ದೇಹದ ರಕ್ತ ಶುದ್ಧೀಕರಣ ಮಾಡಲು ಜಸ್ಟ್ ಈ ಆಹಾರಗಳನ್ನು ಸೇವಿಸಿ ಸಾಕು ! ಅನಾರೋಗ್ಯವೇ ಕಾಣಿಸಿಕೊಳ್ಳುವುದಿಲ್ಲ !

ನಮಸ್ಕಾರ ಸ್ನೇಹಿತರೇ, ನಮ್ಮ ದೇಹಕ್ಕೆ ರಕ್ತ ಎಂಬುವುದು ಒಂದು ಜೀವ ದ್ರವವಾಗಿದೆ, ಇದಕ್ಕೆ ಪರ್ಯಾಯ ಎಂಬುದೇ ಇಲ್ಲ. ಅದಕ್ಕಾಗಿ ರಕ್ತದಾನವನ್ನು ಮಹಾದಾನ ಎಂದು ಕರೆಯಲಾಗುತ್ತದೆ. ಆದ ಕಾರಣದಿಂದ ನಾವು ನಮ್ಮ ದೇಹದಲ್ಲಿರುವ ರಕ್ತದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ, ನಮ್ಮ ದೇಹದಲ್ಲಿ ಕಾಣಿಸುವ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಅಶುದ್ಧ ರಕ್ತವೇ ಕಾರಣ. ನಮ್ಮ ರಕ್ತ ಬಹಳ ಸ್ವಚ್ಛವಾಗಿದ್ದರೆ ನಾವು ಹೆಚ್ಚು ಆರೋಗ್ಯದಿಂದ ಇರಬಹುದಾಗಿದೆ. ಆದ ಕಾರಣದಿಂದ ಇನ್ನು ನಾವು ನೀವು ಸಾಮಾನ್ಯ ಆಹಾರಗಳ ಮೂಲಕ ಹೇಗೆ ಶುದ್ಧಿಯಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಸಮಸ್ಯೆ ಬಂದಾಗ ಎಚ್ಚೆತ್ತುಕೊಳ್ಳುವ ಬದಲು ಆಯುರ್ವೇದ ಪದ್ಧತಿಯಲ್ಲಿ ತಿಳಿಸಲಾಗಿರುವ ದಿನನಿತ್ಯದ ಆಹಾರ ಶೈಲಿಯಲ್ಲಿ ಚಿಕ್ಕ ಚಿಕ್ಕ ಬದಲಾವಣೆ ಮಾಡಿಕೊಂಡರೆ ನಾವು ಎಷ್ಟೋ ಸಮಸ್ಯೆಗಳು ಬರದಂತೆ ತಡೆಯಬಹುದಾಗಿದೆ.

ಹೌದು ಸ್ನೇಹಿತರೇ, ಅದೇ ಕಾರಣಕ್ಕಾಗಿ ನಾವು ಇಂದು ನಿಮ್ಮ ದೇಹದಲ್ಲಿನ ರಕ್ತವನ್ನು ಶುದ್ಧವಾಗಿಟ್ಟುಕೊಳ್ಳಲು ಸಹಾಯ ಮಾಡುವ ಆಹಾರಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ, ಹಾಗೂ ನಿಮ್ಮ ದೇಹದಲ್ಲಿ ಅಶುದ್ಧ ರಕ್ತ ಹೆಚ್ಚಾದರೆ ನಿಮಗೆ ಯಾವ ರೀತಿ ಅನಾರೋಗ್ಯ ಸಮಸ್ಯೆಗಳು ಬರಬಹುದು ಎಂಬುದನ್ನು ಕೂಡ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ನಮ್ಮ ದೇಶದಲ್ಲಿ ಅಶುದ್ಧ ರಕ್ತ ಹೆಚ್ಚಾದರೆ ನಮ್ಮ ದೇಹದಲ್ಲಿ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವ ಮೂತ್ರಪಿಂಡ, ಹೃದಯ, ಯಕೃತ್, ಶ್ವಾಸಕೋಶಗಳಿಗೆ ಒಳ್ಳೆಯದಲ್ಲ, ಅಶುದ್ಧ ರಕ್ತ ಹೆಚ್ಚಾಗುವುದರಿಂದ ಈ ಎಲ್ಲಾ ವ್ಯವಸ್ಥೆಗಳು ಹೆಚ್ಚಿನ ಕಾರ್ಯ ಮಾಡಬೇಕಾಗಿರುತ್ತದೆ, ಆಗ ಕಾರ್ಯಕ್ಷಮತೆ ಕ್ರಮೇಣ ಕುಸಿಯುತ್ತಿದೆ ಆದ್ದರಿಂದ ಅಂಗಾಂಗ ವೈಫಲ್ಯ ಕೂಡ ಕಾಣಿಸುತ್ತದೆ.

