ಒಂದು ಲೋಟ ಮೆಂತ್ಯ ನೀರಿನಿಂದ ದಿನವನ್ನು ಪ್ರಾರಂಭಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಮ್ಮ ದಿನದ ಆರಂಭವೂ ಇಡೀ ದಿನದ ಮೇಲೆ ಪ್ರಭಾವ ಬೀರುತ್ತದೆ. ಈಗಾಗಲೇ ನಾವು ಬಿಸಿ ನೀರಿನಿಂದ ನಿಮ್ಮ ದಿನಚರಿ ಆರಂಭ ಮಾಡಿದರೆ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿಸಿ ಕೊಟ್ಟಿದ್ದೇವೆ, ಇಂದು ಅದೇ ರೀತಿ ಮೆಂತ್ಯ ನೀರಿನಿಂದ ನಿಮ್ಮ ದಿನವನ್ನು ಆರಂಭಿಸಿದರೆ ನಿಮ್ಮ ದೇಹಕ್ಕೆ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿಸಿ ಕೊಡಲಿದ್ದೇವೆ. ನಿಮ್ಮ ದೈನಂದಿಕ ಜೀವನದ ರೀತಿಗೆ ಅನುಗುಣವಾಗುವಂತೆ ನೀವು ವಿವಿಧ ರೀತಿಯಲ್ಲಿ ನಿಮ್ಮ ದಿನಚರಿಯನ್ನು ಆರಂಭಿಸಬಹುದಾಗಿದೆ. ಆದ್ದರಿಂದ ಇಂದು ಮೆಂತ್ಯ ನೀರಿನ ಮೂಲಕ ನಿಮ್ಮ ದಿನವನ್ನು ಆರಂಭಿಸಿದರೇ ಯಾವೆಲ್ಲ ಲಾಭಗಳು ಸಿಗುತ್ತವೆ ಎಂಬುದನ್ನು ತಿಳಿಸಿಕೊಡುತ್ತೇವೆ. ಒಂದು ವೇಳೆ ಈ ಲಾಭಗಳು ನಿಮಗೆ ಸೂಕ್ತ ಎನಿಸಿದರೇ ನೀವು ಮೆಂತ್ಯ ನೀರಿನ ಮೂಲಕ ದಿನಚರಿಯನ್ನು ಆರಂಭಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದಾಗಿದೆ.

ಸ್ನೇಹಿತರೇ ಮೆಂತ್ಯವನ್ನು ಹಲವಾರು ವರ್ಷಗಳಿಂದಲೂ ನಮ್ಮ ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಅಡುಗೆಯ ರುಚಿ ಹೆಚ್ಚಿಸಲು ಮೆಂತ್ಯ ಅಥವಾ ಮೆಂತ್ಯ ಪುಡಿಯನ್ನು ಬಳಸಲಾಗುತ್ತದೆ. ಮೆಂತ್ಯ ಬೀಜಗಳಲ್ಲಿ ಆಂಟಿ – ಆಕ್ಸಿಡೆಂಟ್ ಗಳು ಮತ್ತು ಉರಿಯೂತದ ಗುಣಲಕ್ಷಣವನ್ನು ಹೊಂದಿರುವ ಕಾರಣ ಸಾಮಾನ್ಯ ಮಸಾಲೆ ಪದಾರ್ಥ ಗಳಿಗಿಂತ ಹೆಚ್ಚು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಇರುವುದರಿಂದ ಮೆಂತ್ಯ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಮೆಂತ್ಯ ಬೀಜಗಳನ್ನು ನಾವು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಕೂಡ ಬಳಸಬಹುದಾಗಿದೆ. ನೀವು ಒಂದು ವೇಳೆ ಮೆಂತ್ಯ ಬೀಜಗಳನ್ನು ನಿಮ್ಮ ಪಾಕಪದ್ಧತಿಯಲ್ಲಿ ಬಳಸುವುದಾದರೇ ನೀವು ಇನ್ನೂ ಹೆಚ್ಚಿನ ಲಾಭಗಳನ್ನು ಗಳಿಸಬಹುದು. ಮೊದಲಿಗೆ ನಾವು ಮೆಂತ್ಯ ನೀರನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ತಿಳಿಸಿ ತದನಂತರ ಅದರಿಂದ ಉಂಟಾಗುವ ಲಾಭಗಳನ್ನು ತಿಳಿಸುತ್ತೇವೆ.

ಮೆಂತ್ಯ ನೀರನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಮಾಹಿತಿಯನ್ನು ಹೇಳುವುದಾದರೆ ಸ್ವಲ್ಪ ಮೆಂತ್ಯ ಬೀಜಗಳನ್ನು ತೆಗೆದುಕೊಂಡು ಹುರಿಯಿರಿ, ಕೊಂಚ ಬಣ್ಣ ಬದಲಾಗುವವರೆಗೂ ಹುರಿದು ತದನಂತರ ಬೀಜವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಮುಂಜಾನೆಯ ಸಮಯದಲ್ಲಿ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಮೆಂತ್ಯ ಬೀಜದ ಪುಡಿಯನ್ನು ಸೇರಿಸಿ ನೀವು ಈ ನೀರನ್ನು ಸೇವಿಸಬಹುದಾಗಿದೆ.

