ಬಿರಿಯಾನಿ ಎಲೆಗಳನ್ನು ಮನೆಯಲ್ಲಿ ಕೇವಲ 10 ನಿಮಿಷ ಸುಟ್ಟರೇ ಎಷ್ಟೆಲ್ಲಾ ಲಾಭಗಳಿಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಾವು ದಿನನಿತ್ಯ ಜೀವನದಲ್ಲಿ ಬಳಸುವ ಹಲವಾರು ವಸ್ತುಗಳ ಅನೇಕ ಲಾಭಗಳು ನಮಗೆ ತಿಳಿದಿರುವುದಿಲ್ಲ. ನಾನು ಸಾಮಾನ್ಯ ರೀತಿಯಲ್ಲಿ ಬಳಸಿಕೊಂಡು ಜೀವನ ಕಳೆಯುತ್ತಿರುತ್ತೇವೆ. ಆದರೆ ಆ ವಸ್ತುಗಳನ್ನು ಮತ್ತೊಂದು ರೀತಿಯಲ್ಲಿ ಬಳಸುವುದರಿಂದ ನಾವು ಕೆಲವೊಂದು ವಿಶೇಷ ಲಾಭಗಳನ್ನು ಪಡೆದುಕೊಳ್ಳುತ್ತೇವೆ. ಇಂದು ಅದೇ ರೀತಿ ಹತ್ತು ನಿಮಿಷ ಬಿರಿಯಾನಿ ಎಲೆಯನ್ನು ಸುಟ್ಟರೇ ಏನಾಗುತ್ತದೆ, ಇದರಿಂದ ನಮಗೆ ಆಗುವ ಲಾಭಗಳು ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೇ, ಮೊದಲನೆಯದಾಗಿ ಆಧುನಿಕ ಜೀವನದಲ್ಲಿ ಮನುಷ್ಯ ಎಷ್ಟೇ ಹಣ ಗಳಿಸಿದರೂ ಕೂಡ ಶಾಂತಿಗಾಗಿ ಹುಡುಕಾಡದ ಜಾಗವೇ ಇರುವುದಿಲ್ಲ. ಹೀಗಿರುವಾಗ ಶುದ್ಧವಾದ ಹಾಗೂ ಸುಗಂಧವಾಸನೆಯನ್ನು ನಾವು ಉಸಿರಾಡಿದರೇ ನಮ್ಮ ಮನಸ್ಸಿಗೆ ಶಾಂತಿ ಮತ್ತು ನಮ್ಮಲ್ಲಿ ಉತ್ಸಾಹ ಮೂಡುತ್ತದೆ.‌ ವೈದ್ಯಶಾಸ್ತ್ರದಲ್ಲಿ ಈ ರೀತಿ ಸುವಾಸನೆಯಿಂದ ಮನಸ್ಸನ್ನು ತಿಳಿ ಮಾಡುವ ವಿಧಾನವನ್ನು ಅರೋಮತೆರಪಿ ಎಂದು ಕರೆಯುತ್ತಾರೆ. ಹೀಗೆ ಮೊದಲನೇ ಲಾಭದಲ್ಲಿ ನಾವು ಬಿರಿಯಾನಿ ಎಲೆಗಳನ್ನು ಸುಟ್ಟಾಗ ಅದರಿಂದ ಸುವಾಸನೆ ಹೊರಬಂದು ನಮ್ಮ ಮನಸ್ಸಿಗೆ ಕೊಂಚ ನೆಮ್ಮದಿ ಅನಿಸುತ್ತದೆ.

ಇನ್ನು ಎರಡನೆಯದಾಗಿ ನೀವು ನಿಮ್ಮ ಮನೆಯಲ್ಲಿ ಒಂದೆರಡು ಬಿರಿಯಾನಿ ಎಲೆಗಳನ್ನು ಸುಡಿ, ನಂತರ ನೀವು ಕನಿಷ್ಠ ಎಂದರೇ ಹತ್ತು ನಿಮಿಷಗಳ ಕಾಲ ನಿಮ್ಮ ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ, ಇದರಿಂದ ಸುವಾಸನೆ ನಿಮ್ಮ ಮನೆಯ ಪೂರ್ತಿ ಹರಡುತ್ತದೆ. ಒಂದು ವೇಳೆ ನಿಮಗೆ ಸಾಧ್ಯವಾದರೇ ನೀವು ಕೂಡ 10 ನಿಮಿಷ ಮನೆಯಿಂದ ಹೊರಗೆ ಇರಿ. 10 ನಿಮಿಷ ಬಿಟ್ಟು ನೀವು ಮನೆ ಒಳಗಡೆ ಹೋದರೇ ಸುಗಂಧ ವಾಸನೆ ನಿಮ್ಮ ಮನೆಯ ತುಂಬಾ ಹರಡುವುದರಿಂದ ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಸೊಳ್ಳೆ ಮತ್ತು ನೊಣಗಳು ಇದ್ದರೆ ಕೂಡಲೇ ಹೊರಹೋಗುತ್ತವೆ.

ಇನ್ನು ಇಷ್ಟೇ ಅಲ್ಲ ನೀವು ಬಿರಿಯಾನಿ ಎಲೆಗಳನ್ನು ಬಳಸಿಕೊಂಡು ನಿಮ್ಮ ಮನೆಯಲ್ಲಿ ಬೀಡುಬಿಟ್ಟಿರುವ ಜಿರಲೆಯ ಗುಂಪನ್ನು ಬಹಳ ಸುಲಭವಾಗಿ ತೆಗೆದುಹಾಕಬಹುದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಬಿರಿಯಾನಿ ಎಲೆಯನ್ನು ತೆಗೆದುಕೊಂಡು ಪುಡಿ ಮಾಡಿ ಜಿರಳೆಗಳು ಓಡಾಡುತ್ತಿರುವ ಸ್ಥಳದಲ್ಲಿ ಎಸೆದರೇ ಸಾಕು, ಜಿರಲೆಗಳು ಸುವಾಸನೆಯಿಂದ ದೂರ ಹೋಗಲು ಇಷ್ಟಪಡುತ್ತವೆ. ಅಂದರೆ ನಿಮ್ಮ ಮನೆಯಿಂದ ಹೊರ ಹೋಗುತ್ತವೆ ಅಥವಾ ಅವುಗಳ ಪ್ರದೇಶ ಬಿಟ್ಟು ಹೊರಗಡೆ ಬರುತ್ತವೆ, ಇದರಿಂದ ನೀವು ಸುಲಭವಾಗಿ ಜಿರಲೆಗಳನ್ನು ತೊಡೆದುಹಾಕಬಹುದಾಗಿದೆ. ನಾವು ಹೀಗೆ ಹಲವಾರು ವರ್ಷಗಳಿಂದ ಮಸಾಲಾ ಪದಾರ್ಥವಾಗಿ ಬಳಸುತ್ತಿರುವ ಬಿರಿಯಾನಿ ಎಲೆಯನ್ನು ಮತ್ತೊಂದು ರೀತಿಯಲ್ಲಿ ಬಳಸಿದರೇ ಎಷ್ಟೆಲ್ಲಾ ಲಾಭಗಳಿವೆ ಎಂಬುದನ್ನು ನೋಡಿದಿರಲ್ಲ, ನೀವು ಒಮ್ಮೆ ಮೇಲೆ ತಿಳಿಸಿದ ವಿಷಯಗಳನ್ನು ಪ್ರಯತ್ನಿಸಿ.

Post Author: Ravi Yadav