ಬಡತನ ಯಾಕಿದೆ? ನೀವ್ಯಾಕೆ ಎಲ್ಲರ ಮನೆಯಲ್ಲೂ ನೆಲೆಸುವುದಿಲ್ಲ ಎಂದ ಇಂದ್ರನಿಗೆ ತಾಯಿ ಲಕ್ಷ್ಮಿ ಉತ್ತರ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮ್ಮಲ್ಲಿ ಎಷ್ಟೋ ಜನರಲ್ಲಿ ಹಲವಾರು ಬಾರಿ ಭೂಮಿಯಲ್ಲಿ ಶ್ರೀಮಂತಿಕೆ ಅಥವಾ ಸಂಪತ್ತು ಕ್ರೋಡೀಕರಣದ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿರಬಹುದು. ಹಲವಾರು ಬಾರಿ ಎಷ್ಟೋ ಸಲ ಅಂದುಕೊಂಡಿರುತ್ತೀರಿ, ಜಗತ್ತಿನ ಶ್ರೀಮಂತಿಕೆ ಕೆಲವೇ ಕೆಲವು ಜನರ ಕೈಯಲ್ಲಿ ಇದೆ. ಇನ್ನು ಮಧ್ಯಮ ವರ್ಗದ ಜನರು ಸಾಮಾನ್ಯ ಜೀವನ ನಡೆಸಲು ಪ್ರತಿದಿನ ದುಡಿಯುತ್ತಿದ್ದಾರೆ, ಇನ್ನು ಕೆಲವರು ಮಧ್ಯಮ ವರ್ಗದವರಿಗಿಂತ ಕಡಿಮೆ ಇರುವ ಜನರು ಮೂರು ಹೊತ್ತು ಊಟಕ್ಕೆ ಕೂಡ ಹೆಚ್ಚು ಕಷ್ಟಪಡುತ್ತಿದ್ದಾರೆ ಎಂಬೆಲ್ಲಾ ಪ್ರಶ್ನೆಗಳು ಸಾಮಾನ್ಯ ಎಲ್ಲರಲ್ಲೂ ಮೂಡಿರುತ್ತವೆ. ಹಿಂದೂ ಧರ್ಮದ ಪುರಾಣಗಳ ಪ್ರಕಾರ ಇದಕ್ಕೆಲ್ಲ ಕಾರಣ ಲಕ್ಷ್ಮಿ ದೇವಿಯ ಕೃಪೆ ಎಂದು ನಂಬಲಾಗಿದೆ. ತಾಯಿ ಲಕ್ಷ್ಮಿ ದೇವಿಯನ್ನು ಶ್ರೀಮಂತಿಕೆ ಹಣ ಅಥವಾ ಸಂಪತ್ತಿನ ಪ್ರತೀಕ ಎಂದು ನಂಬಲಾಗಿದೆ. ತಾಯಿ ಲಕ್ಷ್ಮೀ ದೇವಿಯು ಯಾರ ಮನೆಯಲ್ಲಿ ನೆಲೆಸುತ್ತಾರೆಯೋ ಅವರು ಶ್ರೀಮಂತರಾಗುತ್ತಾರೆ ಎಂದು ನಂಬಲಾಗಿದೆ. ಹಾಗಿದ್ದರೆ ಲಕ್ಷ್ಮೀ ದೇವಿಯು ಯಾಕೆ ಎಲ್ಲರ ಮನೆಯಲ್ಲೂ ನಿಲ್ಲಿಸುವುದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೇ ಅದೇ ರೀತಿಯ ಪ್ರಶ್ನೆ ಒಮ್ಮೆ ಇಂದ್ರ ದೇವನಿಗೆ ಕೂಡ ಮೂಡಿತ್ತು.

ಹೌದು ಒಮ್ಮೆ ಇಂದ್ರದೇವನಿಗೆ ಜಗತ್ತಿನಲ್ಲಿ ಬಡತನ ಎಂಬುದು ಯಾಕೆ ಇದೆ? ಕೆಲವು ಜನರು ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಗಳಿಸುತ್ತಿದ್ದಾರೆ? ಇನ್ನು ಕೆಲವು ಜನರಿಗೆ ಹಣವೇ ಇಲ್ಲ, ತಾಯಿ ಲಕ್ಷ್ಮಿ ದೇವಿಯನ್ನು ಪ್ರತಿಯೊಬ್ಬರು ಪೂಜಿಸುತ್ತಾರೆ, ಹಾಗಿದ್ದರೂ ಕೂಡ ಹಲವಾರು ಬಡವರು ಹಲವಾರು ಶ್ರೀಮಂತರು ಎಂಬ ಪ್ರತ್ಯೇಕತೆ ಇಂದಿಗೂ ಜಗತ್ತಿನಲ್ಲಿ ಉಳಿದಿದೆ ಎಂಬ ಪ್ರಶ್ನೆ ಮೂಡುತ್ತದೆ. ಇದು ಕೇವಲ ಇಂದ್ರ ದೇವನಿಗೆ ಅಷ್ಟೇ ಅಲ್ಲ ಶತಮಾನಗಳಿಂದ ಎಲ್ಲರಿಗೂ ಮೂಡುತ್ತಿರುವ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಹೀಗೆ ಇಂದ್ರ ದೇವನ ತಾಯಿ ಲಕ್ಷ್ಮಿ ದೇವಿಯನ್ನು ಪ್ರಶ್ನಿಸಿದಾಗ ಲಕ್ಷ್ಮಿ ಮಾತಿಗೆ ಇಂದ್ರ ದೇವನಿಗೆ ಜಗತ್ತಿನ ರಹಸ್ಯವನ್ನು ಹೇಳಿ ಯಾವ ಕಾರಣಕ್ಕಾಗಿ ಕೆಲವರು ಬಡವರಾಗಿ ಉಳಿದುಕೊಂಡಿದ್ದಾರೆ. ಇನ್ನು ಯಾವ ಕಾರಣಕ್ಕಾಗಿ ಜನರು ಶ್ರೀಮಂತರಾಗುತ್ತಿದ್ದಾರೆ ಎಂದು ಉತ್ತರ ನೀಡಿದ್ದಾರೆ.

ಇಂದ್ರದೇವನ ಎಲ್ಲಾ ಪ್ರಶ್ನೆಗಳನ್ನು ಕೇಳಿಸಿಕೊಂಡ ತಾಯಿ ಲಕ್ಷ್ಮೀ ದೇವಿಯು, ಓ ಇಂದ್ರದೇವ ಯಾರು ಬಡವರಾಗಬೇಕು ಹಾಗೂ ಯಾರು ಶ್ರೀಮಂತರಾಗಬೇಕು ಎಂಬುದು ಹಲವಾರು ವಿಷಯಗಳ ಮೇಲೆ ಅವಲಂಬಿತವಾಗಿದೆ. ನಾನು ಯಾರ ಮನೆಗೆ ಹೋಗಬೇಕು ಎಂಬುದನ್ನು ನಾನು ಕೆಲವು ವಿಷಯಗಳ ಆಧಾರದ ಮೇಲೆ ನಾನೇ ನಿರ್ಧಾರ ಮಾಡುತ್ತೇನೆ, ಆ ವಿಷಯಗಳು ಪ್ರತಿಯೊಬ್ಬ ಮನುಷ್ಯರ ಹಾಗೂ ಕುಟುಂಬದ ಮೇಲೆ ಅವಲಂಬಿತವಾಗಿದೆ. ಮೊದಲನೇದಾಗಿ ನನ್ನ ಪೂಜೆಯನ್ನು ಮಾಡುವವರು ಭಕ್ತಿಯಿಂದ ಪೂಜೆ ಮಾಡಬೇಕು ಇಲ್ಲವಾದಲ್ಲಿ ಯಾವುದೇ ಪ್ರಯೋಜನ ಇರುವುದಿಲ್ಲ.

ಇನ್ನು ಶಾಂತಿ ಇರದ ಮನೆಯಲ್ಲಿ ನಾನು ನೆಲೆಸಲು ಸಾಧ್ಯವೇ ಇಲ್ಲ, ಅಷ್ಟೇ ಅಲ್ಲ ಯಾರ ಮನೆಯಲ್ಲಿ ಆಹಾರವನ್ನು ಅವಮಾನಿಸುತ್ತಾರೋ ಅವರ ಮನೆಯಲ್ಲಿ ನಾನು ಎಂದಿಗೂ ನೆಲೆಸುವುದಿಲ್ಲ. ಆದ್ದರಿಂದ ಯಾರೂ ಶ್ರೀಮಂತರಾಗಬೇಕು, ಅವರು ಒಳ್ಳೆಯ ಕಾರ್ಯಗಳನ್ನು ಮಾಡಲೇಬೇಕು, ಮನೆಯಲ್ಲಿ ಶಾಂತಿ ನೆಲೆಸಬೇಕು, ಆಹಾರಕ್ಕೆ ಗೌರವ ನೀಡಬೇಕು ಎಂದು ಉತ್ತರ ನೀಡುತ್ತಾರೆ. ಯಾರ ಮನೆಯಲ್ಲಿ ಯಾವುದೇ ವಿವಾದ, ಜಗ’ಳಗಳು ಇಲ್ಲವೋ ಅಲ್ಲಿ ನಾನು ಸಂತೋಷದಿಂದ ನೆಲೆಸುತ್ತೇನೆ. ಇನ್ನು ಮನೆಯೂ ಸ್ವಚ್ಛವಾಗಿರಬೇಕು, ಸ್ವಚ್ಛವಿರದ ಮನೆಯಲ್ಲಿ ನಾನು ನೆಲೆಸಲು ಹೇಗೆ ಸಾಧ್ಯ ಎಂದು ಉತ್ತರ ನೀಡುತ್ತಾರೆ. ಇನ್ನು ಮನುಷ್ಯನ ಕಾರ್ಯಗಳು ಕೂಡ ನನ್ನ ವಾಸಸ್ಥಾನದ ಮೇಲೆ ಪರಿಣಾಮ ಬೀರುತ್ತವೆ ಎಂದು ಉತ್ತರ ನೀಡುತ್ತಾರೆ.