ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ! ಸುಲಭ ಪರಿಹಾರಗಳೇನು ಗೊತ್ತಾ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ! ಸುಲಭ ಪರಿಹಾರಗಳೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಮ್ಮ ದೈನಂದಿನ ವ್ಯವಹಾರಗಳ ಮೇಲೆ ಹಾಗೂ ದೈನಂದಿನ ಜೀವನದ ಪ್ರತಿಯೊಂದು ಅಂಶದಲ್ಲಿಯೂ ಜ್ಯೋತಿಷ್ಯ ಶಾಸ್ತ್ರ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಅದೇ ರೀತಿ ನಮ್ಮ ಕೈಯಲ್ಲಿ ಹಣ ಗಳಿಸುವುದರಿಂದ ಹಿಡಿದು ಹಣ ಕೂಡಿಡುವ ವರೆಗೂ ಜ್ಯೋತಿಷ್ಯ ಶಾಸ್ತ್ರ ಪರಿಣಾಮ ಬೀರುತ್ತದೆ. ಇಂದು ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯ ಜನರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತದೆ, ಆದರೆ ಅವರು ಈ ಸುಲಭ ವಿಧಾನಗಳಿಂದ ಹಣವನ್ನು ತಮ್ಮಲ್ಲಿಗೆ ತಡೆಹಿಡಿಯಬಹುದಾಗಿದೆ. ಬನ್ನಿ ಆಗಿದ್ದರೇ ಯಾವ ರಾಶಿಯವರು ಯಾವ ಯಾವ ಸಣ್ಣ ಸಣ್ಣ ಸುಲಭ ಕ್ರಮಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿ: ಸ್ನೇಹಿತರೇ ಸಿಂಹ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೀವನದಲ್ಲಿ ಹಲವಾರು ಸಂತಸ ಮನೆ ಮಾಡಿದ ಕ್ಷಣಗಳು ಎದುರಾಗುತ್ತವೆ. ಇವರು ಜೀವನದಲ್ಲಿ ಬಹುತೇಕ ಸಮಯವನ್ನು ಸದಾ ಎಂಜಾಯ್ ಮಾಡುತ್ತಾ ಕಾಲ ಕಳೆಯುತ್ತಾರೆ. ಆದರೆ ಜೀವನ ಎಷ್ಟು ಸಂತೋಷವಾಗಿದ್ದರೂ ಕೂಡ ಅವರು ಹಣ ಕೂಡಿಟ್ಟು ಆಸ್ತಿಪಾಸ್ತಿಗಳನ್ನು ಮಾಡುವಲ್ಲಿ ವಿಫಲರಾಗುತ್ತಾರೆ. ಬಹುತೇಕ ಜನರು ಹಣ ಗಳಿಸಿದರೂ ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಆದ್ದರಿಂದ ಅವರ ಅನೇಕ ಕನಸುಗಳು ಕನಸಾಗಿಯೇ ಉಳಿದು ಬಿಡುತ್ತವೆ. ಈ ರಾಶಿಯವರು ಒಂದು ವೇಳೆ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರೇ ಈ ಮಂತ್ರವನ್ನು 108 ಬಾರಿ ಸಾಧ್ಯವಾದಷ್ಟು ದಿನ ಜಪಿಸಿ. “ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ”.

ವೃಷಭ ರಾಶಿ: ಸ್ನೇಹಿತರೇ ವೃಷಭ ರಾಶಿಯ ಜನರಿಗೆ ಬಹುತೇಕ ಬಾರಿ ಹಣ ಗಳಿಸಿದರೂ ಕೂಡ ಕೈಯಲ್ಲಿ ನಿಲ್ಲುವುದಿಲ್ಲ, ನೀರಿನ ಹಾಗೆ ಹರಿದು ಹೋಗುತ್ತಾ ಇರುತ್ತದೆ. ನಿಮಗೆ ಸಾಕಷ್ಟು ಕೆಲಸಗಳಲ್ಲಿ ಲಾಭ ದೊರಕಿದರೂ ಕೂಡ ನಿಮ್ಮ ಕೈಯಲ್ಲಿ ಹಣ ಸಂಗ್ರಹವಾಗುವುದಿಲ್ಲ. ನಿಮ್ಮ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸಿದರೂ ಕೂಡ ಬಹುತೇಕ ಬಾರಿ ಹಣ ಬಂದ ಕೆಲವೇ ಕೆಲವು ದಿನಗಳಲ್ಲಿ ಮತ್ತೊಂದು ವ್ಯವಹಾರ ಅಥವಾ ಇನ್ಯಾವುದೇ ಇನ್ನಿತರ ಕೆಲಸಗಳಿಗೆ ಹಣ ಖರ್ಚಾಗಿ ಬಿಡುತ್ತದೆ. ಇದಕ್ಕೆಲ್ಲಾ ಪ್ರಮುಖ ಕಾರಣವೇನೆಂದರೆ ಲಕ್ಷ್ಮೀ ದೇವಿಯನ್ನು ನೀವು ಉಳಿಸಿಕೊಳ್ಳದೇ ಇರುವುದು. ಇದಕ್ಕೆ ಬಹಳ ಸುಲಭವಾದ ಪರಿಹಾರ ಏನೆಂದರೇ “ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ” ಮಂತ್ರವನ್ನು 108 ಬಾರಿ ಜಪಿಸಿ. ಕೇವಲ ಮೂರು ತಿಂಗಳಲ್ಲಿ ನೀವು ಈ ಮಂತ್ರದ ಪಲಿತಾಂಶವನ್ನು ಕಾಣಬಹುದಾಗಿದೆ.

