Sep-29 ರಂದು ಶನಿ ನೇರ ಚಲನೆ ಆರಂಭ ! ಎಲ್ಲಾ ರಾಶಿಗಳಿಗೂ ಉತ್ತಮವಾಗಿರಲಿದೆ ದಿನಗಳು ! ನಿಮ್ಮ ರಾಶಿಫಲ ತಿಳಿಯಿರಿ.

ನಮಸ್ಕಾರ ಸ್ನೇಹಿತರೇ, ಸೆಪ್ಟೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನಪಲ್ಲಟವನ್ನು ಮಾಡಿವೆ. ರಾಹು-ಕೇತು ಹಾಗೂ ಬುಧ ಗ್ರಹಗಳು ತಮ್ಮ ಸ್ಥಾನವನ್ನು ಈಗಾಗಲೇ ಬದಲಾಯಿಸಿವೆ. ಇನ್ನು ಸೆಪ್ಟೆಂಬರ್ 29 ರಂದು ಶನಿ ತನ್ನ ನೇರ ಚಲನೆಯನ್ನು ಪ್ರಾರಂಭಿಸುತ್ತಾರೆ, ಇಷ್ಟು ದಿವಸ ಶನಿ ಹಿಮ್ಮೆಟ್ಟುವ ಚಲನೆಯನ್ನು ಮಾಡುತ್ತಿದ್ದರು, ಇದೀಗ ಶನಿ ತನ್ನ ಸ್ಥಾನವನ್ನು ಬದಲಾಯಿಸಿಕೊಂಡು ನೇರ ಚಲನೆಯನ್ನು ಪ್ರಾರಂಭಿಸುತ್ತಿದ್ದಾರೆ. ಇದರಿಂದ ಎಲ್ಲಾ ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ, ಶನಿ ರವರ ನೇರ ಚಲನೆ ಹಲವಾರು ಜನರಿಗೆ ಶುಭವೆಂದು ಸಾಬೀತಾಗಿದೆ. ಯಾವುದೇ ಗ್ರಹಗಳು ನೇರ ದಿಕ್ಕಿನಲ್ಲಿ ಸಂಚರಿಸಿದರೇ ಅದನ್ನು ಮಾರ್ಗಿ ಎಂದು ಕರೆಯಲಾಗುತ್ತದೆ. ಶನಿ ಗ್ರಹವು ನೇರ ದಿಕ್ಕಿನಲ್ಲಿ ಸಂಚರಿಸುವುದರಿಂದ ಉತ್ತಮ ಪ್ರಭಾವ ಉಂಟಾಗಿ ಉತ್ತಮ ಫಲಗಳು ನೀಡುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಹಿಮ್ಮೆಟ್ಟುಸುವಂತೆ ಅಂದರೇ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಿದರೇ ಅದನ್ನು ವಕ್ರಿ ಎಂದು ಕರೆಯಲಾಗುತ್ತದೆ ಇದರಿಂದ ಸಾಮಾನ್ಯವಾಗಿ ಅಶುಭ ಅಥವಾ ಮಿಶ್ರ ಪಲಿತಾಂಶಗಳು ದೊರೆಯುತ್ತವೆ.

ಮೇಷ: ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಸಮಯ ಬಹಳ ಚೆನ್ನಾಗಿರುತ್ತದೆ, ಉತ್ತಮ ಫಲ ಸಿಗುತ್ತದೆ. ದೀರ್ಘಾವಧಿ ಕಾಲದಿಂದಲೂ ಬಾಕಿ ಉಳಿದಿರುವ ಕೆಲಸಗಳು ಈ ಸಮಯದಲ್ಲಿ ಪೂರ್ಣವಾಗಿ, ನಿಮ್ಮ ಕೆಲಸವು ವೇಗ ಗೊಳ್ಳುತ್ತದೆ. ಇಷ್ಟು ದಿವಸ ಮೇಷ ರಾಶಿಯಲ್ಲಿ ವಕ್ರಿಯಾಗಿ ಸಂಚರಿಸುತ್ತಿದ್ದ ಶನಿ ಗ್ರಹ ಇದೀಗ ನೇರವಾಗಿ ಚಲಿಸುವುದರಿಂದ ಅದೃಷ್ಟ ನಿಮ್ಮ ಕೈಹಿಡಿಯಲಿದೆ ಇದರಿಂದ ನೀವು ಜೀವನದಲ್ಲಿ ಸಾಕಷ್ಟು ಏಳಿಗೆಯನ್ನು ಕಾಣಬಹುದಾಗಿದೆ.

ವೃಷಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿ ಜನರಿಗೆ ಶನಿಗ್ರಹವು ನೇರ ಮಾರ್ಗದಲ್ಲಿ ಚಲಿಸುವುದರಿಂದ ನಿಮಗೆ ಧನ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ನೀವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ, ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಹಣವು ನಿಮ್ಮ ಕೈ ಸೇರಲಿದ್ದು, ಉದ್ಯೋಗ ಕ್ಷೇತ್ರದಲ್ಲಿಯೂ ಕೂಡ ಉತ್ತಮ ಫಲಿತಾಂಶವನ್ನು ನೀವು ಕಾಣಬಹುದಾಗಿದೆ.

ಮಿಥುನ ರಾಶಿ: ಗ್ರಹಗಳ ಸ್ಥಿತಿ ಗತಿಗಳ ಆಧಾರದ ಮೇರೆಗೆ ಮಿಥುನ ರಾಶಿ ಜನರಿಗೆ ಶನಿ ಗ್ರಹವು ನೇರ ಮಾರ್ಗದಲ್ಲಿ ಚಲಿಸುತ್ತಿರುತ್ತದೆ, ಇಷ್ಟು ದಿವಸ ಹಿಮ್ಮೆಟ್ಟು ತಿದ್ದ ಶನಿ ಗ್ರಹದಿಂದ ದಾಂಪತ್ಯ ಜೀವನದಲ್ಲಿ ಕಾಣಿಸುತ್ತಿದ್ದ ಎಲ್ಲಾ ಸಮಸ್ಯೆಗಳು ಇದೀಗ ನಿವಾರಣೆಯಾಗಿ ಸಂತೋಷ ಕಾಣಬಹುದಾಗಿದೆ. ನೀವು ಹಲವಾರು ದಿನಗಳಿಂದಲೂ ಎದುರಿಸುತ್ತಿದ್ದ ಎಲ್ಲಾ ಸವಾಲುಗಳು ನಿವಾರಣೆಯಾಗಿ ಭಾಗ್ಯ ನಿಮ್ಮ ಕೈಹಿಡಿಯಲಿದೆ.

ಕರ್ಕಾಟಕ ರಾಶಿ: ನಿಮ್ಮ ರಾಶಿ ಜನರಿಗೆ ಶನಿ ಗ್ರಹದ ನೇರ ಚಲನೆಯು ನಿಮ್ಮ ರಾಶಿಚಕ್ರದ ಜನರಿಗೆ ಆರೋಗ್ಯವನ್ನು ಸುಧಾರಿಸುತ್ತದೆ, ಶತ್ರುಗಳಿಂದ ಯಾವುದೇ ತೊಂದರೆ ಇರುವುದಿಲ್ಲ. ಕೆಲಸದ ನಿಮಿತ ನೀವು ಪ್ರಯಾಣ ಮಾಡಬೇಕಾಗಬಹುದು, ಆದರೆ ಪ್ರಯಾಣಗಳು ತಕ್ಕ ಪ್ರಯೋಜನಗಳನ್ನು ನೀಡುತ್ತವೆ. ಸಮಾಜದಲ್ಲಿ ಈ ಸಮಯದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಜನರಿಗೆ, ಪ್ರೀತಿಯ ಸಂಬಂಧಗಳು ಮತ್ತು ವೈವಾಹಿಕ ಜೀವನವು ಬಹಳ ಉತ್ತಮವಾಗಿರುತ್ತದೆ. ಹಣಗಳಿಸುವ ಸಾಕಷ್ಟು ಅವಕಾಶಗಳು ಕಂಡು ಬರುತ್ತವೆ, ಸಿಕ್ಕ ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕೈ ಚೆಲ್ಲಬೇಡಿ. ಕುಟುಂಬ ಸದಸ್ಯರ ನಡುವೆ ಪರಸ್ಪರ ವಿಂಗಡಣೆಯ ಮಾತುಗಳು ಕೇಳಿಬರಬಹುದು.

