ಹೃದಯ, ಕ್ಯಾನ್ಸರ್ ಸೇರಿದಂತೆ ಉತ್ತರ ಕರ್ನಾಟಕ ರೊಟ್ಟಿಯ ಆರೋಗ್ಯಕರ ಲಾಭಗಳು ಎಷ್ಟಿವೆ ಗೊತ್ತಾ??

ಹೃದಯ, ಕ್ಯಾನ್ಸರ್ ಸೇರಿದಂತೆ ಉತ್ತರ ಕರ್ನಾಟಕ ರೊಟ್ಟಿಯ ಆರೋಗ್ಯಕರ ಲಾಭಗಳು ಎಷ್ಟಿವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ಹಾಗೂ ಕಾರ ಚಟ್ನಿಯ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಹಳ್ಳಿಯಿಂದ ದಿಲ್ಲಿಯವರೆಗೂ ಉತ್ತರ ಕರ್ನಾಟಕದ ರೊಟ್ಟಿಗಳು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿವೆ. ಅದರಲ್ಲಿಯೂ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನರಿಗೆ ಉತ್ತರ ಕರ್ನಾಟಕ ರೊಟ್ಟಿಯನ್ನು ತಲುಪಿಸಬೇಕು ಎಂದು ಆರಂಭವಾದ ರೊಟ್ಟಿಮನೆ ಎಂಬ ಹೋಟೆಲ್ ಗಳು ಇದೀಗ ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯವಾಗಿವೆ. ಕೇವಲ ಉತ್ತರ ಕರ್ನಾಟಕದ ಜನರಷ್ಟೇ ಅಲ್ಲ, ಉತ್ತರ ಭಾರತದ ಜನರು ಸೇರಿದಂತೆ ಇಲ್ಲಿರುವ ಬಹುತೇಕ ಜನರು ರೊಟ್ಟಿ ಮನೆಯಲ್ಲಿರುವ ರೊಟ್ಟಿಗಳಿಗೆ ಅಕ್ಷರಸಹ ಫಿದಾ ಆಗಿದ್ದಾರೆ. ಇನ್ನು ಈ ಉತ್ತರ ಕರ್ನಾಟಕದ ಜೋಳದ ರೊಟ್ಟಿಗಳಲ್ಲಿ ನಮಗೆ ಸಿಗುವ ಆರೋಗ್ಯಕರ ಅಂಶಗಳ ಕುರಿತು ಗಮನಹರಿಸುವುದಾದರೆ ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನಿಮಗೆ ತಿಳಿಯದಂತೆ ಈ ರೊಟ್ಟಿಗಳು ಒದಗಿಸುತ್ತಿವೆ.

ಸ್ನೇಹಿತರೇ ಮೊದಲಿಗೆ ಜೋಳದಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ ಕಂಡುಬರುತ್ತದೆ, ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಬಲಿಷ್ಠ ಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಮಲಬದ್ಧತೆ ಹಾಗೂ ಅಜೀರ್ಣತೆ ಸಮಸ್ಯೆ ಉಂಟಾಗುವ ಮಾತೇ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೂವರಲ್ಲಿ ಕನಿಷ್ಠ ಇಬ್ಬರಿಗೆ ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು ಇರುತ್ತದೆ, ಅದರಲ್ಲಿಯೂ ವಯಸ್ಕರಿಗೆ ಹಾಗೂ ಮಕ್ಕಳಿಗೆ ಈ ಸಮಸ್ಯೆಗಳು ಸರ್ವೇಸಾಮಾನ್ಯ. ಆದಕಾರಣ ಪ್ರತಿದಿನ ಕನಿಷ್ಠ ಒಂದೆರಡು ಜೋಳದ ರೊಟ್ಟಿಗಳನ್ನು ಸೇವಿಸಿದರೇ ನಿಮಗೆ ಅಜೀರ್ಣತೆಯ ಸಮಸ್ಯೆ ಬರುವುದಿಲ್ಲ.

ಇನ್ನು ಜೋಳಗಳು ಕ್ಯಾನ್ಸರ್ ಕೋಶಗಳಿಂದ ನಮ್ಮ ದೇಹಕ್ಕೆ ರಕ್ಷಣೆ ನೀಡುತ್ತದೆ. ಫ್ರೀ ರಾಡಿಕಲ್ ಎಂಬ ಅಂಶಗಳನ್ನು ತಡೆಗಟ್ಟುವ ಮೂಲಕ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸ್ನೇಹಿತರೇ ನಾವು ಜೋಳದ ರೊಟ್ಟಿ ಸೇರಿಸಿದರೆ ಕ್ಯಾನ್ಸರ್ ಬರುವುದೇ ಇಲ್ಲ ಎಂದು ನಾವು ಹೇಳುವುದಿಲ್ಲ, ಯಾಕೆಂದರೆ ಅದು ನಿಮ್ಮ ದೇಹದ ರಚನೆ ಹಾಗೂ ಅನುವಂಶೀಯತೆಯ ಮೇಲೆ ಕೂಡ ಅವಲಂಬಿಸಿರುತ್ತದೆ. ಆದರೆ ಗಣನೀಯವಾದ ಸಂಖ್ಯೆಗಳಲ್ಲಿ ಕ್ಯಾನ್ಸರ್ ತಡೆಯುವುದರಲ್ಲಿ ಜೋಳದ ಅಂಶಗಳು ಪ್ರಮುಖ ಪಾತ್ರವನ್ನು ಬೀರುತ್ತವೆ.