ಕಟಕ ರಾಶಿ: ಸ್ನೇಹಿತರೇ ಕಟಕ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣವನ್ನು ಉಳಿಸಬೇಕು ಎಂಬುದು ಬಹುದೊಡ್ಡ ಕನಸು. ಹಲವಾರು ಬಾರಿ ಕಟಕ ರಾಶಿಯವರು ವಿವಿಧ ಮೂಲಗಳಿಂದ ಹಣ ಗಳಿಸಿದರೂ ಕೂಡ ಬಹುತೇಕ ಜನರು ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದರಲ್ಲಿ ವಿಫಲರಾಗುತ್ತಾರೆ. ನೀವು ಊಹಿಸದ ರೀತಿಯಲ್ಲಿ ಹಣ ಖರ್ಚಾಗುತ್ತದೆ. ಇದಕ್ಕೆಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರಣವನ್ನು ಗಮನಿಸುವುದಾದರೆ ರುದ್ರಕೋ’ಪವೇ ಕಾರಣ. ಅದೇ ಕಾರಣಕ್ಕಾಗಿ ರುದ್ರನನ್ನು ಶಾಂತಿಗೊಳಿಸಿ ಉಳಿಸಿಕೊಳ್ಳಬೇಕಾದರೇ ನೀವು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಿ. ಕೆಲವೇ ದಿನಗಳಲ್ಲಿ ನೀವು ಫಲಿತಾಂಶವನ್ನು ಕಾಣಲು ಆರಂಭಿಸುತ್ತೀರೀ.

ಮಿಥುನ ರಾಶಿ: ಮಿಥುನ ರಾಶಿಯವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣಗಳಿಸಲು ಹೆಚ್ಚು ಶ್ರಮವನ್ನು ಪಡಬೇಕಾಗುತ್ತದೆ. ಕೆಲವೊಂದು ರಾಶಿಗಳಿಗೆ ಹೋಲಿಸಿಕೊಂಡರೇ ಮಿಥುನ ರಾಶಿಯವರು ತಮ್ಮ ಕೆಲಸಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡಿದರೇ ಮಾತ್ರ ಅವರಿಗೆ ಹಣ ಲಭ್ಯವಾಗುತ್ತದೆ. ಆದರೆ ಇಷ್ಟೆಲ್ಲಾ ಮಾಡಿ ಗಳಿಸುವ ಹಣ ನಿಮ್ಮ ಬಳಿ ಹೆಚ್ಚಿನ ಕಾಲ ಉಳಿಯುವುದಿಲ್ಲ. ಉಳಿತಾಯ ಯೋಜನೆಗಳು ನಿಮಗೆ ಅತಿದೊಡ್ಡ ಕನಸಾಗಿರುತ್ತದೆ, ಇದಕ್ಕೆಲ್ಲಾ ಸುಲಭ ಪರಿಹಾರ ಏನೆಂದರೆ ಲಕ್ಷ್ಮಿ ತಾಯಿಯನ್ನು ನಿಮ್ಮ ಬಳಿ ಉಳಿಯುವಂತೆ ಮಾಡುವುದು. ನೀವು ಹೀಗೆ ಮಾಡಬೇಕು ಎಂದರೇ ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಿ, ಆಗ ಲಕ್ಷ್ಮಿಯು ನಿಮ್ಮ ಬಳಿ ಉಳಿಯುತ್ತಾರೆ.

