ಚೀನಾ ದೇಶದ ಸಹಾಯ ಪಡೆಯಲು ಮುಂದಾದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ! ಬಹಿರಂಗ ಸವಾಲ್ ಹಾಕಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಯಾವ ರೀತಿ ಇದೆ ಎಂದರೇ ಕೇವಲ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಪಾಕಿಸ್ತಾನ ಹಾಗೂ ಚೀನಾ ದೇಶದ ಪರವಾಗಿ ಕೆಲವೊಂದು ರಾಜಕೀಯ ನಾಯಕರು ಧ್ವನಿ ಎತ್ತುತ್ತಿದ್ದಾರೆ. ಅಧಿಕಾರದಲ್ಲಿರುವ ಪಕ್ಷದ ಮೇಲೆ ವಿಪಕ್ಷಗಳ ಟೀಕೆಗಳು ಸರ್ವೇಸಾಮಾನ್ಯ ಎಂಬುದನ್ನು ನಾವು ಕೂಡ ಒಪ್ಪಿಕೊಳ್ಳುತ್ತೇವೆ. ಅಧಿಕಾರದಲ್ಲಿ ಯಾರೇ ಇರಲಿ ವಿಪಕ್ಷದಲ್ಲಿ ಕುಳಿತು ಟೀಕೆಗಳ ಬಾಣಗಳನ್ನು ಸುರಿಸುವುದು ಮೊದಲಿನಿಂದಲೂ ರಾಜಕೀಯದಲ್ಲಿ ನಡೆದುಕೊಂಡು ಬಂದಿದೆ. ಆದರೆ ತಮ್ಮ ಮತ ಬ್ಯಾಂಕುಗಳನ್ನು ಭದ್ರಮಾಡಿಕೊಳ್ಳಲು ದೇಶದ ಕುರಿತು ಆಲೋಚನೆ ಮಾಡದೆ ಇತರ ದೇಶಗಳ ಜೊತೆ ಕೈಜೋಡಿಸಿ ಭಾರತದಲ್ಲಿನ ವ್ಯವಸ್ಥೆಯನ್ನು ಬದಲಿಸುತ್ತೇನೆ ಎನ್ನುವ ಮಟ್ಟಕ್ಕೆ ರಾಜಕೀಯ ನಾಯಕರು ಇಳಿದಿರುವುದು ವಿಪರ್ಯಾಸ.

ಇಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿರುವ ಮಾತನ್ನು ಕೇಳಿದರೇ ಖಂಡಿತ ಪ್ರತಿಯೊಬ್ಬ ಭಾರತೀಯರು ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹೌದು ಸ್ನೇಹಿತರೇ ಮೊದಲಿನಿಂದಲೂ ಜಮ್ಮು ಹಾಗೂ ಕಾಶ್ಮೀರ ದಲ್ಲಿ ತೆಗೆದು ಹಾಕಲಾಗಿರುವ ವಿಶೇಷ ಸ್ಥಾನಮಾನ ಪದ್ಧತಿಯ ಪರವಾಗಿ ಧ್ವನಿ ಎತ್ತಿರುವ ಫಾರೂಕ್ ಅಬ್ದುಲ್ಲಾ ರವರು, ನಾನು ಅಧಿಕಾರಕ್ಕೆ ಬಂದು ಅಥವಾ ಇನ್ನಿತರ ಪಕ್ಷಗಳಿಗೆ ಬೆಂಬಲ ನೀಡಿ ವಿಶೇಷ ಸ್ಥಾನಮಾನ ಪದ್ಧತಿಯನ್ನು ಮತ್ತೆ ತರುತ್ತೇನೆ ಎಂದಿದ್ದರೇ ನಾವು ಇದರ ಕುರಿತು ಗಮನ ಕೂಡ ಹರಿಸುತ್ತಿರಲಿಲ್ಲ.

ಆದರೆ ಈತ ಒಂದು ಹೆಜ್ಜೆ ಮುಂದೆ ಹೋಗಿ ಗಡಿಯಲ್ಲಿ ಇಂದು ಭಾರತ ಹಾಗೂ ಚೀನಾ ದೇಶಗಳ ನಡುವೆ ಉಂಟಾಗಿರುವ ಸ್ಥಿತಿಗೆ ಕೇಂದ್ರ ಸರ್ಕಾರದ ವಿಶೇಷ ಸ್ಥಾನಮಾನ ಪದ್ಧತಿ ರದ್ಧತಿಯೇ ಕಾರಣ, ಆದ ಕಾರಣದಿಂದ ನಾನು ಚೀನಾ ದೇಶದ ಬೆಂಬಲ ಪಡೆದುಕೊಂಡು ಜಮ್ಮು ಹಾಗೂ ಕಾಶ್ಮೀರದಲ್ಲಿ ಈಗಾಗಲೇ ತೆಗೆದು ಹಾಕಲಾಗಿರುವ 370 ನೇ ವಿಧಿಯನ್ನು ವಾಪಸು ತರುವ ಆಶಯವನ್ನು ಹೊಂದಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದನ್ನು ನೋಡಿದರೇ ನಮ್ಮ ದೇಶದ ರಾಜಕೀಯ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಸ್ಪಷ್ಟವಾಗುತ್ತದೆ. ವಾಪಸ್ಸು ತರಬೇಕು ಎಂಬುದು ಬೇಡಿಕೆ, ತರುತ್ತೇನೆ ಎಂಬುದು ಹಠ, ಆದರೆ ಚೀನಾ ದೇಶದ ಜೊತೆ ಕೈಜೋಡಿಸಿ ತರುತ್ತೇನೆ ಎಂಬುದು ದುರ-ಹಂಕಾರದ ಪರಮಾವಧಿ. ಕೆಲವೊಂದು ಕಠಿಣ ಶಬ್ದಗಳನ್ನು ಬಳಸಿದ್ದರೇ ಕ್ಷಮೆ ಇರಲಿ ಸ್ನೇಹಿತರೇ ಆದರೆ ಆತ ಮಾಡಿದ್ದು ಮಾತ್ರ ಅಕ್ಷಮ್ಯ ತಪ್ಪು

Post Author: Ravi Yadav