ಬಾಣಗಳ ಮೇಲೆ ಮಲಗಿಕೊಂಡು ಅನ್ನದ ಪ್ರಭಾವವೇನು ಎಂದುದನ್ನು ವಿವರಿಸಿಸುವ ಮೂಲಕ ಜೀವನ ಪಾಠ ನೀಡಿದ ಭೀಷ್ಮರು ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಅತ್ಯಂತ ಪ್ರಭಾವ ಬೀರುವ ಪಾತ್ರಗಳಲ್ಲಿ ಭೀಷ್ಮ ಪಿತಾಮಹರ ಪಾತ್ರ ಕೂಡ ಒಂದು. ತಮ್ಮ ಜೀವನದ ಉದ್ದಕ್ಕೂ ಮಹಾನ್ ವ್ಯಕ್ತಿಯಾಗಿ ಧರ್ಮ ಪಾಲನೆ ಮಾಡಿ ಕೆಲವೊಂದು ನಿಬಂಧನೆಗಳಿಗೆ ಕಟ್ಟುಬಿದ್ದು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿದಿದ್ದರೂ ಕೂಡ ಏನು ಮಾಡಲಾಗದೆ ಕೊನೆಯದಾಗಿ ಮತ್ತೊಮ್ಮೆ ನಿಬಂಧನೆಗಳಿಗೆ ಕಟ್ಟುಬಿದ್ದು ಕೌರವರ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದ ಭೀಷ್ಮರು ಕೊನೆಗೆ ಶಿಖಂಡಿಯ ಜೊತೆ ಯುದ್ಧ ಮಾಡುವುದಿಲ್ಲ ಎಂದು ಶಪಥ ಮಾಡಿ, ಬಾಣಗಳ ಸುರಿಮಳೆಗೆ ಸೋತು, ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡು ತನ್ನ ಎಲ್ಲ ತಪ್ಪನ್ನು ಒಪ್ಪಿಕೊಂಡು ಜೀವನಕ್ಕೆ ಮಹತ್ವದ ಧರ್ಮೋಪದೇಶವನ್ನು ನೀಡಿದ ಭೀಷ್ಮ ಪಿತಾಮಹರು ಖಂಡಿತ ಒಬ್ಬ ಮಹಾನ್ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ.

ಹೀಗಿರುವಾಗ ಅಧರ್ಮದ ಪರ ಯುದ್ಧದಲ್ಲಿ ಪಾಲ್ಗೊಂಡು ತಮ್ಮ ಜೀವನವನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿ ಬಾಣಗಳ ಹಾಸಿಗೆಯ ಮೇಲೆ ಮಲಗಿ ಭೀಷ್ಮ ಪಿತಾಮಹರು ರವರಿಗೆ ಧರ್ಮೋಪದೇಶ ಮಾಡುತ್ತಿದ್ದರು. ಧರ್ಮದ ಬಗ್ಗೆ ಬಹಳ ಆಳವಾದ ಜ್ಞಾನವನ್ನು ಹೊಂದಿದ್ದು ಭೀಷ್ಮ ಪಿತಾಮಹರು ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುತ್ತಿರುವ ಸಂದರ್ಭದಲ್ಲಿ ಇದನ್ನು ಕಂಡ ದ್ರೌಪದಿ ಭೀಷ್ಮ ಪಿತಾಮಹರೇ, ನೀವು ಧರ್ಮೋಪದೇಶ ಮಾಡುತ್ತಿದ್ದೀರಿ, ನನ್ನ ಬಳಿಯೂ ಕೂಡ ಒಂದು ಪ್ರಶ್ನೆ ಇದೆ ನೀವು ಒಂದು ವೇಳೆ ಅನುಮತಿ ನೀಡಿದರೇ ನಾನು ನಿಮ್ಮ ಬಳಿ ಆ ಪ್ರಶ್ನೆಯನ್ನು ಕೇಳುತ್ತೇನೆ ಎಂದು ಭೀಷ್ಮ ಪಿತಾಮಹರಿಗೆ ಹೇಳುತ್ತಾರೆ.

