ವಿಷ್ಣು ಮತ್ತು ಶಿವನ ಮಗ ಯಾರು ಗೊತ್ತಾ?? ಇದರ ಹಿಂದಿರುವ ಅಸಲಿ ಕಾರಣವೇನು ಗೊತ್ತೇ??

ವಿಷ್ಣು ಮತ್ತು ಶಿವನ ಮಗ ಯಾರು ಗೊತ್ತಾ?? ಇದರ ಹಿಂದಿರುವ ಅಸಲಿ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಬಹಳ ಆಸಕ್ತಿದಾಯಕ ಪುರಾಣಗಳಲ್ಲಿ ತಿಳಿಸಲಾಗಿರುವ ಒಂದು ಸನ್ನಿವೇಶವನ್ನು ವಿವರಿಸುತ್ತಾ, ವಿಷ್ಣುವಿನ ಅವತಾರ ಹಾಗೂ ಶಿವನಿಗೆ ಜನಿಸಿದ ಮಗು ಹೇಗೆ ಸುಪ್ರಸಿದ್ದಿ ಪಡೆಯಿತು ಎಂಬ ಕಥೆಯ ಸಂಪೂರ್ಣ ವಿವರವನ್ನು ನೀಡುತ್ತೇವೆ. ಸ್ನೇಹಿತರೇ ಆದಿಶಕ್ತಿ ದುರ್ಗಾಮಾತೆಗೆ ಮಹಿಷಾಸುರನನ್ನು ಅಂತ್ಯಗೊಳಿಸಿದ ಬಳಿಕ ಮಹಿಷಾಸುರನ ಸಹೋದರಿ ಮಹಿಷಿ ಎಂಬ ರಾಕ್ಷಸಿ, ತನ್ನ ಸಹೋದರನನ್ನು ಅಂತ್ಯಗೊಳಿಸಿದ ಕಾರಣಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧಾರ ಮಾಡುತ್ತಾರೆ.

ಆದರೆ ತಾಗಿ ದುರ್ಗಾಮಾತೆಯನ್ನು ಸೋಲಿಸುವುದು ಸುಲಭವಲ್ಲ ಎಂಬುದನ್ನು ಅರಿತಿದ್ದ ಮಹಿಷಿ, ಬ್ರಹ್ಮ ದೇವನಿಗಾಗಿ ತಪಸ್ಸು ಮಾಡಲು ಆರಂಭಿಸುತ್ತಾರೆ. ಹಲವಾರು ವರ್ಷಗಳ ತಪಸ್ಸಿನ ನಂತರ ಬ್ರಹ್ಮ ದೇವನು ಪ್ರತ್ಯಕ್ಷನಾದಾಗ, ಬ್ರಹ್ಮ ದೇವನನ್ನು ಭಕ್ತಿಯಿಂದ ಕಟ್ಟಿಹಾಕಿ ತಾನು ಅಜೇಯಳಾಗಬೇಕು ಎಂಬ ಮನಸ್ಸಿನಿಂದ ವಿಷ್ಣು ಮತ್ತು ಶಿವನ ಒಕ್ಕೂಟದಿಂದ ಮಗು ಜನಿಸಿದರೇ ಆ ಮಗುವಿನಿಂದ ನನ್ನ ಅಂತ್ಯವಾಗಬೇಕು, ಶಿವ ಮತ್ತು ವಿಷ್ಣುವಿಗೆ ಜನಿಸಿದ ಸಂತತಿಯನ್ನು ಹೊರತುಪಡಿಸಿದರೇ ಮತ್ಯಾರು ನನ್ನನ್ನು ಜಯಿಸುವನು ಆಗಬಾರದು, ಅಷ್ಟೇ ಅಲ್ಲದೇ ಹರಿಹರನ ಮಗ ಕೂಡ 12 ವರ್ಷಗಳ ಕಾಲ ಒಬ್ಬ ರಾಜರಿಗೆ ಸೇವೆ ಸಲ್ಲಿಸಬೇಕು ಇಲ್ಲದಿದ್ದರೇ ಅವನು ಕೂಡ ನನ್ನ ಮುಂದೆ ಸೋಲನ್ನು ಕಾಣಬೇಕು ಎಂದು ವರ ಬೇಡುತ್ತಾರೆ. ಬ್ರಹ್ಮ ದೇವನು ಮಹಿಷಿ ಕೇಳಿದ ವರವನ್ನು ನೀಡಿ ಕಣ್ಮರೆಯಾಗುತ್ತಾರೆ. ಹೀಗೆ ಶಿವ ಮತ್ತು ವಿಷ್ಣುವಿನಿಂದ ಸಂತತಿ ಹುಟ್ಟಲು ಸಾಧ್ಯವೇ ಇಲ್ಲ, ನಾನು ಇನ್ನೂ ಅಜೇಯಳಾಗಿ ಇರುತ್ತೇನೆ ಎಂದು ಮಹಿಷಿ ಅಂದುಕೊಳ್ಳುತ್ತಾರೆ.

