ಮಹಾಭಾರತ ವ್ಯಾಖ್ಯಾನ: ಜೀವನದಲ್ಲಿ ಯಶಸ್ಸು, ಸಂತೋಷ ಪಡೆದುಕೊಳ್ಳಲು ತಿಳಿಸಿರುವ ಸೂತ್ರಗಳು ಯಾವುವು ಗೊತ್ತಾ?

ಮಹಾಭಾರತ ವ್ಯಾಖ್ಯಾನ: ಜೀವನದಲ್ಲಿ ಯಶಸ್ಸು, ಸಂತೋಷ ಪಡೆದುಕೊಳ್ಳಲು ತಿಳಿಸಿರುವ ಸೂತ್ರಗಳು ಯಾವುವು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತ ಭೂಮಿ ಇಡೀ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವನ್ನು ಹೊಂದಿದೆ. ನೀವು ಇಂಟರ್ನೆಟ್, ಪ್ರಸಿದ್ಧ ಕವಿಗಳ ಪುಸ್ತಕಗಳನ್ನು ಓದಿ ತಿಳಿದುಕೊಂಡರೂ ಕೂಡ ಮಹಾಭಾರತದಲ್ಲಿರುವ ಅದ್ವಿತೀಯ ವಿಷಯಗಳಿಗೆ ಸಮಾನವಾದ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಇಡೀ ಬ್ರಹ್ಮಾಂಡದ ರಹಸ್ಯವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವ ಧಾರ್ಮಿಕ ಗ್ರಂಥವೆಂದರೆ ಅದುವೇ ಮಹಾಭಾರತ. ನಾವು ಇಂದು ಮಹಾಭಾರತದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಗಳಿಸಲು ತಿಳಿಸಲಾಗಿರುವ ಸೂತ್ರಗಳನ್ನು ನಿಮಗೆ ತಿಳಿಸುತ್ತೇವೆ.

ಮೊದಲನೆಯದಾಗಿ ಅನೇಕ ಜನರಿಗೆ ಯಾವುದೇ ಕಾರಣವಿಲ್ಲದೆ ಇತರರೊಂದಿಗೆ ಜಗಳವಾಡುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರ ಮೂಲಕ ಅನೇಕ ಜನರ ಜೊತೆ ವೈ’ರತ್ವವನ್ನು ಬೆಳೆಸಿಕೊಂಡಿರುತ್ತಾರೆ. ಇದರಿಂದ ನಿಮಗಾಗುವ ಲಾಭಗಳೇನು ಇಲ್ಲ. ಇನ್ನು ಕೆಲವರು ಸುಖ ಸುಮ್ಮನೆ ತಮ್ಮ ಹಕ್ಕುಗಳನ್ನು ಪಡೆಯಲು ಈ ದಾರಿ ಆಯ್ಕೆಮಾಡಿಕೊಂಡಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಸುಮ್ಮನೆ ಗೊಂದಲಗಳಷ್ಟೇ ಉಂಟಾಗುತ್ತವೆ. ಇದಕ್ಕೆ ಸುಲಭ ವಿಧಾನವೆಂದರೇ ನಿಮ್ಮ ಅಭಿಪ್ರಾಯವನ್ನು ನೀಡಲು ಅಥವಾ ನಿಮ್ಮ ಹಕ್ಕನ್ನು ತೆಗೆದುಕೊಳ್ಳಲು ಪ್ರೀತಿ ಅಥವಾ ಸಮಾಲೋಚನೆಯೊಂದಿಗೆ ವಿಷಯಗಳನ್ನು ಪರಿಹರಿಸುವುದು ಉತ್ತಮ.

