ರಾಶಿ ಚಕ್ರಗಳಿಗೆ ಅನುಗುಣವಾಗಿ ಅದೃಷ್ಟ ಪಡೆಯಲು ಈ ಸುಲಭ ಕೆಲಸಗಳನ್ನು ಮಾಡಿ !

ರಾಶಿ ಚಕ್ರಗಳಿಗೆ ಅನುಗುಣವಾಗಿ ಅದೃಷ್ಟ ಪಡೆಯಲು ಈ ಸುಲಭ ಕೆಲಸಗಳನ್ನು ಮಾಡಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಆಧಾರದ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಪ್ರತಿಯೊಬ್ಬರ ಜೀವನದ ಕರ್ಮದ ಫಲಗಳನ್ನು ಗಣನೆಗೆ ತೆಗೆದುಕೊಂಡು ಗ್ರಹಗಳ ಆಧಾರದ ಮೇರೆಗೆ ನಿಮ್ಮ ಜೀವನ ನಡೆದುಕೊಂಡು ಹೋಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನದ ಆಧಾರದ ಮೇರೆಗೆ ನೀವು ವಿವಿಧ ರೀತಿಯ ಕಾರ್ಯಗಳನ್ನು ಮಾಡುವ ಮೂಲಕ ಗ್ರಹಗಳ ಸ್ಥಾನದ ಪರಿಣಾಮ ದಿಂದ ಕೊಂಚ ಶಾಂತಿಯನ್ನು ಪಡೆಯಬಹುದಾಗಿದೆ. ನೀವು ಸಂಪೂರ್ಣವಾಗಿ ನೀವು ಮಾಡಿದ ಕರ್ಮದ ಫಲಗಳನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ, ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಜೀವನದಲ್ಲಿ ಉತ್ತಮ ಫಲಗಳನ್ನು ಪಡೆಯಬಹುದು. ಬನ್ನಿ ಹಾಗಿದ್ದರೇ ರಾಶಿಚಕ್ರದ ಪ್ರಕಾರ ಪ್ರತಿಯೊಂದು ರಾಶಿಗಳು ಯಾವ ರೀತಿಯ ಕಾರ್ಯಗಳನ್ನು ಮಾಡಿದರೆ ನೀವು ಶಾಂತಿ ಪಡೆದು ಶುಭ ಫಲಿತಾಂಶಗಳನ್ನು ಕಾಣಬಹುದು ಎಂಬುದನ್ನು ತಿಳಿಸಿ ಕೊಡುತ್ತೇವೆ

ಮೇಷ ರಾಶಿಯ ಜನರು ಪ್ರತಿ ಮಂಗಳವಾರ ಬಡವರಿಗೆ ಅಥವಾ ನಿರ್ಗತಿಕರಿಗೆ ಆಹಾರವನ್ನು ಒದಗಿಸಬೇಕು. ಸಾಧ್ಯವಾದರೆ ಕೆಂಪು ಬಣ್ಣದ ಆಹಾರವನ್ನು ದಾನ ಮಾಡಿ ಹಾಗೂ ಸೇವಿಸಿ. ಇನ್ನು ವೃಷಭ ರಾಶಿಯ ಜನರು ಪ್ರತಿ ಸೋಮವಾರ ಶಿವನಿಗೆ ಪಾಯಸವನ್ನು ಅರ್ಪಿಸಬೇಕು. ಪಾಯಸ ವನ್ನು ಅರ್ಪಿಸಿದ ನಂತರ ಪ್ರಸಾದವಾಗಿ ವಿತರಿಸಿ, ಸಾಧ್ಯವಾದರೆ ದಾನ ಮಾಡಿ.

ಮಿಥುನ ರಾಶಿ ಜನರು ನಿಮ್ಮ ರಾಶಿಚಕ್ರ ಚಿಹ್ನೆಯ ಆಧಾರದ ಮೇರೆಗೆ ನೀವು ಬುಧವಾರ ಹಸಿರು ಬಟ್ಟೆಗಳನ್ನು ದಾನ ಮಾಡಬೇಕು. ಸಾಧ್ಯವಾದರೆ, ಪ್ರತಿ ಬುಧವಾರ ಈ ಪರಿಹಾರವನ್ನು ಮಾಡಿ, ಇದರಿಂದ ನಿಮಗೆ ಅದೃಷ್ಟ ಒಲಿದು ಬರಲಿದೆ. ಇನ್ನು ಕರ್ಕಾಟಕ ರಾಶಿಚಕ್ರದ ಜನರು ಚಂದ್ರ ದೇವರನ್ನು ಪೂಜಿಸಬೇಕು. ಸಾಧ್ಯವಾದರೆ, ಪ್ರತಿ ಸೋಮವಾರ ಬಡವರಿಗೆ ಬಿಳಿ ಸಿಹಿ ತಿಂಡಿಗಳನ್ನು ವಿತರಿಸಿ.