ಸಮಯ ಕಳೆದಂತೆ ವಿಷ್ಣು ದೇವನು ಮೋಹಿನಿ ಅವತಾರದಲ್ಲಿ ಅವತರಿಸುತ್ತಾರೆ. ಹೀಗೆ ಮೋಹಿನಿ ಅವತಾರ ತಾಳಿದ ವಿಷ್ಣುವನ್ನು ನೋಡಿ ಶಿವನು ಆಕರ್ಷಿತರಾಗುತ್ತಾರೆ. ಇದು ಹರಿಹರಸುತು ರವರ ಹುಟ್ಟಿಗೆ ಕಾರಣವಾಗುತ್ತದೆ. ಹರಿಹರಸುತು ಎಂದರೇ ವಿಷ್ಣು ಮತ್ತು ಶಿವನ ಮಗ ಎಂದರ್ಥ.ಇದಾದ ಬಳಿಕ ಶಿವನ ಆಜ್ಞೆಯಂತೆ, ಹರಿಹರಸುತು ರವರನ್ನು ಪಂಪಾ ನದಿಯ ತೀರದಲ್ಲಿ ಕುತ್ತಿಗೆಗೆ ಚಿನ್ನದ ಹಾರ ಒಂದನ್ನು ಹಾಕಿ ಇಟ್ಟು ಬರಲಾಗುತ್ತದೆ. ಅದೇ ಸಮಯದಲ್ಲಿ ಶಿವನ ಮಹಾನ್ ಭಕ್ತ ಎನಿಸಿಕೊಂಡಿದ್ದ ರಾಜ ರಾಜಶೇಖರ ರವರು ಕಾಡಿಗೆ ಬಂದಿರುತ್ತಾರೆ, ತನಗೆ ಮಕ್ಕಳಿಲ್ಲದ ಕಾರಣ ಮಗುವನ್ನು ನೋಡಿದ ತಕ್ಷಣವೇ ರಾಜನು ಬಹಳ ಸಂತೋಷಪಟ್ಟು ಇದು ನನಗೆ ಸಾಕ್ಷಾತ್ ಶಿವ ನೀಡಿದ ಪ್ರಸಾದ ಎಂದುಕೊಂಡು ಮಗುವನ್ನು ಹೊತ್ತು ಅರಮನೆಗೆ ಹೋಗುತ್ತಾರೆ. ಮಕ್ಕಳಿಲ್ಲದ ಕಾರಣ ರಾಜನ ಹೆಂಡತಿಯು ಪುಟ್ಟ ಮಗುವನ್ನು ನೋಡಿದ ತಕ್ಷಣ ತನ್ನ ಮಗು ಎಂದು ಸ್ವೀಕರಿಸುತ್ತಾರೆ, ಈ ಮಗುವಿನ ಕಂಠದಲ್ಲಿ ಚಿನ್ನದ ಹಾರವಿದ್ದ ಕಾರಣ ಮಣಿಕಂಠ ಎಂದು ಕರೆಯಲಾಗುತ್ತದೆ. ಹೌದು, ನಾವು ಹೇಳುತ್ತಿರುವ ಕಥೆ ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಹಾಗೂ ವಿಶ್ವದ ಮೂಲೆ ಮೂಲೆಗಳಿಂದ ಭಕ್ತರನ್ನು ತನ್ನಲ್ಲಿ ಕರೆಸಿಕೊಳ್ಳುವ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಗ್ಗೆ.

