ಬಿಗ್ ನ್ಯೂಸ್: ಎಚ್ಡಿಕೆ ಗೆ ಬಿಗ್ ಶಾಕ್ ನೀಡಿದ ನಿವೃತ್ತ ವಿಂಗ್ ಕಮಾಂಡರ್ ! ಸಿಕ್ಕಿ ಬೀಳುವುದು ಖಚಿತವಾಯಿತೇ?

ನಮಸ್ಕಾರ ಸ್ನೇಹಿತರೇ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಕೆಲವೊಮ್ಮೆ ಭಾಷಣ ಮಾಡುವಾಗ ವಿವಿಧ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಹಲವಾರು ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಅದರಲ್ಲಿಯೂ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾತನಾಡಿದ ಮಾತುಗಳು ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲಿ ಸದ್ದು ಮಾಡಿದ್ದವು, ಆದರೆ ಅವೆಲ್ಲವೂ ಕೇವಲ ಜನರಲ್ಲಿ ವಿವಾದವನ್ನು ಸೃಷ್ಟಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದವು. ಆದರೆ ಇದೀಗ ಕುಮಾರಸ್ವಾಮಿ ರವರು ಕಳೆದವಾರ ನೀಡಿದ ಹೇಳಿಕೆ ಕುಮಾರಸ್ವಾಮಿ ರವರನ್ನು ಎಸಿಬಿ ಅಂಗಳಕ್ಕೆ ಕರೆದೊಯ್ಯುತ್ತಿದೆ.

ಹೌದು ಸ್ನೇಹಿತರೇ ಇದೀಗ ಕುಮಾರಸ್ವಾಮಿ ರವರಿಗೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ ಅತ್ರಿ ರವರು ಶಾಕ್ ನೀಡಿದ್ದಾರೆ. ಅಂದಹಾಗೆ ಇವರ ವೃತ್ತಿ ನೋಡಿದ ತಕ್ಷಣ ಬಹುಶಹ ನೀವು ಕುಮಾರಸ್ವಾಮಿ ರವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಸೇನೆಗೆ ಜನರು ಸೇರುತ್ತಿದ್ದಾರೆ, ಅವರ ಜೀವದ ಜೊತೆ ನರೇಂದ್ರ ಮೋದಿರವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಕಲ್ಲ, ಬದಲಾಗಿ ಕುಮಾರಸ್ವಾಮಿ ರವರು ಬೆಂಗಳೂರು ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣರವರ ವಿರುದ್ಧ ತಮ್ಮ ಅಭ್ಯರ್ಥಿಯ ಪರ ಕುರಿತು ಪ್ರಚಾರ ಮಾಡುವಾಗ ನೀಡಿದ ಹೇಳಿಕೆ ಇದೀಗ ಕುಮಾರಸ್ವಾಮಿ ರವರಿಗೆ ದೊಡ್ಡ ಶಾಕ್ ನೀಡಿದೆ.

ಹೌದು ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣರವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದ ಕುಮಾರಸ್ವಾಮಿರವರು ನಾನು ಪುಟ್ಟಣ್ಣರವರ ಹತ್ತು-ಹನ್ನೆರಡು ಸಂಬಂಧಿಕರಿಗೆ ಮತ್ತು ಆಪ್ತರಿಗೆ ತಾವು ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ಕ್ಲಾಸ್ -1 ಹುದ್ದೆಯನ್ನು ಕೊಡಿಸಿದ್ದೇನೆ. ಅಷ್ಟೇ ಅಲ್ಲದೇ ಅವರಿಗೆ ಬಿಡಿಎ ಜಾಗ ಕೊಡಿಸಿದ ಬಗ್ಗೆಯೂ ಹೇಳಿಕೆ ನೀಡಿ ಅವರು ಇಂದು ಅದರಲ್ಲಿ ಶಾಲೆ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಅಸ್ತ್ರವಾಗಿ ಬಳಸಿಕೊಂಡ ವಿಂಗ್ ಕಮಾಂಡರ್ ಅತ್ರಿ ರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜವಾಬ್ದಾರಿಯನ್ನು ಮರೆತು ಸರ್ಕಾರಿ ನೇಮಕಾತಿಯಲ್ಲಿ ಪ್ರಭಾವ ಬೀರಿರುವುದು ಒಪ್ಪಿಕೊಳ್ಳಲಾಗದ ಸಂಗತಿ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿ ಕದ ತಟ್ಟಿದ್ದಾರೆ. ಈ ಮೂಲಕ ಕುಮಾರಸ್ವಾಮಿ ರವರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇವರು ಹೇಳಿಕೆ ನೀಡಿದ ವಿಡಿಯೋಗಳು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕಾರಣ ಇದರ ಕುರಿತು ತನಿಖೆ ನಡೆದ ನಡೆಯುತ್ತದೆ ಎಂಬ ಆಶ್ವಾಸನೆ ಎಲ್ಲರಲ್ಲೂ ಮೂಡಿದೆ.

Post Author: Ravi Yadav