ರಿಪಬ್ಲಿಕ್ ಹಾಗೂ ಟೈಮ್ಸ್ ವಿರುದ್ಧ ಮಹತ್ವ ಹೆಜ್ಜೆ ಇಟ್ಟ 3 ಖಾನ್ ಗಳು ಹಾಗೂ ಬಾಲಿವುಡ್, ತಲ್ಲಣ ಸೃಷ್ಟಿಸಿದ ನಡೆ ! ಏನು ಗೊತ್ತಾ?

ರಿಪಬ್ಲಿಕ್ ಹಾಗೂ ಟೈಮ್ಸ್ ವಿರುದ್ಧ ಮಹತ್ವ ಹೆಜ್ಜೆ ಇಟ್ಟ 3 ಖಾನ್ ಗಳು ಹಾಗೂ ಬಾಲಿವುಡ್, ತಲ್ಲಣ ಸೃಷ್ಟಿಸಿದ ನಡೆ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲಿನಿಂದಲೂ ಸುಶಾಂತ್ ಸಿಂಗ್ ರಜಪೂತ್ ರವರ ಜೀವನ ಹೀಗೆ ಆಗಲು ಕಾರಣ ಬಾಲಿವುಡ್ ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತವೇ ಕಾರಣ ಎಂಬ ವಾದ ಎಲ್ಲೆಡೆ ಕೇಳಿಬರುತ್ತಿದೆ. ಮಾಧ್ಯಮಗಳು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಕುರಿತು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸಿ ಕೆಲವರು ಸ್ವಜನಪಕ್ಷಪಾತ ಇದೆ ಎಂದರೇ ಇನ್ನೂ ಕೆಲವರು ಸ್ವಜನಪಕ್ಷಪಾತ ಇಲ್ಲ ಎನ್ನುತ್ತಿದ್ದಾರೆ. ಇನ್ನು ಅಷ್ಟೇ ಅಲ್ಲದೇ ಬಾಲಿವುಡ್ ಚಿತ್ರರಂಗದಲ್ಲಿ ಡ್ರ’ಗ್ ಕುರಿತು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಮೀಡಿಯಾಗಳು ಎಂದಿನಂತೆ ಬಾಲಿವುಡ್ ಚಿತ್ರರಂಗದ ದಿಗ್ಗಜರ ಕುರಿತು ಹಲವಾರು ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ.

ಅದರಲ್ಲಿಯೂ ಪ್ರಮುಖವಾಗಿ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಸಲ್ಮಾನ್ ಖಾನ್, ಕರನ್ ಜೋಹರ್ ಸೇರಿದಂತೆ ಇನ್ನೂ ಪ್ರಮುಖ ಸೆಲೆಬ್ರಿಟಿಗಳು ಹೆಸರು ಕೇಳಿಬಂದಿದೆ. ಇನ್ನು NCB ತನಿಖೆಯಲ್ಲಿ ಪ್ರಕರಣದಲ್ಲಿ ಹಲವಾರು ದಿಗ್ಗಜರ ಹೆಸರು ಕೇಳಿಬರುತ್ತಿವೆ ಎಂದು ಮಾಧ್ಯಮಗಳು ಬಾಲಿವುಡ್ ಚಿತ್ರರಂಗ ಹಾಗೂ ಹಲವಾರು ಸೆಲೆಬ್ರಿಟಿಗಳು ಕುರಿತು ಸುದ್ದಿ ಪ್ರಸಾರ ಮಾಡಿದ್ದವು. ಪ್ರಮುಖವಾಗಿ ಟೈಮ್ಸ್ ಹಾಗೂ ರಿಪಬ್ಲಿಕ್ ಟಿವಿ ಸಂಸ್ಥೆ ಬಾಲಿವುಡ್ ಚಿತ್ರರಂಗದ ವಿರುದ್ಧ ಹಲವಾರು ಸುದ್ದಿಗಳನ್ನು ಪ್ರಸಾರ ಮಾಡಿದ್ದವು. ಅದರಲ್ಲಿಯೂ ರಿಪಬ್ಲಿಕ್ ಸಂಸ್ಥೆಯ ಅರ್ನಾಬ್ ಗೋಸ್ವಾಮಿ ರವರು ನೇರ ನುಡಿಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಮೂಲಕ ಇಡೀ ದೇಶದ ಎಲ್ಲೆಡೆ ಸದ್ದು ಮಾಡಿದ್ದರು.

ಇದೀಗ ಈ ಎಲ್ಲಾ ವಿದ್ಯಮಾನಗಳ ವಿರುದ್ಧ ಬಾಲಿವುಡ್ ಚಿತ್ರರಂಗ ತಿರುಗಿಬಿದ್ದಿ’ದ್ದು, ಸಲ್ಮಾನ್ ಖಾನ್, ಶಾರುಖಾನ್, ಅಮೀರ್ ಖಾನ್, ಕರಣ್ ಜೋಹರ್, ಅಜಯ್ ದೇವಗನ್ ಸೇರಿದಂತೆ ಇನ್ನೂ 38ಕ್ಕೂ ಹೆಚ್ಚು ಸೆಲೆಬ್ರಿಟಿಗಳ ಒಕ್ಕೂಟಗಳು ಮಾಧ್ಯಮ ಸಂಸ್ಥೆಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ. ಹಿಂದಿ ಚಿತ್ರರಂಗದ ವಿರುದ್ಧ ಹಾಗೂ ಅನೇಕ ಸೆಲೆಬ್ರಿಟಿಗಳಿಗೆ ಮಾನನಷ್ಟ ಆಗುವಂತಹ ವಿಷಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಆದ ಕಾರಣದಿಂದ ಈ ಕೂಡಲೇ ಕ್ಷಮೆಯಾಚಿಸಬೇಕು ಹಾಗೂ ನಕಾರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಶಾಶ್ವತವಾಗಿ ತಡೆಹಿಡಿಯಬೇಕು ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಬಹುತೇಕ ಬಾಲಿವುಡ್ ಚಿತ್ರರಂಗ ಆರೋಪ ಮಾಡಿದರೂ ಕೂಡ ಮೀಡಿಯಾ ಸಂಸ್ಥೆಗಳು ಕ್ಯಾರೆ ಎನ್ನದೇ ಮುಂದೇನೆ ಬರಲಿ ಎಲ್ಲದಕ್ಕೂ ಸಿದ್ಧ ಎಂಬಂತೆ ನಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇದೀಗ ಬಾಲಿವುಡ್ ವರ್ಸಸ್ ಮೀಡಿಯಾ ಎಂಬಂತಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.