ಹೀಗೆ ಮಣಿಕಂಠನು ಅರಮನೆ ಸೇರುತ್ತಾರೆ, ಆದರೇನು ರಾಜನಿಗೆ ಮಕ್ಕಳಿಲ್ಲದೇ ಅಧಿಕಾರದ ಆಸೆಯಲ್ಲಿ ತೊಡಗಿಕೊಂಡಿದ್ದ ಇತರ ವಂಶಸ್ಥರು ಮಣಿಕಂಠನನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ, ಆದರೆ ರಾಜನ ಮಾತಿಗೆ ಎದುರು ಹೇಳಲಾರದೇ ಒಪ್ಪಿಕೊಂಡಂತೆ ನಾಟಕವಾಡುತ್ತಾರೆ. ಮಣಿಕಂಠನನ್ನು ಅಂತ್ಯಗೊಳಿಸಲು ರಾಜ್ಯದ ಹಲವಾರು ಜನ ಪ್ರಯತ್ನ ಪಡುತ್ತಾರೆ. ಆದರೆ ಎಲ್ಲಾ ಯೋಜನೆಗಳು ವಿಫಲವಾಗುತ್ತವೆ. ಇದಾದ ಕೆಲವೇ ಕೆಲವು ತಿಂಗಳುಗಳ ಬಳಿಕ ರಾಜನಿಗೆ ಮತ್ತೊಂದು ಗಂಡು ಮಗು ಜನಿಸುತ್ತದೆ. ಇಬ್ಬರು ಮಕ್ಕಳಲ್ಲಿ ಯಾವುದೇ ತಾರತಮ್ಯವನ್ನು ಮಾಡದ ರಾಜನು ಇಬ್ಬರನ್ನು ಒಂದೇ ರೀತಿಯಲ್ಲಿ ಬೆಳೆಸುತ್ತಾರೆ. ಇಬ್ಬರನ್ನು ಗುರುಕುಲಕ್ಕೆ ಕಳುಹಿಸಿದ ಬಳಿಕ ಗುರುಕುಲದಲ್ಲಿ ರಾಜಗುರು ಮಣಿಕಂಠನನ್ನು ದೇವರ ಅವತಾರವೆಂದು ಗುರುತಿಸುತ್ತಾರೆ. ಗುರುಕುಲ ಮುಗಿದ ಬಳಿಕ ಮಣಿಕಂಠನನ್ನು ಸಿಂಹಾಸನ ಏರಿಸಲು ರಾಜ ಸಕಲ ಸಿದ್ಧತೆ ನಡೆಸುತ್ತಿರುವಾಗ, ರಾಣಿಯ ತಲೆಯಲ್ಲಿ ಇಲ್ಲಸಲ್ಲದನ್ನು ತುಂಬಿ ರಾಜನ ನಂತರ ಸಿಂಹಾಸನ ಏರುವ ಅಧಿಕಾರ ಇರುವುದು ಮಣಿಕಂಠನಿಗೆ ಅಲ್ಲ ಬದಲಾಗಿ ನಿಮಗೆ ಜನಿಸಿದ ರಾಜಕುಮಾರನಿಗೆ ಮಾತ್ರ ಎಂದು ನಂಬಿಸಿ ಬಿಡುತ್ತಾರೆ. ಆದರೆ ರಾಜನ ಮಾತಿಗೆ ಎದುರು ಹೇಳಲು ಸಾಧ್ಯವಾಗದೇ, ರಾಣಿಯು ಹೊಸದೊಂದು ಯೋಚನೆ ಮಾಡಿ ಮಣಿಕಂಠನನ್ನು ಕಾಡಿಗೆ ಕಳುಹಿಸುವ ಮೂಲಕ ತನ್ನ ಮಗನಿಗೆ ಪಟ್ಟಾಭಿಷೇಕ ಮಾಡುವ ನಾಟಕವಾಡಲು ನಿರ್ಧಾರ ಮಾಡುತ್ತಾರೆ.

