ಖಡಕ್ ಗಾಡಿ RX 100 ಬ್ಯಾನ್ ಆಗಲು ಇದೇ ಮುಖ್ಯ ಕಾರಣ ನೋಡಿ..!

ನಮಸ್ಕಾರ ಸ್ನೇಹಿತರೇ, ಯಮಹ RX100 ಈ ಒಂದು ಬೈಕ್ ಬಗ್ಗೆ ಒಂದು ಕಾಲದಲ್ಲಿ ಹೆಚ್ಚಿನ ಯುವಕರು ಹುಚ್ಚರಾಗಿದ್ದರು. ಎಷ್ಟರ ಮಟ್ಟಿಗೆ ಎಂದರೆರೇ ಅಪ್ಪ-ಅಮ್ಮ ಬೈಕನ್ನು ಕೊಡಿಸಲಿಲ್ಲ ಅಂತ ಮನೆಯನ್ನೇ ಬಿಟ್ಟು ಹೋಗಿದ್ದರು, ಮತ್ತು ಕೆಲವರು ರಾತ್ರಿ-ಹಗಲು ಕೆಲಸ ಮಾಡಿ ಬೈಕ್ ತೊಗೊಂಡ್ರು ಮತ್ತೆ ಇನ್ನು ಕೆಲವು ಅಹಿತಕರ ಪ್ರಕರಣಗಳು ಸಹ ಒಂದು ಕಾಲದಲ್ಲಿ ಈ ಬೈಕ್ ಗೋಸ್ಕರ ನಡೆದಿರುವ ಉದಾಹರಣೆಗಳು ಇದೆ. ಇಷ್ಟೊಂದು ಹುಚ್ಚನ್ನು ಹಿಡಿಸಿದಂತಹ ಬೈಕನ್ನು ಯಾಕೆ ಸ್ಟಾಪ್ ಮಾಡಿದರು ಎಂಬ ರೋಚಕವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

ಇವತ್ತಿಗೂ ಕೂಡ RX 100 ಬೈಕ್ ಗಳಿಗೆ ಬೇರೆ ಯಾವ ಗಾಡಿಗಳು ಇಲ್ಲದಂತಹ ಬೇಡಿಕೆ ಇದೆ. ಈ ಬೈಕು ಯುವ ಜನರಿಗೆ ಹೆಚ್ಚಿನ ಹುಚ್ಚನ್ನು ಹಿಡಿಸಲು ಕಾರಣವೇನೆಂದು ನೋಡುವುದಾದರೆ, ಈ ಗಾಡಿ ತೂಕ ತುಂಬಾ ಕಡಿಮೆಯದಾಗಿತ್ತು. ಬೇರೆ ಬೈಕ್ ಗಳಿಗೆ ಹೋಲಿಸಿದರೇ ಇದರ ತೂಕ ತುಂಬಾ ಕಮ್ಮಿ ಇತ್ತು. ಸುಮಾರು 100 ರಿಂದ 105 ಕೆಜಿ ತೂಕವನ್ನು ಇದು ಹೊಂದಿತ್ತು, ಮತ್ತೆ ಈ ಬೈಕ್ ಅನ್ನು ಓಡಿಸುವವರಿಗೆ ಅಥವಾ ಹಿಂದೆ ಕೂರುವವರಿಗೆ ಬಹಳ ಆರಾಮಾಗಿತ್ತು, ಯಾವುದೇ ಬೆನ್ನು ನೋವಾಗಲಿ ಅಥವಾ ಸೊಂಟ ನೋವು ಯಾವುದೇ ಸಮಸ್ಯೆಗಳು ಬರುತ್ತಿರಲಿಲ್ಲ.

ಹಾಗೆ ಈ ಬೈಕ್ 100 ರಿಂದ 110 ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿತ್ತು. 100 ಸಿಸಿ ಬೈಕ್ ಗಳಲ್ಲಿ ಇಷ್ಟು ವೇಗವಾಗಿ ಹೋಗಲು ಸಾಧ್ಯವೇ ಇರಲಿಲ್ಲ. ಅದು RX100 ಬೈಕಿಂದ ಮಾತ್ರ ಸಾಧ್ಯ. ಅದಕ್ಕೆ ಯುವಕರು ಇದರ ಮೇಲೆ ವ್ಯಾಮೋಹವನ್ನು ಹೊಂದಿದ್ದರು. ಮತ್ತೆ ಈ ಒಂದು ಬೈಕನ್ನು ಅಂದಿನ ಕಾಲದಲ್ಲೇ ಒನ್ ಮ್ಯಾನ್ ಆರ್ಮಿ ಅಂತ ಹೇಳಬಹುದಾಗಿತ್ತು, ಯಾಕೆಂದರೆ ಒಂದು ಬೈಕಿಗೆ ಕಾಂಪಿಟೇಷನ್ ಕೊಡುವುದಕ್ಕೆ ಮಾರುಕಟ್ಟೆಗೆ ಬೇರೆಯಾವ ಬೈಕ್ ಗಳು ಬರಲಿಲ್ಲ. ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಆಗಿನ ಯುವಜನತೆಗೆ ಈ ಒಂದು ಬೈಕು ತುಂಬಾ ಇಷ್ಟವಾಗಲು ಕಾರಣ ಎಂದರೆ ಇದರ ಒಂದು ಸೌಂಡ್.