ಧನಸು ರಾಶಿ: ಧನಸು ರಾಶಿಯ ಜನರಿಗೆ ಹಣ ಗಳಿಸುವುದು ಹಾಗೂ ಹಣ ಕೂಡಿಡುವುದು ಮರಿಚಿಕೆಯಾದಂತೆ ಹಲವಾರು ಬಾರಿ ಕಾಣಿಸುತ್ತದೆ. ಹಣ ನೀವು ಬಳಿಕ ಬರುವಂತೆ ಕಾಣುತ್ತದೆ, ಆದರೆ ಸುಲಭವಾಗಿ ಬರೆದೆ ಸತಾಯಿಸುತ್ತದೆ. ದೂರದ ಕನ್ನಡಿಯಲ್ಲಿ ಕಾಣುವ ಗಂಟಿನಂತೆ ನಿಮ್ಮನ್ನು ಸತಾಯಿಸುವ ಸಾಧ್ಯತೆಗಳು ಹೆಚ್ಚು. ನಿಮಗೆ ನ್ಯಾ’ಯವಾಗಿ ಬರ ಬೇಕಾಗಿರುವ ಹಣ ಕೂಡ ಸುಲಭವಾಗಿ ಬರುವುದಿಲ್ಲ. ಇದಕ್ಕೆಲ್ಲ ಕೇವಲ ಮೂರು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳಬೇಕಾದರೇ “ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ |ಮನುಷ್ಯೋ ಮತ್ಪ್ರಸಾದೇನ್‌ ನ ಸನ್ಶಯ ಓಂ” ಮಂತ್ರವನ್ನು 108 ಬಾರಿ ಜಪಿಸಿ.

ಮೀನ ರಾಶಿ: ಮೀನ ರಾಶಿಯ ಜನರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಡಿಮೆ ತಿಳಿದಿರುವ ಕಲೆಯೆಂದರೆ ಹಣ ಉಳಿಸುವುದು. ಹೌದು ಹಣ ಉಳಿಸುವುದು ಕೂಡ ಒಂದು ಕಲೆಯಾಗಿದೆ. ಆ ಕಲೆಯು ನಿಮಗೆ ಸಾಮಾನ್ಯವಾಗಿ ತಿಳಿದಿರುವ ಸಾಧ್ಯತೆಯೇ ಇಲ್ಲ. ನೀವು ಜೀವನದಲ್ಲಿ ಬಹುತೇಕ ಬಾರಿ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಖರ್ಚನ್ನು ಮಾಡಿರುತ್ತೀರಿ, ನೀವು ಮಾಡಬಾರದು ಎಂದುಕೊಂಡರೂ ವಿಧಿ ನಿಮ್ಮ ಕೈಯಲ್ಲಿ ಹಾಗೆ ಮಾಡಿಸುತ್ತದೆ. ಇದರಿಂದ ನೀವು ಕ್ರಮೇಣ ಸಾಲ ಮಾಡಬೇಕಾಗುತ್ತದೆ. ನೀವು ಒಂದು ವೇಳೆ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೇ “ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್‌ ಶ್ರಿಂಗ್‌ ಸಿದ್ಧಾ ಲಕ್ಷ್ಮೈ ನಮಃ” ಎಂಬ ಸಿದ್ಧಲಕ್ಷ್ಮೀ ಮಂತ್ರವನ್ನು ಪ್ರತಿ ದಿನ 108 ಜಪಿಸಿ ಇದರಿಂದ ಜೀವನ ಲಾಭದತ್ತ ಚಲಿಸಬಹುದು.

ಈ ಮೇಲಿನ ಎಲ್ಲಾ ಲಕ್ಷ್ಮಿ ಮಂತ್ರಗಳನ್ನು ಪಠಿಸುವಾಗ ನಿಮ್ಮ ಕೈಯಲ್ಲಿ ಮಣಿಮಾಲೆಯನ್ನು ಅಥವಾ ಕಮಲದ ಬೀಜದಿಂದ ತಯಾರಿಸಿದ ಮಾಲೆಯನ್ನು ಹಿಡಿದು ತಾಯಿ ಲಕ್ಷ್ಮಿ ದೇವಿಯನ್ನು ಆರಾಧಿಸಿ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ. ನಿಮ್ಮ ಮನೆಯ ಸಿರಿ, ಸಂಪತ್ತು, ಐಶ್ವರ್ಯ ಕ್ರಮೇಣ ಹೆಚ್ಚಾಗುತ್ತದೆ.