ಕರ್ಣನ ಸೋಲಿಗೆ ಹಿಂದಿನ ಜನ್ಮವೇ ಕಾರಣ ಎನ್ನುತ್ತಾರೆ ಹಾಗಿದ್ದರೆ ಹಿಂದಿನ ಜನ್ಮ ಹೇಗಿತ್ತು ಗೊತ್ತಾ??

ಕರ್ಣನ ಸೋಲಿಗೆ ಹಿಂದಿನ ಜನ್ಮವೇ ಕಾರಣ ಎನ್ನುತ್ತಾರೆ ಹಾಗಿದ್ದರೆ ಹಿಂದಿನ ಜನ್ಮ ಹೇಗಿತ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕರ್ಣನು ಮಹಾಭಾರತದಲ್ಲಿ ಅಪ್ರತಿಮವೀರ ಎಂದು ಎಲ್ಲರಿಗೂ ತಿಳಿದಿದೆ. ಸಾಕ್ಷಾತ್ ಶ್ರೀಕೃಷ್ಣನು ಕೂಡ ಅರ್ಜುನನ ಗಿಂತಲೂ ಕರ್ಣನು ಬಿಲ್ವಿದ್ಯೆಯಲ್ಲಿ ಪ್ರವೀಣ ಎಂದು ಹೇಳಿದ ಪ್ರಸಂಗವು ಕೂಡ ನಡೆದಿದೆ. ಇನ್ನು ತನ್ನ ಜೀವನ ಪೂರ್ತಿ ‌ಯಾರು ಏನೇ ಕೇಳಿದರೂ ಇಲ್ಲ ಎನ್ನದೇ ದಾನ ಧರ್ಮಗಳನ್ನು ಮಾಡಿದ್ದ ಕರ್ಣನು ಕೊನೆಯದಾಗಿ ಮಹಾಭಾರತದಲ್ಲಿ ಕೌರವರ ಪರ ಪಾಲ್ಗೊಂಡು ತನ್ನ ಜೀವನವನ್ನು ಅಂತ್ಯಗೊಳಿಸುತ್ತಾರೆ. ತನ್ನ ಜೀವನದ ಉದ್ದಕ್ಕೂ ಪಡೆದುಕೊಂಡ ಮೂರು ಶಾಪಗಳ ಕಾರಣದಿಂದ ಕರ್ಣನು ಮಹಾಭಾರತದಲ್ಲಿ ಅರ್ಜುನನ ಮುಂದೆ ಸೋಲುತ್ತಾನೆ. ಆದರೆ ಕರ್ಣನು ಮಹಾನ್ ವ್ಯಕ್ತಿಯಾಗಿದ್ದರೂ ಕೂಡ ವಿಧಿಯು ಕರ್ಣನ ಪರವಾಗಿ ಇಲ್ಲದೇ, ಕರ್ಣನ ಅಂತ್ಯ ಆಗಲೇ ಬೇಕಾಗಿತ್ತು. ಅದು ಶ್ರೀ ಕೃಷ್ಣ ಹಾಗೂ ಅರ್ಜುನರ ಕೈಯಲ್ಲೇ. ಅದು ಯಾಕೆ ಎಂಬ ಪ್ರಶ್ನೆ ನಿಮಗೆ ಉದ್ಭವಿಸಬಹುದು. ಯಾಕೆಂದರೆ ಇದಕ್ಕೆ ಕರ್ಣನ ಹಿಂದಿನ ಜನ್ಮದ ಕರ್ಮಗಳೇ ಕಾರಣ ಎಂದು ಪುರಾಣಗಳು ಹೇಳುತ್ತವೆ.