ರಾಣಿಯು ಹುಲಿಯ ಹಾಲಿನಿಂದ ಮಾತ್ರ ಗುಣಪಡಿಸಬಹುದಾದ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ ನಟಿಸಲು ಆರಂಭಿಸುತ್ತಾರೆ, ತಾಯಿಯ ಅನಾರೋಗ್ಯವನ್ನು ನೋಡಿದ ಮಣಿಕಂಠ ನಾನು ಕಾಡಿಗೆ ಹೋಗಿ ಹುಲಿಯನ್ನು ತರುವುದಾಗಿ ಒಪ್ಪಿಕೊಳ್ಳುತ್ತಾರೆ. ಇದನ್ನೆಲ್ಲಾ ಗಮನಿಸುತ್ತಿದ್ದ ದೇವಾನು ದೇವತೆಗಳು ನಾರದರ ಸಹಾಯದಿಂದ ಮಣಿಕಂಠ ಹಾಗೂ ಮಹಿಷಿ ಯನ್ನು ಯುದ್ಧ ಮಾಡುವಂತೆ ಮಾಡಲು ಯೋಜನೆಯೊಂದನ್ನು ರೂಪಿಸಿ, ನಾರದರು ಮಹಿಷಿಯ ಬಳಿ ತೆರಳಿ ನಿನ್ನನು ಅಂತ್ಯಗೊಳಿಸಲು ಮಣಿಕಂಠ ಎಂಬ ರಾಜಕುಮಾರ ಬರುತ್ತಿದ್ದಾನೆ ಎಂದು ಹೇಳಿ ಪ್ರೇರೇಪಿಸಿ ಯುದ್ಧಕ್ಕೆ ಕಳುಹಿಸುತ್ತಾರೆ. ಕಾಡಿನಲ್ಲಿ ಹುಲಿಯ ಹಾಲು ತರಲು ತೆರಳಿದ್ದ ಮಣಿಕಂಠನ ಮಹಿಷಿಯ ಜೊತೆ ಯುದ್ಧ ಮಾಡುವ ಪರಿಸ್ಥಿತಿ ಬರುತ್ತದೆ. ಇವರಿಬ್ಬರ ನಡುವಿನ ಯುದ್ಧವನ್ನು ನೋಡಲು ಎಲ್ಲಾ ದೇವತೆಗಳು ಅಗೋಚರವಾಗಿ ಬರುತ್ತಾರೆ.

ಈ ಸಮಯದಲ್ಲಿ ಯುದ್ಧ ಮಾಡಲು ಮಹಿಷಿ ರಾಕ್ಷಸಿಯು ಎಮ್ಮೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ, ಮಣಿಕಂಠನ ಹಾಗೂ ಮಹಿಷಿಯ ನಡುವೆ ಯುದ್ಧ ಆರಂಭವಾಗುತ್ತದೆ. ಯುದ್ಧದಲ್ಲಿ ಅಂದುಕೊಂಡಂತೆ ಮಣಿಕಂಠನ ಜಯಿಸಿ ಮಹಿಷಿಯನ್ನು ಅಂತ್ಯಗೊಳಿಸುತ್ತಾರೆ. ಕೂಡಲೇ ದೇವತೆಗಳು ಪ್ರತ್ಯಕ್ಷರಾಗುತ್ತಾರೆ. ದೇವತೆಗಳನ್ನು ಕಂಡ ಮಣಿಕಂಠನ ನಾನು ಹುಲಿ ಹಾಲನ್ನು ತರಲು ಕಾಡಿಗೆ ಬಂದಿದ್ದೇನೆ ಎಂದು ತಿಳಿಸಿದಾಗ ಇಂದ್ರದೇವನು ಹುಲಿಯಾಗಿ ಪರಿವರ್ತನೆಯಾಗುತ್ತೇನೆ ಎಂದು ಹೇಳಿ ಹುಲಿಯಾಗಿ ಪರವರ್ತನೆ ಆಗುತ್ತಾರೆ. ತದನಂತರ ಮಣಿಕಂಠನ ಹುಲಿಯ ಮೇಲೆ ಸವಾರಿ ಮಾಡಿಕೊಂಡು ತನ್ನ ರಾಜ್ಯಕ್ಕೆ ಹಿಂತಿರುಗುತ್ತಾರೆ.

