ಜ್ಯೋತಿಷ್ಯ ಶಾಸ್ತ್ರ: ಕಪ್ಪು ಎಳ್ಳಿನ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ! ಹೇಗೆ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರ: ಕಪ್ಪು ಎಳ್ಳಿನ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಜೀವನದಲ್ಲಿನ ಪ್ರತಿಯೊಂದು ಸಮಸ್ಯೆಗಳಿಗೂ ವಿವಿಧ ರೀತಿಯ ಪರಿಹಾರಗಳನ್ನು ನೀಡಲಾಗಿದೆ. ನೀವು ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಹಲವಾರು ಸವಾಲುಗಳಿಗೆ ಹಾಗೂ ಗ್ರಹಗಳ ಸ್ಥಿತಿಗತಿಗಳ ಆಧಾರದ ಮೇರೆಗೆ ನೀವು ಈ ಪರಿಹಾರಗಳನ್ನು ಮಾಡಿದಲ್ಲಿ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಜ್ಯೋತಿಷ ಶಾಸ್ತ್ರದಲ್ಲಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಎಳ್ಳು ಬಹಳ ಮಹತ್ವವನ್ನು ಪಡೆದುಕೊಂಡಿದ್ದು, ಹಲವಾರು ಸಮಸ್ಯೆಗಳಿಗೆ ಮುಕ್ತಿ ನೀಡಲು ಕೇವಲ ಕಪ್ಪು ಎಳ್ಳು ಸಾಕು ಎನ್ನಲಾಗುತ್ತದೆ. ಬನ್ನಿ ಇಂದು ನೀವು ಯಾವ ರೀತಿಯಲ್ಲಿ ಕಪ್ಪು ಎಳ್ಳು ಗಳನ್ನು ಬಳಸಿಕೊಂಡು ನಿಮ್ಮ ವಿವಿಧ ರೀತಿಯ ಸವಾಲುಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡುತ್ತೇವೆ.

ಮೊದಲನೇದಾಗಿ ಸ್ನೇಹಿತರೇ ನೀವು ಮಾಡುವ ಕೆಲಸದಲ್ಲಿ ನಿಮಗೆ ಅಡಚನೆಗಳು ಹೆಚ್ಚಾಗಿದ್ದರೆ, ಏನೇ ಮಾಡಿದರೂ ಕೆಲಸ ಸುಗಮವಾಗಿ ನಡೆಯದೇ ಇದ್ದರೇ ನೀವು ಒಂದು ತಂಬಿಗೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಅಭಿಷೇಕ ಮಾಡಿ ಮಂತ್ರವನ್ನು ಜಪಿಸಿ, ಹೀಗೆ ಎಳ್ಳನ್ನು ಅರ್ಪಿಸಿದ ನಂತರ ಹೂವು ಮತ್ತೆ ಬಿಲ್ಪತ್ರೆ ಅರ್ಪಿಸಿ. ಇದರಿಂದ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತದೆ. ಇನ್ನು ಒಂದು ವೇಳೆ ನಿಮ್ಮ ಜಾತಕದಲ್ಲಿ ಶನಿ ಕೆಟ್ಟ ಸ್ಥಾನದಲ್ಲಿ ಇದ್ದರೇ, ನೀವು ಶನಿದೋಷ ನಿವಾರಣೆ ಮಾಡಿಕೊಳ್ಳಲು ಶನಿವಾರ ಕಪ್ಪು ಎಳ್ಳನ್ನು ಪವಿತ್ರ ನದಿಗೆ ಸಮರ್ಪಿಸಿ. ಇದು ಶನಿದೋಷ ನಿವಾರಣೆ ಮಾಡಿಕೊಳ್ಳಲು ಬಹಳ ಸುಲಭವಾದ ವಿಧಾನ ಎನ್ನಲಾಗಿದೆ. ಇನ್ನು ಅಷ್ಟೇ ಅಲ್ಲದೆ ಹಾಲಿನಲ್ಲಿ ಕಪ್ಪು ಎಳ್ಳು ಬೆರೆಸಿ ಶನಿವಾರ ಜನರಿಗೆ ನೀಡುವುದರಿಂದ ನಿಮ್ಮ ಕೆಟ್ಟ ಸಮಯ ಹೋಗಿ ನಿಮಗೆ ಒಳ್ಳೆಯ ಸಮಯ ಬರುತ್ತದೆ.

ನೀವು ಒಂದು ವೇಳೆ ರಾಹು ಕೇತು ದೋಷ ನಿವಾರಣೆ ಮಾಡಿಕೊಳ್ಳಬೇಕು ಎಂದಾದಲ್ಲಿ, ಕಪ್ಪು ಎಳ್ಳನ್ನು ದಾನ ಮಾಡಿ. ಕಾಲಸರ್ಪ ಯೋಗ, ಸಾಡೇಸಾತಿ, ಪಿತೃ ದೋಷ ನಿವಾರಣೆಗೆ ಕೂಡ ಇದನ್ನು ಅನುಸರಿಸಬಹುದಾಗಿದೆ. ನೀವು ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ನೀವು ಹಣವನ್ನು ಕೂಡಿಡುವ ಕಪ್ಪು ಎಳ್ಳನ್ನು ಒಂದು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿ. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಒಂದು ವೇಳೆ ನೀವು ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರೇ, ಕಪ್ಪು ಎಳ್ಳನ್ನು ಶಿವಲಿಂಗಕ್ಕೆ ಸಮರ್ಪಿಸಿ ಇದರಿಂದ ನಿಮ್ಮ ಎಲ್ಲಾ ಅನಾರೋಗ್ಯವು ವಾಸಿಯಾಗಿ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.