ಇನ್ನು ಎರಡನೆಯದಾಗಿ ಕೆಲವೊಮ್ಮೆ ನಾವು ಇತರರ ವಿವಾದಗಳಲ್ಲಿ ಭಾಗಿಯಾಗುತ್ತೇವೆ, ಆ ವಿವಾದವು ನಮ್ಮದಾಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯ ವಿವಾದದಲ್ಲಿ ಎಂದಿಗೂ ಭಾಗಿಯಾಗಬೇಡಿ, ಯಾವಾಗಲೂ ಅಂತಹ ವಿಷಯಗಳಿಂದ ದೂರವಿರಿ. ಇದಲ್ಲದೆ, ಎಲ್ಲವನ್ನೂ ಹೇಳುವಲ್ಲಿ ಅಥವಾ ಕೇಳುವಲ್ಲಿ ಕಾಳಜಿ ವಹಿಸಬೇಕು. ಯಾರೊಬ್ಬರ ಮಾತುಗಳು ಅಥವಾ ಅಭ್ಯಾಸಗಳು ಸರಿಯಾಗಿಲ್ಲದಿದ್ದರೂ ನೀವು ಏನನ್ನೂ ಹೇಳುವುದನ್ನು ತಪ್ಪಿಸಬೇಕು. ಈ ರೀತಿಯಾಗಿ ನೀವು ವಿವಾದಗಳಿಂದ ದೂರವಿರಲು ಸಾಧ್ಯವಾಗುತ್ತದೆ.

ಇನ್ನು ಮೂರನೆಯದಾಗಿ ಅನೇಕ ಜನರಿಗೆ ಇತರರಿಗೆ ಕೆ’ಟ್ಟದ್ದನ್ನು ಮಾಡುವ ಮತ್ತು ಅವರನ್ನು ಕೀ’ಳಾಗಿ ನಡೆಸಿಕೊಳ್ಳುವ ಅಭ್ಯಾಸವಿದೆ. ಈ ರೀತಿಯ ವ್ಯಕ್ತಿಯು ಒಳ್ಳೆಯದು ಮತ್ತು ಕೆ’ಟ್ಟದ್ದನ್ನು ಪ್ರತ್ಯೇಕಿಸುವ ಜ್ಞಾನವನ್ನು ಕಳೆದುಕೊಳ್ಳುತ್ತಾನೆ. ಈ ಕಾರಣದಿಂದಾಗಿ, ಅವನು ತನಗೇ ತಾನೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಆದರಿಂದ ಸುತ್ತ ಮುತ್ತಲಿನ ಜನರನ್ನು ಕೀ’ಳಾಗಿ ಕಾಣಬೇಡಿ.

ಸ್ನೇಹಿತರೇ ನೀವು ಒಬ್ಬ ವ್ಯಕ್ತಿ ಜೊತೆ ಯೋಚಿಸದೆ ಮಾತನಾಡಬಾರದು ಮಾತನಾಡುವುದರಿಂದ ಕೆಲವರಿಗೆ ಅತೃಪ್ತಿ ಉಂಟಾಗುತ್ತದೆ. ನೀವು ಮಾತನಾಡುವ ಪದಗಳು ಬಾಣಗಳಂತೆ, ಒಮ್ಮೆ ಅವು ನಿಮ್ಮ ಬಾಯಿಯಿಂದ ಹೊರ ಬಂದರೆ ಅವುಗಳನ್ನು ಇನ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ನೀವು ಹಲವಾರು ಒಳ್ಳೆಯ ಸಂಗತಿಗಳನ್ನು ಮಾಡಿಲ್ಲ ಒಬ್ಬರಿಗೆ ಮಾರ್ಗದರ್ಶಿಯಾದ ಬಂದು ಅಥವಾ ಅವರ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿ ಕೊಳ್ಳಬಹುದು ಆದರೆ ನೀವು ಮಾತನಾಡುವ ಒಂದು ಮಾತಿನಿಂದ ಅವರು ನಿಮ್ಮಿಂದ ಶಾಶ್ವತವಾಗಿ ದೂರ ಕೂಡ ಆಗಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಮತ್ತು ಬರ್ ಇಂದ ಉತ್ತಮ ಪದಗಳನ್ನು ಕೇಳಲು ಬಯಸುತ್ತಾನೆ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಸಕಾರತ್ಮಕ ವಿಷಯಗಳನ್ನು ಇಷ್ಟಪಡುತ್ತಾನೆ ಆದಕಾರಣ ನೀವು ನಿಮ್ಮ ಮಾತುಗಳ ಮೂಲಕ ನಕಾರಾತ್ಮಕ ಕೆಲಸಗಳನ್ನು ಮಾಡುವುದು ತಪ್ಪಿಸಿ ಇತರರಿಗೆ ಯಾವುದೇ ರೀತಿಯ ಮಾತುಗಳನ್ನು ಆಡದೇ ಇದ್ದಲ್ಲಿ ಖಂಡಿತ ನೀವು ಸಂತೋಷವಾಗಿರಬಹುದು.