ಚೀನಾಗೆ ಮರ್ಮಾಘಾತ ! ಚೀನಾದ ಸಾವಿರಾರು ಕೋಟಿ ತಯಾರಿಯನ್ನು ನೀರು ಪಾಲು ಮಾಡಲು ಮುಂದಾದ ನ-ಮೋ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ದೇಶದಲ್ಲಿ ಇದೀಗ ಹಲವಾರು ತಿಂಗಳುಗಳಿಂದ ಸ್ವದೇಶಿ ಭಾರತ ಎಂಬ ಕೂಗು ಕೇಳಿ ಬರುತ್ತಿದೆ. ಭಾರತದಲ್ಲಿ ಹಲವಾರು ಜನರು ವಿವಿಧ ರೀತಿಯ ವಸ್ತುಗಳನ್ನು ತಯಾರಿ ಮಾಡಿದರೂ ಕೂಡ ಒಂದೆಡೆ ವ್ಯಾಪಾರಸ್ಥರು ಹೆಚ್ಚು ಲಾಭಕ್ಕಾಗಿ ಚೀನಾ ವಸ್ತುಗಳನ್ನು ಮಾರಾಟ ಮಾಡಿದರೇ ಮತ್ತೊಂದೆಡೆ ಗ್ರಾಹಕರು ಕೂಡ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣದಿಂದ ಚೀನಾ ವಸ್ತುಗಳನ್ನು ಖರೀದಿಸುತ್ತಿದ್ದರು. ಆದರೆ ಇತ್ತೀಚೆಗೆ ವ್ಯಾಪಾರಸ್ಥರಿಂದ ಹಿಡಿದು ಗ್ರಾಹಕರ ವರೆಗೆ ಬಹುತೇಕ ಜನ ತಾವು ಚೀನಾ ವಸ್ತುಗಳನ್ನು ಕೊಂಡುಕೊಳ್ಳುವ ಪ್ರತಿಯೊಂದು ರೂಪಾಯಿಯೂ ಪರೋಕ್ಷವಾಗಿ ನಮ್ಮ ಸೇ’ನೆಯ ವಿರು’ದ್ಧ ಬಳಕೆಯಾಗುತ್ತದೆ ಎಂಬುದನ್ನು ಅರಿತಿದ್ದಾರೆ.

ಅದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ನಾವು ಚೀನಾ ವಸ್ತುಗಳನ್ನು ಇನ್ನು ಮುಂದೆ ಕಂಡು ಕೊಳ್ಳುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಚೀನಾ ದೇಶ ಇಷ್ಟಾದರೂ ಕೂಡ ಭಾರತದಲ್ಲಿ ಸಂಪೂರ್ಣ ಸರಕು ಸಾಗಾಣಿಕೆಯನ್ನು ನಿಲ್ಲಿಸಿಲ್ಲ. ಅದರಲ್ಲಿಯೂ ಹಬ್ಬಗಳ ಸಾಲು ಬಂತೆಂದರೆ ಸಾಕು ಚೀನಾ ದೇಶಕ್ಕೆ ಸಾವಿರಾರು ಕೋಟಿ ಹಣ ವರ್ಗಾವಣೆ ಆಗುತ್ತದೆ. ದೀಪಾವಳಿ ಹಬ್ಬದಲ್ಲಿ ಭಾರತದಲ್ಲಿ ಪಟಾಕಿಗಳನ್ನು ಹಾಗೂ ದೀಪಾಲಂಕಾರಕ್ಕೆ ಬಳಸುವ ಬಲ್ಪ್, ದೀಪಗಳು ಸೇರಿದಂತೆ ಇನ್ನಿತರ ವಸ್ತುಗಳು ತಯಾರಾದರೂ ಕೂಡ ಚೀನಾ ದೇಶವು ಬಹಳ ಕಡಿಮೆ ಬೆಲೆಗೆ ನೀಡುವ ಕಾರಣ ಗ್ರಾಹಕರು ಕ್ರಮೇಣ ಚೀನಾ ದೇಶದ ವಸ್ತುಗಳಿಗೆ ಮೊರೆ ಹೋಗುತ್ತಿದ್ದರು.

ಇದರಿಂದ ನಮ್ಮಲ್ಲಿ ತಯಾರು ಮಾಡುವ ತಯಾರಕರಿಗೆ ಭಾರಿ ನಷ್ಟ ಉಂಟಾಗುತ್ತಿತ್ತು. ಒಂದು ಚಿಕ್ಕ ಜಾಗದಲ್ಲಿ ನಾಲ್ಕೈದು ಜನರಿಂದ ಉದ್ಯಮ ನಡೆಸುವವ ಚೀನಾ ದೇಶದ ವಸ್ತುಗಳ ವಿರುದ್ಧ ಸ್ಪರ್ಧಿಸಲು ಹೇಗೆ ಸಾಧ್ಯ ಅಲ್ಲವೇ? ಆದರೆ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಯಾಕೆಂದರೆ ದೀಪಾವಳಿ ಹಬ್ಬಕ್ಕೂ ಮುನ್ನ ಬೇಕು ಚೀನಾ ದೇಶಕ್ಕೆ ಶಾಕ್ ನೀಡಲು ನ-ಮೋ ನೇತೃತ್ವದ ಟೀಮ್ ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ಚೀನಾ ದೇಶದಿಂದ ಆಮದಾಗುವ ದೀಪಾಲಂಕಾರ ವಸ್ತುಗಳು ಸೇರಿದಂತೆ ಪಟಾಕಿಗಳಿಗೆ ಹೆಚ್ಚಿನ ಮಟ್ಟದಲ್ಲಿ ತೆರಿಗೆ ವಿಧಿಸುವ ಮೂಲಕ ಬುದ್ಧಿ ಕಲಿಸಲು ಮುಂದಾಗಿದೆ. ಇನ್ನು ಅಷ್ಟೇ ಅಲ್ಲದೆ ಎಲ್ಇಡಿ ಬಲ್ಪ್ ಗಳು ಕಳಪೆ ಮಟ್ಟದಿಂದ ಕೂಡಿರುವ ಕಾರಣ ಪ್ರತಿಯೊಂದು ಬಲ್ಪ್ ಗಳು ಭಾರತೀಯ ಗುಣಮಟ್ಟವನ್ನು ತಲುಪಿದರೆ ಮಾತ್ರ ಭಾರತದ ಒಳಗಡೆ ಪ್ರವೇಶ ನೀಡಲಾಗುತ್ತದೆ. ಈ ಮೂಲಕ ಸಾಲುಸಾಲು ಹಬ್ಬಗಳಿಗಾಗಿ ಚೀನಾ ದೇಶ ಮಾಡಿಕೊಂಡಿರುವ ತಯಾರಿ ಸಂಪೂರ್ಣ ವ್ಯರ್ಥ ವಾಗಲಿದ್ದು, ಭಾರತೀಯ ತಯಾರಕರು ಲಾಕ್ಡೌನ್ ನಿಂದ ಉಂಟಾಗಿರುವ ಎಲ್ಲಾ ನಷ್ಟವನ್ನು ಮರಳಿ ಪಡೆಯಬಹುದಾದ ಸಾಧ್ಯತೆಗಳಿವೆ. ಒಂದು ವೇಳೆ ಅದು ನಡೆದಲ್ಲಿ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕಲಿವೆ.