ಜ್ಯೋತಿಷ್ಯ ಶಾಸ್ತ್ರ: ಶನಿವಾರ ಈ ವಸ್ತುಗಳನ್ನು ಖರೀದಿಸಿದರೇ ಅನೇಕ ಕಷ್ಟಗಳು ಉಂಟಾಗುತ್ತವೆ.

ನಮಸ್ಕಾರ ಸ್ನೇಹಿತರೇ, ಶನಿವಾರವನ್ನು ಶನಿ ಮಹಾತ್ಮ ದೇವರಿಗೆ ಹಾಗೂ ಆಂಜನೇಯ ಸ್ವಾಮಿಗೆ ಮೀಸಲಿಡಲಾಗಿದೆ. ಭಕ್ತರು ಶನಿ ದೇವರ ಆಶೀರ್ವಾದವನ್ನು ಪಡೆಯಲು ಶನಿವಾರದಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಸಿವೆ ಎಣ್ಣೆ ದಾನ ಮಾಡುವುದು, ಹಾಗೂ ವಿಶೇಷ ಕಾರ್ಯಗಳಿಂದ ಶನಿ ದೇವರನ್ನು ಮೆಚ್ಚಿಸಲು ವಿವಿಧ ಕಾರ್ಯಗಳನ್ನು ಮಾಡುತ್ತಾರೆ. ಇದರಿಂದ ಶನಿ ದೇವರು ಆಶೀರ್ವಾದ ಮಾಡುತ್ತಾರೆ ಎಂದು ನಂಬಲಾಗಿದೆ. ಆದರೆ ಶನಿವಾರ ಮಾಡಬಾರದ ಕೆಲವು ವಿಷಯಗಳಿವೆ, ಒಂದು ವೇಳೆ ನೀವು ಆ ರೀತಿಯ ಕಾರ್ಯಗಳನ್ನು ಮಾಡಿದರೇ ಶನಿ ದೇವನು ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ಯಾರಾದರೂ ಶನಿವಾರ ದಂದು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಶನಿ ದೇವರು ಕಬ್ಬಿಣವನ್ನು ಖರೀದಿಸಿ್ದರೇ ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ. ಸಾಧ್ಯವಾದರೇ ಈ ದಿನ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡಬೇಕು. ಶನಿವಾರ ಹೊರತುಪಡಿಸಿ, ನೀವು ಯಾವುದೇ ದಿನ ಕಬ್ಬಿಣದ ವಸ್ತುಗಳನ್ನು ಖರೀದಿಸಬಹುದು. ಅಲ್ಲದೆ, ಒಬ್ಬರು ಶನಿವಾರ ಉಪ್ಪು ಖರೀದಿಸಬಾರದು. ಶನಿವಾರ ಉಪ್ಪು ಖರೀದಿಸುವುದರಿಂದ ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನೀವು ಸಾಲವನ್ನು ತಪ್ಪಿಸಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಬಯಸಿದರೆ, ಈ ದಿನ ಉಪ್ಪು ಖರೀದಿಸಬೇಡಿ.

ಅಲ್ಲದೇ, ಶನಿವಾರ ಕಪ್ಪು ಎಳ್ಳನ್ನು ಎಂದಿಗೂ ಖರೀದಿಸಬಾರದು. ಈ ದಿನ ಕಪ್ಪು ಎಳ್ಳನ್ನು ಖರೀದಿಸುವುದರಿಂದ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ಶನಿ ದೋಷವನ್ನು ತೆಗೆದುಹಾಕಲು, ಶನಿವಾರ ಕಪ್ಪು ಎಳ್ಳನ್ನು ದಾನ ಮಾಡುವುದು ಮತ್ತು ಅದನ್ನು ಅರಳಿ ಮರಕ್ಕೆ ಅರ್ಪಿಸುವುದು ಮತ್ತು ಶನಿವಾರ ಕಪ್ಪು ಬೂಟುಗಳನ್ನು ಖರೀದಿಸಬಾರದು ಎಂಬ ನಿಯಮವಿದೆ. ಶನಿವಾರ ಖರೀದಿಸಿದ ಕಪ್ಪು ಬೂಟುಗಳನ್ನು ಧರಿಸಿದವರು ಕೆಲಸದಲ್ಲಿ ವಿಫಲರಾಗುತ್ತಾರೆ ಎಂದು ನಂಬಲಾಗಿದೆ.

Post Author: Ravi Yadav