ಹೌದು ಕೆಲವೊಂದು ಪುರಾಣಗಳು ಕರ್ಣನಿಗೆ ಹಿಂದಿನ ಜನ್ಮ ಇಲ್ಲ ಎಂದರೂ ಕೂಡ ಬಹುತೇಕ ಪುರಾಣಗಳಲ್ಲಿ ಕರ್ಣನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಗಳಿಂದಲೇ ದ್ವಾಪರಯುಗದಲ್ಲಿ ಸೋಲನ್ನು ಕಾಣುವಂತಾಯಿತು ಎಂದು ವಿವಿಧ ರೀತಿಯ ಪುರಾಣಗಳಲ್ಲಿ ತಿಳಿಸಲಾಗಿದೆ. ಬನ್ನಿ ಇಂದು ಕರ್ಣನ ಹಿಂದಿನ ಜನ್ಮದ ಕುರಿತು ನಾವು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಮಹಾಭಾರತಕ್ಕೂ ಮುನ್ನವೇ ಸಾವಿರಾರು ವರ್ಷಗಳ ಹಿಂದೆ ದಂಬೋದ್ಭವ ಎಂಬ ಅಸುರ ವಾಸಿಸುತ್ತಿದ್ದನು. ಆತ ತಾನು ಬಲಶಾಲಿಯಾಗಬೇಕು ಹಾಗೂ ಚಿರಂಜೀವಿ ಆಗಬೇಕು ಎಂಬ ಆಸೆಯಿಂದ ಸೂರ್ಯ ದೇವನಿಗೆ ತಪಸ್ಸು ಮಾಡಲು ಆರಂಭಿಸಿದನು. ಅಸುರನ ಭಕ್ತಿಗೆ ಸಂತಸಗೊಂಡ ಸೂರ್ಯ ದೇವನು ಪ್ರತ್ಯಕ್ಷನಾಗಿ ನಿನಗೆ ಬೇಕಾದ ವರ ಕೇಳುವಂತೆ ಹೇಳುತ್ತಾನೆ. ಇದೇ ಸನ್ನಿವೇಶವನ್ನು ಬಳಸಿಕೊಳ್ಳಲು ಮುಂದಾದ ದಂಬೋದ್ಭವ ನಾನು ಚಿರಂಜೀವಿ ಆಗಬೇಕು ಎಂಬ ಬೇಡಿಕೆಯನ್ನು ಸೂರ್ಯ ದೇವನ ಮುಂದಿಡುತ್ತಾನೆ. ಇದಕ್ಕೆ ಉತ್ತರ ನೀಡಿದ ಸೂರ್ಯ ದೇವನು ನಾನು ಕೂಡ ಚಿರಂಜೀವಿ ಅಲ್ಲ, ಇನ್ನು ನಿನ್ನನ್ನು ಚಿರಂಜೀವಿಯಾಗಿಸಲು ಸಾಧ್ಯವೇ ಇಲ್ಲ, ಮತ್ತೊಂದು ವರವನ್ನು ಕೇಳು ಎಂದು ಹೇಳುತ್ತಾರೆ.

ಇದನ್ನು ಕಂಡ ಅಸುರನು ಸೂರ್ಯ ದೇವನ ಬಳಿ ಮತ್ತೊಂದು ತಂತ್ರ ಹೂಡಲು ನಿರ್ಧಾರ ಮಾಡಿ ನನಗೆ ಸಾವಿರ ರಕ್ಷಣಾ ಕವಚಗಳನ್ನು ನೀಡುವಂತೆ ಕೇಳಿಕೊಳ್ಳುತ್ತಾನೆ. ನನ್ನ ಕವಚವನ್ನು ಯಾರಾದರೂ ಅಂತ್ಯಗೊಳಿಸಬೇಕು ಎಂದರೇ ಅವರು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಬೇಕು ಹಾಗೂ ನನ್ನ ಒಂದು ಕವಚವನ್ನು ಅಂತ್ಯಗೊಳಿಸಿದ ತಕ್ಷಣ ಅವರು ಇಹಲೋಕ ತ್ಯಜಿಸಬೇಕು ಎಂಬ ವರ ನೀಡುವಂತೆ ಸೂರ್ಯದೇವನಲ್ಲಿ ಕೇಳುತ್ತಾನೆ. ಇದರಿಂದ ಮುಂದಾಗುವ ಪರಿಣಾಮಗಳನ್ನು ತಿಳಿದಿದ್ದರೂ ಕೂಡ ಹಾಗೂ ಆತನ ಈ ವರವನ್ನು ಒಳ್ಳೆಯ ಕಾರಣಗಳಿಗಾಗಿ ಬಳಸುವುದಿಲ್ಲ ಎಂಬುವುದನ್ನು ಅರಿತಿದ್ದರೂ ಕೂಡ ಸೂರ್ಯದೇವನು ಮಾತು ನೀಡಿದ ಕಾರಣ ವರವನ್ನು ನೀಡುತ್ತಾರೆ.

