ತಪ್ಪೊಪ್ಪಿಕೊಂಡ ಜಯ, ಕರಿಷ್ಮಾ! ದೀಪಿಕಾ, ಶ್ರದ್ಧಾ, ಸಾರಾ, ರಾಕುಲ್ ರವರಿಗೆ ಬಿಗ್ ಶಾಕ್ ನೀಡಿದ ಎನ್ಸಿಬಿ !

ನಮಸ್ಕಾರ ಸ್ನೇಹಿತರೇ, ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ಮತ್ತೊಂದು ಕೋನದಲ್ಲಿ ತನಿಖೆ ನಡೆಸುತ್ತಿರುವ ಎನ್ಸಿಬಿ ಸಂಸ್ಥೆಯು ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿಯರ ಕದ ತಟ್ಟಿದೆ. ದೀಪಿಕಾ ಪಡುಕೋಣೆ ರವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಹಾಗೂ ಬಾಲಿವುಡ್ ಡ್ರ’ಗ್ ಜಾಲದ ಕಿಂಗ್ ಪಿನ್ ಎನ್ನಲಾಗುತ್ತಿರುವ ಜಯ ಸಹಾ ರವರನ್ನು ಎರಡು ದಿನಗಳ ನಿರಂತರ ವಿಚಾರಣೆಯ ಬಳಿಕ ಮಹತ್ವದ ಮಾಹಿತಿಗಳು ಹೊರಬಿದ್ದಿವೆ‌. ಇದೀಗ ಇದರಿಂದ ಬಾಲಿವುಡ್ ಚಿತ್ರರಂಗದಲ್ಲಿ ಅಕ್ಷರಸಹ ತಲ್ಲಣ ಸೃಷ್ಟಿಯಾಗಿದ್ದು, ಮತ್ತಷ್ಟು ನಟ ನಟಿಯರಿಗೆ ನಡುಕ ಆರಂಭವಾಗಿದೆ.

ಹೌದು ಸ್ನೇಹಿತರೇ, ಇದೀಗ ನಡೆದ ಮಹತ್ವದ ಬೆಳವಣಿಗೆಯಲ್ಲಿ ರಿಯಾ ಚಕ್ರವರ್ತಿ ರವರ ಮೊಬೈಲ್ ಫೋನಿನಿಂದ ಮರು ಪಡೆಯಲಾದ ವಾಟ್ಸಪ್ ಸಂದೇಶಗಳು ಆಧಾರದ ಮೇಲೆ ದೀಪಿಕಾ ಪಡುಕೋಣೆ ರವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಹಾಗೂ ಬಾಲಿವುಡ್ ಡ್ರ’ಗ್ ಜಾಲದ ಕಿಂಗ್ ಪಿನ್ ಎನ್ನಲಾಗುತ್ತಿರುವ ಜಯ ಸಹಾ ರವರ ಮಾತುಗಳ ಆಧಾರದ ಮೇರೆಗೆ ಇದೀಗ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ದ ಕಪೂರ್ ಹಾಗೂ ರಾಕುಲ್ ಪ್ರೀತಿ ಸಿಂಗ್ ರವರಿಗೆ ಎನ್ಸಿಬಿ ಸಂಸ್ಥೆಯು ಮುಂದಿನ ಮೂರು ದಿನಗಳಲ್ಲಿ ಹಾಜರಾಗುವಂತೆ ಸಮನ್ಸ್ ಕಳುಹಿಸಿದೆ.

ಕರಿಷ್ಮಾ ಪ್ರಕಾಶ್ ರವರ ಫೋನಿನಲ್ಲಿರುವ ಚಾಟ್ ಗಳ ಕುರಿತು ತನಿಖೆ ಮಾಡುತ್ತಿರುವ ಅಧಿಕಾರಿಗಳು ವಾಟ್ಸಪ್ ಸಂದೇಶಗಳನ್ನು ಹೊರತೆಗೆದಿದ್ದಾರೆ. ಇದರಲ್ಲಿ ಡಿ ಹಾಗೂ ಕೆ ಎಂಬ ಅಕ್ಷರಗಳ ನಡುವಿನ ಸಂಭಾಷಣೆಯನ್ನು ಬಹಿರಂಗಪಡಿಸಿದ್ದು, ನಿಜಕ್ಕೂ ಕೆಲವೊಂದು ಮಹತ್ವದ ಸಂದೇಶಗಳು ಹೊರಬಿದ್ದಿವೆ. ಈ ಸಂದೇಶಗಳಲ್ಲಿ ಮಾಲ್ ಇದೆಯೇ ಎಂಬ ಪ್ರಶ್ನೆಯು ಕೂಡ ಕೇಳಿಬಂದಿದ್ದು ಈ ಸಂದೇಶಗಳ ಆಧಾರದ ಮೇರೆಗೆ ಇದೀಗ ಎಲ್ಲರಿಗೂ ಸಮನ್ಸ್ ನೀಡಲಾಗಿದೆ. ಡಿ ಎಂದರೇ ದೀಪಿಕಾ ಪಡುಕೋಣೆ ಎಂಬುದು ಕೂಡ ಇದೀಗ ತಿಳಿದು ಬಂದಿದೆ. ಒಟ್ಟಿನಲ್ಲಿ ಸುಶಾಂತ್ ಸಿಂಗ್ ರಜಪೂತ್ ರವರ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಬಾಲಿವುಡ್ ಡ್ರ’ಗ್ ಜಾಲ ಕೂಡ ಹೊರ ಬೀಳುತ್ತಿದೆ.

Post Author: Ravi Yadav