2 ಕಪ್ ರವೆ, 2 ಬಾಳೆಹಣ್ಣು ಇದ್ದರೆ 10 ನಿಮಿಷದಲ್ಲಿ ಸಾಫ್ಟ್ ದೋಸೆ ರೆಡಿ ! ಎಲ್ಲರೂ ತುಂಬಾ ಇಷ್ಟ ಪಡ್ತಾರೆ !!

ನಮಸ್ಕಾರ ಸ್ನೇಹಿತರೇ, ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಯಾವ ತಿಂಡಿ ಮಾಡಬೇಕು ಎಂದು ಸಾಕಷ್ಟು ಗೊಂದಲಗಳು ಇರುತ್ತದೆ. ಪ್ರತಿದಿನ ಏನಾದರೂ ಹೊಸದನ್ನು ಮಾಡಲು ನಾವು ಪ್ರಯತ್ನ ಮಾಡುತ್ತೇವೆ. ಆದರೆ ನಾವು ಇವತ್ತು ಅಂತದೆ ಒಂದು ಸುಲಭವಾದ ಬ್ರೇಕ್ಫಾಸ್ಟ್ ಅನ್ನು ಇಲ್ಲಿ ತಿಳಿಸಿಕೊಡುತ್ತೇವೆ, ಇದನ್ನು ಪೂರ್ತಿಯಾಗಿ ಓದಿ. ನಾಳೆ ಬ್ರೇಕ್ ಫಾಸ್ಟ್ ನಲ್ಲಿ ನೀವು ಇದನ್ನು ಖಂಡಿತ ಟ್ರೈ ಮಾಡಿ ಮತ್ತು ಅದರ ಅನುಭವವನ್ನು ನಮಗೆ ಕಮೆಂಟ್ ಮಾಡಿ.

ಮುಖ್ಯವಾಗಿ ರವೆ ಮತ್ತು ಬಾಳೆಹಣ್ಣನ್ನು ಹಾಕಿ ಈ ದೋಸೆಯನ್ನು ಮಾಡಲಾಗುತ್ತೆ. “ಮೊದಲನೆಯದಾಗಿ” 2 ಕಪ್ ನಷ್ಟು ರವೆಯನ್ನು ತೆಗೆದುಕೊಳ್ಳಬೇಕು, ಅದರಲ್ಲೂ ಸಣ್ಣ ರವೆ ಇದ್ದರೆ ಬಹಳ ಉತ್ತಮ, ನಂತರ ಅದಕ್ಕೆ ಕಾಲು ಕಪ್ಪು ಜೀರಿಗೆ ಮತ್ತು ಮೊಸರನ್ನು ಹಾಕಿ. ನಂತರ ಒಂದು ಕಪ್ ನಷ್ಟು ನೀರನ್ನು ಹಾಕಿ ಅರ್ಧ ಈರುಳ್ಳಿಯನ್ನು ಅದಕ್ಕೆ ಸೇರಿಸಿ. ಎಲ್ಲವನ್ನು ಚೆನ್ನಾಗಿ ಗ್ರೈಂಡ್ ಮಾಡಿದ ಮೇಲೆ ಅದಕ್ಕೆ ಚಿಕ್ಕದಾದ 2 ಬಾಳೆಹಣ್ಣನ್ನು ಹಾಕಿಕೊಳ್ಳಿ,

ನಂತರ ನೈಸ್ ಆಗಿ ಅದ್ದನ್ನು ಮತ್ತೆ ಗ್ರೈಂಡ್ ಮಾಡಿಕೊಳ್ಳಿ. ಅದು ದೋಸೆ ಹಿಟ್ಟಿನ ರೀತಿ ಆಗುತ್ತದೆ, ಆಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಂತರ ಒಂದು ಚಿಟಿಕೆ ಸ್ಪೂನ್ ನಷ್ಟು ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಿ. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಿಮಗೆ ಅಡುಗೆಸೋಡ ಇಷ್ಟವಿದ್ದರೆ ಮಾತ್ರ ಹಾಕಿಕೊಳ್ಳಿ, ನೀವು ಸೋಡಾವನ್ನು ಹಾಕಿಕೊಂಡರೆ ದೋಸೆ ಬಹಳ ಸಾಫ್ಟ ಆಗಿ ಬರುತ್ತದೆ ಅಂತ ಅಷ್ಟೇ. ನಂತರ ಹಂಚನ್ನು ತೆಗೆದುಕೊಂಡು ಅದರ ಮೇಲೆ ದೋಸೆಯ ಆಕಾರದಲ್ಲಿ ಹಂಚಿನ ಮೇಲೆ ಹಾಕಿಕೊಳ್ಳಿ ಬೇಕಿದ್ದರೆ ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು.

ಬಾಳೆಹಣ್ಣನ್ನು ಹಾಕಿರುವುದರಿಂದ ದೋಸೆ ತುಂಬಾನೇ ಸಾಫ್ಟ್ ಆಗಿ ಬರುತ್ತದೆ‌. ಚೆನ್ನಾಗಿ ಫ್ರೈ ಮಾಡಿದ ನಂತರ ನೀವು ಇದನ್ನು ಸಾಂಬಾರ್ ಅಥವಾ ಚಟ್ನಿಯ ಮೂಲಕ ಸೇವಿಸಬಹುದಾಗಿದೆ. ಅಷ್ಟೇ ಅಲ್ಲದೆ ಈ ಮೂಲಕ ಮಾಡಿ ತಿನ್ನುವ ದೋಸೆ ಆರೋಗ್ಯಕ್ಕೆ ಬಹಳ ಪ್ರಯೋಜನವನ್ನು ಹೊಂದಿದೆ ಮತ್ತು ಬಹಳ ಕಡಿಮೆ ಸಮಯದಲ್ಲಿ ಇದನ್ನು ನೀವು ಸುಲಭವಾಗಿ ಮಾಡಿಕೊಂಡು ಮನೆಮಂದಿಯಲ್ಲಾ ತಿನ್ನಬಹುದಾಗಿದೆ…