ವರವನ್ನು ಪಡೆದ ಕೂಡಲೇ ದಂಬೋದ್ಭವ ತನ್ನ ಆಲೋಚನೆಯಂತೆ ಅಧರ್ಮದ ಹಾದಿ ಹಿಡಿದು ಜನರ ಮೇಲೆ ದಂ’ಡೆತ್ತಿ ಹೋಗುತ್ತಾನೆ. ದಿನೇದಿನೇ ಈತನ ಉಪಟಳ ಹೆಚ್ಚಾಗುತ್ತದೆ. ದೇವಾನು ದೇವತೆಗಳಿಗೂ ಕೂಡ ಈತ ಸವಾಲು ಎ’ಸೆಯಲು ಆರಂಭಿಸುತ್ತಾನೆ. ಅದೇ ಸಂದರ್ಭದಲ್ಲಿ ರಾಜ ದಕ್ಷನ ಮಗಳು ಬ್ರಹ್ಮನ ಪುತ್ರನಾದ ಧರ್ಮನನ್ನು ಮದುವೆಯಾಗುತ್ತಾರೆ. ದಂಬೋದ್ಭವನ ಬಗ್ಗೆ ತಿಳಿದಿದ್ದ ರಾಜ ದಕ್ಷನ ಮಗಳು ಈತನಿಗೆ ಅಂತ್ಯ ಕಾಣಿಸಬೇಕು ಎಂಬ ಆಲೋಚನೆಯಿಂದ ವಿಷ್ಣು ದೇವನಲ್ಲಿ ಮನವಿ ಮಾಡುತ್ತಾರೆ. ಈ ಮನವಿಗೆ ಮೆಚ್ಚಿದ ವಿಷ್ಣುದೇವರು ಪ್ರತ್ಯಕ್ಷವಾಗಿ ವರ ಕೇಳಿ ಎಂದಾಗ ಸಹಸ್ರಕವಚಗಳಿಂದ ರಕ್ಷಣೆ ಪಡೆದುಕೊಂಡು ಸಹಸ್ರಕವಚ ಎಂಬ ಹೆಸರನ್ನು ಪಡೆದುಕೊಂಡಿರುವ ದಂಬೋದ್ಭವ ಅಂತ್ಯ ಕಾಣಿಸಿ ಎಂದು ಮನವಿ ಮಾಡುತ್ತಾರೆ. ವಿಷ್ಣು ದೇವರು ತಥಾಸ್ತು ಎಂದು ವರವನ್ನು ನೀಡುವ ಮೂಲಕ ದಂಬೋದ್ಭವನ ಅಂತ್ಯಕ್ಕೆ ನಾಂದಿ ಹಾಡುತ್ತಾರೆ.

ಕೆಲವು ದಿನಗಳ ನಂತರ ರಾಜ ದಕ್ಷನ ಮಗಳಿಗೆ ಅವಳಿ ಸಹೋದರರು ಜನಿಸುತ್ತಾರೆ. ಇವರಿಬ್ಬರು ಯು’ದ್ಧ ಕಲೆಗಳಲ್ಲಿ ಪ್ರವೀಣರಾಗಿ ಬೆಳೆಯುತ್ತಾರೆ, ಧೈ’ರ್ಯಶಾಲಿಯಾಗಿ ತಮ್ಮ ಜೀವನವನ್ನು ಕಳೆಯುತ್ತಿರುತ್ತಾರೆ. ಅಷ್ಟೇ ಅಲ್ಲದೆ ಸಕಲ ವಿದ್ಯೆಗಳಲ್ಲಿ ಪರಿಣಿತಿ ಹೊಂದುವ ಮೂಲಕ ಭಾರೀ ಶಕ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅವರು ಮತ್ಯಾರು ಅಲ್ಲ ನ’ರ ಮತ್ತು ನಾರಾಯಣ. ಇವರಿಬ್ಬರು ಅರಣ್ಯದಲ್ಲಿ ವಾಸವಿರುತ್ತಾರೆ, ಇವರಿಬ್ಬರೂ ತಮ್ಮ ಇಡೀ ಜೀವನದಲ್ಲಿ ಶಿವನನ್ನು ಆರಾಧಿಸುತ್ತಾ ಜೀವನ ಕಳೆಯುತ್ತಿದ್ದರು. ಇಬ್ಬರೂ ಸದಾ ಕಾಲ ಒಟ್ಟಿಗಿದ್ದು ಬೇರ್ಪಡಿಸಲಾಗದಂತಹ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಹೀಗೆ ಸಮಯ ಬದಲಾದಂತೆ ಸಹಸ್ರಕವಚ ಅಥವಾ ದಂಬೋದ್ಭವ ನ’ರ ಮತ್ತು ನಾರಾಯಣ ಇಬ್ಬರು ತಂಗಿದ್ದ ಬದ್ರಿನಾಥ್ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳ ಮೇಲೆ ದಂಡೆತ್ತಿ ಬಂದ. ಇಬ್ಬರು ಋಷಿಮುನಿಗಳು ನ’ರ ಹಾಗೂ ನಾರಯಣರನ್ನು ಸಹಾಯ ಅರಸಿ ಬಂದ ಕಾರಣ ನ’ರ-ನಾರಾಯಣರು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ದಂಬೋದ್ಭವನ ಬಗ್ಗೆ ತಿಳಿದಿದ್ದ ನ’ರ ಹಾಗೂ ನಾರಾಯಣರು ಮೊದಲೇ ನಿರ್ಧಾರ ಮಾಡಿದಂತೆ ಕೇವಲ ನ’ರ, ದಂಬೋದ್ಭವನ ಬಳಿ ಯುದ್ಧ ಮಾಡಲು ಹೊರಡುತ್ತಾರೆ.

ನ’ರ ಯುದ್ಧ ಮಾಡಲು ಬಂದ ತಕ್ಷಣ ದಂಬೋದ್ಭವ ನೀನು ಸಾಮಾನ್ಯ ಮನುಷ್ಯ ನಿನ್ನು ನಾನು ಬಹಳ ಸುಲಭವಾಗಿ ಸೋಲಿಸುತ್ತೇನೆ. ನಾನು ಸಹಸ್ರಕವಚ ಗಳಿಂದ ರಕ್ಷಣೆ ಹೊಂದಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ನ’ರ ಇನ್ನು ಏನಾದರೂ ಮಾತನಾಡುವುದು ಇದೆಯಾ ಅಥವಾ ಯುದ್ಧ ಮಾಡುವ ಸಾಹಸವೇನಾದರು ಮಾಡುತ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ. ಇದನ್ನು ಕೇಳಿದ ದಂಬೋದ್ಭವ ನನ್ನ ಕವಚ ಒಂದನ್ನು ಅಂತ್ಯಗೊಳಿಸಲು ಒಂದು ಸಾವಿರ ವರ್ಷಗಳ ಕಾಲ ನೀನು ತಪಸ್ಸು ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ನನ್ನ ಕವಚವನ್ನು ಅಂತ್ಯಗೊಳಿಸಿದ ತಕ್ಷಣವೇ ನೀನು ಬದುಕುವುದಿಲ್ಲ ಎಂದು ಕೂಡ ಎಚ್ಚರಿಸುತ್ತಾನೆ. ನ’ರ ನಾನು ಯಾವುದೇ ತಪಸ್ಸು ಮಾಡಿಲ್ಲ, ಆದರೆ ನನ್ನ ಸಹೋದರ ನಾರಾಯಣ ನನಗಾಗಿ ತಪಸ್ಸು ಮಾಡುತ್ತಿದ್ದಾನೆ, ಅವನ ಬದಲಿಗೆ ನಾನು ನಿಮ್ಮ ಜೊತೆ ಯುದ್ಧ ಮಾಡಲು ಬಂದಿದ್ದೇನೆ ಎಂದು ಹೇಳುತ್ತಾನೆ. ಆದರೆ ದಂಬೋದ್ಭವ ನಿನ್ನ ಸಹೋದರನ ತಪಸ್ಸು ನಿನಗೆ ಪ್ರಯೋಜನಕ್ಕೆ ಬರುವುದಿಲ್ಲ, ಅವನು ಪ್ರತ್ಯೇಕ ಅವನು ನೀನಲ್ಲ ಈ ಕೂಡಲೇ ಹೊರಡು ಎನ್ನುತ್ತಾನೆ.

