ಅಬ್ಬಾ ! ಒಂದು ಸೆಕೆಂಡ್ ವಿಮಾನ ಚಲಿಸಲು ಅಗತ್ಯವಿರುವ ಇಂಧನ ಎಷ್ಟು ಗೊತ್ತಾ?? ನೀವರಿಯದ ಮಾಹಿತಿ

ಅಬ್ಬಾ ! ಒಂದು ಸೆಕೆಂಡ್ ವಿಮಾನ ಚಲಿಸಲು ಅಗತ್ಯವಿರುವ ಇಂಧನ ಎಷ್ಟು ಗೊತ್ತಾ?? ನೀವರಿಯದ ಮಾಹಿತಿ

ನಮಸ್ಕಾರ ಸ್ನೇಹಿತರೇ, ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯನು ಅತಿ ವೇಗವಾಗಿ ವಿಮಾನಗಳಲ್ಲಿ ಪ್ರಯಾಣಿಸುತ್ತಾನೆ. ಇತರ ಸಾರಿಗೆ ವ್ಯವಸ್ಥೆಗಳಿಗೆ ಹೋಲಿಸಿಕೊಂಡರೇ ವಿಮಾನಯಾನ ಬಹಳ ವೇಗವಾಗಿರುತ್ತದೆ. ಕೆಲವೇ ಕೆಲವು ವರ್ಷಗಳ ಹಿಂದೆ ವಿಮಾನ ಎಂದರೇ ಕೇವಲ ಶ್ರೀಮಂತರು ಮಾತ್ರ ಪ್ರಯಾಣ ಮಾಡಬಹುದಾದ ಒಂದು ಸಾರಿಗೆ ವ್ಯವಸ್ಥೆಯಾಗಿತ್ತು, ಆದರೆ ಇಂದಿನ ಯುಗದಲ್ಲಿ ಹತ್ತಿರದ ನಗರಗಳ ನಡುವೆ ವಿಮಾನಯಾನ ಏರ್ಪಡಿಸಿರುವ ಕಾರಣ ಸಾಮಾನ್ಯ ಜನರು ಕೂಡ ಸಮಯವನ್ನು ಉಳಿಸಲು ಇಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.

ಇನ್ನು ಸಾಮಾನ್ಯ ಕಾರು ಹಾಗೂ ಬೈಕು ಗಳಂತೆ ವಿಮಾನದಲ್ಲಿಯೂ ಕೂಡ ಇಂಧನ ಬಳಸಲಾಗುತ್ತದೆ, ಆದರೆ ಸಾಮಾನ್ಯ ಪೆಟ್ರೋಲ್ ಅಥವ ಡೀಸೆಲ್ ರೀತಿಯದ್ದಲ್ಲ. ಆದರೂ ಕೂಡ ಒಟ್ಟಿನಲ್ಲಿ ಇಂಧನವಿಲ್ಲದೇ ವಿಮಾನ ಚಲಿಸಲು ಸಾಧ್ಯವಿಲ್ಲ. ಆಗಿದ್ದರೇ ಬೈಕುಗಳು ಹಾಗೂ ಕಾರುಗಳು ಮೈಲೇಜ್ ನೀಡುವಂತೆ ವಿಮಾನ ಎಷ್ಟು ಮೈಲೇಜ್ ನೀಡಬಹುದು, ವಿಮಾನದಲ್ಲಿ ಪ್ರತಿ ಕಿಲೋಮೀಟರ್ ಅಥವಾ ಸೆಕೆಂಡಿಗೆ ಎಷ್ಟು ಖರ್ಚಾಗುತ್ತದೆ ಎಂದೆಲ್ಲ ಆಸಕ್ತಿದಾಯಕ ಪ್ರಶ್ನೆಗಳಿಗೆ ನಾವು ಇಂದು ಉತ್ತರ ನೀಡುತ್ತೇವೆ. ಸ್ನೇಹಿತರೇ, ಕಾರು ಹಾಗೂ ಬೈಕುಗಳಲ್ಲಿ ಇದ್ದಂತೆ ಇಂಧನ ಗಳಲ್ಲಿಯೂ ಕೂಡ ಸಾಕಷ್ಟು ವಿವಿಧ ಕಂಪನಿಯ ವಿಮಾನಗಳಿಗೆ, ಆದ ಕಾರಣ ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನಕ್ಕೆ ಬಹಳ ಸೂಕ್ತವೆನಿಸುವ ಬೋಯಿಂಗ್ 747 ವಿಮಾನದ ಮೈಲೇಜ್ ಕುರಿತು ಇಂದು ನಾವು ನಿಮಗೆ ಮಾಹಿತಿ ನೀಡುತ್ತೇವೆ.

ಇದು ವಿಶ್ವದಲ್ಲಿ ಅತಿ ದೊಡ್ಡ ವಿಮಾನಗಳಲ್ಲಿ ಒಂದಾಗಿದೆ, ಈ ವಿಮಾನವು ಒಮ್ಮೆಲೆ 568 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ಐನೂರಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಈ ವಿಮಾನ ಪ್ರತಿ ಸೆಕೆಂಡಿಗೆ ಒಂದು ಗ್ಯಾಲನ್ ಅಂದರೆ ಸುಮಾರು ನಾಲ್ಕು ಲೀಟರ್ಗಳಷ್ಟು ಇಂಧನವನ್ನು ಬಳಸುತ್ತದೆ. ಸುಮಾರು ಹತ್ತು ಗಂಟೆಯ ಅವಧಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಈ ವಿಮಾನ ಬರೋಬ್ಬರಿ 36 ಸಾವಿರ ಗ್ಯಾಲನ್ ಅಂದರೆ ಒಂದೂವರೆ ಲಕ್ಷ ಲೀಟರ್ ಇಂಧನವನ್ನು ಹೊತ್ತುಕೊಂಡು ಹಾರುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಮೈಲಿಯನ್ನು ತಲುಪಲು ಈ ವಿಮಾನ ಬಳಸುವ ಇಂಧನ ಐದು ಗ್ಯಾಲನ್, ಅಂದರೆ ಸರಿ ಸುಮಾರು 12 ಲೀಟರ್ ಗಳಷ್ಟು ಇಂಧನವನ್ನು ಒಂದು ಕಿಲೋಮೀಟರ್ ಚಲಿಸಲು ಬಳಸಲಾಗುತ್ತದೆ. ಈ ವಿಮಾನವು ಬರೋಬ್ಬರಿ ಗಂಟೆಗೆ ಒಂಬೈನೂರು ಕಿಲೋ ಮೀಟರ್ ವೇಗದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ನೋಡಿದಿರಲ್ಲ ಸ್ನೇಹಿತರೇ ವಿಮಾನದ ಇಂಧನದ ಬಳಕೆಯ ಕುರಿತು ನಿಮಗೆ ತಿಳಿಯದ ಕೆಲವೊಂದು ಮಾಹಿತಿಗಳು.