ಬೆಳ್ಳುಳ್ಳಿ ಹುರಿದು ತಿಂದರೇ ನಿಮಗಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತೇ?? ವಾಹ್ ಅಧ್ಭುತ

ನಮಸ್ಕಾರ ಸ್ನೇಹಿತರೇ, ಭಾರತೀಯ ಪಾಕ ಪದ್ಧತಿಯಲ್ಲಿ ಸಾಮಾನ್ಯವಾಗಿ ಬೆಳ್ಳುಳ್ಳಿ ಇಲ್ಲದೆ ಯಾವುದೇ ಪ್ರಮುಖ ಖಾದ್ಯ ಪೂರ್ಣಗೊಳ್ಳುವುದಿಲ್ಲ. ಅಡುಗೆಗೆ ಉತ್ತಮ ರುಚಿ, ವಾಸನೆ ನೀಡುವ ಬೆಳ್ಳುಳ್ಳಿಯು ನಮ್ಮ ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳ ತಾಣವಾಗಿದೆ. ನಮ್ಮ ಪೂರ್ವಜರು ಹಿಂದಿನ ಕಾಲದಿಂದಲೂ ಬೆಳ್ಳುಳ್ಳಿಯನ್ನು ದೇಹಕ್ಕೆ ಅಗತ್ಯವಿರುವ ಔಷಧಿಯಾಗಿ ಬಳಸುತ್ತಿದ್ದಾರೆ. ಅಷ್ಟೇ ಅಲ್ಲಾ, ಇಂದಿಗೂ ಕೂಡ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಅಗ್ರಸ್ಥಾನದಲ್ಲಿ ಕಾಣಸಿಗುವ ಪದಾರ್ಥಗಳಲ್ಲಿ ಒಂದಾಗಿದೆ. ಬಹುಶಹ ನಿಮಗೆಲ್ಲರಿಗೂ ಬೆಳ್ಳುಳ್ಳಿಯನ್ನು ಸಾಮಾನ್ಯ ರೀತಿಯಲ್ಲಿ ಬಳಸಿದರೇ ನಮ್ಮ ದೇಹಕ್ಕೆ ಸಿಗುವ ಲಾಭಗಳ ಕುರಿತು ತಿಳಿದೇ ಇರುತ್ತದೆ. ಆದರೆ ಸ್ನೇಹಿತರೇ ಬೆಳ್ಳುಳ್ಳಿಯನ್ನು ಹುರಿದು ತಿಂದರೆ ನಮಗೆ ನಿರ್ದಿಷ್ಟವಾದ ಆರೋಗ್ಯಕರ ಲಾಭಗಳು ಸಿಗುತ್ತದೆ. ಬನ್ನಿ ನಾವು ಇಂದು ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಬೆಳ್ಳುಳ್ಳಿ ಹುರಿಯುವುದು ಹೇಗೆ ಎಂಬುದರ ಕುರಿತು ನಾವು ಗಮನಹರಿಸುವುದಾದರೆ ನೀವು ಒಂದು ವೇಳೆ ಗ್ಯಾಸ್ ಸ್ಟವ್ ನಲ್ಲಿ ಬೆಳ್ಳುಳ್ಳಿಯನ್ನು ಹುರಿಯಲು ಬಳಸುವುದಾದರೆ, ಮೊದಲಿಗೆ ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಕೊಳ್ಳಿ, ಒಂದು ಬಟ್ಟಲಿನಲ್ಲಿ ಸಾಸಿವೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬೆಳ್ಳುಳ್ಳಿ ಕೊಂಚ ಬಣ್ಣ ಬದಲಾಯಿಸಿ ಹುರಿದ ಬಣ್ಣ ಬರುವವರೆಗೂ ಕಾಯಿರಿ, ಕೊನೆಯದಾಗಿ ಕೊಂಚ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೇ ಸಾಕು. ಇನ್ನು ಹುರಿದ ಬೆಳ್ಳುಳ್ಳಿಯನ್ನು ನೀವು ಗಾಳಿ ಹೋಗದಂತಹ ಡಬ್ಬದಲ್ಲಿ ಸಂಗ್ರಹಿಸಿದರೇ ಕನಿಷ್ಠ ಮೂರರಿಂದ ನಾಲ್ಕು ದಿನಗಳವರೆಗೆ ಬೆಳ್ಳುಳ್ಳಿ ಕೆಡುವುದಿಲ್ಲ. ಹೀಗೆ ಹುರಿದಿರುವ ಬೆಳ್ಳುಳ್ಳಿಯನ್ನು ನೀವು ಸಾಮಾನ್ಯ ಬೆಳ್ಳುಳ್ಳಿ ಬಳಸುವಂತೆ ಇತರ ಅಡುಗೆ ಪದಾರ್ಥಗಳಲ್ಲಿ ಬಳಸಬಹುದಾಗಿದೆ. ಹೇಗಿದ್ದರೂ ಬೆಳ್ಳುಳ್ಳಿ ಬಳಸುತ್ತೇವೆ ಹೀಗೆ ಹುರಿದು ಬಳಸುವುದರ ಅಗತ್ಯವೇನು ಎಂದು ಆಲೋಚಿಸ ಬೇಡಿ, ಅದರ ಕುರಿತು ಕೂಡಾ ನಾವು ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಹುರಿದ ಬೆಳ್ಳುಳ್ಳಿಯನ್ನು ನಿಮ್ಮ ಅಡುಗೆ ಪದಾರ್ಥದಲ್ಲಿ ಸೇರಿಸಿ ಕೊಳ್ಳುವುದರಿಂದ ನಿಮಗೆ ಎಂತಹ ಅಜೀರ್ಣತೆಯ ಸಮಸ್ಯೆಗಳು ಇದ್ದರೂ ಕೂಡ ಬಹಳ ಸುಲಭವಾಗಿ ನಿವಾರಣೆಯಾಗುತ್ತದೆ. ಯಾಕೆಂದರೆ ಹೀಗೆ ಹುರಿದಿರುವ ಬೆಳ್ಳುಳ್ಳಿಯಲ್ಲಿರುವ ಅಂಶಗಳು ನಿಮ್ಮ ಕರುಳನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲಾ ಸಾಮಾನ್ಯ ಬೆಳ್ಳುಳ್ಳಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕಿಂತಲೂ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ನಿಮ್ಮ ದೇಹಕ್ಕೆ ಹುರಿದ ಬೆಳ್ಳುಳ್ಳಿ ಒದಗಿಸುತ್ತದೆ. ಇದರಿಂದ ನಿಮಗೆ ಯಾವುದೇ ನೆಗಡಿ ಅಥವಾ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆಗಳು ಇಲ್ಲ. ಇನ್ನು ಕೊನೆಯದಾಗಿ ಹಾಗೂ ಪ್ರಮುಖವಾಗಿ ನಿಮ್ಮ ದೇಹದಲ್ಲಿರುವ ವಿ’ಷಕಾರಿ ಅಂಶಗಳನ್ನು ತೆಗೆದು ಹಾಕಿ ನಿಮ್ಮ ರಕ್ತವನ್ನು ಸಂಪೂರ್ಣ ಶುದ್ದಿ ಮಾಡುವ ಕೆಲಸವನ್ನು ಹುರಿದ ಬೆಳ್ಳುಳ್ಳಿ ಗಳು ಮಾಡುತ್ತವೆ. ಸಾಮಾನ್ಯ ಬೆಳ್ಳುಳ್ಳಿ ಗಿಂತ ಹುರಿದು ಬೆಳ್ಳುಳ್ಳಿ ಸೇವಿಸಿದರೇ ಮತ್ತಷ್ಟು ಲಾಭಗಳು ನಮಗೆ ಸಿಗುತ್ತವೆ.

Post Author: Ravi Yadav