ಕನ್ಯಾ ರಾಶಿ: ಶನಿ ದೇವರು ನೇರವಾಗಿ ಚಲಿಸುತ್ತಿರುವ ಕಾರಣ ನಿಮಗೆ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆಯನ್ನು ನೀವು ಕಾಣಬಹುದಾಗಿದೆ, ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯುವ ಸಾಧ್ಯತೆಗಳಿದ್ದು ಆರೋಗ್ಯ ಉತ್ತಮವಾಗಿರಲಿದೆ. ಆದರೂ ಕೂಡ ಆರೋಗ್ಯದ ವಿಚಾರದಲ್ಲಿ ವಿಶೇಷವಾದ ಗಮನ ಹರಿಸಿ. ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಹತ್ತಿರದ ಬಂಧುಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ.

ತುಲಾ ರಾಶಿ: ಈ ಸಮಯದಲ್ಲಿ ನಿಮಗೆ ಖರ್ಚು ವೆಚ್ಚಗಳು ಹೆಚ್ಚಾಗುವ ಲಕ್ಷಣಗಳಿವೆ, ನಿಮ್ಮ ರಾಶಿಯಿಂದ ಮನೆಯಲ್ಲಿ ಶನಿ ದೇವನು ನೇರವಾಗಿ ಚಲಿಸುತ್ತಿರುವ ಕಾರಣ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನಿಷ್ಠೆ ಹಾಗೂ ಕಾರ್ಯ ವೈಖರಿಯ ಕುರಿತು ಎಲ್ಲರಿಗೂ ತಿಳಿಯಲಿದೆ. ಈ ಸಮಯದಲ್ಲಿ ನೀವು ನಿಮ್ಮ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆಯುವ ಸಾಧ್ಯತೆ ಇದೆ. ಪರಿಶ್ರಮ ಒಂದು ಇದ್ದರೆ ಅದೃಷ್ಟವು ಕೂಡ ನಿಮ್ಮ ಜೊತೆಯಲ್ಲಿ ಇರಲಿದೆ.

ವೃಶ್ಚಿಕ ರಾಶಿ: ಸ್ನೇಹಿತರೇ ವೃಶ್ಚಿಕ ರಾಶಿ ಜನರಿಗೆ ಶನಿ ಗ್ರಹವು ನೇರವಾಗಿ ಚಲಿಸುತ್ತಿರುವ ಕಾರಣ ಸ್ವಾಸ್ಥ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎಲ್ಲರೂ ಈ ಸಮಯದಲ್ಲಿ ನೀವು ಸುಧಾರಣೆಯನ್ನು ಕಾಣುತ್ತೀರಿ. ನಿಮಗೆ ಆದಾಯದ ವಿಚಾರದಲ್ಲಿ ಹೊಸ ಮಾರ್ಗ ಲಭ್ಯವಾಗಲಿದ್ದು, ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆದರೆ ಅವಕಾಶಗಳನ್ನು ಕೈಚೆಲ್ಲಿ ಬೇಡಿ. ಇನ್ನು ಪೂರ್ವಜರ ಆಸ್ತಿಗೆ ಸಂಬಂಧಿಸಿದ ಎಲ್ಲ ವ್ಯಾಜ್ಯಗಳು ನಿವಾರಣೆಯಾಗಿ ನಿಮಗೆ ಲಾಭ ದೊರೆಯುತ್ತದೆ, ಈ ಸಮಯದಲ್ಲಿ ನೀವು ಕೊಂಚ ಪ್ರಯಾಣವನ್ನು ಮಾಡಬೇಕಾಗಬಹುದು, ಆದರೆ ಪ್ರಯಾಣಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಧನಸ್ಸು ರಾಶಿ: ನಿಮ್ಮ ಆರೋಗ್ಯ ವೃದ್ಧಿಯಾಗಲಿದ್ದು, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ನಿಮ್ಮ ಸಹೋದರ ಅಥವಾ ಸಹೋದರಿಯರಿಂದ ನಿಮ್ಮ ಕೆಲಸಗಳಿಗೆ ಸಂಪೂರ್ಣ ಸಹಕಾರ ದೊರೆಯಲಿದೆ, ಕೌಟುಂಬಿಕವಾಗಿ ಸಮಯ ಉತ್ತಮವಾಗಿದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಬಹುದಾದ ಸಾಧ್ಯತೆಗಳನ್ನು ಶನಿದೇವನು ನೀಡುತ್ತಿದ್ದಾನೆ.

