ಬರಿಗಾಲಿನಲ್ಲಿ ನಡೆಯುವುದರಿಂದ ಸಿಗುವ ಆರೋಗ್ಯಕರ ಲಾಭಗಳೇನು ಗೊತ್ತಾ?? ಯಾವ ಸಮಯ ಹೆಚ್ಚು ಸೂಕ್ತ?

ಬರಿಗಾಲಿನಲ್ಲಿ ನಡೆಯುವುದರಿಂದ ಸಿಗುವ ಆರೋಗ್ಯಕರ ಲಾಭಗಳೇನು ಗೊತ್ತಾ?? ಯಾವ ಸಮಯ ಹೆಚ್ಚು ಸೂಕ್ತ?

ನಮಸ್ಕಾರ ಸ್ನೇಹಿತರೇ, ಕೆಲವು ವರ್ಷಗಳ ಹಿಂದೆ ಜನರು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಚಪ್ಪಲಿ ಹಾಕುವುದನ್ನು ಅಭ್ಯಾಸ ಮಾಡಿಕೊಂಡರು. ಆದರೆ ಇತ್ತೀಚೆಗೆ ಪಟ್ಟಣದ ಜನರು ಮನೆಯ ಒಳಗಡೆ ಕೂಡ ಚಪ್ಪಲಿ ಹಾಕುವುದನ್ನು ಪ್ರತಿಷ್ಠೆಯ ಸಂಕೇತ ಎಂದುಕೊಂಡು, ಮನೆಯಲ್ಲಿಯೂ ಕೂಡ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಗ್ರಾನೆಟ್ ಹಾಕಿಸಿ ಅದರ ಮೇಲೆ ಚಪ್ಪಲಿಯಲ್ಲಿ ನಡೆಯುತ್ತಾರೆ. ಇನ್ನು ಹಳ್ಳಿಯ ಜನ ಸಾಮಾನ್ಯವಾಗಿ ಹೊರಗಡೆ ಹೋಗಬೇಕಾದರೆ ಮಾತ್ರ ಚಪ್ಪಲಿ ಬಳಸುತ್ತಾರೆ, ಮನೆಯೊಳಗಡೆ ಸ್ವಚ್ಛ ಕಾಲಿನಿಂದ ಓಡಾಡುತ್ತಾರೆ.

ಹೀಗೆ ಚಪ್ಪಲಿ ಹಾಕಿಕೊಂಡು ನಡೆಯುವುದು ಅಥವಾ ಹಾಕದೆ ನಡೆಯುವುದರ ನಾವು ಯಾಕೆ ಮಾತನಾಡುತ್ತಿದ್ದೇವೆ ಎಂದರೇ, ಸ್ನೇಹಿತರೇ ನಾವು ಬರಿಗಾಲಿನಲ್ಲಿ ನಡೆದರೆ ನಮಗೆ ಕೆಲವು ಪ್ರಯೋಜನಗಳು ಸಿಗುತ್ತವೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಅದೇ ಕಾರಣಕ್ಕಾಗಿ ಹಲವಾರು ವಿವಿಧ ಸಂದರ್ಭದಲ್ಲಿ ಚಪ್ಪಲಿ ಧರಿಸಬಾರದು ಎಂದು ಹೇಳಲಾಗುತ್ತದೆ. ಬನ್ನಿ ಆಗಿದ್ದರೇ ಅಸಲಿಗೆ ಚಪ್ಪಲಿ ಧರಿಸದೆ ಓಡಾಟ ಮಾಡುವುದರಿಂದ ನಮಗೆ ಯಾವೆಲ್ಲ ಲಾಭಗಳು ಸಿಗುತ್ತವೆ, ಅದೇ ರೀತಿ ಕೆಲವೊಂದು ಸಂದರ್ಭಗಳಲ್ಲಿ ಯಾಕೆ ಮೊದಲಿನಿಂದಲೂ ಚಪ್ಪಲಿ ಧರಿಸುದೆ ಇರುವುದು ಅಭ್ಯಾಸವಾಗಿದೆ, ಹಾಗೂ ಯಾವ ಸಮಯ ಹೆಚ್ಚು ಸೂಕ್ತ ಎಂಬುದರ ಬಗ್ಗೆ ನಾವು ತಿಳಿಸಿಕೊಡುತ್ತೇವೆ.

ಸ್ನೇಹಿತರೇ ಮೊದಲನೆಯದಾಗಿ ಯಾರೇ ಆಗಲಿ ಸಾಮಾನ್ಯವಾಗಿ ಪೂಜೆ ಅಥವಾ ಯೋಗಾಭ್ಯಾಸ ಮಾಡುವ ಸಂದರ್ಭದಲ್ಲಿ ಚಪ್ಪಲಿಯನ್ನು ಧರಿಸುವುದಿಲ್ಲ. ಯಾಕೆ ಇಂದು ಉತ್ತರ ನೀಡುವುದಾದರೇ ಸ್ನೇಹಿತರೇ ಈ ಮೇಲಿನ ಎರಡು ಚಟುವಟಿಕೆಗಳಲ್ಲಿ ನಿಮ್ಮ ಮನಸ್ಸಿಗೆ ಶಕ್ತಿ ಬರುತ್ತದೆ ಹಾಗೂ ನಿಮ್ಮ ಆರೋಗ್ಯ ವೃದ್ಧಿಸುತ್ತದೆ, ಈ ಸಮಯದಲ್ಲಿ ನಿಮ್ಮ ದೇಹದಲ್ಲಿ ಸಕಾರಾತ್ಮಕ ಯೋಚನೆಗಳು ಬರುತ್ತವೆ, ಇದರಿಂದ ನಿಮ್ಮ ಬುದ್ಧಿ ಚುರುಕಾಗುತ್ತದೆ, ಅದಕ್ಕಾಗಿ ಇಂಥ ಸಂದರ್ಭದಲ್ಲಿ ಚಪ್ಪಲಿ ಧರಿಸುವುದಿಲ್ಲ.

