ಈ ಬಾರಿ ಆಯುಧ ಪೂಜೆ ಮಾಡಲು ಶುಭಮುಹೂರ್ತ ಯಾವುದು? ಆಯುಧಪೂಜೆಯ ಮಹತ್ವವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷವೂ ನಾವು ವೃತ್ತಿ ಜೀವನದಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ನವರಾತ್ರಿಯ ನವಮಿ ದಿನದಂದು ಆಯುಧ ಪೂಜೆಯಲ್ಲಿ ಪೂಜೆ ಮಾಡಿ ವರ್ಷ ಪೂರ್ತಿ ಆಯುಧಗಳು ತಮ್ಮ ಕೆಲಸವನ್ನು ತಾವು ಮಾಡುವ ಮೂಲಕ ಎಲ್ಲವೂ ಒಳ್ಳೆಯದಾಗುವಂತೆ ಮಾಡಲಿ ಎಂದು ದುರ್ಗಾಮಾತೆಗೆ ಪ್ರಾರ್ಥನೆ ಮಾಡುತ್ತೇವೆ. ಹಿಂದೂ ಸಂಪ್ರದಾಯದಲ್ಲಿ ಆಯುಧ ಪೂಜೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ, ನಾವು ಬಳಸುವ ವಾಹನಗಳಿಂದ ಹಿಡಿದು ಕಾರ್ಖಾನೆ ಅಥವಾ ಕೃಷಿ, ನಮ್ಮ ವೃತ್ತಿ ಜೀವನದಲ್ಲಿ ಬಳಸುವ ಎಲ್ಲಾ ಉಪಕರಣಗಳಿಗೂ ಆಯುಧ ಪೂಜೆಯ ಸಂದರ್ಭದಲ್ಲಿ ಪೂಜೆ ಮಾಡಲಾಗುತ್ತದೆ. ನಮ್ಮನ್ನು ಸಾಕಿ ಸಲಹುವ ಉಪಕರಣಗಳಿಗೆ ನಾವು ಇದು ಗೌರವಾರ್ಥವಾಗಿ ಸಲ್ಲಿಸುವ ಪೂಜೆ ಎಂದು ನಂಬಲಾಗಿದೆ.

ಈ ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆಯನ್ನು ನಾವು ಗಮನಿಸುವುದಾದರೇ ದುರ್ಗೆಯು ಚಾಮುಂಡಿ ಅವತಾರವನ್ನು ತಾಳಿ, ಮಹಿಷಾಸುರನನ್ನು ಅಂತ್ಯ ಮಾಡುತ್ತಾರೆ. ಆತನನ್ನು ಅಂತ್ಯಗೊಳಿಸಲು ಬಳಸಿದ ಎಲ್ಲಾ ಆಯುಧಗಳನ್ನು ತಾಯಿ ಚಾಮುಂಡಿ ದೇವಿಯ ಭೂಲೋಕದಲ್ಲಿ ಬಿಟ್ಟು ತೆರಳುತ್ತಾರೆ. ಅಂದಿನಿಂದ ಜನರು ಆಯುಧಗಳನ್ನು ತಂದು ಪೂಜೆ ಸಲ್ಲಿಸಲು ಆರಂಭಿಸುತ್ತಾರೆ. ಹೀಗೆ ಕ್ರಮೇಣ ಇದು ಆಯುಧ ಪೂಜೆಯಾಗಿ ಬದಲಾಗಿ ಪ್ರತಿಯೊಬ್ಬ ಜನರು ತಾವು ಬಳಸುವ ಉಪಕರಣಗಳಿಗೆ ಆಯುಧ ಪೂಜೆದಿನದಂದು ಪೂಜೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಹೀಗೆ ಮಾಡುವುದರಿಂದ ನಾವು ನಮ್ಮ ಉದ್ಯೋಗ ಕ್ಷೇತ್ರಗಳಲ್ಲಿ ಬಳಸುವ ಉಪಕರಣಗಳಿಗೆ ನಾವು ಕೃತಜ್ಞತೆ ಸಲ್ಲಿಸುವ ಮೂಲಕ ನಮ್ಮ ಮನಸ್ಸನ್ನು ಶಾಂತಿ ಹಾಗೂ ಶುದ್ಧಗೊಳಿಸುವ ಕೆಲಸ ಆಗುತ್ತದೆ, ಹೀಗೆ ಆಯುಧ ಪೂಜೆ ಮಾಡಿದ ಬಳಿಕ ನಾವು ದುರ್ಗಾಮಾತೆಗೆ ಪೂಜೆ ಮಾಡುವುದರಿಂದ ನಮ್ಮ ಮನಸ್ಸು ಶುದ್ಧವಾಗಿರುವ ಸಂದರ್ಭದಲ್ಲಿ ಹೆಚ್ಚಿನ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಇನ್ನು ಈ ವರ್ಷ ಆಯುಧ ಪೂಜೆಯನ್ನು ಅಕ್ಟೋಬರ್ 25ರಂದು ಆಚರಿಸಲಾಗುತ್ತದೆ. ಈ ದಿನದ ಉತ್ತಮ ಸಮಯವನ್ನು ತಿಳಿಸುವುದಾದರೇ ನವಮಿ ತಿಥಿ ಮುಂಜಾನೆ 6:58 ರಿಂದ ಪ್ರಾರಂಭವಾಗುತ್ತದೆ. ನವಮಿ ತಿಥಿ ಸಂಜೆ 7:41 ಕ್ಕೆ ಮುಕ್ತಾಯವಾಗುತ್ತದೆ. ಇನ್ನು ನೀವು ಯಾವ ಸಮಯದಲ್ಲಿ ಆಯುಧ ಪೂಜೆ ಮಾಡಬೇಕು ಎಂದರೇ ಮಧ್ಯಾಹ್ನ 1:05 ರಿಂದ 2:42 ರ ಅವಧಿಯಲ್ಲಿ ಪೂಜೆಯ ಮಾಡಬಹುದಾಗಿದೆ.

Post Author: Ravi Yadav