ಡಾಬಾಗೆ ಹೋಗಿ ಆಹಾರ ಸೇವಿಸಿ, ಹೆಚ್ಚಿನ ಹಣ ನೀಡಿ ಸೆಲ್ಫಿ ತೆಗೆದುಕೊಳ್ಳುವಾಗ ಮೂಲ ಉದ್ದೇಶವನ್ನೇ ಮರೆತ ಜನ ! ಇದೇನಾ ಅಲ್ಲಿನ ಜನರ ಸಾಮಾನ್ಯ ಜ್ಞಾನ??

ಡಾಬಾಗೆ ಹೋಗಿ ಆಹಾರ ಸೇವಿಸಿ, ಹೆಚ್ಚಿನ ಹಣ ನೀಡಿ ಸೆಲ್ಫಿ ತೆಗೆದುಕೊಳ್ಳುವಾಗ ಮೂಲ ಉದ್ದೇಶವನ್ನೇ ಮರೆತ ಜನ ! ಇದೇನಾ ಅಲ್ಲಿನ ಜನರ ಸಾಮಾನ್ಯ ಜ್ಞಾನ??

ನಮಸ್ಕಾರ ಸ್ನೇಹಿತರೇ, ಬಹುಶಹ ನೀವೆಲ್ಲರೂ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿರುವ ದೆಹಲಿಯ ಬಾಬಾ ಕಾ ಡಾಬಾದ ವೃದ್ಧ ದಂಪತಿಗಳ ವಿಡಿಯೋ ಅನ್ನು ನೋಡಿರಬಹುದು. ದೇಶದಲ್ಲಿ ಕೋರೋನ ಇಂದ ಲಾಕ್ಡೌನ್ ಮುಗಿದ ಬಳಿಕ ಹೋಟೆಲ್ ಗಳಿಗೆ ಹೋಗುವುದನ್ನು ಜನರು ಕಡಿಮೆ ಮಾಡಿದ್ದಾರೆ. ಇಲ್ಲಿ ವೃದ್ಧ ದಂಪತಿಗಳು ಹೋಟೆಲ್ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ, ಯಾರಾದರೂ ಬರಬಹುದೇನೋ ಎಂದು ಹೋಟೆಲ್ ತೆಗೆದುಕೊಂಡು ರುಚಿರುಚಿಯಾದ ಅಡುಗೆಗಳನ್ನು ತಯಾರು ಮಾಡಿ ಗ್ರಾಹಕರಿಗಾಗಿ ಕಾದುಕುಳಿತಿರುವ ಸಂದರ್ಭದಲ್ಲಿ ಯಾರು ವೃದ್ಧ ದಂಪತಿಗಳ ಹೋಟೆಲ್ ಕಡೆಗೆ ತಿರುಗಿ ನೋಡದ ಸಂದರ್ಭದಲ್ಲಿ ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೃದ್ಧ ದಂಪತಿಗಳಿಗೆ ಸಹಾಯವಾಗಲಿ ದಯವಿಟ್ಟು ಇವರ ಡಾಬಾಗೆ ಬನ್ನಿ ಎಂದು ಪೋಸ್ಟ್ ಮಾಡಿದ್ದರು. ವೃದ್ಧ ದಂಪತಿಗಳು ವಿಡಿಯೋ ಮಾಡುವಾಗ ಕಣ್ಣೀರು ಹಾಕಿದ್ದನ್ನು ದೃಶ್ಯ ಮನಕಲಕುವಂತಿತ್ತು. ಇದನ್ನೆಲ್ಲಾ ಕಂಡ ನೆಟ್ಟಿಗರು ಮರುದಿನವೇ ವೃದ್ಧ ದಂಪತಿಗಳ ನೆರವಿಗೆ ಸಹಾಯಹಸ್ತ ಚಾಚಿದರು.

ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಈ ವಿಡಿಯೋ ಅನ್ನು ಬಾರಿ ವೈರಲ್ ಮಾಡಿದ್ದು, ಮರುದಿನವೇ ಈ ಹೋಟೆಲ್ ಗೆ ನೂರಾರು ಜನ ತೆರಳಿ ಆಹಾರ ಸೇವಿಸಿ ಸಾಮಾನ್ಯ ಬೆಲೆಗಿಂತ ಹೆಚ್ಚಿನ ಹಣ ನೀಡಿ ವೃದ್ಧ ದಂಪತಿಗಳ ಜೊತೆಗೆ ನಾವಿದ್ದೇವೆ ಎಂಬುದನ್ನು ಸಾಬೀತುಪಡಿಸಿದರು. ಇದನ್ನು ಕಂಡ ವೃದ್ಧ ದಂಪತಿಗಳು ನಿನ್ನೆಯಷ್ಟೇ ನಾವು ಒಂಟಿ ಎಂದು ಅನಿಸುತ್ತಿತ್ತು, ಆದರೆ ಇಂದು ಇಡೀ ಭಾರತ ನನ್ನ ಜೊತೆಗಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದರು. ಖಂಡಿತ ಜನರ ಹಾಗೂ ನೆಟ್ಟಿಗರ ಈ ನಡೆ ಬಹಳ ಉತ್ತಮವಾಗಿದೆ. ನಾವು ಇಲ್ಲ ಎನ್ನುತ್ತಿಲ್ಲ, ಆದರೆ ಸ್ನೇಹಿತರೇ ನಮ್ಮ ಜನರು ಇಲ್ಲಿಗೆ ತೆರಳಿ ಸೆಲ್ಫಿ ಫೋಟೋ ತೆಗೆದುಕೊಂಡು ಹೆಚ್ಚಿನ ಹಣ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಸಂದರ್ಭದಲ್ಲಿ ತಾವು ಅಲ್ಲಿಗೆ ತೆರಳಿರುವ ಮೂಲ ಉದ್ದೇಶವನ್ನು ಮರೆತು ಸಾಮಾನ್ಯ ಜ್ಞಾನವೂ ಇಲ್ಲದಂತೆ, ಕೇವಲ ಹೆಸರಿಗಷ್ಟೇ ಅಲ್ಲಿಗೆ ತೆರಳಿದ್ದಾರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅರೇ ಇದ್ಯಾಕೆ ಅಲ್ಲಿಗೆ ತೆರಳಿ ಆಹಾರ ಸೇವಿಸಿ ಹೆಚ್ಚಿನ ಹಣ ನೀಡಿದರು ಹೀಗೆ ಯಾಕೆ ಹೇಳುತ್ತಿದ್ದಾರೆ ಎಂದುಕೊಂಡಿರಾ ಬನ್ನಿ ಸೂಕ್ತ ಉತ್ತರ ನೀಡುತ್ತೇವೆ.