ಜೀವನವೆಲ್ಲ ಮುಗಿಸಿಕೊಂಡು ತಮ್ಮ ಅಂತ್ಯದ ಸಮಯಕ್ಕಾಗಿ ಕಾಯುತ್ತಿದ್ದ ಭೀಷ್ಮ ಪಿತಾಮಹರು ದ್ರೌಪದಿ ಕೇಳಿದ ತಕ್ಷಣವೇ ಮರುಮಾತನಾಡದೆ ಕೇಳು ಮಗಳೇ ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡುತ್ತೇನೆ ಎನ್ನುತ್ತಾರೆ. ಭೀಷ್ಮ ಪಿತಾಮಹರು ತಮ್ಮ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾರೆ ಎಂದು ತಿಳಿದರೂ ಕೂಡ ದ್ರೌಪದಿಯು ಈ ಪ್ರಶ್ನೆಯನ್ನು ಕೇಳದೆ ಇರಲು ಸಾಧ್ಯವೇ ಇಲ್ಲ ಎಂದು ಧೈರ್ಯಮಾಡಿ ಭೀಷ್ಮ ಪಿತಾಮಹರ ನಾನು ಪ್ರಶ್ನೆ ಕೇಳುವ ಮುನ್ನವೇ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ನನ್ನ ಪ್ರಶ್ನೆ ಬಹಳ ಕಠಿಣವಾಗಿದೆ ನಿಮ್ಮ ಮನಸ್ಸಿಗೆ ಹಿಡಿಸದೆ ಇರಬಹುದು ಎಂದು ಹೇಳಿ ಕೋಪ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿ ನೀವು ತುಂಬಿದ ಸಭೆಯಲ್ಲಿ ನನ್ನ ವಸ್ತ್ರಾಭರಣ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಸಹಾಯಕ್ಕಾಗಿ ಬಿಡುತ್ತಿದ್ದೆ ಜೋರಾಗಿ ಅಳುತ್ತಿದ್ದೆ.

ನೀವು ಕೂಡ ತುಂಬು ಸಭೆಯಲ್ಲಿ ನಡೆಯುತ್ತಿದ್ದ ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗಿದ್ದೀರೀ, ನೀವು ಮಹಾನ್ ಜ್ಞಾನಿಗಳು ಈಗಲೂ ಕೂಡ ನೀವು ಧರ್ಮೋಪದೇಶದ ಮೂಲಕ ನಿಮ್ಮ ಜ್ಞಾನವನ್ನು ಎಲ್ಲರಿಗೂ ತಿಳಿಸುತ್ತಿದ್ದೀರಿ, ಆದರೆ ಅಂದು ಸಭೆಯಲ್ಲಿ ನಿಮ್ಮ ಜ್ಞಾನ ಎಲ್ಲಿ ಹೋಗಿತ್ತು?? ಎಂದು ಕಠಿಣವಾದ ಪ್ರಶ್ನೆಯನ್ನು ಕೇಳಿಯೇ ಬಿಡುತ್ತಾರೆ. ಬಹುಶಹ ಭೀಷ್ಮ ಪಿತಾಮಹರು ಈ ಪ್ರಶ್ನೆಯನ್ನು ನಿರೀಕ್ಷೆ ಮಾಡಿಯೇ ಇರುತ್ತಾರೆ, ಅದೇ ಕಾರಣಕ್ಕಾಗಿ ಭೀಷ್ಮ ಪಿತಾಮಹರು ಕೋಪ ಮಾಡಿಕೊಳ್ಳದೇ ನಿನ್ನ ಮಾತು ಸತ್ಯ ಮಗಳೇ, ನಿನ್ನ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ. ನಾನು ಕೂಡ ತುಂಬು ಸಭೆಯಲ್ಲಿ ಕೈಕಟ್ಟಿ ಕುಳಿತ್ತಿದ್ದೆ, ಯಾಕೆಂದರೆ ನಾನು ಅಂದು ಪಾಪ ಭರಿತ ಅನ್ನ ತಿನ್ನುತ್ತಿದ್ದೆ. ಆ ಪಾಪ ನನ್ನ ಇಡೀ ದೇಹವನ್ನು ತನ್ನ ವ’ಶ ಮಾಡಿಕೊಂಡಿತ್ತು.

ನನ್ನ ದೇಹದ ಮೂಲೆ ಮೂಲೆಯಲ್ಲಿಯೂ ಪಾಪದ ಅನ್ನದ ಋಣ ಮನೆಮಾಡಿತ್ತು. ನಿನಗೆ ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೂ ಕೂಡ ನಾನು ನಾನು ತಿನ್ನುತ್ತಿದ್ದ ಅನ್ನಕ್ಕೆ ಕಟ್ಟುಬಿದ್ದು ಸುಮ್ಮನಾಗಬೇಕಾಯಿತು, ಆದರೆ ಇದೀಗ ನಾನು ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದೇನೆ, ಪಾಪದ ಅನ್ನದ ಋಣ ನನ್ನ ರ’ಕ್ತದಿಂದ ಹರಿದು ಹೋಗಿದೆ, ಅದೇ ಕಾರಣಕ್ಕಾಗಿ ಇಂದು ನಾನು ಸ್ವತಂತ್ರವಾಗಿ ಧರ್ಮೋಪದೇಶ ಮಾಡುತ್ತಿದ್ದೇನೆ ಎಂದು ಉತ್ತರ ನೀಡುತ್ತಾರೆ.

ಇದರಿಂದ ನಮಗೆ ಸಿಗುವ ನೀತಿ ಪಾಠ ಏನೆಂದರೆ ಸ್ನೇಹಿತರೇ ನೀವು ಸೇವಿಸುವ ಅನ್ನ ಅಥವಾ ಆಹಾರದ ಪ್ರಭಾವ ಬಹಳ ಹೆಚ್ಚಾಗಿರುತ್ತದೆ, ನೀವು ಸೇವಿಸುವ ಆಹಾರದಿಂದಲೇ ನಿಮ್ಮ ಜೀವನದ ನಿರ್ಣಯಗಳು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಯಾಕೆಂದರೆ ನಿಮ್ಮ ಮನಸ್ಸಿನ ಮೇಲೆ ಸಂಪೂರ್ಣ ಪ್ರಭಾವವನ್ನು ಬೀರುತ್ತದೆ. ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಭೀಷ್ಮ ಪಿತಾಮಹರ ಮೇಲೆ ಅನ್ನದ ಪ್ರಭಾವ ಬೀರಿದೆಯೆಂದರೆ ಇನ್ನೂ ನೀವು ಯಾವ ಲೆಕ್ಕ. ಅದೇ ಕಾರಣಕ್ಕಾಗಿ ಒಳ್ಳೆಯ ರೀತಿಯಲ್ಲಿ ಗಳಿಸಿದ ಆಹಾರವನ್ನು ಸೇವಿಸುತ್ತಾ ಜೀವನ ಸಾಗಿಸಿದರೆ ಖಂಡಿತ ನಿಮ್ಮ ಮನಸ್ಸು ನೀವಂದುಕೊಂಡಂತೆ ಶಾಂತಿ ಸಂತೋಷದಿಂದ ಕೂಡಿರುತ್ತದೆ ಹಾಗೂ ಯಾವುದೇ ಗೊಂದಲಗಳು ಇರುವುದಿಲ್ಲ. ತಪ್ಪು ಮಾಡಿದರೇ ಕಂಡಿತ ಶ್ರೀಮಂತರಾಗುತ್ತಾರೆ ಇಲ್ಲ ಎನ್ನುವುದಿಲ್ಲ, ಆದರೆ ಎಲ್ಲವೂ ತಾತ್ಕಾಲಿಕ ಎಂಬುದನ್ನು ಯಾರೂ ಮರೆಯಬಾರದು. ಇದುವೇ ನೀತಿ ಕಥೆಯ ಸಾರ.

Post Author: Ravi Yadav