ಈರುಳ್ಳಿ ಸಿಪ್ಪೆಯ ಆರೋಗ್ಯಕರ ಲಾಭಗಳನ್ನು ತಿಳಿದರೇ ನೀವು ಸಿಪ್ಪೆ ಬಿಸಾಡುವುದಿಲ್ಲ ! ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ??

ಈರುಳ್ಳಿ ಸಿಪ್ಪೆಯ ಆರೋಗ್ಯಕರ ಲಾಭಗಳನ್ನು ತಿಳಿದರೇ ನೀವು ಸಿಪ್ಪೆ ಬಿಸಾಡುವುದಿಲ್ಲ ! ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಆಧುನಿಕ ಯುಗದಲ್ಲಿ ಶೂನ್ಯ ತ್ಯಾಜ್ಯದಿಂದ ಅಡುಗೆ ಮಾಡಬೇಕು ಎಂಬ ಆಲೋಚನೆಗಳು ಗರಿಗೆದರಿವೆ. ಇನ್ನು ಇದೇ ಸಂದರ್ಭದಲ್ಲಿ ನಾವು ಪ್ರತಿನಿತ್ಯ ಬಳಸುವ ತರಕಾರಿಗಳಿಂದ ಹಲವಾರು ವಿವಿಧ ರೀತಿಯ ಪ್ರಯೋಜನಗಳನ್ನು ಸಂಶೋಧಕರು ಕಂಡುಹಿಡಿದ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾವ ರೀತಿಯ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಬಳಸಿದರೇ ಮನುಷ್ಯನ ದೇಹಕ್ಕೆ ಅಥವಾ ಇತರ ಯಾವುದೇ ಕಾರ್ಯಕ್ಕಾಗಲಿ ಬಳಸಿಕೊಳ್ಳಬಹುದು ಎಂಬುದರ ಕುರಿತು ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಇನ್ನು ಸಾಮಾನ್ಯವಾಗಿ ನಾವು ಪ್ರತಿನಿತ್ಯ ಬಳಸುವ ಈರುಳ್ಳಿಯ ಸಿಪ್ಪೆ ಯಿಂದ ನಮಗಾಗುವ ಲಾಭಗಳನ್ನು ನೀವು ತಿಳಿದರೇ ಖಂಡಿತ ಇನ್ನು ಮುಂದೆ ಈರುಳ್ಳಿ ಸಿಪ್ಪೆ ಯನ್ನು ತ್ಯಾಜ್ಯಕ್ಕೆ ಹಾಕುವುದಿಲ್ಲ. ಬನ್ನಿ ಇಂದು ನಾವು ಈರುಳ್ಳಿ ಸಿಪ್ಪೆ ಯನ್ನು ಬಳಸಿಕೊಂಡು ಯಾವ ಪದಾರ್ಥ ತಯಾರು ಮಾಡಬಹುದು ಅಷ್ಟೇ ಅಲ್ಲದೇ ಇದು ನಮಗೆ ಹೇಗೆ ಆರೋಗ್ಯಕರ ರೀತಿಯಲ್ಲಿ ಸಹಕಾರಿಯಾಗಿದೆ ಎಂಬುದರ ಕುರಿತು ತಿಳಿದುಕೊಳ್ಳೋಣ.

ಮೊದಲಿಗೆ ಸ್ನೇಹಿತರೇ ಈರುಳ್ಳಿ ಸಿಪ್ಪೆಯನ್ನು ಹೇಗೆ ಅಡುಗೆ ಮನೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ತೆಗೆದುಕೊಳ್ಳೋಣ, ನಂತರ ಅದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳ ಕುರಿತು ತಿಳಿಯೋಣ. ಮೊದಲನೆಯದಾಗಿ ಈರುಳ್ಳಿ ಸಿಪ್ಪೆಯ ಚಹಾ ಮಾಡುವುದು ಬಹಳ ಸುಲಭವಾದ ಕೆಲಸ ಮೊದಲಿಗೆ ನಿಮ್ಮ ಮನೆಯಲ್ಲಿ ಈರುಳ್ಳಿ ಸಿಪ್ಪೆ ಯನ್ನು ತೆಗೆದ ನಂತರ, ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳಿ. ಯಾಕೆಂದರೆ ಕೆಲವು ಮಣ್ಣಿನ ಕಣಗಳು ಈರುಳ್ಳಿ ಸಿಪ್ಪೆಯ ಮೇಲೆ ಇರಬಹುದು, ಇದಾದ ನಂತರ ಈರುಳ್ಳಿ ಸಿಪ್ಪೆಗಳನ್ನು ಸ್ವಚ್ಛ ನೀರಿನಲ್ಲಿ ಹಾಕಿ ಕೆಲವು ನಿಮಿಷಗಳ ಕಾಲ ಕುದಿಸಿ. ಈ ನೀರನ್ನು ನೀವು ತಣ್ಣಗಾಗಿಸಿ ಅಥವಾ ಕೊಂಚ ಬೆಚ್ಚಗಿರುವ ಸಂದರ್ಭದಲ್ಲಿ ಸೋಸಿ ಸೇವಿಸಬಹುದಾಗಿದೆ. ಅಷ್ಟೇ ಅಲ್ಲದೆ ಬಿರಿಯಾನಿ, ಪಲಾವ್, ಫ್ರೈಡ್ ರೈಸ್, ಜೀರಾ ರೈಸ್ ಸೇರಿದಂತೆ ಇನ್ನಿತರ ಆಹಾರಗಳನ್ನು ತಯಾರಿಸುವ ಸಂದರ್ಭದಲ್ಲಿ ಈರುಳ್ಳಿ ಸಿಪ್ಪೆ ಯನ್ನು ಅಕ್ಕಿ ಹಾಕುವ ಸಂದರ್ಭದಲ್ಲಿ ಅಕ್ಕಿಯ ಜೊತೆ ಹಾಕಿ ಬೆಳೆಸುವುದರ ಮೂಲಕ,ವಿಚಿತ್ರ ರುಚಿಯನ್ನು ಅಡುಗೆಗೆ ನೀಡಬಹುದಾಗಿದೆ. ಹೀಗೆ ಬಾತ್ ಗಳಲ್ಲಿ ಬಳಸಿ ನಂತರ ಸೇವಿಸುವ ಮುನ್ನ ಈರುಳ್ಳಿ ಸಿಪ್ಪೆಯನ್ನು ಪಕ್ಕಕ್ಕೆ ಇಡುವುದನ್ನು ಮರೆಯಬೇಡಿ.

