ಸಾಲು-ಸಾಲು ಅವಕಾಶ ಸಿಕ್ಕರೂ ಚಿತ್ರರಂಗ ಬಿಟ್ಟು ಹಿರಿಯ ನಟಿ ದೀಪಾ ಸಾಧಿಸಿದ್ದೇನು ಗೊತ್ತಾ? ನಿಜಕ್ಕೂ ಗ್ರೇಟ್

ನಮಸ್ಕಾರ ಸ್ನೇಹಿತರೇ, ಎಂಬತ್ತರ ದಶಕದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿದ್ದರೂ ಕೂಡ ನಟಿ ದೀಪಾ ರವರು ಇದ್ದಕ್ಕಿದ್ದಂತೆ ಸಿನಿಮಾಗೆ ಗುಡ್ ಬೈ ಹೇಳಿದ್ದರು. ನಟಿ ದೀಪಾ ಎಂದ ತಕ್ಷಣ ನಿಮಗೆ ಬಹುಶಹ ಒಂದು ಕ್ಷಣ ನೆನಪಾಗದೆ ಇರಬಹುದು, ಆದರೆ ಸ್ನೇಹಿತರೇ ಇವರು ಬೇರೆ ಯಾರು ಅಲ್ಲ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಧೃವತಾರೆ ಸಿನಿಮಾದಲ್ಲಿ ಹಾಗೂ ಟೈಗರ್ ಪ್ರಭಾಕರ್ ಅವರ ಜೊತೆ ಕಾಡಿನ ರಾಜ ಚಿತ್ರದಲ್ಲಿ ನಟಿಸಿದ್ದ ದೀಪಾ ಇವರೇ, ಇಂದು ನಾವು ಅದೇ ದೀಪಾ ರವರ ಬಗ್ಗೆ ಒಂದು ಆಸಕ್ತಿದಾಯಕ ಮಾಹಿತಿಯನ್ನು ನೀಡುತ್ತೇವೆ ಕೇಳಿ.

ಸ್ನೇಹಿತರೇ ಸಾಮಾನ್ಯವಾಗಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಎಲ್ಲರೂ ಐಷಾರಾಮಿ ಜೀವನದ ಮೊರೆ ಹೋಗುತ್ತಾರೆ. ಒಮ್ಮೆ ಐಷಾರಾಮಿ ಜೀವನ ಅಭ್ಯಾಸವಾದ ಮೇಲೆ ಮತ್ತೊಮ್ಮೆ ತಮ್ಮ ಸಾಮಾನ್ಯ ಬದುಕಿಗೆ ಮರಳುವುದು ತೀರಾ ಕಡಿಮೆ. ಕೆಲವರು ಹಣ ಗಳಿಸಿದರೂ ಕೂಡ ತಮ್ಮ ಸಾಮಾನ್ಯ ಜೀವನವನ್ನು ಮುಂದುವರಿಸುತ್ತಾರೆ. ಆದರೆ ಒಮ್ಮೆ ಐಷಾರಾಮಿ ಜೀವನಕ್ಕೆ ಬದಲಾಗಿ ತದನಂತರ ಸಾಮಾನ್ಯ ಜೀವನಕ್ಕೆ ಮರಳುವುದು ಬಹಳ ಕಡಿಮೆ. ಇನ್ನು ಸಾಮಾನ್ಯವಾಗಿ ಯಾರು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳು ಸಿಗುತ್ತಿದ್ದ ಸಂದರ್ಭದಲ್ಲಿ ಚಿತ್ರರಂಗವನ್ನು ಬಿಟ್ಟು ತೆರಳುವುದಿಲ್ಲ. ಆದರೆ ಸ್ಟಾರ್ ನಟಿ ದೀಪಾ ರವರು ತಮಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರೂ ಕೂಡ ಇದ್ದಕ್ಕಿದ್ದಂತೆ ವಿದಾಯ ಹೇಳಿ ತಮ್ಮ ಹಳ್ಳಿ ಸೇರಿಕೊಂಡಿದ್ದರು.

ನೋಡಲು ಬಹಳ ಸುಂದರವಾಗಿ ಹಾಗೂ ಅದ್ಭುತವಾದ ನಟನೆ ಮಾಡುತ್ತಿದ್ದ ದೀಪಾ ರವರು ಇದ್ದಕ್ಕಿದ್ದಂತೆ ಯಾಕೆ ಹಳ್ಳಿ ಸೇರಿದ್ದರು ಎಂದು ಯಾರಿಗೂ ತಿಳಿದಿರಲಿಲ್ಲ, ಕೆಲವರು ಉಪನ್ಯಾಸಕರಾದ ರೆಜೋರ್ ರವರನ್ನು ಮದುವೆಯಾಗಿದ್ದಕಾಗಿ ಇವರು ಈ ರೀತಿ ಮಾಡಿದ್ದಾರೆ ಎಂದುಕೊಂಡಿದ್ದರು. ಆದರೆ ಇವರು ಚಿತ್ರರಂಗಕ್ಕೆ ವಿದಾಯ ಹೇಳಿರುವುದೇ ಬೇರೆ ವಿಷಯಕ್ಕಾಗಿ, ಹೌದು ಸ್ನೇಹಿತರೇ ಇವರು ತಮ್ಮ ಜೀವನದಲ್ಲಿ ಹೊಸ ಹಾದಿ ಹಿಡಿಯಲು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. ನಾವು ಇತರರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು ಎಂಬ ಆಕಾಂಕ್ಷೆಯೊಂದಿಗೆ ಸಿನಿಮಾ ಚಿತ್ರರಂಗ ಬಿಟ್ಟು ಹಳ್ಳಿ ಮತ್ತು ಬುಡಕಟ್ಟು ಜನಾಂಗದ ಜೊತೆ ಸೇರಿಕೊಂಡಿದ್ದರು.

ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನಿಸಿ ಅವರ ಬಳಿ ಮಾತನಾಡಿ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮತ್ತೆ ಶಾಲೆಗೆ ಮರಳಿ ಕರೆತರುವ ಕೆಲಸ ಮಾಡುತ್ತಿದ್ದಾರೆ. 1992 ರಿಂದ ಇಲ್ಲಿನವರೆಗೂ ಹಳ್ಳಿಯಲ್ಲಿ ನೆಲೆಸಿರುವ ನಟಿ ದೀಪಾ ರವರು ತಾವು ನೆಲೆಸಿದ ಹಳ್ಳಿಯ ಸುತ್ತಮುತ್ತ ಹಳ್ಳಿಗಳ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈಗಲೂ ಕೂಡ ತಮ್ಮ ಐಷಾರಾಮಿ ಜೀವನವನ್ನು ನೆನಪು ಮಾಡಿಕೊಳ್ಳದೇ, ಅಲ್ಲಿನ ಜನರಿಗೆ ನೆರವಾಗಲು ಬಿಸಿಲು ಮಳೆಯೆನ್ನದೆ ಅಲ್ಲಿನ ಜನರ ಜೊತೆ ಬೆರೆತು ಹೋಗಿದ್ದಾರೆ. ಅಕ್ಷರ ಸಹ ತಮ್ಮ ಜೀವನವನ್ನು ಕೇವಲ ಸಮಾಜಸೇವೆಗೆ ಮುಡಿಪಾಗಿಟ್ಟಿದ್ದಾರೆ. ಈ ರೀತಿಯ ನಟ-ನಟಿಯರು ಸಿಗುವುದು ನಿಜಕ್ಕೂ ಅಪರೂಪ ಅಲ್ವಾ.

Post Author: Ravi Yadav