಹೋಳು ನಿಂಬೆಹಣ್ಣನ್ನು ಹಾಕಿಕೊಳ್ಳಿ. ನಂತರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡರೆ ಗಮಗಮ ವಾದ, ರುಚಿಯಾದ ಚಿಕನ್ ಪೇಪರ್ ತಿನ್ನುವುದಕ್ಕೆ ಸಿದ್ಧವಾಗಿರುತ್ತದೆ.