ಡ್ಯೂಪ್ ಯಾಕೆ ಬಳಸುವುದಿಲ್ಲ ಎಂದಿದ್ದಕ್ಕೆ ವಿಷ್ಣುವರ್ಧನ್ ರವರು ನೀಡಿದ ಅತ್ಯುತ್ತಮ ಉತ್ತರವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದ ಅಗ್ರ ನಟರಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯ, ಅಭಿನವ ಭಾರ್ಗವ ಎಂದೇ ಬಿರುದು ಪಡೆದುಕೊಂಡಿದ್ದ ಡಾಕ್ಟರ್ ವಿಷ್ಣುವರ್ಧನ್ ರವರು ಎಂದರೇ ಇಂದಿಗೂ ಕೂಡ ಕನ್ನಡಿಗರ ಅಚ್ಚುಮೆಚ್ಚಿನ ನಟ. ಇವರು ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದರರೂ ಕೂಡ ಕನ್ನಡಿಗರು ಎಂದಿಗೂ ವಿಷ್ಣುವರ್ಧನ್ ರವರನ್ನು ಮರೆಯಲು ಸಾಧ್ಯವೇ ಇಲ್ಲ. ನಾವು ಅವರ ಅಭಿಮಾನಿ ಇವರ ಅಭಿಮಾನಿ ಎಂದು ಮತ್ತೊಬ್ಬರ ನಟನ ಹೆಸರು ಹೇಳಿದರೂ ಕೂಡ ಕೊನೆಗೆ ವಿಷ್ಣುವರ್ಧನ್ ರವರ ಕುರಿತು ನಿಮ್ಮ ಅಭಿಪ್ರಾಯ ಎಂದ ತಕ್ಷಣ ಅವರೊಬ್ಬರು ಮರೆಯಲಾಗದ ಮಾಣಿಕ್ಯ, ಅವರ ಸಿನಿಮಾಗಳನ್ನು ಇಂದು ಕೂಡ ಆಸಕ್ತಿಯಿಂದ ಕುಳಿತು ನೋಡುತ್ತೇವೆ. ನಾವು ಬೇರೆ ಯಾರದೋ ನಟರ ಅಭಿಮಾನಿಗಳು ಇರಬಹುದು ಆದರೆ ವಿಷ್ಣುವರ್ಧನ್ ರವರ ನಟನೆಗೆ ಅಭಿಮಾನಿಗಳಾಗದೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ.

ಇಂತಹ ಮೇರು ನಟರಿಗೆ ಕನ್ನಡಿಗರು ಬಹಳ ಉನ್ನತವಾದ ಸ್ಥಾನವನ್ನು ನೀಡಿದ್ದಾರೆ, ವಿಷ್ಣುವರ್ಧನ್ ರವರು ಕೂಡ ಅಷ್ಟೇ ಅಭಿಮಾನಿಗಳು ಎಂದರೇ ಬಹಳ ಇಷ್ಟ ಪಡುತ್ತಿದ್ದರು ಹಾಗೂ ಗೌರವದಿಂದ ಕಾಣುತ್ತಿದ್ದರು. ಅಭಿಮಾನಿಗಳು ಎಂದರೆ ವಿಷ್ಣುವರ್ಧನ್ ರವರಿಗೆ ಅಚ್ಚುಮೆಚ್ಚು ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದು ಎಂದು ಸದಾ ಹೇಳಿಕೊಳ್ಳುತ್ತಿದ್ದರು. ಇದು ಅಭಿಮಾನಿಗಳು ಹಾಗೂ ವಿಷ್ಣುವರ್ಧನ್ ರವರ ನಡುವಿನ ಸಂಬಂಧ. ಆದರೆ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಘಟನೆಯೊಂದನ್ನು ಇಂದು ನಾವು ತಿಳಿಸಿ ಕೊಡುತ್ತಿದ್ದೇವೆ. ಹೌದು ಹಲವಾರು ಬಾರಿ ವಿಷ್ಣುವರ್ಧನ್ ರವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದರೂ, ಇದನ್ನು ಕಂಡ ಪತ್ರಕರ್ತರು ಒಮ್ಮೆ ನೀವು ಯಾಕೆ ನಿಮ್ಮ ಸಿನಿಮಾಗಳಲ್ಲಿ ಸ್ಟಂಟ್ಮ್ಯಾನ್ ಅಥವಾ ಡ್ಯೂಪ್ ಬಳಸುವುದಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ.

ಇದಕ್ಕೆ ವಿಷ್ಣುವರ್ಧನ್ ರವರು ಪತ್ರಕರ್ತರು ಪ್ರಶ್ನೆ ಕೇಳಿದ ತಕ್ಷಣ, ಅಭಿಮಾನಿಗಳು ನನ್ನನ್ನು ಬಹಳ ಪ್ರೀತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ ಎಂದು ಕರೆಯುತ್ತಾರೆ. ಅಭಿಮಾನಿಗಳು ಈ ಬಿರುದನ್ನು ನನಗೆ ಕೊಟ್ಟಿದ್ದಾರೆ, ನಾನು ಆ ಬಿರುದಿಗೆ ತಕ್ಕಂತೆ ಸಿನಿಮಾಗಳಲ್ಲಿ ನಟನೆ ಮಾಡಬೇಕು, ಅದು ಎಷ್ಟೇ ರಿಸ್ಕಿನ ಸ್ಟಂಟ್ ಹಾಗಿರಲಿ ನಾನು ಡ್ಯೂಪ್ ಬಳಸಿ ಚಿತ್ರವನ್ನು ನಿರ್ಮಾಣ ಮಾಡಿದರೇ ಅಭಿಮಾನಿಗಳು ನೀಡಿರುವ ಸಾಹಸಸಿಂಹ ಎಂಬ ಬಿರುದಿಗೆ ಯಾವುದೇ ಅರ್ಥ ಇರುವುದಿಲ್ಲ. ಹಾಗಾಗಿ ನಾನು ಯಾವುದೇ ಆಗಿರಲಿ ಎಷ್ಟೇ ರಿಸ್ಕ್ ಇದ್ದರೂ ಕೂಡ ನಾನೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ. ಇವರು ಈ ಪ್ರಶ್ನೆಗೆ ಉತ್ತರ ನೀಡಿದ ಅಷ್ಟೇ ಅಲ್ಲ ಅದರಂತೆಯೇ ಒಮ್ಮೆಪ್ಯಾರಾಚೂಟ್ ಮೂಲಕ ತಮ್ಮ ಜೀವವನ್ನೇ ಪಣಕ್ಕೆ ಇಟ್ಟು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇಷ್ಟೇ ಅಲ್ಲಾ ಇನ್ನೂ ಹಲವಾರು ಬಾರಿ ಸಾಹಸ ದೃಶ್ಯಗಳಲ್ಲಿ ಹೆಚ್ಚಿನ ರಿಸ್ಕ್ ಇದ್ದರೂ ಕೂಡ ಇವರೇ ಪಾಲ್ಗೊಂಡು ಅಭಿಮಾನಿಗಳ ಬಿರುದಿಗೆ ಅರ್ಥ ತುಂಬಿದ್ದಾರೆ. ಇದು ನಿಜಕ್ಕೂ ಅಭಿಮಾನಿಗಳ ಮೇಲೆ ಇದ್ದ ಪ್ರೀತಿಯನ್ನು ತೋರಿಸುತ್ತದೆ.

Post Author: Ravi Yadav