ಬಿಗ್ ನ್ಯೂಸ್: ಬಿಜೆಪಿ ಫುಲ್ ಖುಷ್ ! ಡಿಕೆಶಿಗೆ ಶಾಕ್ ನೀಡಲು ಮುಂದಾದರೆ ಸಿದ್ದು ! ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ನ್ಯೂಸ್: ಬಿಜೆಪಿ ಫುಲ್ ಖುಷ್ ! ಡಿಕೆಶಿಗೆ ಶಾಕ್ ನೀಡಲು ಮುಂದಾದರೆ ಸಿದ್ದು ! ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಇಡೀ ರಾಜ್ಯದ ಚಿತ್ತ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ನಡೆಯುತ್ತಿರುವ ಉಪಚುನಾವಣೆಯತ್ತ ನೆಟ್ಟಿದೆ. ಒಂದೆಡೆ ಬಿಜೆಪಿ ಪಕ್ಷವು ಅಧಿಕಾರದಲ್ಲಿ ಇರುವ ಕಾರಣ ಹೇಗಾದರೂ ಮಾಡಿ ಉಪಚುನಾವಣೆಯ ಕ್ಷೇತ್ರಗಳನ್ನು ಗೆದ್ದುಕೊಂಡು ಪ್ರತಿಷ್ಠೆಯನ್ನು ಉಳಿಸಿ ತನ್ನ ಸಂಖ್ಯಾಬಲವನ್ನು ಹೆಚ್ಚು ಮಾಡಿಕೊಳ್ಳುವತ್ತ ಗಮನ ಹರಿಸುತ್ತಿದ್ದರೇ ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿರುವ ಬಿಜೆಪಿ ಪಕ್ಷವನ್ನು ಸೋಲಿಸಿ ಅಧಿಕಾರಯುತ ಪಕ್ಷಕ್ಕೆ ಮುಜುಗರವನ್ನು ತರಲು ತಮ್ಮದೇ ಆದ ಸಿದ್ಧತೆಗಳೊಂದಿಗೆ ಪ್ರತಿಷ್ಠೆಯ ಕಣ ವನ್ನಾಗಿ ಸ್ವೀಕರಿಸಿವೆ. ಮೂರು ಪಕ್ಷಗಳಿಗೆ ಈ ಎರಡು ಕ್ಷೇತ್ರಗಳು ಭಾರೀ ಪ್ರತಿಷ್ಠೆಯ ಕಣವಾಗಿವೆ.

ಇನ್ನೊಂದೆಡೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಈಗಾಗಲೇ ಡಿಕೆ ಶಿವಕುಮಾರ್ ಅವರು ತಮ್ಮದೇ ಆದ ತಂತ್ರದ ಮೂಲಕ ಕುಸುಮ ಅವರನ್ನು ಕಣಕ್ಕಿಳಿಸಿದ್ದು, ಇತರ ಪಕ್ಷಗಳು ತಯಾರು ಮಾಡಿಕೊಳ್ಳುವ ಮುನ್ನವೇ ಈಗಾಗಲೇ ಕಾಂಗ್ರೆಸ್ ಪಕ್ಷ ಚುನಾವಣೆಗಳಿಗೆ ಭರ್ಜರಿ ಸಿದ್ಧತೆ ನಡೆಸಿದೆ. ಇನ್ನು ಶಿರಾ ವಿಧಾನಸಭಾ ಕ್ಷೇತ್ರದ ಕುರಿತು ಮಾತನಾಡುವುದಾದರೆ ಈಗಾಗಲೇ ಕಾಂಗ್ರೆಸ್ ಪಕ್ಷವು ಟಿಬಿ ಜಯಚಂದ್ರ ರವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಟಿಕೆಟ್ ಘೋಷಣೆ ಯಾಗಿರುವುದು ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೆವಾಲಾ ರವರಿಗೆ ಇಷ್ಟವಾಗಿಲ್ಲ ಎಂಬ ಮಾತುಗಳು ಡಿಕೆ ಶಿವಕುಮಾರ್ ಅವರ ಬಾಯಿಂದಲೇ ಹೊರಬಿದ್ದಿವೆ. ಈ ಮಾತುಗಳನ್ನು ಸಿದ್ದರಾಮಯ್ಯರವರಿಗೆ ಹೇಳುವಾಗ ಮೀಡಿಯಾಗಳಲ್ಲಿ ಸ್ಪಷ್ಟ ಮಾತುಗಳು ಕೇಳಿಬಂದಿವೆ.