ಆದ ಕಾರಣದಿಂದ ನೀವು ಸಮಸ್ಯೆಗಳು ಬರುವ ಮೊದಲೇ ಎಚ್ಚೆತ್ತುಕೊಂಡು ನಿಮ್ಮ ದಿನನಿತ್ಯದ ಆಹಾರ ಶೈಲಿಯಲ್ಲಿ ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಣ ಮಾಡುವ ಮೂಲಕ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಮೊದಲನೆಯದಾಗಿ ನೀವು ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ರಕ್ತ ಬಹಳ ಶುದ್ಧವಾಗಿರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಹೂಕೋಸು, ಮೆಂತ್ಯ ಸೊಪ್ಪು, ಹರಿವೆ ಸೊಪ್ಪು, ಪಾಲಕ್ ಸೊಪ್ಪು ಸೇರಿದಂತೆ ಬೀಟ್ರೋಟ್ ಸೇವನೆಯನ್ನು ನೀವು ಹೆಚ್ಚು ಮಾಡಿಕೊಂಡರೆ ಖಂಡಿತ ನಿಮ್ಮ ದೇಹದಲ್ಲಿನ ರಕ್ತ ಬಹಳ ಶುದ್ಧವಾಗಿರುತ್ತದೆ. ಇನ್ನು ಈ ಎಲ್ಲಾ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಇನ್ನು ಇಷ್ಟೇ ಅಲ್ಲದೆ ನೀವು ಸೇಬು, ಸೀಬೆ ಸೇರಿದಂತೆ ಇನ್ನೂ ಹೆಚ್ಚಿನ ಫೈಬರ್ ಅಂಶಗಳನ್ನು ಹೊಂದಿರುವ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ರಕ್ತ ಬಹಳ ಶುದ್ಧವಾಗಿರುತ್ತದೆ ಇನ್ನು ಅಷ್ಟೇ ಅಲ್ಲದೆ ಸ್ಟ್ರಾಬೆರಿ, ಬ್ಲೂಬೆರಿ ಮತ್ತು ಬ್ಲಾಕ್ಬೆರಿ ಅಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಕೂಡ ನಿಮ್ಮ ದೇಹದಲ್ಲಿನ ರಕ್ತ ಶುದ್ಧವಾಗುತ್ತದೆ. ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಸೇವಿಸಬೇಕು ಎಂದೇನಿಲ್ಲ, ನಿಮ್ಮ ಆಹಾರ ಶೈಲಿಗೆ ಅನುಕೂಲವಾಗುವಂತೆ ನೀವು ದಿನನಿತ್ಯದ ಆಹಾರದಲ್ಲಿ ಮೇಲಿನ ಯಾವುದಾದರೂ ಒಂದು ಆಹಾರವನ್ನು ಕ್ರಮೇಣ ಸೇವಿಸುತ್ತಾ ಹೋದರೆ ನಿಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿ ನಿಮ್ಮ ದೇಹದಿಂದ ಅನಗತ್ಯ ಅಂಶಗಳನ್ನು ಬಹಳ ಸುಲಭವಾಗಿ ಹೊರ ಹಾಕಬಹುದಾಗಿದೆ.