ಎನ್ಸಿಬಿ ಆಯಿತು, ಇದೀಗ ಸಿಬಿಐ ಸರದಿ ! ಮತ್ತೊಂದು ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಬಿಐ ಕೈಯಲ್ಲಿ ಸಿಕ್ಕಿಬಿದ್ದ ರಿಯಾ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸಿಬಿಐ ಸಂಸ್ಥೆಯು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆ ನಡೆಸುತ್ತಿದೆ. ಎನ್ಸಿಬಿ ಸಂಸ್ಥೆಯು ಬಹಳ ವೇಗವಾಗಿ ಮಾಹಿತಿಗಳನ್ನು ಕಲೆಹಾಕಿ ಸಿಬಿಐ ಸಂಸ್ಥೆಗಿಂತ ಮುಂದೆ ಹೋಗಿದ್ದ ಕಾರಣ ನೆಟ್ಟಿಗರು ಸೇರಿದಂತೆ ಸಿಂಗ್ ರಜಪೂತ್ ರವರ ಅಭಿಮಾನಿಗಳು ಸಿಬಿಐ ಸಂಸ್ಥೆಯು ಪ್ರಕರಣದಲ್ಲಿ ಯಾವುದೇ ಮಹತ್ವದ ಘಟ್ಟವನ್ನು ತಲುಪುವಲ್ಲಿ ವಿಫಲರಾಗಿದ್ದಾರೆ ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಅಷ್ಟರಲ್ಲಾಗಲೇ ಸಿಬಿಐ ಸಂಸ್ಥೆಯು ತನಗೆ ಸಿಕ್ಕ ಮಾಹಿತಿಗಳನ್ನು ಹೊರಹಾಕಲು ಆರಂಭಿಸಿದ್ದು ಇಂದು ಮತ್ತೊಂದು ಮಹತ್ವದ ಘಟನೆ ನಡೆದಿದ್ದು ಎನ್ಸಿಬಿ ಸಂಸ್ಥೆಯು ಶಾಕ್ ನೀಡಿದ ನಂತರ ಇದೀಗ ರಿಯಾ ಚಕ್ರವರ್ತಿಯವರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಿಯಾ ಚಕ್ರವರ್ತಿ ರವರು ನಾನು ಸುಶಾಂತ್ ಸಿಂಗ್ ಇಹಲೋಕ ತ್ಯಜಿಸಿದ ದಿನವಾಗಲಿ ಅಥವಾ ಹಿಂದಿನ ದಿನವಾಗಲಿ ಅವರನ್ನು ಭೇಟಿಯಾಗಿರಲಿಲ್ಲ, ನಾನು ಅವರಿಂದ ಅಪಾರ್ಟ್ಮೆಂಟ್ ತ್ಯಜಿಸಿ ಬಹಳ ದಿನಗಳೇ ಕಳೆದಿತ್ತು ಎಂದು ಹೇಳಿಕೆ ನೀಡಿದ್ದರು, ಅಂದರೆ ಜೂನ್ 8 ರಂದು ನಾನು ಬಿಟ್ಟು ಹೋಗಿದ್ದೆ ಎಂದಿದ್ದರು. ಇದರ ನಡುವೆ ಕೆಲವು ನೆರೆಮನೆಯವರು ಸೇರಿದಂತೆ ಇನ್ನಿತರ ಕೆಲವು ಜನರು ನಾವು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ನಡೆದ ಹಿಂದಿನ ರಾತ್ರಿ ರಿಯಾ ಚಕ್ರವರ್ತಿ ರವರನ್ನು ಸುಶಾಂತ್ ಸಿಂಗ್ ರಜಪೂತ್ ರವರ ಜೊತೆ ನೋಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಆ ಹೇಳಿಕೆಗೆ ಯಾವುದೇ ಮಹತ್ವ ಬೀರಿರಲಿಲ್ಲ.

ಈ ರೀತಿಯ ಹೇಳಿಕೆಗಳು ಭಾರಿ ಸಂಖ್ಯೆಯಲ್ಲಿ ಕೇಳಿಬಂದ ಕಾರಣ ಸಿಬಿಐ ಸಂಸ್ಥೆಯು ಈ ರೀತಿಯಿಂದ ಏನಾದರೂ ಮಾಹಿತಿ ಸಿಗಬಹುದೆಂದು ಕಲೆಹಾಕಲು ಫೀಲ್ಡಿಗಿಳಿದು ಸಂಪೂರ್ಣ ತನಿಖೆ ನಡೆಸಿದಾಗ ಸುಶಾಂತ್ ಸಿಂಗ್ ರಜಪೂತ್ ರವರ ಪಕ್ಕದ ಮನೆಯವರು ಜೂನ್ 13ರ ಸಂಜೆ ಪ್ರಿಯ ಚಕ್ರವರ್ತಿ ರವರು ಸುಶಾಂತ್ ಸಿಂಗ್ ರಜಪೂತ್ ರವರನ್ನು ಭೇಟಿಯಾದರು, ನಾನು ನೋಡಿದ್ದೇನೆ ಎಂದು ಸಿಬಿಐ ಸಂಸ್ಥೆಗೆ ವಿವರಣೆ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಮಾತುಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿರುವ ಸಿಬಿಐ ಸಂಸ್ಥೆಯು ಇಲ್ಲಿಯವರೆಗೂ ಸುಶಾಂತ್ ಸಿಂಗ್ ರಜಪೂತ್ ರವರ ಜೊತೆ ರಿಯಾ ಚಕ್ರವರ್ತಿ ರವರನ್ನು ನೋಡಿದ್ದೇನೆ ಎಂದು ಹೇಳಿರುವ ಜನರಿಗೆ ಸಮನ್ಸ್ ಜಾರಿ ಮಾಡಿ ತನಿಖೆಗೆ ಹಾಜರಾಗಲು ಸೂಚಿಸಿದೆ. ಈ ಮಾಹಿತಿಯ ಅನ್ವಯ ಪ್ರಿಯ ಚಕ್ರವರ್ತಿ ರವರು ಜೂನ್ 13 ರಂದು ಭೇಟಿಯಾಗಿದ್ದಾರೆ ಎಂಬುದು ಖಚಿತವಾಗಿದೆ, ಆದರೆ ಈ ಮುನ್ನ ಸಿಬಿಐ ಹೇಳಿಕೆಯಲ್ಲಿ ರಿಯಾ ಚಕ್ರವರ್ತಿ ರವರು ನಾನು ಕೊನೆಯ ಬಾರಿ ಜೂನ್ 8 ನೇ ತಾರೀಖಿನಂದು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಇದೀಗ ಪ್ರಕರಣದಲ್ಲಿ ಮಹತ್ವದ ತಿರುವು ನೀಡಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಸಿಬಿಐ ಸಂಸ್ಥೆಯು ರಿಯಾ ಚಕ್ರವರ್ತಿ ರವನ್ನು ತನ್ನ ಕಸ್ಟಡಿಗೆ ನೀಡುವಂತೆ ಎನ್ಸಿಬಿ ಸಂಸ್ಥೆಯನ್ನು ಮನವಿ ಮಾಡಬಹುದು ಎನ್ನಲಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ರಿಯಾ ಚಕ್ರವರ್ತಿ ರವರಿಗೆ ಬಾರಿ ಹಿನ್ನಡೆಯಾಗುವುದು ಖಚಿತ.

Post Author: Ravi Yadav