ನಿಮ್ಮ ರಹಸ್ಯಗಳನ್ನು ಈ ರೀತಿಯ ವ್ಯಕ್ತಿಗಳಿಗೆ ಎಂದು ಹೇಳಬೇಡಿ ! ಮಹಾಭಾರತದಲ್ಲಿ ಹೇಳಿರುವುದೇನು ಗೊತ್ತಾ??

ನಿಮ್ಮ ರಹಸ್ಯಗಳನ್ನು ಈ ರೀತಿಯ ವ್ಯಕ್ತಿಗಳಿಗೆ ಎಂದು ಹೇಳಬೇಡಿ ! ಮಹಾಭಾರತದಲ್ಲಿ ಹೇಳಿರುವುದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಮ್ಮ ಜೀವನಕ್ಕೆ ಅತ್ಯಗತ್ಯವಾಗಿರುವ ಜೀವನ ಪಾಠಗಳನ್ನು ಮಹಾಭಾರತ ನೀಡುತ್ತದೆ ಹಾಗೂ ನಮ್ಮ ಜೀವನದ ಎಲ್ಲಾ ಪ್ರಶ್ನೆಗಳಿಗೆ ಮಹಾಭಾರತದಲ್ಲಿ ಉತ್ತರ ದೊರೆಯುತ್ತದೆ. ಹೀಗಿರುವಾಗ ಇಂದು ಮಹಾಭಾರತದಲ್ಲಿ ನಾವು ಒಂದು ಶ್ಲೋಕದ ಬಗ್ಗೆ ಮಾತನಾಡುತ್ತೇವೆ, ಈ ಶ್ಲೋಕದ ಅನ್ವಯ ನೀವು ನಿಮ್ಮ ರಹಸ್ಯಗಳನ್ನು ಕೆಲವು ರೀತಿಯ ಜನರಿಗೆ ಎಂದಿಗೂ ಹೇಳಬಾರದು. ಬನ್ನಿ ಯಾವ ರೀತಿಯ ಜನರಿಗೆ ನೀವು ರಹಸ್ಯಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ದಡ್ಡ ಮತ್ತು ಹುಚ್ಚುತನದ ವ್ಯಕ್ತಿಗಳಲ್ಲಿ ನೀವು ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಯಾಕೆಂದರೆ ದಡ್ಡರು ಮತ್ತು ಹುಚ್ಚುತನದ ವ್ಯಕ್ತಿಗಳು ಸಮಯ ಮತ್ತು ಸ್ಥಳದ ಅರಿವಿಲ್ಲದೇ ಅನಗತ್ಯ ವಿಚಾರಗಳನ್ನು ಮಾತನಾಡುತ್ತಾರೆ. ಆದ ಕಾರಣದಿಂದ ನೀವು ಇವರ ಜೊತೆ ರಹಸ್ಯಗಳನ್ನು ಹಂಚಿಕೊಂಡರೇ ಇವರು ಮನಬಂದಂತೆ ಅನಗತ್ಯದ ವಿಚಾರಗಳಲ್ಲಿಯೂ ಕೂಡ ನಿಮ್ಮ ರಹಸ್ಯಗಳ ಕುರಿತು ಮಾತನಾಡುತ್ತಾರೆ. ಇನ್ನು ಮಗುವಿನ ಜೊತೆ ನೀವು ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಯಾಕೆಂದರೆ ಬಾಲ್ಯದಲ್ಲಿ ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುದರ ಕುರಿತು ಬಹಳ ಕಡಿಮೆ ಜ್ಞಾನವಿರುತ್ತದೆ. ಆದ ಕಾರಣದಿಂದ ಏನನ್ನು ತಿಳಿಯದೇ ಮಕ್ಕಳು ರಹಸ್ಯವನ್ನು ಬಹಳ ಮುಗ್ಧ ರೀತಿಯಲ್ಲಿ ಮತ್ತೊಬ್ಬರಿಗೆ ಹೇಳಿಬಿಡುತ್ತಾರೆ. ಇದು ಅವರ ತಪ್ಪಲ್ಲ ಬದಲಾಗಿ ನಿಮ್ಮ ತಪ್ಪು.

ಇನ್ನೂ ಹೆಚ್ಚು ದುರಾಸೆಯನ್ನು ಹೊಂದಿರುವ ಮತ್ತು ದುಷ್ಟ ಮನುಷ್ಯರ ಜೊತೆ ನೀವು ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಇಂತಹ ವ್ಯಕ್ತಿಗಳು ನಿಮ್ಮ ಸ್ನೇಹಿತರಾಗಿದ್ದರೂ ಕೂಡ ದುರಾಸೆ ಎಂಬುದು ಮನುಷ್ಯನ ದೌರ್ಬಲ್ಯ ಮತ್ತು ದುಷ್ಟ ಮನುಷ್ಯರು ನಿಮಗೆ ದ್ರೋಹ ಮಾಡುವುದಿಲ್ಲ ಎಂಬ ಭರವಸೆ ನೀಡಲು ಯಾರು ಸಾಧ್ಯವಿಲ್ಲ. ದುಷ್ಟಜನರು ನಿಮ್ಮ ರಹಸ್ಯಗಳನ್ನು ಇತರರ ಮುಂದೆ ಬಹಳ ಸುಲಭವಾಗಿ ಬಹಿರಂಗಪಡಿಸುತ್ತಾರೆ. ಇನ್ನು ದುರಾಸೆ ಹೊಂದಿರುವವನು ನಿಮ್ಮ ರಹಸ್ಯವನ್ನು ಬಳಸಿಕೊಂಡು ಮತ್ತೊಂದು ಕೆಲಸ ಮಾಡಿಸಿಕೊಳ್ಳುವ ಆಲೋಚನೆಯಲ್ಲಿ ತೊಡಗಿಕೊಂಡಿರುತ್ತಾರೆ. ಆದ್ದರಿಂದ ನಿಮ್ಮ ರಹಸ್ಯಗಳನ್ನು ಈ ರೀತಿಯ ಜನರ ಜೊತೆ ಎಂದಿಗೂ ಹಂಚಿಕೊಳ್ಳಬೇಡಿ.