ಮೊದಲ ಹೆಜ್ಜೆಗೆಯಲ್ಲಿಯೇ ಬಿಜೆಪಿಗೆ ಲಡಾಕ್ ನಲ್ಲಿ ಐತಿಹಾಸಿಕ ಜಯ ! ಗೆದ್ದು ಬೀಗಿದ ಬಿಜೆಪಿ ! ಯಾವ ಪಕ್ಷಗಳು ಎಷ್ಟು ಸೀಟು ಗೆದ್ದವು ಗೊತ್ತಾ?

ಮೊದಲ ಹೆಜ್ಜೆಗೆಯಲ್ಲಿಯೇ ಬಿಜೆಪಿಗೆ ಲಡಾಕ್ ನಲ್ಲಿ ಐತಿಹಾಸಿಕ ಜಯ ! ಗೆದ್ದು ಬೀಗಿದ ಬಿಜೆಪಿ ! ಯಾವ ಪಕ್ಷಗಳು ಎಷ್ಟು ಸೀಟು ಗೆದ್ದವು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಿಜೆಪಿ ಪಕ್ಷವು ಜಮ್ಮು ಹಾಗೂ ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಬಳಿಕ 2 ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡನೆ ಮಾಡಿ ಈಗಾಗಲೇ ಲಡಾಕ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದೆ. ದೇಶದ ಇತಿಹಾಸದಲ್ಲಿಯೇ ಮೊಟ್ಟ ಮೊದಲನೇ ಬಾರಿಗೆ ತನ್ನದೇ ಆದ ಬೆಂಬಲಿತ ಸರ್ಕಾರವನ್ನು ಉರುಳಿಸುವ ಮೂಲಕ ಜಮ್ಮು ಹಾಗೂ ಕಾಶ್ಮೀರಕ್ಕೆ ಐತಿಹಾಸಿಕ ಗತವೈಭವವನ್ನು ಮರಳಿ ತರುತ್ತೇವೆ ಎಂದು ಬಿಜೆಪಿ ಪಕ್ಷ ಹೇಳಿದಾಗ ಎಲ್ಲರೂ ಇದು ಕೇವಲ ಭರವಸೆ ಎಂದು ಅಂದುಕೊಂಡು ಸುಮ್ಮನಾಗಿದ್ದರು.

ಆದರೆ ಇದು ಪಕ್ಷದ ಪರವಾಗಿ ಅಲ್ಲ ಬದಲಾಗಿ ಜಮ್ಮು ಹಾಗೂ ಕಾಶ್ಮೀರದ ದೃಷ್ಟಿಯಿಂದ ವಿಶೇಷ ಸ್ಥಾನಮಾನ ಪದ್ಧತಿಯನ್ನು ರದ್ದು ಮಾಡಿದ ಕಾರಣ ಇಡೀ ದೇಶದ ಎಲ್ಲೆಡೆ ಜನರು ಪಕ್ಷವನ್ನು ಮರೆತು ಉತ್ತಮ ನಿರ್ಧಾರ ಎಂದು ಶ್ಲಾಘಿಸಿದ ಘಟನೆಗಳು ಸಾಕಷ್ಟು ನಡೆದಿವೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಂಡು ವಿರೋಧ ಮಾಡಿದ್ದರೂ ಕೂಡ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಖಂಡಿತ ಇದೊಂದು ಉತ್ತಮ ನಿರ್ಧಾರ ಎಂದು ಹಾಡಿ ಹೊಗಳಿದ್ದರು. ಇನ್ನು ಕೊಟ್ಟ ಮಾತಿನಂತೆ ಬಿಜೆಪಿ ಪಕ್ಷವು ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಬಳಿಕ ಜಮ್ಮು ಹಾಗೂ ಕಾಶ್ಮೀರಕ್ಕೆ ಹಾಗೂ ಲಡಾಕ್ ಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವ ಮೂಲಕ ಕಾಲೇಜು, ಆಸ್ಪತ್ರೆ ಸೇರಿದಂತೆ ಗಡಿಯಲ್ಲಿ ಸೈನಿಕರಿಗೆ ನೆರವಾಗುವಂತಹ ಮತ್ತಷ್ಟು ರಸ್ತೆಗಳು ಹಾಗೂ ಸರಕು ಸಾಗಾಣಿಕೆ ಸರಾಗವಾಗಿ ನಡೆಯಲು ಮತ್ತೊಂದಷ್ಟು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿತ್ತು.