ಮಾತು ಕೇಳದ ನ’ರ ಯುದ್ಧಕ್ಕೆ ಸಿದ್ಧವಾಗುವುದನ್ನು ಕಂಡ ದಂಬೋದ್ಭವ ತಾನು ಯುದ್ಧಕ್ಕೆ ಸಿದ್ಧ ಎಂದು ಯುದ್ಧಕ್ಕೆ ಇಳಿಯುತ್ತಾನೆ. ಹಲವಾರು ಪ್ರಯತ್ನಗಳ ಬಳಿಕ ನ’ರ ಕೊನೆಗೂ ಸಹಸ್ರಕವಚನ ಒಂದು ಕವಚವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗುತ್ತಾನೆ, ಆದರೆ ಕವಚ ಅಂತ್ಯಗೊಳಿಸಿದ ಕೂಡಲೇ ನ’ರ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾರೆ. ಅಷ್ಟೇ ಅಲ್ಲದೆ ಇನ್ನು 999 ಕವಚಗಳು ದಂಬೋದ್ಭವನ ಬಳಿ ಇರುತ್ತವೆ. ನ’ರ ತನ್ನ ಜೀವ ಕಳೆದುಕೊಂಡ ತಕ್ಷಣ ನಾರಾಯಣನು ತನ್ನ ತಪಸ್ಸು ಪೂರ್ಣಗೊಳಿಸಿ ಮೃತ್ಯುಂಜಯ ಮಂತ್ರವನ್ನು ಪಠಣ ಮಾಡುವ ಮೂಲಕ ನ’ರನಿಗೆ ಮರುಜೀವ ನೀಡುತ್ತಾರೆ, ಈ ಘಟನೆಯನ್ನು ಕಣ್ಣಾರೆ ಕಂಡ ದಂಭೋದ್ಭವನಿಗೆ ನ’ರ ಮತ್ತು ನಾರಾಯಣರಿಬ್ಬರೂ ಒಂದೇ ಆತ್ಮ ಹೊಂದಿರುವ ಇಬ್ಬರು ವ್ಯಕ್ತಿಗಳು ಎಂಬುದು ತಿಳಿಯುತ್ತದೆ. ಹೀಗೆ ಒಂದೇ ಆತ್ಮ ಆಗಿರುವ ಕಾರಣ ಒಬ್ಬನು ತಪಸ್ಸು ಮಾಡಿದ ಶಕ್ತಿ ಮತ್ತೊಬ್ಬನಿಗೆ ಸಿಗುತ್ತದೆ ಹಾಗೂ ಒಬ್ಬ ತಪಸ್ಸು ಮಾಡುತ್ತಿರುವ ಸಂದರ್ಭದಲ್ಲಿ ಮತ್ತೊಬ್ಬರು ನನ್ನ ಜೊತೆ ಯುದ್ಧ ಮಾಡಿ ನನ್ನ ಕವಚಗಳನ್ನು ಅಂತ್ಯಗೊಳಿಸುತ್ತಾರೆ ಎಂಬುದರ ಅರಿವಾಗುತ್ತದೆ.

ಆದರೂ ದಂಬೋದ್ಭವ ನಾರಾಯಣನ ಜೊತೆ ಯುದ್ದವನ್ನು ಆರಂಭಿಸುತ್ತಾನೆ. ಹೀಗೆ ನಾರಾಯಣನು ಸಾವಿರ ವರ್ಷಗಳ ಕಾಲ ಯುದ್ಧ ಮಾಡಿ ಮತ್ತೊಂದು ಕವಚವನ್ನು ಅಂತ್ಯಗೊಳಿಸಿ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾರೆ, ನಂತರ ತಪಸ್ಸು ಮುಗಿಸಿಬಂದ ನ’ರ, ನಾರಾಯಣನಿಗೆ ಮರುಜೀವ ನೀಡಿ ತಾನು ಯುದ್ಧ ಆರಂಭಿಸುತ್ತಾನೆ. ಹೀಗೆ ಒಬ್ಬರು ತಪಸ್ಸು ಮಾಡುವುದು ಮತ್ತೊಬ್ಬರಿಗೆ ಯುದ್ಧದಲ್ಲಿ ಕವಚ ಅಂತ್ಯಗೊಳಿಸುವುದು ಮಾಡಿದವರೊಂದಿಗೆ ದಂಭೋದ್ಭವನ 999 ಕವಚಗಳನ್ನು ಅಂತ್ಯಗೊಳಿಸುತ್ತಾರೆ. ತನ್ನ ಬಳಿ ಒಂದೇ ಒಂದು ಕವಚ ಇದೆ ಎಂದ ತಕ್ಷಣ ದಂಭೋದ್ಭವನಿಗೆ ನೆನಪಾದದ್ದು ಸೂರ್ಯದೇವ.

