ಒಂದು ಹಲ್ಲಿಯನ್ನು ಹಿಡಿಯಲು ಅಸಂಖ್ಯಾತ ಹಾವುಗಳು ಪ್ರಯತ್ನ ಪಟ್ಟಾಗ ಹಲ್ಲಿ ಚಾಕಚಕ್ಯತೆ ಮೆರೆದಿದ್ದು ಹೇಗೆ ಗೊತ್ತಾ?? ನೀವೇ ನೋಡಿ

ನಮಸ್ಕಾರ ಸ್ನೇಹಿತರೇ, ನಾವು ಇಂದು ನಿಮಗೆ ತೋರಿಸುತ್ತಿರುವ ವಿಡಿಯೋ ಬಹಳ ಆಸಕ್ತಿದಾಯಕ ಹಾಗೂ ಅದ್ಭುತ ಅನುಭವವನ್ನು ನೀಡುತ್ತದೆ. ನೀವು ಇದನ್ನು ಒಂದು ಜೀವನ ಪಾಠ ವನ್ನಾಗಿ ಕೂಡ ತೆಗೆದುಕೊಳ್ಳಬಹುದಾಗಿದೆ. ಸುತ್ತ ಮುತ್ತ ನೂರಾರು ಅಡೆತಡೆಗಳು ಇದ್ದರೂ ಕೂಡ ನಾವು ಯಾವ ರೀತಿ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸಬೇಕು ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಅಷ್ಟೇ ಅಲ್ಲದೇ ಇಂತಹ ಸಂದರ್ಭದಲ್ಲಿಯೂ ನಾವು ಪ್ರಯತ್ನಪಡದೆ ಸುಮ್ಮನೆ ಕೂರಬಾರದು ಎಂಬುದನ್ನು ಈ ವಿಡಿಯೋ ಸಾರಿ ಹೇಳುತ್ತದೆ.

ಅಂದಹಾಗೆ ಸ್ನೇಹಿತರೇ ಇಷ್ಟೆಲ್ಲಾ ಗಮನ ಸೆಳೆಯುವಂತಹ ವಿಡಿಯೋ ಖಂಡಿತ ಯಾವುದೇ ಸಿನಿಮಾದ್ದು ಅಲ್ಲಾ, ಇಲ್ಲಿ ಯಾವುದೇ ಎಡಿಟಿಂಗ್ ಕಾರ್ಯ ನಡೆದಿಲ್ಲ. ಇದು ಪ್ರಕೃತಿಯ ನಡುವೆ ನಡೆದ ಒಂದು ರೋಚಕ ಕಥೆ. ಆದರೆ ಸಿನಿಮಾಗಳಲ್ಲಿ ಇರುವ ಎಲ್ಲ ರೀತಿಯ ಆಸಕ್ತಿದಾಯಕ, ಕುತೂಹಲಕಾರಿ, ಚೇಸಿಂಗ್ ಮಾಡುವುದು, ಮುಂದೇನಾಗುತ್ತದೆ ಎಂಬ ಆಸಕ್ತಿಯನ್ನು ಕೂಡ ಈ ವಿಡಿಯೋ ನಿಮಗೆ ಉಂಟುಮಾಡುತ್ತದೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗಿದ್ದು ಜನರು ಮನಸೋ ಇಚ್ಛೆ ವೈರಲ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಹಲ್ಲಿ ಜಾತಿಗೆ ಸೇರಿದ ಪ್ರಾಣಿಯೊಂದು ಸಮುದ್ರದ ದಡದಲ್ಲಿ ಇರುವ ಒಂದು ಕಲ್ಲಿನಿಂದ ಹೊರಬರುತ್ತದೆ. ಅದೇ ಸಮಯದಲ್ಲಿ ಇಲ್ಲೊಬ್ಬರು ಡಾಕ್ಯುಮೆಂಟರಿ ಚಿತ್ರಗಳನ್ನು ತೆಗೆಯುತ್ತಿರುತ್ತಾರೆ. ಇವರು ಬಹಳ ದೂರದಿಂದ ಈ ಸನ್ನಿವೇಶವನ್ನು ರೆಕಾರ್ಡ್ ಮಾಡಲಾಗಿದ್ದು, ಈ ಹಲ್ಲಿಯನ್ನು ಹಿಡಿಯಲು ಹಲವಾರು ಹಾವುಗಳು ಪ್ರಯತ್ನ ಕೊಡುತ್ತವೆ. ಹಲ್ಲಿಯನ್ನು ಕಂಡ ಕೂಡಲೇ ಬಂಡೆಗಳಿಂದ ಹತ್ತಾರು ಹಾವುಗಳು ಹೊರಬರುತ್ತವೆ. ಈ ಹಲ್ಲಿಯನ್ನು ಹಿಡಿಯಲು ಹಾವುಗಳು ನಡೆಸುವ ಪ್ರಯತ್ನ ಅಷ್ಟಿಷ್ಟಲ್ಲ, ಅಷ್ಟಾದರೂ ಕೂಡ ಹಲ್ಲಿ ತನ್ನ ಪ್ರಾಣ ಉಳಿಸಿಕೊಂಡು ಬಚಾವಾಗುತ್ತದೆ. ಈ ಕೆಳಗಿನ ಟ್ವೀಟ್ ನಲ್ಲಿ ಇರುವ ವಿ’ಡಿಯೋ ದಲ್ಲಿ ನೀವೇ ಸಂಪೂರ್ಣ ನೋಡಿ.

ಈ ವಿಡಿಯೋದಲ್ಲಿ ಒಂದು ಹಂತದಲ್ಲಿ ಹಲ್ಲಿ ಹಾವಿಗೆ ಸಿಕ್ಕಿಬಿಟ್ಟಿತು, ಹಲವಾರು ಹಾವುಗಳು ಒಮ್ಮೆಲೆ ಹಲ್ಲಿಯನ್ನು ಸುತ್ತುಕೊಳ್ಳಲು ಆರಂಭಿಸಿದವು. ಆದರೆ ಪಟ್ಟುಬಿಡದ ಹಲ್ಲಿ ಪ್ರಯತ್ನ ನಿಲ್ಲಿಸದೆ ತನ್ನ ಪ್ರಾಣವನ್ನು ಉಳಿಸಿಕೊಂಡಿದೆ. ಮೇಲ್ಗಡೆ ಇರುವ ಟ್ವೀಟ್ ನಲ್ಲಿ ವಿ’ಡಿಯೋ ಇದ್ದು ಸಂಪೂರ್ಣ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav