ವಾಸ್ತು ಸಲಹೆಗಳು: ಸಾಲವನ್ನು ತೊಡೆದುಹಾಕಲು ಈ ಸುಲಭ ಕ್ರಮಗಳನ್ನು ಅನುಸರಿಸಿ

ವಾಸ್ತು ಸಲಹೆಗಳು: ಸಾಲವನ್ನು ತೊಡೆದುಹಾಕಲು ಈ ಸುಲಭ ಕ್ರಮಗಳನ್ನು ಅನುಸರಿಸಿ

ಕೆಲವೊಮ್ಮೆ ಎಲ್ಲಾ ಪ್ರಯತ್ನಗಳ ನಂತರವೂ ಹಣವು ಮನೆಯಲ್ಲಿ ನಿಲ್ಲುವುದಿಲ್ಲ, ಹಣವು ಮನೆಯೊಳಗೆ ಬಂದರೂ ಕೂಡ ಖರ್ಚು ಆಗಿಬಿಡುತ್ತದೆ, ಅಥವಾ ಸಾಲ ತೀರಿಸಲು ಕೂಡ ಸಾಕಾಗುವುದಿಲ್ಲ. ಇಷ್ಟೆಲ್ಲಾ ಮಾಡಿ ಸಾಲ ತೀರಿಸಿದರೂ ಕೂಡ ಒಂದು ವೇಳೆ ನೀವು ತೆಗೆದುಕೊಂಡ ಸಾಲವನ್ನು ಸಂಪೂಣವಾಗಿ ಮರು ಪಾವತಿ ಮಾಡಲು ಸಾಧ್ಯವಾಗದಿದ್ದರೆ,ಅದಕ್ಕೆ ವಾಸ್ತು ಕಾರಣವಾಗಿರಬಹುದು.ಆದರೆ ಚಿಂತೆ ಪಡಬೇಡಿ ಕೆಲವು ವಾಸ್ತು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.

ನಗುವ ಬುದ್ಧನನ್ನು ಮನೆ ಮತ್ತು ವ್ಯವಹಾರದ ಸ್ಥಳದಲ್ಲಿ ಇಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ನಿಮಗೆ ಹಣಕಾಸಿನ ತೊಂದರೆಯಿದ್ದರೇ, ನಗುವ ಬುದ್ಧನನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಹಣದ ಜೊತೆಗೆ ಇರಿಸಿ. ಇದು ಹಣಕಾಸಿನ ಪರಿಸ್ಥಿತಿಯನ್ನು ನಿವಾರಿಸುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ.

ವಾಸ್ತುವಿನಲ್ಲಿ, ವಿಂಡ್‌ಚೈಮ್‌ನಿಂದ (ಗಾಳಿಯಲ್ಲಿ ನೇತಾಡುವ ಚೈನ್) ಹೊರಹೊಮ್ಮುವ ಶಬ್ದವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಒಂಬತ್ತು ಪೈಪ್ ವಿಂಡ್ ಚೈಮ್ ಅನ್ನು ಮನೆಯ ಬಾಗಿಲು ಮತ್ತು ಕಿಟಕಿಗಳ ಬಳಿ ಕಟ್ಟಿ. ಅದರಿಂದ ಹೊರಹೊಮ್ಮುವ ಶಬ್ದವು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಉಂಟು ಮಾಡುತ್ತದೆ.

ತುಳಸಿ ಸಸ್ಯವು ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ. ಮನೆಯ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ಇಡಬೇಕು. ಆ ಸಸ್ಯವನ್ನು ಪೂಜಿಸಿ, ಮುಸ್ಸಂಜೆಯಲ್ಲಿ ಎಳ್ಳಿನ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಇದು ಮನೆಯಲ್ಲಿ ಹಣದ ಆಗಮನವನ್ನು ವೇಗವಾಗಿ ಹೆಚ್ಚಿಸುತ್ತದೆ.

ನೀವು ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ನೀವು ಹಣವನ್ನು ಮರುಪಾವತಿಸಬೇಕಾದಾಗ, ಮಂಗಳವಾರ ಅದನ್ನು ಪಾವತಿಸಿ. ಇದು ನಿಮ್ಮ ಸಾಲವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಹಾಯ ಮಾಡುತ್ತದೆ. ಆದರೆ ನೀವು ಮಂಗಳವಾರ ಸಾಲ ತೆಗೆದುಕೊಳ್ಳಬಾರದು.

ನಿಮ್ಮ ಮನೆಯಲ್ಲಿ ಹಣವಿಲ್ಲದಿದ್ದರೆ ಅಥವಾ ನೀವು ಸಾಲವನ್ನು ಮರು ಪಾವತಿ ಮಾಡಲು ಸಾಧ್ಯವಾಗದೇ ಇದ್ದರೇ, ನಿಮ್ಮ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ನೀರಿನ ಸ್ಥಳದ ದಿಕ್ಕಿನಲ್ಲಿ ನ್ಯೂನತೆ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮನೆ ಮತ್ತು ವ್ಯಾಪಾರ ಸ್ಥಳದ ನೀರಿನ ದಿಕ್ಕನ್ನು ಬದಲಾಯಿಸಲು ಪ್ರಯತ್ನಿಸಿ ಅಥವಾ ಮನೆ ಮತ್ತು ವ್ಯವಹಾರದ ಉತ್ತರ ದಿಕ್ಕಿನಲ್ಲಿ ನೀರು ಬರುವಂತೆ ನೋಡಿಕೊಳ್ಳಿ. ಉತ್ತರವನ್ನು ನೀರಿಗಾಗಿ ಸರಿಯಾದ ದಿಕ್ಕೆಂದು ಪರಿಗಣಿಸಲಾಗುತ್ತದೆ.