ಇನ್ನು ನಾವು ಬರಿಗಾಲಲ್ಲಿ ಓಡಾಟ ಮಾಡುವುದರ ಲಾಭಗಳ ಕುರಿತು ಗಮನಿಸುವುದಾದರೆ ಸ್ನೇಹಿತರೇ ನಮ್ಮ ಪಾದದ ರಚನೆ ಹೇಗೆ ಹಾಗಿರುತ್ತದೆ ಎಂದರೇ, ನಮ್ಮ ದೇಹವನ್ನು ಯಾವ ರೀತಿಯಲ್ಲಿ ಬೇಕಾದರೂ ಹೊರುವ ಸಾಮರ್ಥ್ಯ ಇರುತ್ತದೆ, ನೀವು ಸದಾ ಚಪ್ಪಲಿ ಹಾಕಿ ಓಡಾಟ ಮಾಡುವುದರಿಂದ ಫ್ಲೆಕ್ಸಿಬಿಲಿಟಿ ಅಂದರೇ ನಮ್ಯತೆ ಅಥವಾ ಯಾವುದೇ ಸಂದರ್ಭದಲ್ಲಿಯಾದರೂ ಅಡ್ಜಸ್ಟ್ ಮಾಡಿಕೊಳ್ಳುವ ದೇಹದ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಪಾದಗಳು ದು’ ರ್ಬಲವಾಗಲು ಆರಂಭಿಸುತ್ತವೆ, ಯಾಕೆಂದರೆ ಪಾದಗಳಿಗೆ ಅಗತ್ಯವಿರುವ ವ್ಯಾಯಾಮ ಸಿಗುವುದಿಲ್ಲ. ಇದರಿಂದ ನಿಮ್ಮ ಕತ್ತು, ಬೆನ್ನು, ಸೊಂಟ ಸೇರಿದಂತೆ ಮಂಡಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಬರಿಗಾಲಿನಲ್ಲಿ ನಡೆದರೇ ಆ ರೀತಿ ಆಗುವುದಿಲ್ಲ.

ಇನ್ನು ಅಷ್ಟೇ ಅಲ್ಲದೆ ನೀವು ಬರಿಗಾಲಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿ ರ’ಕ್ತ ಸಂಚಾರ ಹೆಚ್ಚಾಗುತ್ತದೆ, ಬಹಳ ಸುಲಭವಾಗಿ ರ’ಕ್ತ ಸಂಚಾರ ತೀವ್ರಗೊಳ್ಳುತ್ತದೆ. ಇದರಿಂದ ನಿಮ್ಮ ದೇಹದಲ್ಲಿನ ನ’ರ ನಾಡಿಗಳು ಹೊಸ ಚೈತನ್ಯವನ್ನು ತುಂಬಿಕೊಂಡು ಹೃದಯ ಆರೋಗ್ಯವಾಗಿರುತ್ತದೆ. ನಿಮ್ಮ ದೇಹದಲ್ಲಿರುವ ಮೂಳೆ ಮತ್ತು ಖಂಡಗಳ ಶಕ್ತಿ ಹೆಚ್ಚಾಗುತ್ತದೆ, ಅಷ್ಟೇ ಅಲ್ಲದೆ ನೀವು ಮುಂಜಾನೆಯ ಎಳೆ ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆದರೇ ನಿಮ್ಮ ಮೂಳೆಗೆ ಅಗತ್ಯವಿರುವ ಕ್ಯಾಲ್ಸಿಯಂ ಗಳು ನಿಮ್ಮ ದೇಹಕ್ಕೆ ದೊರೆಯುತ್ತವೆ. ಇಷ್ಟೆಲ್ಲಾ ಲಾಭಗಳಿರುವಾಗ ನೀವು ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ನಿಮ್ಮ ಮನೆಯ ಒಳಗಡೆಯೇ ಆದರೂ ಪರವಾಗಿಲ್ಲ ಅಥವಾ ಮುಂಜಾನೆಯ ಸಂದರ್ಭದಲ್ಲಿ ನಿಮ್ಮ ಮಹಡಿಯ ಮೇಲೆ ಎಳೆಬಿಸಿಲಿನಲ್ಲಿ ನಡೆಯಿರಿ. ನಿಮ್ಮ ಆರೋಗ್ಯದಲ್ಲಿ ಕ್ರಮೇಣ ಬೆಳವಣಿಗೆ ಕಾಣುತ್ತದೆ.