ಇನ್ನು ಇದರಿಂದ ಲಭ್ಯವಾಗುವ ಆರೋಗ್ಯದ ಪ್ರಯೋಜನಗಳನ್ನು ನಾವು ಗಮನಿಸುವುದಾದರೇ, ಈ ರೀತಿ ಮಾಡುವುದರಿಂದ ನಿಮ್ಮ ದೇಹ ದಿನವಿಡಿ ತೃಪ್ತಿಯಾದಂತೆ ಅಂದರೆ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ಯಾಕೆಂದರೆ ಮೆಂತ್ಯ ಬೀಜಗಳಲ್ಲಿ ಫೈಬರ್ ಹೆಚ್ಚಾಗಿ ಕಂಡು ಬರುವುದರಿಂದ ಇದು ನಿಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಹೀಗೆ ಮಾಡುವುದರಿಂದ ನೀವು ಹೆಚ್ಚಿನ ಅನಗತ್ಯ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ, ಇದರಿಂದ ನೀವು ಅನಾರೋಗ್ಯಕರ ತಿಂಡಿಗಳನ್ನು ಅಂದರೆ ಜಂಕ್ ಫುಡ್ ಗಳನ್ನು ತಿನ್ನದೆ ಇರಲು ಸಾಧ್ಯವಾಗುತ್ತದೆ. ನೀವು ಕ್ರಮೇಣ ತೂಕವನ್ನು ಕಳೆದುಕೊಳ್ಳುತ್ತೀರಿ.

ಇನ್ನು ಮೆಂತ್ಯ ಬೀಜಗಳಲ್ಲಿನ ಜೀವಸತ್ವಗಳು ನಿಮ್ಮ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಪೌಷ್ಟಿಕ ಅಂಶಗಳನ್ನು ನಿಮ್ಮ ದೇಹಕ್ಕೆ ನೀಡುತ್ತದೆ, ಇದರಿಂದ ಕ್ರಮೇಣ ನಿಮ್ಮ ಕೂದಲು ಬೆಳವಣಿಗೆಯಾಗುತ್ತದೆ. ತಲೆಹೊಟ್ಟು ಸೇರಿದಂತೆ ಕೂದಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ದೇಹದಲ್ಲಿರುವ ಅನಗತ್ಯ ಅಂಶಗಳನ್ನು ತೆಗೆದು ಹಾಕಲು ಮೆಂತ್ಯ ನೀರು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಕರುಳಿನ ಚಯಾಪಚಯ ಕ್ರಿಯೆಗಳು ಬಹಳ ಸುಲಭವಾಗಿ ನಡೆಯುತ್ತವೆ. ಇದರಿಂದ ನಿಮಗೆ ಮಲಬದ್ಧತೆ ಹಾಗೂ ಅಜೀರ್ಣತೆ ಸೇರಿದಂತೆ ಇನ್ನಿತರ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳಿಂದ ದೂರವುಳಿಯಬಹುದು ಆಗಿದೆ.

ಇನ್ನು ಪ್ರಮುಖವಾಗಿ ಮೆಂತ್ಯ ಬೀಜವನ್ನು ನೀವು ಸೇವಿಸುವುದರಿಂದ ಮಧುಮೇಹ ಸಂಪೂರ್ಣವಾಗಿ ಗುಣಮುಖವಾಗಬಹುದು, ಕನಿಷ್ಠ ಎಂದರೂ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. ಹೇಗೆ ಎಂದು ವಿವರಣೆ ನೀಡುವುದಾದರೆ ಮೆಂತ್ಯ ಬೀಜಗಳಲ್ಲಿ ಅಮೈನೋ ಆಸಿಡ್ ಸಂಯುಕ್ತವು ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಳ ಮಾಡುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ, ಇಷ್ಟೇ ಅಲ್ಲದೆ ಮೆಂತ್ಯ ಬಳಕೆಯು ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲ ಲಾಭ ಗಳಿರುವ ಮೆಂತ್ಯ ಬೀಜಗಳನ್ನು ನೀವು ಪಾಕವಿಧಾನದಲ್ಲಿ ಅಥವಾ ಮೇಲೆ ತಿಳಿಸಿದಂತೆ ಮೆಂತ್ಯ ನೀರನ್ನು ಕುಡಿಯುವುದರಿಂದ ಪಡೆದುಕೊಳ್ಳಬಹುದಾಗಿದೆ. ನಿಮ್ಮ ದೇಹದ ಉಷ್ಣತೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ದೇಹಕ್ಕೆ ತಕ್ಕಂತೆ ಮೆಂತ್ಯ ನೀರನ್ನು ನೀವು ಸೇವಿಸಬಹುದಾಗಿದೆ.

Post Author: Ravi Yadav