ಇನ್ನು ಇಷ್ಟೇ ಅಲ್ಲದೇ ಈರುಳ್ಳಿ ಸಿಪ್ಪೆಯನ್ನು ತೆಗೆದು ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿ ನಂತರ ಸಿಪ್ಪೆಯನ್ನು ತೆಗೆದು ಹಾಕಿ ನೀರು ಕುಡಿಯಿರಿ. ಇದರಿಂದ ನಿಮ್ಮ ಸ್ನಾಯು ಸೆಳೆತ ಕಡಿಮೆಯಾಗಿ ಉರಿಯೂತದ ಗುಣಲಕ್ಷಣಗಳು ಬಹಳ ಸುಲಭವಾಗಿ ಕಡಿಮೆಯಾಗುತ್ತವೆ. ಇಷ್ಟೇ ಅಲ್ಲದೇ ಇನ್ನು ವಿವಿಧ ರೀತಿಯಲ್ಲಿ ಈರುಳ್ಳಿ ಸಿಪ್ಪೆಗಳನ್ನು ನೀವು ಬಳಸಬಹುದಾಗಿದೆ. ಇನ್ನು ಈ ರೀತಿ ಮಾಡುವುದರಿಂದ ನಿಮ್ಮ ದೇಹಕ್ಕೆ ಆಗುವ ಲಾಭಗಳ ಕುರಿತು ಗಮನಹರಿಸುವುದಾದರೇ,

ಮೊದಲನೆಯದಾಗಿ ಈರುಳ್ಳಿ ಸಿಪ್ಪೆಯು ಅತ್ಯುತ್ತಮ ಜೀವಸತ್ವಗಳಿಂದ ತುಂಬಿದೆ, ಈರುಳ್ಳಿ ಸ್ಪೆಲ್ಲಿಂಗ್ ವಿಟಮಿನ್-ಎ ಸಮೃದ್ಧವಾಗಿರುವ ಕಾರಣ ನೀವು ಸಹ ಸೇವಿಸಿದರೇ ನಿಮ್ಮ ಕಣ್ಣಿನ ದೃಷ್ಟಿ ಹಾಗೂ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ಈರುಳ್ಳಿ ಸಿಪ್ಪೆಯು ವಿಟಮಿನ್ ಸಿ ಮತ್ತು ವಿಟಮಿನ್ ಇ ಹೊಂದಿರುವ ಕಾರಣ ನಿಮ್ಮ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ಚರ್ಮದ ಆರೋಗ್ಯ ಕಾಪಾಡುತ್ತದೆ. ಅಷ್ಟೇ ಅಲ್ಲದೆ ಈರುಳ್ಳಿ ಸಿಪ್ಪೆಗಳು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ತುಂಬಿರುವ ಕಾರಣ, ನಿಮಗೆ ಶೀತ ಕೆಮ್ಮು ಮತ್ತು ಜ್ವರದ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವಿಟಮಿನ್-ಸಿ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದ್ದು, ನಿಮ್ಮ ದೇಹದಲ್ಲಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ನು ಇಷ್ಟೇ ಅಲ್ಲದೆ ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾದಲ್ಲಿ ಕ್ಯಾಲೋರಿ ಕಡಿಮೆ ಇದ್ದು ದೇಹದ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ. ಈರುಳ್ಳಿ ಸಿಪ್ಪೆಯಲ್ಲಿರುವ ಕೆಲವು ಅಂಶಗಳು ಹೃದಯಕ್ಕೆ ಬಹಳ ಸಹಕಾರಿಯಾಗಿದ್ದು ನಿಮ್ಮ ದೇಹದ ಕೊಬ್ಬಿನ ಪ್ರಮಾಣವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಇನ್ನು ಈರುಳ್ಳಿ ಸಿಪ್ಪೆಯು ಆಂಟಿ ಫಂಗಲ್ ಗುಣಗಳನ್ನು ಹೊಂದಿರುವ ಕಾರಣ ನಿಮ್ಮ ಚರ್ಮದ ತುರಿಕೆ ಅಥವಾ ದದ್ದುಗಳನ್ನು ನಿವಾರಿಸುವಲ್ಲಿ ಈರುಳ್ಳಿ ಸಿಪ್ಪೆ ಮಹತ್ವದ ಪಾತ್ರವಹಿಸುತ್ತದೆ.