ಜ್ಯೋತಿಷ್ಯ ಶಾಸ್ತ್ರ: ವಿಶೇಷವೇನು ಬೇಡ ಎಲ್ಲಾ ಕಾರ್ಯಗಳು ಶುಭವಾಗಬೇಕು ಎಂದರೇ ಮಂಗಳವಾರ ಈ ರೀತಿ ಮಾಡಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಿಂದೂ ಪುರಾಣ ಗ್ರಂಥಗಳಲ್ಲಿ ವಿವಿಧ ದಿನ ಹಾಗೂ ವಿವಿಧ ಸಮಯವನ್ನು ಕೆಲವೊಂದು ಕಾರ್ಯಗಳಿಗೆ ಮೀಸಲಿಡಲಾಗಿದೆ. ಕೆಲವೊಂದು ದಿನಗಳಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಆದರೆ ಮತ್ತಷ್ಟು ದಿನಗಳಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಲು ಬಹಳ ಸೂಕ್ತ ಎಂದು ಹೇಳಲಾಗುತ್ತದೆ. ವಾರದ ಏಳು ದಿನವೂ ವಿವಿಧ ರೀತಿಯ ಮಹತ್ವವನ್ನು ಪಡೆದುಕೊಂಡಿವೆ. ಅದೇ ರೀತಿ ಮಂಗಳವಾರ ಕೂಡ ಬಹಳ ವಿಶೇಷವೆನಿಸಿದ್ದು, ನೀವು ಪುರಾಣಗಳ ಪ್ರಕಾರ ಮಂಗಳವಾರದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೇ ಖಂಡಿತ ಯಶಸ್ಸು ನಿಮ್ಮದಾಗಲಿದೆ.

ಮಂಗಳವಾರದಂದು ಮದುವೆಗಳು ಮಾಡಬಾರದು ಎಂದು ಹೇಳಿದರೂ ಕೂಡ, ಹಿಂದೂ ಧರ್ಮದಲ್ಲಿ ಮಂಗಳವಾರದಂದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಮಂಗಳವಾರ ದಿನದಂದು ಗಣೇಶ, ತಾಯಿ ದುರ್ಗಾ ಮಾತೆ, ಕಾಳಿದೇವಿ ಮತ್ತು ಹನುಮಂತನನ್ನು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಮಂಗಳವಾರ ವನ್ನು ಮಂಗಳ ಗ್ರಹದ ದಿನವೆಂದು ಮೀಸಲಿಡಲಾಗಿದೆ. ಆತ ಸಾಮಾನ್ಯವಾಗಿ ಮಂಗಳಕರ ಸುದ್ದಿಗಳ ಜೊತೆ ತುಂಬಾ ಸಮಸ್ಯೆಗಳನ್ನು ನೀಡುತ್ತಾನೆ ಎಂಬ ಭಾವನೆ ಹಿಂದೂ ಧರ್ಮದಲ್ಲಿ ಇದೆ. ಉಪವಾಸದ ಮೂಲಕ ನಾವು ‌ಮಂಗಳ ನಿಂದ ಉಂಟಾಗುವ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಇನ್ನೂ ಕೆಲವು ವಿಚಾರಗಳ ಮೂಲಕ ಅದೃಷ್ಟವನ್ನು ಪಡೆಯಲು ನಾವು ಮಂಗಳವಾರ ದಿನದಂದು ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ ಬನ್ನಿ ಈ ಕುರಿತು ನಿಮಗೆ ಇಂದು ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಮೊದಲನೆಯದಾಗಿ ಮಂಗಳವಾರ ಕೆಂಪು ಬಣ್ಣಕ್ಕೆ ಸೀಮಿತವಾಗಿರುವ ಕಾರಣ ಈ ದಿನ ನೀವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಇದರಿಂದ ನೀವು ಒಳ್ಳೆಯ ಅದೃಷ್ಟವನ್ನು ಪಡೆಯಬಹುದು ಎಂದು ಎಂದು ಪುರಾಣಗಳು ಹೇಳುತ್ತವೆ. ಇನ್ನು ಅಷ್ಟೇ ಅಲ್ಲದೆ ನೀವು ಮಂಗಳವಾರ ದಿನದೊಂದು ಹನುಮಂತ, ದುರ್ಗಾ ಮಾತೆ, ಕಾಳಿಮಾತೆ ಮತ್ತು ಕಾರ್ತಿಕೇಯನನ್ನು ಓಲಿಸಿಕೊಳ್ಳಲು ಉಪವಾಸ ಮಾಡುವ ಜನರನ್ನು ಈಗಾಗಲೇ ನೋಡಿರುತ್ತೀರಿ. ಪ್ರಮುಖವಾಗಿ ಗಂಡು ಮಗು ಬೇಕು ಎಂದು ಬಯಸುವ ದಂಪತಿಗಳು ಮಂಗಳವಾರ ಉಪವಾಸ ಮಾಡಿದರೇ ಖಂಡಿತ ಶುಭ ಸುದ್ದಿ ಕೇಳಿಬರಲಿದೆ. ಇನ್ನು ಅಷ್ಟೇ ಅಲ್ಲದೆ ಮಂಗಳವಾರ ಉಪವಾಸ ಮಾಡುವುದರಿಂದ ಮಂಗಳನಿಂದ ನಿಮಗೆ ಯಾವುದೇ ಕಷ್ಟಗಳು ಎದುರಾಗುವುದಿಲ್ಲ.

ಸಾಮಾನ್ಯವಾಗಿ ಮಂಗಳವಾರ ವನ್ನು ಹನುಮಂತನಿಗೆ ವಿಶೇಷ ದಿನ ಎಂದು ಮೀಸಲಿಡಲಾಗಿದೆ, ಆದಕಾರಣ ಮಂಗಳವಾರ ದಿನದಂದು ನೀವು ಹನುಮಂತನಿಗೆ ಕೆಂಪು ಹೂವನ್ನು ಸಮರ್ಪಿಸಿ ಹಾಗೂ ಮಂಗಳ ಗ್ರಹದಿಂದ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಅಥವಾ ಎದುರಿಸುವ ಶಕ್ತಿ ನೀಡಿ ಎಂದು ಹನುಮಂತನಲ್ಲಿ ಪ್ರಾರ್ಥನೆ ಮಾಡುವುದರಿಂದ ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ನಂಬಲಾಗಿದೆ. ಇನ್ನು ಒಂದು ವೇಳೆ ನೀವು ಹೆಚ್ಚಿನ ಫಲವನ್ನು ಪಡೆದುಕೊಳ್ಳಬೇಕು ಎಂದರೆ 21 ಮಂಗಳವಾರ ಗಳ ಕಾಲ ಕೇವಲ ಒಂದು ಹೊತ್ತು ಮಾತ್ರ ಊಟ ಸೇವಿಸಿ ಉಪವಾಸ ಮಾಡಿ. ಒಂದು ಹೊತ್ತಿನ ಆಹಾರದಲ್ಲಿ ಗೋಧಿ ಮತ್ತು ಬೆಲ್ಲದಿಂದ ತಯಾರಿ ಮಾಡಿದಂತಹ ಫಲಹಾರವನ್ನು ಸೇವಿಸಿ ಉಪವಾಸ ಮಾಡುವುದರಿಂದ ನಿಮಗೆ ಅದೃಷ್ಟ ಒಲಿದುಬರಲಿದೆ ಎಂದು ಪುರಾಣಗಳು ಹೇಳುತ್ತವೆ.

Post Author: Ravi Yadav