ಇದರ ಬೆನ್ನಲ್ಲೇ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ಬಿಜೆಪಿ ಪಕ್ಷಕ್ಕೆ ವರದಾನವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಹೌದು ಸ್ನೇಹಿತರೇ ಮೊದಲಿನಿಂದಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯಗಳ ಕುರಿತು ಎಲ್ಲರಿಗೂ ತಿಳಿದೇ ಇದೆ, ಇಬ್ಬರೂ ಒಟ್ಟಾಗಿ ಪಕ್ಷವನ್ನು ಮುನ್ನಡೆಸುತ್ತೇವೆ ಎನ್ನುತ್ತಿದ್ದರೂ ಕೂಡ ಹೈಕಮಾಂಡ್ ನ ಬಳಿ ಸಿದ್ದರಾಮಯ್ಯರವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಿದಂತೆ ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅದೇ ಕಾರಣಕ್ಕಾಗಿ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಇಷ್ಟವಾಗದೇ ಸರ್ಕಾರ ಉರುಳಿಸಲು ಪರೋಕ್ಷ ಬೆಂಬಲ ನೀಡಿದ್ದರು ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಹೀಗಿರುವಾಗ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ರವರ ನಡುವೆ ನಡೆಯುತ್ತಿರುವ ಶೀತಲ ಭಿನ್ನಾಭಿಪ್ರಾಯಗಳು ಇದೀಗ ಶಿರಾ ಕ್ಷೇತ್ರದಲ್ಲಿಯೂ ಭುಗಿಲೇಳುವ ಲಕ್ಷಣಗಳು ಕಂಡು ಬಂದಿದ್ದು ಇದರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಕುರಿತು ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಮಾತನಾಡಿದ್ದು, ರಾಜಕೀಯ ಪಂಡಿತರು ಕೂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳು ಮೊದಲಿನಿಂದಲೂ ಇವೆ, ಆದಕಾರಣ ಈ ಚುನಾವಣೆಯಲ್ಲಿಯೂ ಕೂಡ ಕಂಡುಬಂದರೇ ಯಾವುದೇ ಆಶ್ಚರ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು? ಈ ರೀತಿಯ ಮಾತುಗಳು ಕೇಳಿ ಬರಲು ಕಾರಣಗಳ ಬಗ್ಗೆ ನಾವು ಗಮನಹರಿಸುವುದಾದರೆ,

ಸಿದ್ದರಾಮಯ್ಯರವರ ಆಪ್ತ ಬಳಗದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಸಿದ್ದರಾಮಯ್ಯರವರ ಪುತ್ರ ಯತೀಂದ್ರ ರವರ ಜೊತೆ ವಿವಿಧ ಉದ್ದಿಮೆಗಳಲ್ಲಿ ಜೊತೆಗಾರನಾಗಿ ಕೆಲಸ ಮಾಡುತ್ತಿರುವ ರಾಜೇಶ್ ಗೌಡ ಎಂಬ ಸ್ಥಳೀಯ ಪ್ರಭಾವಿ ಮುಖಂಡ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕಾರಣ ಸಿದ್ದರಾಮಯ್ಯರವರು ತಮ್ಮ ಬೆಂಬಲಿಗರನ್ನು ಸರ್ಕಾರ ಉರುಳಿಸಲು ಬಿಜೆಪಿ ಪಕ್ಷಕ್ಕೆ ಕಳುಹಿಸಿದಂತೆ ಈಗಲೂ ಕೂಡ ಡಿಕೆ ಶಿವಕುಮಾರ್ ಅವರ ನಾಯಕತ್ವದ ಕುರಿತು ಹೈಕಮಾಂಡ್ ನ ಬಳಿ ಪ್ರಶ್ನೆ ಮೂಡಿಬರುವಂತೆ ಮಾಡಲು ಉಪ ಚುನಾವಣೆಯಲ್ಲಿ ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂಬ ಬಲವಾದ ಮಾತುಗಳು ಕೇಳಿಬಂದಿವೆ. ಬಹಳ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಗೌಡ ರವರು ಸ್ಥಳೀಯವಾಗಿ ಬಹಳ ಪ್ರಭಾವವನ್ನು ಹೊಂದಿದ್ದು, ಯತಿಂದ್ರ ರವರ ಜೊತೆಗೆ ಉತ್ತಮ ಬಾಂಧವ್ಯ ಹಾಗೂ ಹಲವಾರು ಉದ್ದಿಮೆಗಳಲ್ಲಿ ಬಿಸಿನಸ್ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಇದರ ಕುರಿತು ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಮಾತನಾಡಿದ್ದು ಉಪ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಪುತ್ರನ ಗೆಳೆಯನನ್ನು ಬಿಜೆಪಿ ಪಕ್ಷಕ್ಕೆ ಕಳುಹಿಸುವುದರ ಹಿಂದಿನ ಮರ್ಮವೇನು? ಯಾವ ಕಾರಣಕ್ಕೆ ನಿಮ್ಮ ಆಪ್ತ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು ಸಂಭಾವ್ಯ ಅಭ್ಯರ್ಥಿಯಾಗಿ ಹೆಸರು ಕೇಳಿ ಬರುವಂತೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಎಲ್ಲಾ ಲೆಕ್ಕಾಚಾರಗಳ ನಡುವೆಯೇ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿ ಪಕ್ಷಕ್ಕೆ ನಿಜವಾಗಲೂ ಆನೆ ಬಲ ತಂದಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ ಸಂಭಾವ್ಯ ಅಭ್ಯರ್ಥಿ ಯಾಗಿಯೂ ಕೂಡ ರಾಜೇಶ್ ಗೌಡ ರವರ ಹೆಸರು ಕೇಳಿಬರುತ್ತಿದೆ.