ಸ್ನೇಹಿತರೇ ವೃದ್ಧ ದಂಪತಿಗಳಿಗೆ ಸಹಾಯಹಸ್ತ ಚಾಚಿದ್ದು ನಿಜಕ್ಕೂ ಒಳ್ಳೆಯ ಒಳ್ಳೆಯ ನಡೆ. ಆದರೆ ಸ್ನೇಹಿತರೇ ಈ ವಿಷಯ ತಿಳಿಯುತ್ತಿದ್ದಂತೆ ಎಲ್ಲ ಮಾಧ್ಯಮಗಳು ಹೋಗಿ ಫೋಟೋ ತೆಗೆಯುವ ಸಂದರ್ಭದಲ್ಲಿ ನಮಗೆ ಮನಕಲಕುವ ಸಂದರ್ಭ ಫೋಟೋದಲ್ಲಿ ಸಿಕ್ಕಿತು. ಒಂದೆಡೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಾಬಾ ಕಾ ಡಾಬಾನಲ್ಲಿ ಕಿಕ್ಕಿರಿದು ಊಟ ಮಾಡಲು ನಿಂತಿದ್ದಾರೆ. ಆಹಾರದ ಬೆಲೆಗಿಂತ ಹೆಚ್ಚಿನ ಹಣವನ್ನು ವೃದ್ಧ ದಂಪತಿಗಳಿಗೆ ನೀಡುತ್ತಿದ್ದಾರೆ. ಆದರೆ ಸ್ನೇಹಿತರೇ ಅದೇ ಸಮಯದಲ್ಲಿ ಅಲ್ಲೊಬ್ಬ ಕಚೋರಿ ಮಾರುವವ ಸೈಕಲ್ ತೆಗೆದುಕೊಂಡು ಕಚೋರಿ ಮಾರಲು ಬರುತ್ತಾರೆ. ಆತ ಇಷ್ಟೊಂದು ಜನರ ನಡುವೆ ನಿಂತುಕೊಂಡು ಎಲ್ಲರ ಕಡೆ ನೋಡುತ್ತಿದ್ದಾನೆ. ಆದರೆ ವಿಪರ್ಯಾಸವೆಂದರೆ ವೃದ್ಧ ದಂಪತಿಗಳು ಅನುಭವಿಸುತ್ತಿರುವ ವ್ಯಾಪಾರದ ಕೊರತೆಯನ್ನು ಆ ಕಚೋರಿ ಮಾರುವವ ಕೂಡ ಅನುಭವಿಸುತ್ತಿದ್ದಾನೆ ಎಂಬುದನ್ನು ಜನ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಆತನ ಬಳಿ ಒಬ್ಬರು ಗ್ರಾಹಕರು ಕೂಡ ನಿಂತಿಲ್ಲ.

ಅಲ್ಲಿ ಬಾಬಾ ಕಾ ಢಾಬಾ ಹೋಟೆಲ್ನಲ್ಲಿ ಕಿಕ್ಕಿರಿದು ತುಂಬಿರುವ ಜನ ಕೊಂಚ ಈತನ ಬಳಿ ಹತ್ತು ಜನರಲ್ಲಿ ಇಬ್ಬರು ಕಚೋರಿ ಖರೀದಿ ಮಾಡಿದ್ದರೂ ಕೂಡ ಈತನಿಗೆ ಸಾಕಷ್ಟು ಸಹಾಯವಾಗುತ್ತಿತ್ತು, ಆದರೆ ಜನರು ವೃದ್ಧ ದಂಪತಿಗಳಿಗೆ ಸಹಾಯ ಮಾಡುವ ರೀತಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಹೆಚ್ಚಿನ ಹಣ ನೀಡಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರಷ್ಟೇ, ಇವರಿಗೆ ಮತ್ಯಾವುದು ಬೇಡ. ಅಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅಂಗಡಿಯ ಮುಂದೆ ಸೆಲ್ಫಿ ತೆಗೆದುಕೊಂಡು ಪೋಸ್ಟ್ ಮಾಡಿದರೇ ಒಂದಷ್ಟು ಲೈಕ್ ಗಳು ಒಂದಷ್ಟು ಕಾಮೆಂಟ್ಗಳು ಬಂದು ನೀವು ಮಾನವೀಯತೆ ಮೆರೆದಿದ್ದೀರಾ ಎಂದು ಕೆಲವರು ಹೇಳುತ್ತಾರೆ. ಎಲ್ಲರೂ ಕೊರೋನ ಕಾರಣದಿಂದಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ನಾವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸುದ್ದಿಗಳು ಜೊತೆಗೆ ಸಾಧ್ಯವಾದಷ್ಟು ಇನ್ನೂ ಹೆಚ್ಚಿನ ಜನರಿಗೆ ಅದೇ ರೀತಿಯ ಬೆಂಬಲ ನೀಡಬೇಕು. ಯಾಕೆಂದರೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡಿ ವೈರಲ್ ಮಾಡಿಸಲು ಸಾಧ್ಯವಿಲ್ಲ. ಏನಂತೀರಾ?