ಸಿಂಹ ರಾಶಿ ಜನರು ಸೂರ್ಯ ದೇವರನ್ನು ಆರಾಧಿಸಬೇಕು. ಈ ದಿನ ಹಳದಿ, ಕೆಂಪು ಅಥವಾ ಕಿತ್ತಳೆ ಬಣ್ಣದ ಆಹಾರಗಳನ್ನು ತಿನ್ನಲು ಪ್ರಯತ್ನಿಸಿ. ಕನ್ಯಾ ರಾಶಿ ಜನರು ಬುಧವಾರ, 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಆಹಾರವನ್ನು ನೀಡಿ ಅಥವಾ ಕೆಲವು ಉಡುಗೊರೆಗಳನ್ನು ನೀಡಿ. ಹಸಿರು ಬಟ್ಟೆಯನ್ನು ದಾನ ಮಾಡುವುದು ಶುಭವಾಗಿರುತ್ತದೆ.

ತುಲಾ ರಾಶಿ, ಈ ರಾಶಿ ಚಕ್ರದ ಜನರು ಶಿವನೊಂದಿಗೆ ಚಂದ್ರ ದೇವರನ್ನು ಪೂಜಿಸಬೇಕು. ಸ್ವಲ್ಪ ಬಿಳಿ ಬಣ್ಣದ ಆಹಾರವನ್ನು ಬೆಳಿಗ್ಗೆ ಮೊದಲು ಸೇವಿಸಿ. ವೃಶ್ಚಿಕ ರಾಶಿ ಜನರು ನಿಮ್ಮ ಕೈಯಲ್ಲಿ ಕೆಂಪು ದಾರವನ್ನು ಹಾಕಿ. ಪ್ರತಿ ಮಂಗಳವಾರ ಪಕ್ಷಿಗಳಿಗೆ ಧಾನ್ಯಗಳು ಮತ್ತು ನೀರಿಗಾಗಿ ವ್ಯವಸ್ಥೆ ಮಾಡಿ.

ಧನಸ್ಸು ರಾಶಿ ಜನರು ಯಾವಾಗಲೂ ನಿಮ್ಮ ಕೈಯಲ್ಲಿ ಹಳದಿ ದಾರವನ್ನು ಧರಿಸಿ. ವಿಷ್ಣುವನ್ನು ಪೂಜಿಸಿ. ದೇವಾಲಯದಲ್ಲಿ ಗುರುವಾರ ಹಳದಿ ಬಣ್ಣದ ಕರವಸ್ತ್ರವನ್ನು ದಾನ ಮಾಡಿ. ಮಕರ ರಾಶಿ ಜನರು ಕುಷ್ಠರೋಗ ರೋಗಿಗಳಿಗೆ ಸೇವೆ ಮಾಡಿ. ಬೆಳಿಗ್ಗೆ ಎದ್ದ ನಂತರ ಪಾನಕ ಮುಂತಾದ ಕೆಲವು ನೀಲಿ ಅಥವಾ ಕಪ್ಪು ಬಣ್ಣದ ಆಹಾರ ಪದಾರ್ಥಗಳನ್ನು ಅಥವಾ ಪಾನೀಯವನ್ನು ಸೇವಿಸಿ.

ಕುಂಭ ರಾಶಿ ಜನರು ಶನಿ ದೇವರ ಪೂಜೆ ಮಾಡಿ. ಸಾಧ್ಯವಾದರೆ, ಪ್ರತಿ ಶನಿವಾರ ಶನಿ ದೇವರ ದೇವಾಲಯದ ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸಿ. ಮೀನ ರಾಶಿ ಜನರು ವಿಷ್ಣು ದೇವರ ಪೂಜೆ ಮಾಡಿ. ಹಳದಿ ಆಹಾರವನ್ನು ದಾನ ಮಾಡಿ. ನಿಮ್ಮ ಕೈಯಲ್ಲಿ ಹಳದಿ ದಾರವನ್ನು ಧರಿಸಿ. ಗುರುವಾರ ವಿಷ್ಣು ದೇವರನ್ನು ಆರಾಧಿಸಿ.