ಮಕರ ರಾಶಿ: ಈ ರಾಶಿ ಜನರಿಗೆ ಲಾಭ ಬರುವುದು ಖಚಿತ. ಒಂದು ವೇಳೆ ನೀವು ಭವಿಷ್ಯಕ್ಕಾಗಿ ಹಣ ಸಂಗ್ರಹಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದರೇ ಇದು ಸರಿಯಾದ ಸಮಯ. ಶನಿ ದೇವರ ನೇರ ಚಲನೆಯಿಂದ ನಿಮಗೆ ಆರ್ಥಿಕ ಸ್ಥಿತಿ ಬಹಳ ಉತ್ತಮವಾಗಿರಲಿ ಇದೆ. ಇನ್ನು ಈ ಸಮಯದಲ್ಲಿ ಅದೃಷ್ಟ ನಿಮ್ಮ ಕೈಹಿಡಿಯಲಿದೆ.

ಕುಂಭ ರಾಶಿ: ಕುಂಭ ರಾಶಿಯ ಅಧಿಪತಿ ಶನಿ ದೇವ, ಶನಿ ಗ್ರಹದ ಚಲನೆ ನಿಮಗೆ ಊಹಿಸದ ರೀತಿಯಲ್ಲಿ ಲಾಭ ಸಿಗುವಂತೆ ಮಾಡುತ್ತದೆ. ಒಂದು ವೇಳೆ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಆಲೋಚನೆ ಮಾಡುತ್ತಿದ್ದರೇ ಖಂಡಿತ ಈ ಸಮಯ ಬಹಳ ಉತ್ತಮವಾಗಿರಲಿದ್ದು ನೀವು ನಿಮ್ಮ ವೃತ್ತಿಯನ್ನು ಬದಲಾಯಿಸಬಹುದಾಗಿದೆ. ಅಷ್ಟೇ ಅಲ್ಲದೆ ನೀವು ಯಾವುದಾದರೂ ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಆರಂಭಿಸಬೇಕು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದ್ದಾರೆ ಇದು ಉತ್ತಮ ಸಮಯ. ಇನ್ನು ಆರೋಗ್ಯವು ಉತ್ತಮವಾಗಿರಲು ಎಂದು ನೀವು ಮಾಡುವ ಎಲ್ಲಾ ಪ್ರಯಾಣಗಳು ಲಾಭದಾಯಕವಾಗಲಿವೆ.

ಮೀನ ರಾಶಿ: ಶನಿ ಗ್ರಹದ ಈ ನೇರ ಚಲನೆಯು ನಿಮಗೆ ಮಿಶ್ರ ಫಲಗಳನ್ನು ತರಲಿದ್ದು, ನೀವು ಉದ್ಯೋಗ ಕ್ಷೇತ್ರದಲ್ಲಿ ಹಲವಾರು ದಿನಗಳಿಂದ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ನಿವಾರಣೆಯಾಗಿ ನಿಮಗೆ ಮುಕ್ತಿ ಸಿಗಲಿದೆ. ಕೆಲಸದ ಕ್ಷೇತ್ರದಲ್ಲಿ ಒತ್ತಡ ಕಡಿಮೆಯಾಗಲಿದೆ ಮತ್ತು ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ತಾಯಿಯಿಂದ ಉತ್ತಮ ಸಹಕಾರ ದೊರೆಯಲಿದೆ.

Post Author: Ravi Yadav