ಇದನ್ನು ಕಂಡ ಜನ ಇದೊಂದು ಉತ್ತಮ ನಿರ್ಧಾರ ಎಂದರೇ ಮತ್ತಷ್ಟು ಜನರು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದತಿ ಮಾಡಿರುವುದು ತಪ್ಪು ಎಂದು ಇಂದಿಗೂ ಕೂಡ ಪಟ್ಟು ಹಿಡಿದು ಕುಳಿತಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ ಹಲವಾರು ರಾಜಕೀಯ ನಾಯಕರು ಈಗಲೂ ಕೂಡ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ಸು ನೀಡಲೇಬೇಕು, ಇಲ್ಲವಾದಲ್ಲಿ ಕೆಲವರು ಚೀನಾ ದೇಶದ ಬೆಂಬಲ ಪಡೆದುಕೊಂಡಾದರೂ ಸರಿ ನಾವು ವಿಶೇಷ ಸ್ಥಾನಮಾನವನ್ನು ವಾಪಸ್ ತರುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇನ್ನು ಕೆಲವರು ದೇಶದ ಜನರ ಕೂಗಿಗೆ ನಾವು ಸ್ಪಂದಿಸುವ ಅಗತ್ಯವಿಲ್ಲ ಯಾಕೆಂದರೆ ಜಮ್ಮು ಹಾಗೂ ಕಾಶ್ಮೀರ ಜನರು ವಿಶೇಷ ಸ್ಥಾನಮಾನ ಪದ್ಧತಿಯಿಂದ ಯಾವುದೇ ಲಾಭಗಳನ್ನು ಪಡೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಬಾಣಗಳ ಸುರಿಮಳೆಯನ್ನು ಸುರಿಸಿದ್ದಾರೆ. ಆದರೆ ನಿಜವಾಗಲೂ ಜಮ್ಮು ಹಾಗೂ ಕಾಶ್ಮೀರ ಜನರು ವಿಶೇಷ ಸ್ಥಾನಮಾನ ರದ್ದತಿಯಿಂದ ಸಂತಸಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಮೊಟ್ಟಮೊದಲ ಚುನಾವಣೆಯಲ್ಲಿ ಉತ್ತರ ಸಿಕ್ಕಿಬಿಟ್ಟಿದೆ.

ಹೌದು ಸ್ನೇಹಿತರೇ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಲಡಾಕ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಯಲ್ಲಿ ಇದೀಗ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಒಟ್ಟಾಗಿ 45 ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಒಟ್ಟು ೮೯೦೦೦ ಕ್ಕೂ ಹೆಚ್ಚು ಮತದಾರರು 26 ಕ್ಷೇತ್ರಗಳಲ್ಲಿ 294 ಮತಗಟ್ಟೆಗಳಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು, ಒಟ್ಟು ಶೇಕಡಾ 65 ರಷ್ಟು ಮತದಾನವಾಗಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಇನ್ನು ಪ್ರಾದೇಶಿಕ ಪಕ್ಷಗಳು ಚುನಾವಣೆಯಿಂದ ದೂರವಿದ್ದ ಕಾರಣ ಕಾಂಗ್ರೆಸ್, ಬಿಜೆಪಿ, ಎಎಪಿ ಮತ್ತು 23 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಬಿಜೆಪಿ ಪಕ್ಷವು ಬರೋಬ್ಬರಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯವನ್ನು ದಾಖಲಿಸಿದೆ. ಇನ್ನು ಕಾಂಗ್ರೆಸ್ ಪಕ್ಷ 9 ಸ್ಥಾನಗಳಲ್ಲಿ, ಸ್ವತಂತ್ರ ಅಭ್ಯರ್ಥಿಗಳು ಎರಡು ಸ್ಥಾನವನ್ನು ಗೆಲ್ಲುವುದರಲ್ಲಿ ಸಫಲರಾಗಿದ್ದಾರೆ. ಇನ್ನು ಸದಾ ಲಡಾಕ್ ಜನತೆ ಸಂತೋಷವಾಗಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದ ಎಎಪಿ ಪಕ್ಷವು ಖಾತೆಯನ್ನು ತೆರೆಯುವಲ್ಲಿ ಕೂಡ ವಿಫಲವಾಗಿರುವುದು ಪಕ್ಷದಲ್ಲಿ ಭಾರಿ ನಿರಾಸೆ ಮೂಡಿಸಿದೆ. ಒಟ್ಟಿನಲ್ಲಿ ಯಾರೇ ಗೆಲ್ಲಲಿ ಯಾರೇ ಸೋಲಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಇತರ ಸಾಮಾನ್ಯ ರಾಜ್ಯಗಳಂತೆ ಅಲ್ಲಿಯೂ ಕೂಡ ಚುನಾವಣೆಗಳು ನಡೆದು ಜನರು ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ನಿಜಕ್ಕೂ ಒಂದು ಒಳ್ಳೆಯ ಅದ್ಭುತ ಸಂಗತಿಯಾಗಿದೆ.