ಮಹಾಭಾರತ ಕಥಾಮೃತ: ಅಭಿಮನ್ಯುವಿನ ಅಂತ್ಯವನ್ನು ಕೃಷ್ಣ ಯಾಕೆ ತಡೆಯಲಿಲ್ಲ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಯುಗ-ಯುಗಗಳವರೆಗೂ ಚಿರಸ್ಥಾಯಿಯಾಗಿರುವ ವೀರಯೋಧ ಅಭಿಮನ್ಯು, ಇದಕ್ಕೆಲ್ಲ ಕಾರಣ ಅಭಿಮನ್ಯುವಿನ ಶೌರ್ಯ ಪರಾಕ್ರಮ, ಮಹಾನ್ ಯೋಧ. ಕರ್ಣ ಕೂಡ ಅಭಿಮನ್ಯುವಿನ ಗಳಿಗೆಯಲ್ಲಿ ಇದೇ ಮಾತುಗಳ ಮೂಲಕ ಅಭಿಮನ್ಯುವನ್ನು ವರ್ಣಿಸುತ್ತಾನೆ. ಆದರೆ ಇಷ್ಟೆಲ್ಲಾ ಪರಾಕ್ರ’ಮಿಯಾಗಿದ್ದರೂ ಕೂಡ, ಅಷ್ಟೇ ಯಾಕೆ ಇವರ ಸೋದರ ಮಾವ ಮತ್ಯಾರು ಅಲ್ಲ, ಭಗವಾನ್ ಶ್ರೀ ಕೃಷ್ಣ, ಇಷ್ಟೆಲ್ಲಾ ಕಾರಣಗಳಿದ್ದರೂ ಕೂಡ ಅಭಿಮನ್ಯುವನ್ನು ಕುರುಕ್ಷೇತ್ರದಲ್ಲಿ ಇಹಲೋಕ ತ್ಯಜಿಸುತ್ತಾನೆ. ಇದನ್ನು ನೋಡಿದ ಪ್ರತಿಯೊಬ್ಬರಿಗೂ ಮೂಡುವ ಪ್ರಶ್ನೆ ಏನೆಂದರೆ, ಕೃಷ್ಣನು ಮನಸ್ಸು ಮಾಡಿದ್ದರೇ ಅಭಿಮನ್ಯುವನ್ನು ಉಳಿಸಲು ಕಷ್ಟವೇನು ಇರಲಿಲ್ಲ, ಆತನಿಗೆ ತಿಳಿಯದೇ ಏನಾದರೂ ನಡೆಯಲು ಸಾಧ್ಯವೇ? ಆದರೂ ಕೂಡ ಯಾಕೆ, ಶ್ರೀಕೃಷ್ಣ ತನ್ನ ಸೋದರ ಅಳಿಯನ ಅಂತ್ಯವನ್ನು ತಡೆಯಲಿಲ್ಲ, ಅತಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಜೀವನವನ್ನು ಅಂತ್ಯಗೊಳಿಸದ್ದು ನಿಜಕ್ಕೂ ಮೋಸವೇ ಸರಿ ಎನ್ನುತ್ತಾರೆ. ಆದರೆ ಭಗವಾನ್ ಶ್ರೀ ಕೃಷ್ಣ ಕಾರಣ ಇಲ್ಲದೇ ಏನು ಮಾಡುವುದಿಲ್ಲ. ಹಾಗಿದ್ದರೇ ಆ ಕಾರಣವಾದರೂ ಏನು? ಯಾವ ಕಾರಣಕ್ಕೆ ಅಭಿಮನ್ಯುವಿನ ಅಂತ್ಯವಾಯಿತು? ಬನ್ನಿ ಇಂದು ತಿಳಿದುಕೊಳ್ಳೋಣ.

ಪಾಂಡವರ ಮಹಾರಥಿ ಅರ್ಜುನ ಯುದ್ಧಭೂಮಿಯಲ್ಲಿ ಇರಲಿಲ್ಲ, ತನ್ನ ಅಪ್ಪ ಯುದ್ಧಭೂಮಿಯಲ್ಲಿ ಇಲ್ಲದ ಪರಿಸ್ಥಿಯನ್ನು ಅರಿತ ಅಭಿಮನ್ಯು ತಾನೇ ಚಕ್ರವ್ಯೂಹ ಭೇದಿಸಲು ನಿರ್ಧಾರ ಮಾಡುತ್ತಾನೆ. ಇತರ ಪಾಂಡವರು ನೀನು ಈ ಹಾದಿಯಲ್ಲಿ ವಿಫಲವಾದರೇ ನಿನ್ನ ಅಂತ್ಯವನ್ನು ನೋಡಲಾರೆವು ಎಂದು ಅವನಿಗೆ ಬುದ್ಧಿವಾದ ಹೇಳಿದರು, ಆದರೆ ಪರಿಸ್ಥಿಯ ಬಗ್ಗೆ ಚೆನ್ನಾಗಿ ಅರಿತಿದ್ದ ಅಭಿಮನ್ಯು, ಯಾರ ಮಾತನ್ನು ಕೇಳದೇ ಚಕ್ರವ್ಯೂಹದೊಳಗೆ ನುಗ್ಗಿ ಕೌರವರ ಮಹಾರತಿಗಳ ಮೇಲೆ ಯುದ್ಧ ಮಾಡುತ್ತಾನೆ, ಇದೇ ಸಂದರ್ಭದಲ್ಲಿ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾನೆ. ಬಹುಶಃ ಈ ಸನ್ನಿವೇಶ ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಆದರೆ ಅಂತಹ ಮಹಾನ್ ವೀರ ಅಸುನೀಗುತ್ತಿದ್ದರೂ ಕೂಡ ಕೃಷ್ಣ ಬಂದು ಯಾಕೆ ತಡೆಯಲಿಲ್ಲ ಗೊತ್ತಾ?

