ಕೇವಲ ಮೂರುವರೆ ವರ್ಷಗಳಲ್ಲಿ ಮಹೇಶ್ ಬಾಬು ಸಾಧಿಸಿದ್ದೇನು ಗೊತ್ತೇ? ನಿಜಕ್ಕೂ ಗ್ರೇಟ್ ಕಣ್ರೀ !

ಕೇವಲ ಮೂರುವರೆ ವರ್ಷಗಳಲ್ಲಿ ಮಹೇಶ್ ಬಾಬು ಸಾಧಿಸಿದ್ದೇನು ಗೊತ್ತೇ? ನಿಜಕ್ಕೂ ಗ್ರೇಟ್ ಕಣ್ರೀ !

ನಮಸ್ಕಾರ ಸ್ನೇಹಿತರೇ, ಮೊದಲಿನಿಂದಲೂ ಸದ್ದಿಲ್ಲದೆ ಬಹುತೇಕ ಬಾರಿ ಸಾಮಾಜಿಕ ಕಳಕಳಿ ಮೆರೆದು ಕೇವಲ ತಮ್ಮ ನಟನೆಯ ಮೂಲಕವಷ್ಟೇ ಅಲ್ಲದೇ ಉತ್ತಮ ಕಾರ್ಯಗಳಿಂದ ಸದ್ದು ಮಾಡುತ್ತಿದ್ದ ಮಹೇಶ್ ಬಾಬು ರವರು ಇದೀಗ ಮತ್ತೊಮ್ಮೆ ಜನರ ಮನ ಗೆದ್ದಿದ್ದಾರೆ. ಆದರೆ ಈ ಬಾರಿ ಕೆಲವೊಂದು ಅಂಕಿಅಂಶಗಳು ಬಯಲಾಗಿದ್ದು, ಕೇವಲ ಮೂರುವರೆ ವರ್ಷಗಳ ಅಂಕಿಅಂಶಗಳು ನಿಜಕ್ಕೂ ಒಂದು ಕ್ಷಣ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದು ಎಲ್ಲರೂ ಮಹೇಶ್ ಬಾಬು ರವರನ್ನು ಹಾಡಿ ಹೊಗಳುತ್ತಿದ್ದಾರೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಹೇಶ್ ಬಾಬು ರವರು ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾರೆ.

ಇವರ ಪತ್ನಿ ಹಲವಾರು ವರ್ಷಗಳ ಹಿಂದೆಯೇ ಚಿತ್ರರಂಗವನ್ನು ಬಿಟ್ಟು ನಾನು ಇನ್ನು ಮುಂದೆ ನಟನೆ ಮಾಡುವುದಿಲ್ಲ ಏಕೆಂದರೆ ನನ್ನ ಬಳಿ ಇರುವ ಹಣದಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ನಿರತರಾಗುತ್ತಾರೆ ಎಂದು ಹೇಳುವ ಮೂಲಕ ಹಲವಾರು ವರ್ಷಗಳಿಂದ ಇದೇ ಹಾದಿಯಲ್ಲಿ ನಮ್ಮ ಬೆಂಗಳೂರಿನ ಬಳಿ ಇರುವ ಆನೇಕಲ್ ನಗರದ ಒಂದು ಬಡ ಕುಟುಂಬಕ್ಕೆ ಹೃದಯ ಸಂಬಂಧಿತ ಆಪರೇಷನ್ ಮಾಡಿಸಿ ಇಡೀ ಕರ್ನಾಟಕದಲ್ಲಿ ಸದ್ದು ಮಾಡಿದ್ದ ಮಹೇಶ್ ಬಾಬುರವರ ಇದೀಗ ಮತ್ತೆ ಅದೇ ರೀತಿಯ ಕೆಲಸ ಮಾಡಿದ್ದಾರೆ ಆದರೆ ಈ ಸುತ್ತಿ ಪ್ರಭೆಗಳು ಭಾಗ ಮತ್ತೊಂದು ಅಂಕಿ-ಅಂಶಗಳು ಹೊರಬಿದ್ದಿವೆ.

ಹೌದು ಸ್ನೇಹಿತರೇ ಇದೀಗ ಮಹೇಶ್ ಬಾಬು ರವರು ಮತ್ತೆ ಎರಡು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ, ಇದೇ ಸಂದರ್ಭದಲ್ಲಿ ಮೊದಲಿನಿಂದಲೂ ಕೆಲವು ಆಂಧ್ರ ಪ್ರದೇಶದ ಆಸ್ಪತ್ರೆಗಳೊಂದಿಗೆ ಹಾಗೂ ಲಿಟಲ್ ಹಾರ್ಟ್ ಫೌಂಡೇಶನ್ ಸಹಯೋಗದೊಂದಿಗೆ ಇದುವರೆಗೂ ಕೇವಲ ಮೂರು ವರ್ಷಗಳಲ್ಲಿ 1020 ಮಕ್ಕಳಿಗೆ ಹೃದಯ ಸಂಬಂಧಿತ ಆಪರೇಷನ್ ಮಾಡಿಸಿ, ಅಷ್ಟು ಮಕ್ಕಳ ಜೀವನದಲ್ಲಿ ನಗು ಮೂಡಿಸುವ ಕೆಲಸವನ್ನು ಮಹೇಶ್ ಬಾಬು ರವರು ಮಾಡಿದ್ದು ಈ ಅಂಕಿ-ಅಂಶಗಳು ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಮಾತುಗಳು ಕೇಳಿಬಂದಿವೆ, ಕೆಲವರಂತೂ ಮಹೇಶ್ ಬಾಬು ರವರನ್ನು ದೇವರು ಎಂದು ಹಾಡಿ ಹೊಗಳಿದ್ದಾರೆ. ಇವರು ದೇಶದ ಯಾವುದೇ ಮೂಲೆಯಿಂದ ಬಂದ ವಿನಂತಿಗಳನ್ನು ಮೀಡಿಯಾಗಳ ಮೂಲಕ ಕಂಡುಹಿಡಿದು ಅಗತ್ಯವನ್ನು ಗುರುತಿಸಿ ತಕ್ಷಣ ಸಹಾಯಕ್ಕೆ ನಿಲ್ಲುತ್ತಾರೆ. ಹೀಗೆ ಕೇವಲ ಮೂರೂವರೆ ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳ ಆಪರೇಷನ್ ಮಾಡಿಸಿದ್ದಾರೆ. ನಿಜಕ್ಕೂ ಸೆಲೆಬ್ರಿಟಿಗಳು ಈ ರೀತಿಯ ಸಾಮಾಜಿಕ ಕಳಕಳಿ ಮರೆಯುವುದು ಬಹಳ ಉತ್ತಮ ಸಂಗತಿಯಾಗಿದೆ.