ನೌಕಾಪಡೆಗೆ ಅತಿ ದೊಡ್ಡ ಗೇಮ್ ಚೇಂಜರ್ ಸೇರ್ಪಡೆ ! ಪಾಕ್,ಚೀನಾಗೆ ಮತ್ತೊಂದು ಬಿಗ್ ಶಾಕ್ ! ಏನು ಗೊತ್ತಾ?

ನೌಕಾಪಡೆಗೆ ಅತಿ ದೊಡ್ಡ ಗೇಮ್ ಚೇಂಜರ್ ಸೇರ್ಪಡೆ ! ಪಾಕ್,ಚೀನಾಗೆ ಮತ್ತೊಂದು ಬಿಗ್ ಶಾಕ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ಹಾಗೂ ಚೀನಾ ದೇಶಗಳ ನಡುವಿನ ಗಡಿಯಲ್ಲಿ ನಡೆಯುತ್ತಿರುವ ಯಾವುದೇ ವಿದ್ಯಮಾನಗಳು ಮುಗಿಯುವ ಮುನ್ಸೂಚನೆಗಳು ಕಾಣುತ್ತಿಲ್ಲ. ಹಲವಾರು ವರ್ಷಗಳಿಂದ ಪಾಕಿಸ್ತಾನ ದೇಶದ ಜೊತೆ ಹಂಚಿಕೊಂಡಿರುವ ಗಡಿ ಬೂದಿ ಮುಚ್ಚಿದ ಕೆಂ’ಡದಂತೆಯೇ ಇದೆ. ಆದರೆ ಇತ್ತೀಚೆಗೆ ಕೆಲವು ತಿಂಗಳುಗಳ ಅಂತರದಲ್ಲಿ ಭಾರತ ಹಾಗೂ ಚೀನಾ ದೇಶಗಳ ನಡುವಿನ ಗಡಿ ಮತ್ತಷ್ಟು ಕಾವು ಏರಿಸಿದೆ. ಎರಡು ದೇಶಗಳ ಸೈನಿಕರು ಗಡಿಯಲ್ಲಿ ಜಮಾವಣೆ ಕೊಂಡಿದ್ದಾರೆ. ಚೀನಾ ದೇಶದ ಸೈನಿಕರು ಭಾರತದ ಸೈನಿಕರ ಜೊತೆ ಯಾವುದಕ್ಕೂ ಸರಿಸಾಟಿ ಇಲ್ಲ ಎಂಬುದನ್ನು ಅರಿತಿದ್ದರೂ ಚೀನಾ ದೇಶದ ಅಧ್ಯಕ್ಷರ ಮಾತಿಗೆ ಕಟ್ಟುಬಿ’ದ್ದು ಚೀನಾ ದೇಶದ ಸೇನೆ ಗಡಿಯಲ್ಲಿ ಬೀಡುಬಿಟ್ಟಿದೆ.

ಹೀಗಿರುವಾಗ ದಿನೇ ದಿನೇ ಭಾರತೀಯ ಸೇನೆ ಮತ್ತಷ್ಟು ಬಲಗೊಳ್ಳುತ್ತದ್ದು, ಚೀನಾ ಹಾಗೂ ಪಾಕ್ ದೇಶಗಳಿಗೆ ಎಲ್ಲಾ ರೀತಿಯಲ್ಲೂ ಉತ್ತರ ನೀಡಲು ಮತ್ತಷ್ಟು ಬಲವಾಗಿ ತಯಾರಾಗುತ್ತಿದೆ. ಇಂದು ಕೂಡ ಭಾರತೀಯ ನೌಕಾಪಡೆಗೆ ಆನೆಬಲ ಬಂದಿದ್ದು, ಸ್ವದೇಶೀ ನಿರ್ಮಿತ ಜಲಂತರ್ಗಾಮಿ ವಿರೋಧಿ ಶ’ಸ್ತ್ರಾಸ್ತ್ರ ವ್ಯವಸ್ಥೆ ಇಡೀ ವಿಶ್ವವನ್ನು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದೆ. ಹೌದು ಸ್ನೇಹಿತರೇ ಇದೀಗ ಡಿಆರ್ಡಿಒ ಸಂಸ್ಥೆಯು ಕ್ಷಿಪಣಿಗಳ ಸಹಾಯದಿಂದ ಟಾರ್ಪಿಡೊಗಳನ್ನು ಉಡಾಯಿಸಿ ಇತರ ದೇಶಗಳನ್ನು ನೌಕಾ ಪಡೆಯ ಹಡಗುಗಳನ್ನು ಉಡೀಸ್ ಮಾಡುವ ಅತ್ಯಾಧುನಿಕ ಸ್ಮಾರ್ಟ್ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಈ ಕುರಿತು ಭಾರತೀಯ ನೌಕಾಪಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಇಂದು ಬೆಳಗ್ಗೆ 11.45 ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳುವುದಾದರೇ ಕ್ಷಿಪಣಿ ಆಕಾಶಕ್ಕೆ ಹಾರಿ, ನಿರ್ದಿಷ್ಟ ಸಮಯದಲ್ಲಿ ಬೇರ್ಪಟ್ಟು ಎರಡು ವಿಭಾಗಗಳಾಗಿ ವಿಂಗಡನೆಯಾಗುತ್ತವೆ, ತದನಂತರ ನೀರಿಗೆ ಬಿದ್ದ ಒಂದು ಭಾಗ ಟಾರ್ಪಿಡೊ ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಇತರ ದೇಶಗಳ ನೌಕಾಪಡೆಯ ಹಡಗುಗಳು ಇದು ಕ್ಷಿಪಣಿಯೋ ಅಥವಾ ಟಾರ್ಪಿಡೊನಾ ಎಂಬ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವ ಸಂದರ್ಭದಲ್ಲಿ ಬಹಳ ವೇಗವಾಗಿ ಕಾರ್ಯ ಮುಗಿಸಿ ಹಡಗುಗಳನ್ನು ಉಡಿಸ್ ಮಾಡುತ್ತದೆ.