ಯಾಕೆಂದರೆ ಅಭಿಮನ್ಯು ಇಹಲೋಕ ತ್ಯಜಿಸುವುದರ ಹಿಂದೆ ಒಂದು ಪೌರಾಣಿಕ ಹಿನ್ನೆಲೆ ಇದೆ. ಹೌದು, ಸ್ನೇಹಿತರೇ, ಯಾವ ರೀತಿ ವಿಷ್ಣು ದೇವನು ಶ್ರೀ ಕೃಷ್ಣನಾಗಿ ಅವತಾರ ತಾಳಿದ್ದನೋ, ಅದೇ ರೀತಿ ಹಲವಾರು ದೇವ-ದೇವತೆಗಳು ಮಹಾಭಾರತಕ್ಕಾಗಿ ಧರೆಗಿಳಿದಿರುತ್ತಾರೆ. ಆದಿಶೇಷನು ಬಲರಾಮನ ಅವತಾರದಲ್ಲಿ ಜನ್ಮ ತಾಳಿರುತ್ತಾನೆ, ಅದೇ ರೀತಿ ಅಭಿಮನ್ಯು ಕೂಡ ಒಂದು ಅವತಾರವಷ್ಟೇ. ಹೌದು ಸ್ನೇಹಿತರೇ, ಕೃಷ್ಣ ಕಂಸನ ಕಾರಾಗೃಹದಲ್ಲಿ ಜನಿಸಿದಾಗ ಕೃಷ್ಣನ ಸ್ಥಳದಲ್ಲಿ ಇನ್ನೊಂದು ಮಗು ಇರುತ್ತದೆಯೆಲ್ಲಾ ಆ ಮಗು ದೇವ ಮಾಯೆ ಆಗಿರುತ್ತಾಳೆ. ಆ ಮಾಯೆಯೇ ಕೃಷ್ಣನ ಸಹೋದರಿಯಾಗಿ(ಸುಭದ್ರೆ) ಜನ್ಮ ತಾಳುತ್ತಾರೆ. ಇವರ ಪುತ್ರನಾಗಿ ಜನಿಸುವ ಅಭಿಮನ್ಯು ಸಹ ಸಾಮಾನ್ಯ ಮನುಷ್ಯನಲ್ಲ, ಬದಲಾಗಿ ಚಂದ್ರ ದೇವನ ಪುತ್ರ ಆಗಿರುತ್ತಾನೆ. ಮಹಾಭಾರತದಲ್ಲಿ ಧರ್ಮ ಸಂಸ್ಥಾಪನೆಗೆ ಎಲ್ಲಾ ದೇವತೆಗಳು ಅವತಾರ ತಾಳುತ್ತೇವೆ ಎಂದು ಒಕ್ಕೊರಳಿನಿಂದ ನಿರ್ಣಯಿಸಿದ ಸಂದರ್ಭದಲ್ಲಿ ಚಂದ್ರ ದೇವ ಒಂದು ಶರತ್ತನ್ನು ಹಾಕುತ್ತಾನೆ, ನಾನು ನನ್ನ ಮಗನನ್ನು ಕಳುಹಿಸುತ್ತೇನೆ. ಆದರೆ ಸುದೀರ್ಘವಾಗಿ ನನ್ನ ಮಗನನ್ನು ಬಿಟ್ಟಿರಲು ಆಗುವುದಿಲ್ಲ, ಸಾಧ್ಯವಾದಷ್ಟು ಬೇಗ ದೇವಲೋಕಕ್ಕೆ ಕಳುಹಿಸಿಕೊಡಬೇಕು ಎಂದು ಬೇಡಿಕೊಳ್ಳುತ್ತಾನೆ. ಆದ್ದರಿಂದ ವಿಷ್ಣು ಚಂದ್ರ ದೇವನಿಗೆ ಕೊಟ್ಟ ಮಾತಿನಂತೆ ಕುರುಕ್ಷೇತ್ರದ ಸಂದರ್ಭದಲ್ಲಿ ಚಕ್ರವ್ಯೂಹ ಭೇದಿಸಲು ತೆರಳಿದ ಅಭಿಮನ್ಯುವನ್ನು ತಡೆಯಲು ಹೋಗಲಿಲ್ಲ ಎಂದು ಪುರಾಣಗಳು ಹೇಳುತ್ತವೆ.

Post Author: Ravi Yadav