ಇನ್ನು ಜೋಳದ ಹಿಟ್ಟಿನಲ್ಲಿ ಮೆಗ್ನೀಷಿಯಂ, ತಾಮ್ರ ಮತ್ತು ಕ್ಯಾಲ್ಸಿಯಂ ಅಂಶಗಳು ಹೇರಳವಾಗಿದ್ದು, ನಮ್ಮ ದೇಹದಲ್ಲಿರುವ ಮೂಳೆಗಳು ಹಾಗೂ ಅಂಗಾಂಶಗಳನ್ನು ಸದೃಢಗೊಳಿಸುತ್ತದೆ. ಕಬ್ಬಿಣ ಅಂಶಗಳಿಂದ ತುಂಬಿರುವ ಜೋಳದ ಹಿಟ್ಟು ನಮ್ಮ ದೇಹದಲ್ಲಿರುವ ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೇ, ನಮ್ಮ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ. ಇನ್ನು ಅಷ್ಟೇ ಅಲ್ಲದೆ ಮೇಲೆ ತಿಳಿಸಿದ ಈ ಅಂಶಗಳಿಂದ ನಮ್ಮ ಹೃದಯ ಕೂಡ ಆರೋಗ್ಯವಾಗಿರುತ್ತದೆ.

ಇನ್ನು ಸ್ನೇಹಿತರೇ, ಸಾಮಾನ್ಯವಾಗಿ ಜನರು ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ಅನ್ನ ಸೇವನೆ ಮಾಡುವುದರಿಂದ ಮಧುಮೇಹ ಹೆಚ್ಚಾಗುತ್ತದೆ ಎಂದು ಪ್ರತಿದಿನ ಚಪಾತಿ ಅಥವಾ ಪೂರಿಗಳಿಗೆ ಮೊರೆಹೋಗುತ್ತಾರೆ. ಆದರೆ ಸ್ನೇಹಿತರೇ ನೀವು ಕ್ರಮೇಣ ಚಪಾತಿ ಸೇವಿಸಿ ಯಾವುದೇ ವ್ಯಾಯಾಮದ ಮೊರೆ ಹೋಗದೆ ಇದ್ದಲ್ಲಿ ಜೀರ್ಣಾಂಗದ ಸಮಸ್ಯೆಗಳು ಕಾಣಿಸುತ್ತವೆ ಇದಕ್ಕೆ ಕಾರಣವೇನೆಂದರೆ ಚಪಾತಿಯಲ್ಲಿ ಕಂಡುಬರುವ ಗ್ಲುಟೆನ್ ಎಂಬ ಅಂಶ. ಈ ಅಂಶದಿಂದ ನಮ್ಮ ದೇಹದಲ್ಲಿ ಗ್ಲುಟೆನ್ ಹೆಚ್ಚಾಗಿ ಶೇಖರಣೆ ಹಾಗೆ ಹೊಟ್ಟೆ ಹುಬ್ಬರ, ಕೈಕಾಲು ಸೆಳೆತ ನೋವು ಕಂಡುಬರುತ್ತದೆ. ಆದರೆ ಒಂದು ವೇಳೆ ನೀವು ಜೋಳದ ರೊಟ್ಟಿಯನ್ನು ಅಭ್ಯಾಸ ಮಾಡಿಕೊಂಡರೆ ಈ ಮೇಲಿನ ಯಾವುದೇ ಸಮಸ್ಯೆಗಳು ಕಾಣಿಸುವುದಿಲ್ಲ.

ಇನ್ನು ಜೋಳದರೊಟ್ಟಿ ಯಲ್ಲಿ ಹೇರಳವಾಗಿ ಪ್ರೊಟೀನ್ ಅಂಶ ಸಿಗುತ್ತದೆ ಇದರಿಂದ ನಿಮ್ಮ ದೇಹಕ್ಕೆ ಶಕ್ತಿ ಬರುತ್ತದೆ, ಅಷ್ಟೇ ಅಲ್ಲದೆ ನೀವು ಜೋಳದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ಸೇವಿಸುತ್ತಿದ್ದರೆ ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಬೇಗನೆ ಏರಿಕೆಯಾಗುವುದು ತಪ್ಪಿಸುತ್ತದೆ. ಹೆಚ್ಚು ದೇಹದ ಗಾತ್ರವನ್ನು ಹೊಂದಿದ್ದು ಮಧುಮೇಹದಿಂದ ಬಳಲುತ್ತಿರುವ ಜನರು ಜೋಳದ ರೊಟ್ಟಿಯನ್ನು ಸೇವನೆ ಮಾಡುವುದರಿಂದ ಹಲವಾರು ಲಾಭಗಳನ್ನು ಪಡೆಯುತ್ತಾರೆ.