ಸೂರ್ಯದೇವನ ಬಳಿ ತೆರಳಿ ದಂಬೋದ್ಭವ ಆಶ್ರಯವನ್ನು ಪಡೆದು ತನ್ನನ್ನು ರಕ್ಷಿಸುವಂತೆ ಮನವಿ ಮಾಡಿಕೊಳ್ಳುತ್ತಾನೆ. ನ’ರ ಹಾಗೂ ನಾರಾಯಣರಿಬ್ಬರೂ ಸೂರ್ಯನ ಬಳಿ ತೆರಳಿ ದಂಬೋದ್ಭವ ನನ್ನು ತಮಗೆ ನೀಡುವಂತೆ ಮನವಿ ಮಾಡುತ್ತಾರೆ. ಆದರೆ ಸೂರ್ಯದೇವನು ದಂಬೋದ್ಭವ ನನ್ನ ಮಹಾನ್ ಭಕ್ತ ಬಹಳ ಭಕ್ತಿಯಿಂದ ನನಗಾಗಿ ತಪಸ್ಸು ಮಾಡಿದ್ದಾನೆ, ಈಗ ಅವನು ನನ್ನ ಬಳಿ ಸಹಾಯಕ್ಕೆ ಬಂದು ಬೇಡಿಕೆಯಿಟ್ಟಿದ್ದಾನೆ. ನಾನು ಅವನಿಗೆ ಸಹಾಯ ಮಾಡಲೇ ಬೇಕಾಗಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ನ’ರ ಕೋಪಗೊಂಡು ದಂಬೋದ್ಭವ ನನ್ನು ಮರುಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿ ಈ ಜನ್ಮದ ಎಲ್ಲಾ ಪಾಪಗಳನ್ನು ಅನುಭವಿಸುತ್ತಾನೆ ಎಂದು ಶಾಪ ನೀಡುತ್ತಾರೆ. ಮುಂದಿನ ಜನ್ಮದಲ್ಲಿ ದಂಬೋದ್ಭವನು ಕರ್ಣನಾಗಿ ಜನಿಸಿದ್ದಾರೆ ಎಂಬ ಮಾಹಿತಿ ಪುರಾಣಗಳಲ್ಲಿ ತಿಳಿಸಲಾಗಿದೆ.

ಸಾವಿರ ಕವಚಗಳಲ್ಲಿ ಉಳಿದಿದ್ದ ಒಂದು ಕವಚವನ್ನು ಕರ್ಣನಿಗೆ ಸೂರ್ಯದೇವ ತಲುಪಿಸಿದ್ದರು. ಮಹಾ ಭಾರತದ ಕಾಲದಲ್ಲಿಯೂ ಕೂಡ ಕರ್ಣನಿಗೆ ಈ ಕವಚ ಶ್ರೀರಕ್ಷೆಯಾಗಿತ್ತು, ಆದರೆ ಇಂದ್ರ ದೇವನು ಕರ್ಣನ ಬಳಿ ದಾನದ ರೂಪದಲ್ಲಿ ಪಡೆದುಕೊಂಡಿದ್ದ ಕಾರಣ ಅರ್ಜುನನು ಕೃಷ್ಣನನ್ನು ಸೋಲಿಸಲು ಸಾಧ್ಯವಾಯಿತು. ಕೆಲವೊಂದು ಪುರಾಣಗಳಲ್ಲಿ ಕರ್ಣನಿಗೆ ಹಿಂದಿನ ಜನ್ಮ ಇಲ್ಲ ಎಂದು ಹೇಳಿದರೂ ಕೂಡ, ಕೆಲವೊಂದು ಪುರಾಣಗಳಲ್ಲಿ ದಂಬೋದ್ಭವನೇ ಕರ್ಣನಾಗಿ ಜನಿಸಿದ್ದ ಎಂದು ತಿಳಿಸಲಾಗಿದೆ.