ಹಿಂದೂ ಮಹಾಸಾಗರದಲ್ಲಿ ಬಿಗಾಡಿಯಿಸಿದ ಪರಿಸ್ಥಿತಿ ! ಅಖಾಡಕ್ಕೆ ಅಮೇರಿಕ ! ನಡೆಯುತ್ತಿರುವುದಾದ್ರು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ತಿಂಗಳುಗಳಿಂದ ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ಕಾವು ಕಡಿಮೆಯಾಗಿಲ್ಲ. ಎರಡು ದೇಶಗಳ ಸೈನಿಕರು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ. ಚೀನಾ ದೇಶವು ತನ್ನ ಸೈನಿಕರನ್ನು ರವಾನೆ ಮಾಡಿದರೇ ಭಾರತೀಯ ಸೇನೆ ಸುಮ್ಮನೆ ಆಗಬಹುದು ಎಂದುಕೊಂಡು ಮನಬಂದಂತೆ ಸಾಕಷ್ಟು ಸಂಖ್ಯೆಯಲ್ಲಿ ಚೀನಾ ಸೈನಿಕರನ್ನು ರವಾನೆ ಮಾಡಿದೆ, ಆದರೆ ಇಲ್ಲಿರುವುದು ಭಾರತೀಯ ಸೇನೆ ಎಂಬುದನ್ನು ಚೀನಾ ನೆನಪಿನಲ್ಲಿಟ್ಟುಕೊಂಡರೇ ಒಳ್ಳೆಯದು. ಯಾಕೆಂದರೆ ಚೀನಾ ದೇಶದಿಂದ ಯಾವುದೇ ಸವಾಲುಗಳು ಎದುರಾದರೂ ಕೂಡ ಸರ್ವಸನ್ನದ್ಧವಾಗಿ ಭಾರತ ದೇಶದ ಸೈನಿಕರು ಭಾರತದ ಇಂಚಿಂಚು ಗಡಿಯನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಷ್ಟೆ ಯಾಕೆ ಭಾರತೀಯ ಸೇನೆಯ ಅಧಿಕೃತ ಮಾಹಿತಿಗಳ ಪ್ರಕಾರ ಹಲವಾರು ಪ್ರದೇಶಗಳನ್ನು ಈಗಾಗಲೇ ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಇಷ್ಟಾದರೂ ಚೀನಾ ದೇಶ ಬುದ್ಧಿ ಕಲಿತಂತೆ ಕಾಣುತ್ತಿಲ್ಲ, ಯಾಕೆಂದರೆ ಇಷ್ಟು ದಿವಸ ವಾಯುಪಡೆ ಹಾಗೂ ಭೂ ಸೇನಾ ಪಡೆಗಳ ಮೂಲಕ ಚೀನಾ ದೇಶ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿತ್ತು.

ಆದರೆ ಭಾರತ ದೇಶ ವಿಶ್ವದ ಇನ್ನಿತರ ದೇಶಗಳ ಕಣ್ತಪ್ಪಿಸಿ ತನ್ನ ನೌಕೆಯನ್ನು ದಕ್ಷಿಣ ಚೀನಾ ಸಮುದ್ರಕ್ಕೆ ರವಾನಿಸಿದ ವಿಷಯ ತಿಳಿದ ಕ್ಷಣದಿಂದಲೂ ಚೀನಾ ದೇಶಕ್ಕೆ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ಭಾರತ ದೇಶವು ಹಾಗೂ ತೈವಾನ್ ದೇಶಗಳು ನೇರವಾಗಿ ಯಾವುದೇ ಒಪ್ಪಂದಗಳು ಇಲ್ಲದೆ ಇದ್ದರೂ ಕೂಡ ಪರಸ್ಪರ ಬೆಂಬಲ ನೀಡಿ ಪರಸ್ಪರ ಹೊಗಳಿಕೆಯ ಮಾತುಗಳನ್ನು ಆಡುತ್ತಿವೆ. ಈ ಎಲ್ಲಾ ವಿದ್ಯಮಾನಗಳಿಂದ ಭಾರತ ದೇಶದ ವಿರುದ್ಧ ಮತ್ತೊಮ್ಮೆ ಕ್ಯಾತೆ ತೆಗೆಯಲು ಹಿಂದು ಮಹಾಸಾಗರದಲ್ಲಿ ಚೀನಾದೇಶ ನೌಕಾಪಡೆಯ ಬಲವನ್ನು ಹೆಚ್ಚಿಸುವ ಕೆಲಸದಲ್ಲಿ ನಿರತವಾಗಿದೆ.

ಮೊದಲೇ ಊಹಿಸಿದಂತೆ ಚೀನಾ ದೇಶದ ಬೆಂಬಲಕ್ಕೆ ಪಾಕಿಸ್ತಾನ ದೇಶ ಕೂಡ ಸೇರಿಕೊಂಡಿದ್ದು ಚೀನಾ ದೇಶ ಹಿಂದೂ ಮಹಾಸಾಗರದಲ್ಲಿ ಜಿಬೌಟಿ ಯಲ್ಲಿನ ನೌಕಾ ಬಂದರು ಹಾಗೂ ಪಾಕಿಸ್ತಾನ ದೇಶದ ಗ್ವಾದರ್ ಬಂದರು ಅನ್ನು ಬಲಪಡಿಸಲು ಆರಂಭ ಮಾಡಿದೆ. ಅಷ್ಟೇ ಅಲ್ಲದೆ ಡಿಯಾಗೋಗಾರ್ಸಿಯಾ ದ್ವೀಪಕ್ಕೆ ಜಲಂತರ್ಗಾಮಿ ನೌಕೆಯನ್ನು ಕಳುಹಿಸುವ ಮೂಲಕ ಭಾರತದ ಜೊತೆ ಸಮುದ್ರದಲ್ಲಿಯೂ ಕೂಡ ಕ್ಯಾತೆ ತೆಗೆಯಲು ಮುಂದಾಗಿತ್ತು. ಈಗಾಗಲೇ ಭಾರತೀಯ ನೌಕಾಪಡೆ ಸಂಪೂರ್ಣ ಅಲರ್ಟ್ ನಲ್ಲಿ ಇರುವ ಕಾರಣ ಭಾರತ ದೇಶದ ನೌಕಾಪಡೆಯ ಕಣ್ತಪ್ಪಿಸಲು ಸಾಧ್ಯವಿಲ್ಲದಿದ್ದರೂ ಕೂಡ ಚೀನಾ ದೇಶ ಇಂತಹ ದುಸ್ಸಾಹಸಕ್ಕೆ ಕೈ ಹಾಕಿತ್ತು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಮೇರಿಕಾ ದೇಶವು ಇದೀಗ ಚೀನಾ ದೇಶಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿ ಒಂದು ಹೆಜ್ಜೆ ಮುಂದೆ ಇಟ್ಟರೇ ಏನಾಗಬಹುದು ಎಂಬುದರ ಸ್ಪಷ್ಟ ಸಂದೇಶ ರವಾನೆ ಮಾಡಿದೆ.

ಹೌದು ಸ್ನೇಹಿತರೇ ಇದೀಗ ಅಮೆರಿಕ ದೇಶವು ಚೀನಾ ದೇಶದ ಸವಾಲುಗಳನ್ನು ಎದುರಿಸಲು ಭಾರತ ದೇಶವಾಗಿದೆ ಎಂದು ತಿಳಿದಿದ್ದರೂ ಕೂಡ ಬೆಂಬಲಕ್ಕೆ ಇರಲಿ ಎಂದು ವಿಶ್ವದಲ್ಲಿಯೇ ಬಲಾಢ್ಯ ನೌಕಾಪಡೆ ಎಂದು ಖ್ಯಾತಿ ಪಡೆದು ಕೊಂಡಿರುವ ಅಮೇರಿಕಾ ದೇಶದ ನೌಕಾಪಡೆಗಳಲ್ಲಿನ ಮಹಾ ಅ’ಸ್ತ್ರಗಳನ್ನು ಹಿಂದೂ ಮಹಾಸಾಗರಕ್ಕೆ ರವಾನೆ ಮಾಡಿದೆ ಎಂಬುದು ಫೋರ್ಬ್ಸ್ ಪತ್ರಿಕೆಯಿಂದ ಬಹಿರಂಗಗೊಂಡಿದೆ. ಹೌದು ನೀವು ನೌಕಾಪಡೆಯ ಬಲಾಡ್ಯ ಜಲಂತರ್ಗಾಮಿ ಗಳಲ್ಲಿ ಒಂದಾದ ಅಣ್ವಸ್ತ್ರ ಸಜ್ಜಿತ ಜಾರ್ಜಿಯಾ ಹಾಗೂ ಅಮೇರಿಕಾ ದೇಶದ ಬಲಾಢ್ಯ ವಿಮಾನವಾಹಕ ನೌಕೆಗಳ ಒಂದಾಗಿರುವ ರೋನಾಲ್ಡ್ ರೇಗನ್ ನೌಕೆಯನ್ನು ಹಿಂದೂ ಮಹಾ ಸಾಗರವನ್ನು ತಲುಪಿವೆ. ಉಪಗ್ರಹಗಳ ಚಿತ್ರಗಳ ಆಧಾರದ ಮೇರೆಗೆ ಈ ಮಾಹಿತಿಗಳು ಲಭ್ಯವಾಗಿದ್ದು ಚೀನಾ ದೇಶ ಸಮುದ್ರದಲ್ಲಿ ಭಾರತಕ್ಕೆ ಸವಾಲೆಸೆಯಲು ಮಾಡಿದ ತಂತ್ರಗಳು ಒಮ್ಮೆಲೆ ವಿಫಲವಾಗಿವೆ.‌

Post Author: Ravi Yadav