ವಜ್ರಮುನಿರವರ ಮಗ ಸಿನೆಮಾದಿಂದ ದೂರ ಉಳಿದು ಮಾಡುತ್ತಿರುವ ಕೆಲಸ ನೋಡಿದರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ !

ವಜ್ರಮುನಿರವರ ಮಗ ಸಿನೆಮಾದಿಂದ ದೂರ ಉಳಿದು ಮಾಡುತ್ತಿರುವ ಕೆಲಸ ನೋಡಿದರೇ ನಿಜಕ್ಕೂ ಗ್ರೇಟ್ ಅನಿಸುತ್ತದೆ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಶ್ರೇಷ್ಠ ವಿಲ್ಲನ್ ಯಾರು ಎಂದು ಕೇಳಿದರೇ ಎಲ್ಲರ ಉತ್ತರಗಳಲ್ಲಿ ಅಗ್ರ ಸಾಲಿನಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ವಜ್ರಮುನಿರವರ ಹೆಸರು ಕೇಳಿ ಬರುತ್ತದೆ. ಯಾಕೆಂದರೆ ಹಲವಾರು ಚಿತ್ರಗಳಲ್ಲಿ ಅದ್ಭುತ ನಟನೆಯ ಮೂಲಕ ಇಡೀ ಕರ್ನಾಟಕದ ಮನಗೆದ್ದಿದ್ದ ವಜ್ರಮುನಿ ರವರು ಅತ್ಯುತ್ತಮ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮದೇಯಾದ ಸೇವೆಯನ್ನು ನೀಡಿದ್ದಾರೆ. ಇವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ ಹಾಗೂ ಅವರ ಸ್ಥಾನವನ್ನು ತುಂಬುವಂತಹ ಮತ್ತೊಬ್ಬ ವಿಲನ್ ಹು’ಟ್ಟಿ ಬರಲು ಸಾಧ್ಯವೇ ಇಲ್ಲ. ಹಲವಾರು ವಿಲನ್ ಗಳು ಬಂದು ಹೋಗಬಹುದು ಆದರೆ ವಜ್ರಮುನಿಯವರ ಆ ನೈಜ ನಟನೆಯ ಮುಂದೆ ನಿಲ್ಲುವುದು ಸವಾಲಿನ ಸಂಗತಿಯೇ ಸರಿ.

ಅಂದಿನ ಕಾಲದಲ್ಲಿ ಸುಧೀರ್, ತೂಗುದೀಪ್ ಶ್ರೀನಿವಾಸ್ ಹಾಗೂ ವಜ್ರಮುನಿ ಸೇರಿದಂತೆ ಇನ್ನಿತರ ಹಲವಾರು ಹಿರಿಯರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಈಗ್ಯಾಕೆ ಇವರೆಲ್ಲರ ವಿಷಯ ಎಂದುಕೊಂಡಿದ್ದೀರಾ? ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ತೂಗುದೀಪ್ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ಮಿಂಚುತ್ತಿದ್ದಾರೆ, ಬಾರಿ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ ದರ್ಶನ್ ರವರ ಸಮಾಜ ಸೇವೆಯಲ್ಲಿಯೂ ಕೂಡ ಹಿಂದೆ ಇಲ್ಲ. ಅಷ್ಟೇ ಅಲ್ಲ ಸುಧೀರ್ ಅವರ ಪುತ್ರರಾದ ನಂದಕಿಶೋರ ಮತ್ತು ತರುಣ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ವಜ್ರಮುನಿ ರವರ ಪುತ್ರ ಮಾತ್ರ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ, ಅರೇ ಇದ್ಯಾಕೆ ಹೀಗೆ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಬಹುದಿತ್ತಲ್ಲವೆ?? ಅಂದುಕೊಂಡಿದ್ದೀರಾ ಆದರೆ ಅವರು ಚಿತ್ರರಂಗದಿಂದ ದೂರ ಉಳಿದು ತಮ್ಮದೇ ಆದ ರೀತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಇವರು ದೂರವುಳಿದು ಮಾಡುತ್ತಿರುವ ಕೆಲಸದ ಕುರಿತು ಕೇಳಿದರೆ ಖಂಡಿತ ನೀವು ಸಲ್ಯೂಟ್ ಕುಡಿಯುತ್ತೀರಾ.

ಸ್ನೇಹಿತರೇ, ಹೌದು ವಜ್ರಮುನಿ ರವರ ಪುತ್ರರಾದ ವಿಶ್ವನಾಥ್ ವಜ್ರಮುನಿ ರವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಥೇಟ್ ನೋಡಲು ವಜ್ರಮುನಿ ರವರಂತೆ ಕಾಣುವ ವಿಶ್ವನಾಥ್ ವಜ್ರಮುನಿ ರವರು ಇದೀಗ ತಮ್ಮ ತೋಟಗಳನ್ನು ನೋಡಿಕೊಳ್ಳುತ್ತಾ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಕಾರಣದಿಂದ ಚಿತ್ರರಂಗವನ್ನು ಸಂಪೂರ್ಣವಾಗಿ ಮರೆತು ಹಲವಾರು ಜನರಿಗೆ ಸಮಾಜ ಸೇವೆ ಮಾಡುತ್ತಾ ಯಾವುದೇ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವನ್ನು ಪಡೆದುಕೊಳ್ಳದೆ ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಕೂಡ ತಮ್ಮ ತಂದೆಯ ಹೆಸರಿನಲ್ಲಿ ಹಾಗೂ ತಮ್ಮ ಪ್ರೀತಿಯ ತಂಗಿಯ ಹೆಸರಿನಲ್ಲಿ ಕ’ಷ್ಟ ಎಂದವರಿಗೆ ಸಹಾಯ ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅವರು ಮನಸ್ಸು ಮಾಡಿದ್ದರೇ ಚಿತ್ರರಂಗದಲ್ಲಿಯೇ ತಂದೆ ಹೆಸರು ಬಳಸಿಕೊಂಡು ಹಲವಾರು ಅವಕಾಶಗಳನ್ನು ಗಿಟ್ಟಿಸಿ ಕೊಳ್ಳಬಹುದಾಗಿತ್ತು ಆದರೆ ಯಾವುದೇ ಪ್ರಚಾರವಿಲ್ಲದೇ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಅದ್ಭುತ.