ಮಣಿಕಂಠನ ಹುಲಿಯ ಮೇಲೆ ಸವಾರಿ ಮಾಡುತ್ತಿದ್ದನ್ನು ಕಂಡ ರಾಜ್ಯದ ಜನತೆ ಹಾಗೂ ರಾಜ ಬಹಳ ಆಶ್ಚರ್ಯ ಚಕಿತರಾಗಿ ಹಾಗೂ ಹೆಮ್ಮೆಯಿಂದ ಮಣಿಕಂಠನನ್ನು ರಾಜನಾಗಿ ಸಿಂಹಾಸನಕ್ಕೆ ಏರಿಸಲು ಬಯಸುತ್ತಾನೆ. ಆದರೆ ತನ್ನ ಜನ್ಮ ಕಾರಣವನ್ನು ಅರಿತಿದ್ದ ನನಗೆ ಯಾವುದೇ ರಾಜ್ಯದ ಅಗತ್ಯವಿಲ್ಲ ಎಂದು ಹೇಳಿ, ನನಗಾಗಿ ಒಂದು ದೇವಾಲಯವನ್ನು ನಿರ್ಮಿಸಿ ಎಂದು ಹೇಳಿ ರಾಜನಿಗೆ ಆದೇಶ ನೀಡುತ್ತಾರೆ. ರಾಜನು ಒಪ್ಪಿಕೊಂಡ ಬಳಿಕ, ನಾನು ಇದೀಗ ಬಾಣ ಬಿಡುತ್ತೇನೆ ಆ ಬಾಣ ಎಲ್ಲಿ ಹೋಗಿ ಬೀಳುತ್ತದೆಯೋ ಅಲ್ಲಿ ನನಗಾಗಿ ಒಂದು ದೇವಾಲಯವನ್ನು ನಿರ್ಮಿಸಿ ಎಂದು ಮಣಿಕಂಠನ ಹೇಳುತ್ತಾರೆ, ಆ ದೇವಾಲಯವೇ ಇಂದಿನ ಶಬರಿಮಲೆ. ಇನ್ನು ಅಯ್ಯಪ್ಪ ಎಂಬ ಹೆಸರು ಹೇಗೆ ಬಂದಿತ್ತು, ಎಂಬುದರ ಕುರಿತು ಮಾಹಿತಿ ನೀಡುವುದಾದರೇ, ಮಣಿಕಂಠನು ಸಾತ್ವಿಕ ಗುಣಗಳನ್ನು ಹೊಂದಿದ್ದ ಕಾರಣ ಕೆಲವರು ಅವರನ್ನು ಅಯ್ಯಾ ಎಂದು ಕರೆಯುತ್ತಿದ್ದರು, ಇನ್ನು ಕೆಲವರು ಅಪ್ಪಾ ಎಂದು ಕರೆಯುತ್ತಿದ್ದರು. ಒಟ್ಟಾಗಿ ಎರಡನ್ನು ಸೇರಿಸಿ ಜನರು ಅಯ್ಯಪ್ಪ ಎಂದು ಕರೆಯಲು ಆರಂಭಿಸುತ್ತಾರೆ. ಹೀಗೆ ವಿಷ್ಣು ಹಾಗೂ ಶಿವನ ಒಕ್ಕೂಟದಿಂದ ಜನಿಸಿದ ಅಯ್ಯಪ್ಪ ಸ್ವಾಮಿಯ ಮಹಿಷಿಯನ್ನು ಅಂತ್ಯಗೊಳಿಸುತ್ತಾರೆ.