RX100 ಬೈಕ್ನಲ್ಲಿ ಬರುತ್ತಿದ್ದ ಆ ಸೌಂಡ್ ಏನಿತ್ತು, ಅಂದರೇ ಆ ಸೌಂಡ್ ಯುವಜನರಿಗೆ ಹೆಚ್ಚು ಹುಚ್ಚನ್ನು ಹಿಡಿಸಿತ್ತು. ಇಷ್ಟೆಲ್ಲಾ ಒಳ್ಳೆ ಕಾರಣಗಳಿದ್ದರೂ ಎಲ್ಲರಿಗೂ ಇಷ್ಟವಾಗಿದ್ದ ಬೈಕನ್ನು ಸ್ಟಾಪ್ ಮಾಡುವುದಕ್ಕೆ ಮುಖ್ಯ ಕಾರಣ 2 ಸ್ಟ್ರೋಕ್ ಇಂಜಿನ್. 2 ಸ್ಟ್ರೋಕ್ ಇಂಜಿನ್ ಹಾಗೂ 4 ಸ್ಟ್ರೋಕ್ ಎಂಜಿನ್ ಎರಡನ್ನೂ ಕಂಪೇರ್ ಮಾಡಿ ನೋಡಿದರೇ ನಿಮಗೆ ಹೆಚ್ಚು ವೇಗವನ್ನು ಕೊಡುವುದು 2- ಸ್ಟ್ರೋಕ್ ಇಂಜಿನ್ ಆದರೂ ಅದನ್ನು ಯಾಕೆ ಬ್ಯಾನ್ ಮಾಡಿದರು, ಎಂದರೆ 2-ಸ್ಟ್ರೋಕ್ ಇಂಜಿನ್ ನಲ್ಲಿ ಗಾಡಿ ವೇಗವಾಗಿ ಚಲಿಸುತ್ತದೆ. ಆದರೆ ಮೈಲೇಜ್ ಬರುವುದಿಲ್ಲ ತುಂಬಾನೇ ಪೆಟ್ರೋಲ್ ಖಾಲಿ ಆಗ್ತಾ ಇತ್ತು.

ಈ ಒಂದು ಕಾರಣಕ್ಕೋಸ್ಕರ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ಸಹ 2- ಸ್ಟ್ರೋಕ್ ಇಂಜಿನನ್ನು ಸ್ಟಾಪ್ ಮಾಡಿ 4- ಸ್ಟ್ರೋಕ್ ಇಂಜಿನ್ ಗಳನ್ನು ಬಳಸುವುದಕ್ಕೆ ಪ್ರಾರಂಭ ಮಾಡಿದರು. ಅದರ ಜೊತೆಗೆ 2 ಸ್ಟ್ರೋಕ್ ಎಂಜಿನ್ ಇಂದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಹೊರಬರುತ್ತಿತ್ತು. ಇದರಿಂದ ಪರಿಸರ ಮಾಲಿನ್ಯ ಹಾಳಾಗುತ್ತಿತ್ತು ಮತ್ತು ಅದರ ಜೊತೆಗೆ ಇದಕ್ಕೆ ಪೆಟ್ರೋಲ್ ಹಾಕಿಸುವಾಗ ಆಯಿಲ್ ಕೂಡ ಮಿಕ್ಸ್ ಮಾಡಿಸಬೇಕಿತ್ತು, ಮತ್ತು ಇದು ಕಡಿಮೆ ಸಮಯದಲ್ಲಿ ಅತಿ ವೇಗ ತಲುಪುತ್ತಿತ್ತು, ಇದಿಷ್ಟು ಮುಖ್ಯ ಕಾರಣದಿಂದ ಈ ಬೈಕ್ ಅನ್ನು ಬ್ಯಾನ್ ಮಾಡಿದರು ಇಷ್ಟೆಲ್ಲಾ ಆದ್ರೂ ಈ ಬೈಕ್ ಮತ್ತೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಹಳೇ ಬೈಕಿನ ತಾಕತ್ತು ಈಗ ಬರುವ ಬೈಕಲ್ಲಿ ಇರುವುದು ಸ್ವಲ್ಪ ಕಷ್ಟವೇ ಸರಿ.

Post Author: Ravi Yadav